AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ಯಾನಿಂಗ್ ಅಥವಾ ಪಿಗ್ಮೆಂಟೇಶನ್? ಮುಖ ಕಪ್ಪಾಗಲು ನಿಜವಾದ ಕಾರಣವೇನು? ಡರ್ಮಟಾಲಜಿಸ್ಟ್ ನೀಡಿರುವ ಮಾಹಿತಿ ಇಲ್ಲಿದೆ

ಬಿಸಿಲಿನಲ್ಲಿ ಹೆಚ್ಚು ಹೊತ್ತಿದ್ದರೆ ಚರ್ಮ ಕಪ್ಪಾಗುವುದು ಸಾಮಾನ್ಯ. ಆದರೆ ಚರ್ಮ ಕಪ್ಪಾಗುವುದೆಲ್ಲವೂ ಟ್ಯಾನಿಂಗ್ ಅಲ್ಲ. ಕೆಲವೊಮ್ಮೆ ಅದು ಪಿಗ್ಮೆಂಟೇಶನ್ ಕೂಡ ಆಗಿರಬಹುದು. ಹಾಗಾದರೆ ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್ ನಡುವಿನ ವ್ಯತ್ಯಾಸ, ಕಾರಣಗಳು, ಲಕ್ಷಣಗಳು ಹಾಗೂ ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಡರ್ಮಟಾಲಜಿಸ್ಟ್ ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ.

ಟ್ಯಾನಿಂಗ್ ಅಥವಾ ಪಿಗ್ಮೆಂಟೇಶನ್? ಮುಖ ಕಪ್ಪಾಗಲು ನಿಜವಾದ ಕಾರಣವೇನು? ಡರ್ಮಟಾಲಜಿಸ್ಟ್ ನೀಡಿರುವ ಮಾಹಿತಿ ಇಲ್ಲಿದೆ
Pigmentation Vs TanningImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 30, 2026 | 1:20 PM

Share

ಬಿಸಿಲಿನಲ್ಲಿ ಒಂದು ಸಮಯಕ್ಕಿಂತ ಹೆಚ್ಚು ಹೊತ್ತು ಇದ್ದರೆ ಮುಖ, ಕೈ ಅಥವಾ ಕುತ್ತಿಗೆಯ ಚರ್ಮ ಕಪ್ಪಾಗುವುದು ಸಾಮಾನ್ಯ. ಆದರೆ ಚರ್ಮದ ಬಣ್ಣ ಬದಲಾದಾಗ ಅದನ್ನು ಟ್ಯಾನಿಂಗ್ ಎಂದು ಅಂದುಕೊಳ್ಳುವುದು ಸರಿಯಲ್ಲ. ಕೆಲವೊಮ್ಮೆ ಅದು ಪಿಗ್ಮೆಂಟೇಶನ್ ಕೂಡ ಆಗಿರಬಹುದು. ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್ ಎರಡರಲ್ಲೂ ಮೆಲನಿನ್ ಪ್ರಮುಖ ಪಾತ್ರ ವಹಿಸಿದರೂ, ಅವು ಉಂಟಾಗುವ ಕಾರಣ, ಕಾಣಿಸಿಕೊಳ್ಳುವ ರೀತಿ ಮತ್ತು ಕಡಿಮೆಯಾಗಲು ತೆಗೆದುಕೊಳ್ಳುವ ಸಮಯದಲ್ಲಿ ವ್ಯತ್ಯಾಸವಿದೆ. ಹಾಗಾದರೆ ನಿಮ್ಮ ಚರ್ಮದಲ್ಲಿ ಕಾಣಿಸುತ್ತಿರುವ ಕಪ್ಪು ಬಣ್ಣ ಟ್ಯಾನಿಂಗ್ ಅಥವಾ ಪಿಗ್ಮೆಂಟೇಶನ್ ಎಂಬುದನ್ನು ಹೇಗೆ ಗುರುತಿಸುವುದು ಮತ್ತು ಡರ್ಮಟಾಲಜಿಸ್ಟ್ ಈ ಬಗ್ಗೆ ಏನು ಹೇಳುತ್ತಾರೆ ಎಂಬ ಮಾಹಿತಿ ಸ್ಟೋರಿಯಲ್ಲಿದೆ.

ಟ್ಯಾನಿಂಗ್ ಎಂದರೇನು?

ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ. ಆರ್ಜು ಪಾಹ್ವಾ ಅವರ ಪ್ರಕಾರ, ಟ್ಯಾನಿಂಗ್ ಎನ್ನುವುದು ಸಾಮಾನ್ಯವಾಗಿ ಸೂರ್ಯನ ಬೆಳಕಿಗೆ ಚರ್ಮ ಒಡ್ಡಿಕೊಳ್ಳುವುದರಿಂದ ಉಂಟಾಗುವ ಚರ್ಮದ ಸಹಜ ಪ್ರತಿಕ್ರಿಯೆ. ಸೂರ್ಯನ ಯುವಿ ಕಿರಣಗಳು ಚರ್ಮಕ್ಕೆ ತಲುಪಿದಾಗ, ಚರ್ಮ ತನ್ನನ್ನು ರಕ್ಷಿಸಿಕೊಳ್ಳಲು ಹೆಚ್ಚು ಮೆಲನಿನ್ ಉತ್ಪಾದಿಸಬಹುದು. ಇದರಿಂದ ಮುಖ, ಕೈ, ಕುತ್ತಿಗೆ ಅಥವಾ ಸೂರ್ಯನಿಗೆ ಹೆಚ್ಚು ಒಡ್ಡಿಕೊಳ್ಳುವ ಭಾಗಗಳು ಮೊದಲಿಗಿಂತ ಕಂದು ಅಥವಾ ಕಪ್ಪಾಗಿ ಕಾಣಿಸಬಹುದು. ಅದ್ರಲ್ಲಿಯೂ ಟ್ಯಾನಿಂಗ್ ಕೆಲ ಗಂಟೆ ಅಥವಾ ಕೆಲವು ದಿನಗಳ ವರೆಗೆ ಮಾತ್ರ ಇರಬಹುದು ಬಳಿಕ ಅದು ಕ್ರಮೇಣವಾಗಿ ಕಡಿಮೆಯಾಗಬಹುದು.

ಪಿಗ್ಮೆಂಟೇಶನ್ ಎಂದರೇನು?

ಪಿಗ್ಮೆಂಟೇಶನ್‌ನಲ್ಲಿ ಚರ್ಮದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮೆಲನಿನ್ ಹೆಚ್ಚು ಉತ್ಪತ್ತಿಯಾಗುವುದು ಅಥವಾ ಸಂಗ್ರಹವಾಗುವುದರಿಂದ ಕಂದು ಅಥವಾ ಕಪ್ಪು ಕಲೆಗಳು, ಪ್ಯಾಚ್‌ಗಳು ಕಾಣಿಸಿಕೊಳ್ಳಬಹುದು. ಇದು ಕೇವಲ ಸೂರ್ಯನ ಬೆಳಕಿನಿಂದ ಮಾತ್ರ ಉಂಟಾಗಬೇಕೆಂದಿಲ್ಲ. ಹಾರ್ಮೋನ್‌ಗಳ ಬದಲಾವಣೆ, ಮೊಡವೆ, ಚರ್ಮದಲ್ಲಿ ಉರಿಯೂತ ಅಥವಾ ಗಾಯ, ಕೆಲವು ಔಷಧಿಗಳು ಸೇರಿದಂತೆ ಹಲವು ಕಾರಣಗಳು ಪಿಗ್ಮೆಂಟೇಶನ್‌ಗೆ ಕಾರಣವಾಗಬಹುದು. ಇಂತಹ ಕಲೆಗಳು ದೀರ್ಘಕಾಲ ಉಳಿಯುವ ಸಾಧ್ಯತೆಯಿದ್ದು, ಟ್ಯಾನಿಂಗ್‌ಗಿಂತ ಇವು ಕಡಿಮೆಯಾಗಲು ಹೆಚ್ಚು ಸಮಯ ತೆಗದುಕೊಳ್ಳಬಹುದು.

ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್ ನಡುವಿನ ವ್ಯತ್ಯಾಸವೇನು?

ಸರಳವಾಗಿ ಹೇಳುವುದಾದರೆ, ಸೂರ್ಯನಿಗೆ ಹೆಚ್ಚು ಹೊತ್ತು ಒಡ್ಡಿಕೊಂಡ ಬಳಿಕ ಮುಖ ಅಥವಾ ಕೈಯಂತಹ ದೊಡ್ಡ ಭಾಗ ಒಂದೇ ರೀತಿಯಲ್ಲಿ ಕಪ್ಪಾಗಿದ್ದರೆ ಅದು ಟ್ಯಾನಿಂಗ್ ಆಗಿರಬಹುದು. ಆದರೆ ಚರ್ಮದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಕಂದು ಅಥವಾ ಕಪ್ಪು ಕಲೆಗಳು, ಪ್ಯಾಚ್‌ಗಳು ಕಾಣಿಸಿಕೊಂಡು ದೀರ್ಘಕಾಲ ಹಾಗೆಯೇ ಉಳಿದರೆ, ಅದು ಪಿಗ್ಮೆಂಟೇಶನ್ ಆಗಿರುವ ಸಾಧ್ಯತೆಯಿದೆ. ಆದರೆ ಕೇವಲ ನೋಡಿ ಕಾರಣ ಹೇಳಲು ಸಾಧ್ಯವಿಲ್ಲ. ಚರ್ಮದ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಅಗತ್ಯ.

ಇದನ್ನೂ ಓದಿ: ಬೆಂಡೆಕಾಯಿ ಎಲ್ಲರಿಗೂ ಒಳ್ಳೆಯದಲ್ಲವೇ? ಈ ಔಷಧಿ ಸೇವಿಸುವವರು ತಿಳಿಯಬೇಕಾದ ವಿಷಯಗಳು!

ಪಿಗ್ಮೆಂಟೇಶನ್‌ಗೆ ಕಾರಣವಾಗುವ ಅಂಶಗಳು ಯಾವುವು?

  • ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು
  • ಹಾರ್ಮೋನ್‌ಗಳಲ್ಲಿ ಬದಲಾವಣೆ
  • ಮೊಡವೆ ಮತ್ತು ಮೊಡವೆಯ ನಂತರ ಉಳಿಯುವ ಕಲೆಗಳು
  • ಚರ್ಮದಲ್ಲಿ ಉರಿಯೂತ
  • ಗಾಯ ಅಥವಾ ಚರ್ಮಕ್ಕೆ ಉಂಟಾದ ಹಾನಿ
  • ಕೆಲವು ಔಷಧಿಗಳ ಪರಿಣಾಮ
  • ಚರ್ಮದ ಕೆಲವು ಕಾಯಿಲೆಗಳು

ಟ್ಯಾನಿಂಗ್ ಕಡಿಮೆ ಮಾಡಲು ಏನು ಮಾಡಬೇಕು?

ಸಾಮಾನ್ಯವಾಗಿ ಟ್ಯಾನಿಂಗ್ ಕಡಿಮೆಯಾಗಲು ಸೂರ್ಯನ ಬೆಳಕಿನಿಂದ ಚರ್ಮಕ್ಕಾಗುವ ಹಾನಿಯಿಂದ ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಹೊರಗೆ ಹೋಗುವಾಗ ಸೂಕ್ತವಾದ ಸನ್‌ಸ್ಕ್ರೀನ್ ಬಳಸುವುದು, ನೆರಳಿನಲ್ಲಿ ಇರುವುದು ಹಾಗೂ ಅಗತ್ಯವಿದ್ದರೆ ಟೋಪಿ ಅಥವಾ ಮೈ ತುಂಬಾ ಬಟ್ಟೆ ಧರಿಸುವುದು ಸಹಾಯಕವಾಗಬಹುದು. ಅಲ್ಲದೆ ಚರ್ಮದ ಮೇಲೆ ಬಲವಾಗಿ ಸ್ಕ್ರಬ್ ಅಥವಾ ಮನೆಮದ್ದುಗಳನ್ನು ಅತಿಯಾಗಿ ಬಳಸುವುದರಿಂದ ಚರ್ಮದಲ್ಲಿ ಉರಿಯೂತ ಉಂಟಾಗಿ ಕಲೆಗಳು ಮತ್ತಷ್ಟು ಗಾಢವಾಗುವ ಸಾಧ್ಯತೆಯಿದೆ.

ಯಾವಾಗ ಡರ್ಮಟಾಲಜಿಸ್ಟ್‌ರನ್ನು ಸಂಪರ್ಕಿಸಬೇಕು?

ಕಪ್ಪು ಕಲೆಗಳು ಅಥವಾ ಪ್ಯಾಚ್‌ಗಳು ದೀರ್ಘಕಾಲ ಉಳಿದಿದ್ದರೆ, ವೇಗವಾಗಿ ಹೆಚ್ಚಾಗುತ್ತಿದ್ದರೆ, ಬಣ್ಣ ಅಥವಾ ಆಕಾರದಲ್ಲಿ ಬದಲಾವಣೆ ಕಂಡುಬಂದರೆ ಅಥವಾ ಯಾವುದೇ ಕಾರಣವಿಲ್ಲದೆ ಚರ್ಮದಲ್ಲಿ ಬದಲಾವಣೆ ಕಾಣಿಸಿಕೊಂಡರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಪ್ರತಿಯೊಂದು ಕಪ್ಪು ಕಲೆ ಪಿಗ್ಮೆಂಟೇಶನ್ ಎಂದೂ, ಪ್ರತಿಯೊಂದು ಚರ್ಮ ಕಪ್ಪಾಗುವುದನ್ನು ಟ್ಯಾನಿಂಗ್ ಎಂದೂ ಹೇಳಲು ಸಾಧ್ಯವಿಲ್ಲ. ಸರಿಯಾದ ಕಾರಣ ತಿಳಿದುಕೊಂಡ ನಂತರವೇ ಸೂಕ್ತ ಆರೈಕೆ ಅಥವಾ ಚಿಕಿತ್ಸೆಯ ಆಯ್ಕೆ ಮಾಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್