AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shamonda Virus: ಶಮೊಂಡಾ ವೈರಸ್ ಹೇಗೆ ಹರಡುತ್ತದೆ? ರೋಗಲಕ್ಷಣ, ಮುನ್ನೆಚ್ಚರಿಕೆಗಳ ಸಂಪೂರ್ಣ ಮಾಹಿತಿ

ಫ್ರಾನ್ಸ್‌ನಲ್ಲಿ ಶಮೊಂಡಾ ವೈರಸ್‌ನಿಂದ ಮಾನವನಿಗೆ ಸೋಂಕು ತಗುಲಿದ ಮೊದಲ ಪ್ರಕರಣ ವರದಿಯಾಗಿದೆ. ಸಾಮಾನ್ಯವಾಗಿ ಜಾನುವಾರುಗಳಲ್ಲಿ ಕಂಡುಬರುವ ಈ ವೈರಸ್, ತೀವ್ರವಾಗಿ ರೋಗನಿರೋಧಕ ಶಕ್ತಿ ಕುಂದಿದ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಹಾಗಾಗಿ ವೈರಸ್ ಹರಡುವಿಕೆ, ಲಕ್ಷಣಗಳು ಮತ್ತು ಸಾರ್ವಜನಿಕರ ಆರೋಗ್ಯದ ಅಪಾಯಗಳ ಕುರಿತು ತಿಳಿಯಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿವೆ.

Shamonda Virus: ಶಮೊಂಡಾ ವೈರಸ್ ಹೇಗೆ ಹರಡುತ್ತದೆ? ರೋಗಲಕ್ಷಣ, ಮುನ್ನೆಚ್ಚರಿಕೆಗಳ ಸಂಪೂರ್ಣ ಮಾಹಿತಿ
Shamonda VirusImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Oct 22, 2026 | 5:51 PM

Share

ಫ್ರಾನ್ಸ್‌ನಲ್ಲಿ ಶಮೊಂಡಾ ವೈರಸ್‌ನಿಂದ ಮಾನವನಿಗೆ ಸೋಂಕು ತಗುಲಿದ ಮೊದಲ ಪ್ರಕರಣ ವರದಿಯಾಗಿದೆ. ಸಾಮಾನ್ಯವಾಗಿ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್, ತೀವ್ರವಾಗಿ ರೋಗನಿರೋಧಕ ಶಕ್ತಿ ಕುಂದಿದ ಕಡಿಮೆ ಇರುವ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಈ ವ್ಯಕ್ತಿ ಅಕ್ಟೋಬರ್‌ನಲ್ಲಿ ಮೃತಪಟ್ಟಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ವೈರಸ್ ಸೋಂಕು ಮತ್ತು ಅವರಲ್ಲಿ ಕಾಣಿಸಿಕೊಂಡ ನರಮಂಡಲದ ತೊಂದರೆಗಳ ನಡುವೆ ಸಂಬಂಧವಿರುವ ಸಾಧ್ಯತೆಯಿದೆ ಎಂದು ಫ್ರಾನ್ಸ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಪ್ರಕರಣದಿಂದ ಸಾರ್ವಜನಿಕರಿಗೆ ಆರೋಗ್ಯದ ಅಪಾಯವಿದೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸೋಂಕಿನ ಮೂಲ ಮತ್ತು ಅದರ ಪರಿಣಾಮಗಳ ಕುರಿತು ತನಿಖೆ ಮುಂದುವರಿದಿದೆ.

ಶಮೊಂಡಾ ವೈರಸ್ ಎಂದರೇನು?

ಶಮೊಂಡಾ ವೈರಸ್ (Shamonda virus) ಆರ್ಥೋಬುನ್ಯಾವೈರಸ್ (Orthobunyavirus) ಗುಂಪಿಗೆ ಸೇರಿದ ವೈರಸ್ ಆಗಿದೆ. ಇದೇ ಗುಂಪಿನಲ್ಲಿ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸ್ಕ್ಮಾಲೆನ್‌ಬರ್ಗ್ ವೈರಸ್ ಕೂಡ ಸೇರಿದೆ. ಶಮೊಂಡಾ ವೈರಸ್ ಮುಖ್ಯವಾಗಿ ದನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕುರಿ, ಮೇಕೆ ಮತ್ತು ಕುದುರೆಗಳಂತಹ ಪ್ರಾಣಿಗಳಲ್ಲಿಯೂ ಈ ವೈರಸ್ ಪತ್ತೆಯಾಗಿರುವ ವರದಿಗಳಿವೆ. ಈ ವೈರಸ್ ಅನ್ನು 1960ರ ದಶಕದ ಮಧ್ಯಭಾಗದಲ್ಲಿ ನೈಜೀರಿಯಾದಲ್ಲಿ ಮೊದಲ ಬಾರಿಗೆ ಗುರುತಿಸಲಾಗಿತ್ತು. ನಂತರ ಆಫ್ರಿಕಾ ಮತ್ತು ಏಷ್ಯಾದ ಕೆಲವು ಪ್ರದೇಶಗಳಲ್ಲಿ ಪ್ರಾಣಿಗಳಲ್ಲಿ ಇದರ ಇರುವಿಕೆ ಪತ್ತೆಯಾಗಿತ್ತು.

ಶಮೊಂಡಾ ವೈರಸ್ ಹೇಗೆ ಹರಡುತ್ತದೆ?

ಈ ವೈರಸ್ ಸಾಮಾನ್ಯವಾಗಿ ಸಣ್ಣ ಕಚ್ಚುವ ಕೀಟಗಳ ಮೂಲಕ ಪ್ರಾಣಿಗಳಿಗೆ ಹರಡುತ್ತದೆ. ಮಿಡ್ಜ್‌ಗಳು (biting midges) ಎಂದು ಕರೆಯಲಾಗುವ ಸಣ್ಣ ಕೀಟಗಳು ವೈರಸ್ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಫ್ರಾನ್ಸ್‌ನಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿಗೆ ಪೂರ್ವ ಫ್ರಾನ್ಸ್‌ನಲ್ಲಿ ಮಿಡ್ಜ್ ಕಚ್ಚಿದ ಪರಿಣಾಮ ವೈರಸ್ ತಗುಲಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಬೇಸಿಗೆಯ ಅವಧಿಯಲ್ಲಿ ಪ್ರಾಣಿಗಳಲ್ಲಿ ವೈರಸ್ ಹರಡಿತ್ತು ಎನ್ನಲಾಗಿದೆ. ಆದರೆ, ಮಾನವರಲ್ಲಿ ಈ ವೈರಸ್ ಹೇಗೆ ರಿಯಾಕ್ಟ್ ಮಾಡುತ್ತದೆ ಮತ್ತು ಇತರರಿಗೆ ಹರಡುವ ಸಾಧ್ಯತೆ ಇದೆಯೇ ಎಂಬುದರ ಕುರಿತು ಹೆಚ್ಚಿನ ಅಧ್ಯಯನ ಅಗತ್ಯವಿದೆ.

ಶಮೊಂಡಾ ವೈರಸ್‌ನ ಲಕ್ಷಣಗಳೇನು?

ಪ್ರಾಣಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಾಗ ಜ್ವರ, ಅತಿಸಾರ, ಆಯಾಸ ಕಂಡುಬರಬಹುದು. ಆದರೆ, ಮಾನವರಲ್ಲಿ ಸೋಂಕಿನ ಲಕ್ಷಣಗಳ ಕುರಿತು ಪ್ರಸ್ತುತ ಲಭ್ಯವಿರುವ ಮಾಹಿತಿ ಬಹಳ ಸೀಮಿತವಾಗಿದೆ. ಫ್ರಾನ್ಸ್‌ನಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಂಡಿದ್ದವು. ಈ ತೊಂದರೆಗಳಿಗೆ ವೈರಸ್ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.

ಸಾರ್ವಜನಿಕರು ಆತಂಕಪಡಬೇಕೇ?

ಯುರೋಪ್‌ನಲ್ಲಿ ವೈರಸ್‌ ಇರುವುದು ಮತ್ತು ಮಾನವನಲ್ಲಿ ಪತ್ತೆಯಾದ ಅಪರೂಪದ ಪ್ರಕರಣದ ಹಿನ್ನೆಲೆಯಲ್ಲಿ ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆಂಡ್ ಕಂಟ್ರೋಲ್ (ECDC) ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ, ಸಾರ್ವಜನಿಕರಿಗೆ ವ್ಯಾಪಕ ಆರೋಗ್ಯದ ಅಪಾಯವಿದೆ ಎಂದು ಹೇಳಲು ಸಾಕಷ್ಟು ಆಧಾರವಿಲ್ಲ. ಆದರೂ, ಕೀಟಗಳ ಕಡಿತವನ್ನು ತಪ್ಪಿಸುವುದು ಮತ್ತು ಪ್ರಾಣಿಗಳಲ್ಲಿ ಅಸಾಮಾನ್ಯ ಕಾಯಿಲೆಯ ಲಕ್ಷಣಗಳು ಕಂಡುಬಂದರೆ ಪಶುವೈದ್ಯರ ಸಲಹೆ ಪಡೆಯುವುದು ಸೂಕ್ತ. ಒಟ್ಟಿನಲ್ಲಿ, ಶಮೊಂಡಾ ವೈರಸ್‌ನ ಈ ಮಾನವ ಪ್ರಕರಣ ಅಪರೂಪದ್ದಾಗಿದ್ದು, ಅದರ ನೈಜ ಆರೋಗ್ಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ವೈಜ್ಞಾನಿಕ ಮಾಹಿತಿ ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ