ನೀವು 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಈ ಆರೋಗ್ಯ ಸಮಸ್ಯೆಗಳು ಕಾಡುವುದು ಗ್ಯಾರಂಟಿ

ಉತ್ತಮ ನಿದ್ರೆಯು ಮನುಷ್ಯನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿದ್ರೆ ಅವಧಿ ಕಡಿಮೆಯಾಗುತ್ತಿದ್ದಂತೆ ಅನೇಕ ಆರೋಗ್ಯ ಸಮಸ್ಯೆಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತದೆ.

ನೀವು 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಈ ಆರೋಗ್ಯ ಸಮಸ್ಯೆಗಳು ಕಾಡುವುದು ಗ್ಯಾರಂಟಿ
Sleep
Follow us
TV9 Web
| Updated By: ನಯನಾ ರಾಜೀವ್

Updated on: Oct 20, 2022 | 10:34 AM

ಉತ್ತಮ ನಿದ್ರೆಯು ಮನುಷ್ಯನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿದ್ರೆ ಅವಧಿ ಕಡಿಮೆಯಾಗುತ್ತಿದ್ದಂತೆ ಅನೇಕ ಆರೋಗ್ಯ ಸಮಸ್ಯೆಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತದೆ. ನಿತ್ಯ ನೀವು 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು.

ನಿದ್ರೆ ಹಾಗೂ ಆರೋಗ್ಯಕ್ಕೆ ನೇರ ಸಂಬಂಧವಿದೆ, ರಾತ್ರಿಯ ನಿದ್ರೆ ಉತ್ತಮವಾಗಿದ್ದರೆ ಇಡೀ ದಿನ ನಿಮ್ಮ ಮನಸ್ಸು ಕೂಡ ಚೈತನ್ಯದಿಂದ ಕೂಡಿರುತ್ತದೆ.

PLOS ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ 50, 60 ಮತ್ತು 70 ವರ್ಷ ವಯಸ್ಸಿನ 7,000 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರ ಆರೋಗ್ಯದ ಮೇಲೆ ನಿದ್ರೆಯ ಅವಧಿಯು ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಕಂಡು ಹಿಡಿಯಲಾಗಿದೆ.

50 ವರ್ಷ ವಯಸ್ಸಿನಲ್ಲಿ ಐದು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ನಿದ್ರೆಯನ್ನು ಪಡೆದವರು ಶೇ. 20ಕ್ಕೂ ಹೆಚ್ಚು ಮಂದಿ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾರೆ. 50, 60, ಮತ್ತು 70 ನೇ ವಯಸ್ಸಿನವರು ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾಲ ಮಲಗುವುದು ಏಳು ಗಂಟೆಗಳವರೆಗೆ ಮಲಗುವವರಿಗೆ ಹೋಲಿಸಿದರೆ ಶೇ. 30 ರಿಂದ ಶೇ. 40 ರಷ್ಟು ದೀರ್ಘಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

50 ನೇ ವಯಸ್ಸಿನಲ್ಲಿ ಐದು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ನಿದ್ರೆಯ ಮರಣದ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹೆಚ್ಚಿನ ಆದಾಯದ ದೇಶಗಳಲ್ಲಿ ದೀರ್ಘಕಾಲದ ರೋಗಗಳ ಅಪಾಯ ಹೆಚ್ಚುತ್ತಿದೆ. ಇದು ಹೆಚ್ಚಿನ ಆರೋಗ್ಯ ಸೇವೆಯ ಬಳಕೆ, ಆಸ್ಪತ್ರೆಗೆ ದಾಖಲು ಮತ್ತು ಅಂಗವೈಕಲ್ಯದೊಂದಿಗೆ ಮಲ್ಟಿಮಾರ್ಬಿಡಿಟಿ ಸಂಬಂಧಿಸಿರುವುದರಿಂದ, ಸಾರ್ವಜನಿಕ ಆರೋಗ್ಯಕ್ಕೆ ಒಂದು ಪ್ರಮುಖ ಸವಾಲಾಗಿದೆ.

ವಯಸ್ಸಾದಂತೆ, ಅವರ ನಿದ್ರೆಯ ಅಭ್ಯಾಸಗಳು ಮತ್ತು ನಿದ್ರೆಯ ರಚನೆಯು ಬದಲಾಗುತ್ತದೆ. ಆದಾಗ್ಯೂ, ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ಮಲಗುವಂತೆ ಸಲಹೆ ನೀಡಲಾಗುತ್ತದೆ.

ಮಲಗುವ ಕೋಣೆ ಶಾಂತವಾಗಿರಬೇಕು, ಕತ್ತಲೆ ಹಾಗೂ ಆರಾಮದಾಯಕವಾದ ತಾಪಮಾನವನ್ನು ಹೊಂದಿರಬೇಕು. ಹಾಗೆಯೇ ಟಿವಿ, ಲ್ಯಾಪ್​ಟಾಪ್, ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಡಿಮೆ ಮಾಡಿ.

ಈಗಾಗಲೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ, ದೀರ್ಘ ನಿದ್ರೆಯ ಅವಧಿಯು ಮತ್ತೊಂದು ಅನಾರೋಗ್ಯದ ಬೆಳವಣಿಗೆಯ ಅಪಾಯವನ್ನು ಸುಮಾರು 35% ರಷ್ಟು ಹೆಚ್ಚಿಸುತ್ತದೆ. ಸಾಕಷ್ಟು ನಿದ್ದೆಯು ನಿಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಕಳಪೆ ನಿದ್ರೆಯು ಹೃದ್ರೋಗ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಲ್ಲದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ