Today's Prediction
| 05 Dec 2025
ಕಾರ್ಯಗಳಲ್ಲಿ ವೇಗ, ಆದಾಯದಲ್ಲಿ ಸುಧಾರಣೆ ಹಾಗೂ ಹೊಸ ಅವಕಾಶಗಳು ಕಾಣಿಸುವ ಸೂಚನೆ. ಹಿರಿಯರ ಮಾತು ಗೌರವಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಮಾತಿನ ಬಿರುಸು ಅಧಿಕವಾಗಿ ಇರುವುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ನಿಮ್ಮ ಆದಾಯವನ್ನು ಇತರರು ಲೆಕ್ಕ ಹಾಕಬಹುದು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ನೌಕರರ ವರ್ತನೆಯ ಮೇಲೆ ನಿಮ್ಮ ಕಣ್ಣಿಡಿ. ಬಂಧುಗಳ ಜೊತೆ ಕಲಹವಾಗುವುದು. ಸಂಗಾತಿಯ ನೆರವನ್ನು ನೀವು ನಿರೀಕ್ಷಿಸುವಿರಿ. ಆದ್ಯತೆಯ ಮೇಲೆ ನಿಮ್ಮ ಕಾರ್ಯಗಳು ಇರಬಹುದು. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಕುಟುಂಬದಲ್ಲಿ ಸಮನ್ವಯ, ವೈಯಕ್ತಿಕ ವಿಚಾರಗಳಲ್ಲಿ ಸ್ಪಷ್ಟತೆ. ಶುಭಚಿಂತಕರ ಸಹಕಾರ ದೊರೆಯುತ್ತದೆ. ಔದಾರ್ಯದಿಂದ ನಡೆದುಕೊಂಡರೆ ದಿನ ಫಲಪ್ರದ. ಆಯ್ಕೆಯನ್ನು ವಿಳಂಬವಾಗಿ ಮಾಡುವಿರಿ. ಮಾತು ನೇರವಾಗಿದ್ದರೂ ಮೃದುವಾಗಿ ಬಳಸಿಕೊಳ್ಳುವಿರಿ.
...
Read More
This Year Prediction | 01 Jan 2025 to 31 Dec 2025
ಈ ವರ್ಷ ನಿಮಗೆ ಮಿಶ್ರಫಲಪ್ರದವಾಗಿದೆ. ವರ್ಷ ಮಧ್ಯದ ವರೆಗೆ ಏರಿಳಿತಗಳಿಲ್ಲದೇ ನೌಕೆಯಲ್ಲಿ ಸಂಚರಿಸುವಂತೆ ಸಂಚರಿಸಬಹುದು. ಆದರೆ ಅನಂತರ ಅಲ್ಪ ಕಷ್ಟ ನಿಮ್ಮ ಪಾಲಿಗೆ ಕಾಣಿಸಿಕೊಳ್ಳುವುದು. ರಾಶಿಯ ಅಧಿಪತಿ ಕುಜನು ಚತುರ್ಥ ರಾಶಿಯಲ್ಲಿ ಇದ್ದು ಇವನು ವರ್ಷಾರಂಭದ ಆರು ತಿಂಗಳು ಪ್ರತಿಕೂಲನು. ಇವನಿಂದ ಏನನ್ನೂ ನಿರೀಕ್ಷಿಸಲಾಗದು. ಸಾಡೇ ಸಾಥ್ ಶನಿಯ ಆರಂಭವಾಗಲಿದ್ದು ದೈವವನ್ನು ನಂಬಿ ಕಾರ್ಯವನ್ನು ಮಾಡಿ. ಒಳ್ಳೆಯ ಫಲ ಅಂತಿಮವಾಗಿ ಇದೆ. ಇನ್ನು ರಾಹು ಕೇತುಗಳೂ ಸ್ಥಾನವನ್ನು ಬದಲಾಯಿಸಲಿವೆ. ಐದು ಗ್ರಹಗಳೂ ದೀರ್ಘ ಕಾಲದಿಂದ ಉಪಸ್ಥಿತರಿದ್ದ ರಾಶಿಯಿಂದ ಕೆಲವೇ ದಿನಗಳ ಅನಂತರದಲ್ಲಿ ತಮ್ಮ ಸ್ಥಾನವನ್ನು ಬದಲಿಸಲಿವೆ....
Read More