AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Updated on: 22 December 2025
Aries

cancer Horoscope

Today's Prediction | 22 Dec 2025
ಇಂದು ಮನಸ್ಸು ಸ್ವಲ್ಪ ಭಾವನಾತ್ಮಕವಾಗಿರುತ್ತದೆ. ಕುಟುಂಬ ಸಂಬಂಧಗಳು ಹೆಚ್ಚು ಮಹತ್ವ ಪಡೆಯುತ್ತವೆ. ಮನೆಯ ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣಬಹುದು. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ‌. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು. ಅಧ್ಯಾತ್ಮದಿಂದ ಸುಖ ಸಿಗಲಿದೆ. ದುರಭ್ಯಾಸದ ಕಾರಣ ಮರ್ಯಾದಿಯನ್ನು ಕಳೆದುಕೊಳ್ಳಬೇಕಾದೀತು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದಕ್ಕೆ ಸಿಕ್ಕುವಿರಿ. ನಿಮ್ಮ ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಸಿಗಲಿದೆ. ವಿನೋದದ ಮಾತುಗಳು ಇತರರಿಗೆ ಅಚ್ಚರಿ ತರಬಹುದು. ಅನಿರೀಕ್ಷಿತವಾಗಿ ಇಂದು ಮನೆಯಲ್ಲಿಯೇ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಗೌರವವನ್ನು ಹೆಚ್ಚಿಸುವುದು. ಹಳೆಯ ನೆನಪುಗಳು ಮನಸ್ಸನ್ನು ಕಾಡಬಹುದು. ಧ್ಯಾನದಿಂದ ಮನಶ್ಶಾಂತಿ ಲಭ್ಯ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಸ್ವತಂತ್ರ ಆಲೋಚನೆಯು ನಿಮಗೆ ಉಪಯುಕ್ತವಾಗಲಿದೆ.... Read More
This Year Prediction | 01 Jan 2025 to 31 Dec 2025
ಕಳೆದ ದಿನಗಳು ಬಹಳ ಸುಂದರ. ಎಲ್ಲವೂ ಅಂದುಕೊಂಡಂತೆ ನಡೆದು ಸಮಾಧಾನ ನಿಮ್ಮಲ್ಲಿ ಇದೆ. ಈ ವರ್ಷ ಇದರ ನಿರೀಕ್ಷೆಯನ್ನು ಮಾಡುವಂತಿಲ್ಲ. ಗುರುಬಲವು ನಿಮಗೆ ಈ ವರ್ಷ ಮಧ್ಯಾವಧಿಯಿಂದ ಇರಲಾರದು. ಅಷ್ಟಮಕ್ಕೆ ಹೋಗುವ ಕಾರಣ ಅಶುಭಲಕ್ಷಣವೇ ಅಧಿಕ. ಇನ್ನು ಎರಡಕ್ಕೂ ಹೆಚ್ಚು ವರ್ಷಗಳಿಂದ ಅಷ್ಟಮದಲ್ಲಿ ಇದ್ದ ಶನಿಯು ನವಮಕ್ಕೆ ಬರಲಿದ್ದಾನೆ. ನವಮದ ರಾಹು ಅಷ್ಟಮಕ್ಕೂ ತೃತೀಯದ ಕೇತುವು ದ್ವಿತೀಯಕ್ಕೂ ಬರಲಿದ್ದಾನೆ. ಒಟ್ಟಾರೆಯಾಗಿ ಈ ವರ್ಷ ಅಶುಭ ಕಾಲ. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಯವುದು, ಮಾತಿನಲ್ಲಿ ಮೃದುತ್ವ, ಆರೋಗ್ಯದ ಕಾಳಜಿ ಎಲ್ಲವೂ ಬೇಕು.... Read More

Compatibility Calculator

ImageA
ImageB
Compatible
cancer

cancer Sign Characteristics

ನಡೆಯಲ್ಲಿ ವಕ್ರತೆ ಮತ್ತು ವೇಗ, ಸೊಂಟದ ಭಾಗ ಎತ್ತರ, ಸ್ತ್ರೀಯರನ್ನು ಗೆದ್ದವನು, ಒಳ್ಳೆಯ ಮಿತ್ರರು, ಜ್ಯೋತಿಷ ಶಾಸ್ತ್ರದಲ್ಲಿ ಅಪಾರಪಂಡಿತ್ಯ, ವಿಶಾಲವಾದ ಅಥವಾ ಹೆಚ್ಚು ಮನೆಯುಳ್ಳವನು. ಚಂದ್ರನಂತೆ ವೃದ್ಧಿಕ್ಷಯಗಳು ಸಂಪತ್ತಿನಲ್ಲಿ ಇರುವುದು. ಎತ್ತರದ ಶರೀರವಲ್ಲ, ಕಂಠವು ಮಾಂಸದಿಂದ ತುಂಬಿರಲಿದೆ. ಪ್ರೀತಿಗೆ ಇವರು ವಶವಾಗುವರು, ಮಿತ್ರರಿಗೆ ಪ್ರಿಯವಾಗಿರುವವನು, ನೀರು ಹಾಗೂ ಉದ್ಯಾನವನಗಳಲ್ಲಿ ಇರಲು ಇಷ್ಟ.

More about cancer Zodiac Sign Horoscope Prediction

ಈ ರಾಶಿ ನಾಲ್ಕನೇ ರಾಶಿಯಾಗಿದ್ದು, ಚಂದ್ರ ಇದರ ಅಧಿಪತಿ. ಗುರುವು ಈ ರಾಶಿಯ ಐದನೇ ಅಂಶದಲ್ಲಿ ಹೆಚ್ಚು ಬಲಿಷ್ಠ. ಕುಜನು ಈ ರಾಶಿಯ ಇಪ್ಪತ್ತೆಂಟನೇ ಅಂಶದಲ್ಲಿ ದುರ್ಬಲ. ಈ ರಾಶಿಗೆ ಪುನರ್ವಸು ಒಂದು ಪಾದ ಹಾಗೂ ಪುಷ್ಯಾ, ಆಶ್ಲೇಷಾ ನಕ್ಷತ್ರಗಳು ಬರುತ್ತವೆ. ಇದು ನಕ್ಷತ್ರಸಂಧಿಯ ರಾಶಿ. ಕಾಲಪುರುಷನ ಹೃದಯದ ರಾಶಿಯಾಗಿದ್ದು, ಇದರ ಬಣ್ಣ ಸ್ವಲ್ಪ ಅರಿಶಶಿನ ಮಿಶ್ರಿತ ಬಿಳಿ, ವನವಾಸ ಪ್ರಿಯರು, ರಾತ್ರಿ ಬಲ, ಬುದ್ಧಿ ಅಧಿಕ, ಸತ್ತ್ವಗುಣದ ರಾಶಿಯಿದು. ಉತ್ತರ ದಿಕ್ಕಿನ ರಾಶಿಯಾಗಿದ್ದು, ಯುಗ್ಮರಾಶಿ, ಸಮ, ಸ್ತ್ರೀರಾಶಿಯೂ ಹೌದು.

Disclaimer: ಸೂಚನೆ: ಈ ಲೇಖನದಲ್ಲಿರುವ ಯಾವುದೇ ಮಾಹಿತಿ ಅಥವಾ ಲೆಕ್ಕಾಚಾರಗಳಾಗಿರಲಿ ಅದನ್ನು ನಾವು ಖಾತ್ರಿಪಡಿಸುವುದಿಲ್ಲ. ಈ ಮಾಹಿತಿಯನ್ನು ಬೇರೆ ಮಾಧ್ಯಮಗಳು/ಜ್ಯೋತಿಷಿಗಳು/ಪಂಚಾಂಗಗಳು/ಪ್ರವಚನಗಳು ಅಥವಾ ಧಾರ್ಮಿಕ ಗ್ರಂಥಗಳಿಂದ ಸಂಗ್ರಹಿಸಿ ನಿಮ್ಮ ಮುಂದಿಡಲಾಗಿದೆ. ನಮ್ಮ ಉದ್ದೇಶವು ಕೇವಲ ಮಾಹಿತಿಯನ್ನು ನಿಮಗೆ ನೀಡುವುದಷ್ಟೇ ಆಗಿರುತ್ತದೆ. ಹಾಗಾಗಿ ಓದುಗರು ಇದನ್ನು ಕೇವಲ ಮಾಹಿತಿ ಎಂದಷ್ಟೇ ಪರಿಗಣಿಸಬೇಕು. ಓದುಗರು ಯಾವುದಾದರೊಂದು ಅಂಶವನ್ನು ಕಾರ್ಯರೂಪಕ್ಕೆ ತಂದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ.

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!