Today's Prediction
| 05 Dec 2025
ಕೆಲಸದಲ್ಲಿ ಹೊಸ ಆವಿಷ್ಕಾರಗಳಿಗೆ ಮೆಚ್ಚುಗೆ. ಹಣಕಾಸನ್ನು ಸಮತೋಲನದಿಂದ ಬಳಸಿ. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ವಿವಿಧ ಕಡೆಗಳಿಂದ ಧನಾಗಮನವಾಗಬಹುದು. ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿ ನೂತನ ವಾಹನವನ್ನು ಖರೀದಿ ಮಾಡುವಿರಿ. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಕಲ್ಪನೆಗೆ ಒಂದು ಚೌಕಟ್ಟು ಇರಲಿ. ನಿಮ್ಮ ಮನಸ್ಸನ್ನು ಬಹಳ ವಿಚಲಿತವಾಗಿದ್ದು ಸ್ಥಿರತ್ವವನ್ನು ತಂದುಕೊಳ್ಳುವುದು ಕಷ್ಟವಾದೀತು. ನಿಮ್ಮಅಲ್ಪ ಜ್ಞಾನವನ್ನು ಎಲ್ಲರೆದುರು ತೋರಿಸುವುದು ಬೇಡ. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ. ಮನೆಯಲ್ಲಿ ಒಳ್ಳೆಯ ನಿರ್ಧಾರಗಳು ಬೇಗ ಫಲಕಾರಿಯಾಗಲಿವೆ. ಹೊಸ ಯೋಜನೆಗಳಿಗೆ ಅಶೀರ್ವಾದದ ದಿನ. ಆತ್ಮವಿಶ್ವಾಸ ಹೆಚ್ಚುತ್ತದೆ. ಸುಮ್ಮನೆ ಕುಳಿತಿರುವುದು ನಿಮಗೆ ಕಷ್ಟ.
...
Read More
This Year Prediction | 01 Jan 2025 to 31 Dec 2025
ರಾಶಿ ಚಕ್ರದ ಮೂರನೇ ರಾಶಿಯಾದ ಮಿಥುನ ರಾಶಿವರಿಗೆ ಸ್ವಲ್ಪ ನಿರಾಳವಾಗಲಿದೆ. ಕಳೆದ ವರ್ಷದ ಬೇಸರ, ಹತಾಶೆ, ಅಪಮಾನ, ಆರ್ಥಿಕ ಹಿನ್ನಡೆ ಇವು ಕಡಿಮೆಯೇ. ಅಲ್ಪ ಗುರು ಬಲವು ಬರವುದರಿಂದ ನಿಮ್ಮಲ್ಲಿ ನೆಮ್ಮದಿ ಗಾಳಿ ಆಗಾಗ ಬೀಸಿ, ಆರಾಮೆನಿಸುವುದು. ಇನ್ನು ಶನಿಯು ಎರಡು ವರೆ ವರ್ಷಗಳ ಅನಂತರ ಸ್ಥಾನ ಬದಲಾವಣೆ ಆಗಲಿದೆ. ನವಮ ಸ್ಥಾನದಲ್ಲಿ ಇದ್ದ ಶನಿಯು ಏಕಾದಶಕ್ಕೆ ಬರುವನು. ದಶಮದಲ್ಲಿ ಇದ್ದ ರಾಹುವು ನವಮಕ್ಕೆ ಹೋಗುವನು ಮತ್ತು ಚತುರ್ಥದಲ್ಲಿ ಕೇತುವಿದ್ದು ಅವನು ತೃತೀಯಕ್ಕೆ ಬರುವನು. ಇವೆಲ್ಲ ಬದಲಾವಣೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಆಗುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಇರುವುದು....
Read More