Today's Prediction
| 20 Dec 2025
ಕೆಲಸದ ಒತ್ತಡ ಇದ್ದು ಫಲ ಅಸ್ಪಷ್ಟವಾಗಿ ಗೋಚರಿಸುವುದು. ಅಹಂಕಾರ ತಾನಾಗಿಯೇ ಪ್ರಕಟವಾಗಲಿದೆ. ಧ್ಯಾನ ನಿಮ್ಮ ಮನಸ್ಸಿಗೆ ಆಯಾಸವನ್ನು ಮೀರುವ ಶಕ್ತಿ ನೀಡುತ್ತದೆ. ನಿಮ್ಮ ನಾಯಕತ್ವವನ್ನು ಸರಿಮಾಡಿಕೊಳ್ಳಿ. ನೀವು ಯಾವ ಸೋಲನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಸಮಯೋಚಿತ ಕಾರ್ಯದಿಂದ ನಿಮಗೆ ಉನ್ನತ ಅಧಿಕಾರಗಳು ಬರಬಹುದು. ಇಂದು ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು. ನಿಮ್ಮ ನೋವನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳುವಿರಿ. ಸಂಗಾತಿಯನ್ನು ದೂರ ಕಳಿಸಿ ಸಂಕಟಪಡುವಿರಿ. ಅಧಿಕಾರಕ್ಕಿಂತ ಕರ್ತವ್ಯ ಮುಖ್ಯವಾಗುವ ದಿನ. ವಿನಯ ತೋರಿಸಿದರೆ ಗೌರವ ಸ್ವಯಂ ಬರುತ್ತದೆ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ನಿಮ್ಮ ಹೆಸರನ್ನು ಹೇಳಿ ಯಾರಾದರೂ ವಂಚಿಸಿಯಾರು.
...
Read More
This Year Prediction | 01 Jan 2025 to 31 Dec 2025
ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಹೊಸ ವರ್ಷ ಕಷ್ಟದ್ದಾಗಿದೆ. ಸುಖವನ್ನು ಕಂಡ ನಿಮಗೆ ಸಣ್ಣ ಕಷ್ಟಗಳೂ ದೊಡ್ಡದಾಗಿ ಕಾಣಿಸುವ ಕಾಲ. ಗುರುವು ವರ್ಷದ ಮಧ್ಯಾವಧಿಯಲ್ಲಿ ತನ್ನ ಸ್ಥಾನವನ್ನು ಬದಲಿಸಿ ಅಷ್ಟಮಕ್ಕೆ ಹೋಗುವನು. ಪಂಚಮ ಶನಿಯೂ ಇದೇ ಸಂದರ್ಭದಲ್ಲಿ ಆರಂಭವಾಗುವುದು. ರಾಹುವು ಚತುರ್ಥದಲ್ಲಿ ಹಾಗೂ ಕೇತುವು ದಶಮದಲ್ಲಿ ಇರುವ ಸಂದರ್ಭ ಹೆಚ್ಚು. ಅಪಮಾನ, ಆರ್ಥಿಕ ನಷ್ಟ, ಸ್ಥಾನ ಭ್ರಷ್ಟತೆ, ದುಃಖ ಇವುಗಳೇ ಅಧಿಕವಾಗಿತ್ತು ಕಾಣಿಸುವುದು....
Read More