Today's Prediction
| 05 Dec 2025
ಹೊಸ ಯೋಜನೆಗಳು ಮನಸ್ಸಿನಲ್ಲಿ ಮೂಡಬಹುದು. ವ್ಯಾಪಾರದಲ್ಲಿ ಅನುಕೂಲಕರ ಬೆಳವಣಿಗೆ. ಸಹೋದ್ಯೋಗಿಗಳಿಂದ ಬೆಂಬಲ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ. ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವವು ಉತ್ತಮವಾದುದು. ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗುವುದು. ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯದು. ಕುಟುಂಬದಲ್ಲಿ ಸುಸ್ಥಿರತೆ, ಒಳ್ಳೆಯ ಸಂಭಾಷಣೆ ಅಗತ್ಯ. ಆರೋಗ್ಯ ಸ್ವಲ್ಪ ಜಾಗರೂಕತೆ ಬೇಡಿಕೆ. ಮಾತಿನಲ್ಲಿ ಮಿತಭಾಷಣ ಮಾಡಿದರೆ ಎಲ್ಲವೂ ಸುಗಮ. ಒತ್ತಡದ ನಡುವೆಯೂ ನಿಮ್ಮ ಕೆಲಸವನ್ನು ಸರಳ ಮಾಡಿಕೊಳ್ಳುವಿರಿ. ನಿಮ್ಮ ಸಾಮರ್ಥ್ಯಕ್ಕೆ ಸರಿಯಾದ ಕೆಲಸವನ್ನು ಮಾಡಿ. ಪಾಲುದಾರಿಕೆಯಲ್ಲಿ ಅನವಶ್ಯಕ ವಾದವನ್ನು ಮಾಡಬೇಕಾಗುವುದು.
...
Read More
This Year Prediction | 01 Jan 2025 to 31 Dec 2025
ಕಳೆದ ವರ್ಷ ಶುಭಾಶುಭ ಫಲಗಳಿಂದ ಇದ್ದು ಈ ವರ್ಷ ಇನ್ನಷ್ಟು ಕಷ್ಟವಾಗಲಿದೆ. ಸಾಡೇಸಾಥ್ ಶನಿಯಿಂದ ಮುಕ್ತಿ ಸಿಗಲಿದೆ. ಹಾಗೆಯೇ ಗುರುವೂ ಷಷ್ಠಕ್ಕೆ ಹೋಗಲಿದ್ದು ಗುರುಬಲವು ಇಲ್ಲದಂತೆ ಆಗುವುದು. ಯಾವ ಫಲವನ್ನು ಅನುಭವಿಸಲಾಗದು. ಇನ್ನು ದ್ವಿತೀಯದಲ್ಲಿ ರಾಹು ಹಾಗೂ ಅಷ್ಟಮದಲ್ಲಿ ಕೇತುವು ಇರುವ ಕಾರಣ ಆರ್ಥಿಕ ಹಾಗೂ ಆರೋಗ್ಯದ ವಿಚಾರದಲ್ಲಿ ಇರಿಸುಮುರಿಸು ಇರಲಿದೆ. ವರ್ಷದ ಆರಂಭದಲ್ಲಿ ಕುಜನು ನೀಚನಾಗಿ ನಿಮ್ಮ ರಾಶಿಯನ್ನು ನೋಡುವನು. ಒಟ್ಟಾರೆಯಾಗಿ ಈ ವರ್ಷ ದುಡುಕಿ ಯಾವುದೇ ನಿರ್ಧಾರ ಮಾಡುವುದು ಬೇಡ. ವಿಳಂಬವಾದರೂ ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಿ....
Read More