AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Updated on: 21 December 2025
Aries

aquarius Horoscope

Today's Prediction | 21 Dec 2025
ಹಠ ಮತ್ತು ಹಳೆಯ ವಿಷಯಗಳ ಮೇಲೆ ಒತ್ತಡ ಅಪಯಶಸ್ಸು ತರುವುದು. ವಿನಯದಿಂದ ವರ್ತಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಇಂದು ನಿಮಗೆ ಸಣ್ಣ ತಡೆಯೂ ದೊಡ್ಡದಾಗಿ ಕಾಣಿಸುವುದು. ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ವ್ಯವಹಾರದಲ್ಲಿ ಗೊಂದಲವಿಟ್ಟುಕೊಳ್ಳುವುದು ಬೇಡ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ಪರೀಕ್ಷೆಯ ಸಮಯವಿದ್ದರೂ ವಿದ್ಯಾರ್ಥಿಗಳು ಅನ್ಯ ಚಟುವಟಿಕೆಯಲ್ಲಿ ನಿಶ್ಚಿಂತೆಯಿಂದ ಭಾಗವಹಿಸುವರು. ಆರ್ಥಿಕವಾಗಿ ಸಮತೋಲನದ ದಿನ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರುತ್ತದೆ. ಸಣ್ಣ ಲಾಭದಿಂದ ಸಂತೋಷ ಸಿಗುತ್ತದೆ. ಯೋಗ್ಯತೆ ಇದ್ದರೂ ಯೋಗವೂ ಜೊತೆಗೆ ಬಂದಾಗ ಸಿಗಬೇಕಾದುದು ಸಿಗಲಿದೆ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ.... Read More
This Year Prediction | 01 Jan 2025 to 31 Dec 2025
ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಪಂಚಮಕ್ಕೆ ಹೋಗುವ ಗುರುವಿನ ಬಲ ಮತ್ತು ದೃಷ್ಟಿ ಎರಡೂ ಇರಲಿದೆ. ಸಾಡೆಸಾಥ್ ನ ಅಂತ್ಯ ಭಾಗ ಆರಂಭವಾಗಲಿದೆ. ಶನಿಯು ತನ್ನ ರಾಶಿಯನ್ನು ಬಿಟ್ಟು ದ್ವಿತೀಯ ಸ್ಥಾನಕ್ಕೆ ಹೋಗುವನು. ರಾಹುವು ನಿಮ್ಮ ರಾಶಿಗೆ ಬರಲಿದ್ದಾನೆ. ಕೇತುವು ಸಪ್ತಮಕ್ಕೆ ಹೋಗುವನು. ಆರ್ಥಿಕ ಹಾಗು ಆರೋಗ್ಯಕ್ಕೆ ಅಷ್ಟು ಪೂರಕವಾದುದಲ್ಲ. ಒಟ್ಟಾರೆ ನಿಮ್ಮ ವರ್ಷ ಸಂತೋಷಮಯವಾಗಿ ಇರಲಿದೆ.... Read More

Compatibility Calculator

ImageA
ImageB
Compatible
aquarius

aquarius Sign Characteristics

ಖಾಸಗಿ ಸಂಸ್ಥೆಗಳು ನಿಮ್ಮನ್ನು ಆಹ್ವಾನಿಸಬಹುದು. ಬಹಳ ಚಂಚಲದಿಂದ ಇರುವ ಮನಸ್ಸಿಗೆ ಯಾವುದಾದರೂ ಇಷ್ಟವಾದ ವಿಷಯವನ್ನು ಕೊಟ್ಟು ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಿ. ದೂರದ ಊರಿಗೆ ಪ್ರಯಾಣ ಮಾಡುವ ಸಂದರ್ಭವು ಬರಲಿದ್ದು, ಅಲ್ಲಿ ಇಷ್ಟಮಿತ್ರರ ಸಹವಾಸವು ದೊರೆಯುವುದು. ತಪ್ಪಾದರೂ ಕೆಲಸವನ್ನು ಮಾಡುವುದು ಅನಿವಾರ್ಯ. ಜೀವನ ನಿರ್ವಹಣೆಗೆ ಎಲ್ಲದರಿಂದ ದೂರವಿರಬೇಕಾಗುವುದು. ನಿಮ್ಮವರನ್ನು ಕಳೆದುಕೊಳ್ಳುವ ಭೀತಿಯು ಬರಬಹುದು.

More about aquarius Zodiac Sign Horoscope Prediction

ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ನಿಮ್ಮನ್ನು ಎಲ್ಲ ರೀತಿಯಿಂದ ಅಣಕಿಸಿಯಾರು. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಹೂಡಿಕೆಯನ್ನು ಒತ್ತಾಯದ ಕಾರಣಕ್ಕೆ ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಸದೀತು.

Disclaimer: ಸೂಚನೆ: ಈ ಲೇಖನದಲ್ಲಿರುವ ಯಾವುದೇ ಮಾಹಿತಿ ಅಥವಾ ಲೆಕ್ಕಾಚಾರಗಳಾಗಿರಲಿ ಅದನ್ನು ನಾವು ಖಾತ್ರಿಪಡಿಸುವುದಿಲ್ಲ. ಈ ಮಾಹಿತಿಯನ್ನು ಬೇರೆ ಮಾಧ್ಯಮಗಳು/ಜ್ಯೋತಿಷಿಗಳು/ಪಂಚಾಂಗಗಳು/ಪ್ರವಚನಗಳು ಅಥವಾ ಧಾರ್ಮಿಕ ಗ್ರಂಥಗಳಿಂದ ಸಂಗ್ರಹಿಸಿ ನಿಮ್ಮ ಮುಂದಿಡಲಾಗಿದೆ. ನಮ್ಮ ಉದ್ದೇಶವು ಕೇವಲ ಮಾಹಿತಿಯನ್ನು ನಿಮಗೆ ನೀಡುವುದಷ್ಟೇ ಆಗಿರುತ್ತದೆ. ಹಾಗಾಗಿ ಓದುಗರು ಇದನ್ನು ಕೇವಲ ಮಾಹಿತಿ ಎಂದಷ್ಟೇ ಪರಿಗಣಿಸಬೇಕು. ಓದುಗರು ಯಾವುದಾದರೊಂದು ಅಂಶವನ್ನು ಕಾರ್ಯರೂಪಕ್ಕೆ ತಂದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ.