Today's Prediction
| 05 Dec 2025
ಆರ್ಥಿಕತೆ ಸಣ್ಣದಾದರೂ ನಿರಂತರವಾಗಿರಲಿದೆ. ಕೆಲಸದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಮಮತೆ, ಸಮಾಧಾನ ತಾನಾಗಿಯೇ ಬರುವುದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಡುವುದು ಸೂಕ್ತ. ಇರುವ ಹಣವನ್ನು ಬೇಕಾದ ಸಮಯಕ್ಕೆ ಪಡೆಯಲು ಕಷ್ಟವಾಗಬಹುದು. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಸಮರದ ರೀತಿಯಲ್ಲಿ ಇಂದಿನ ದಿನ ಕಳೆದಂತಾಗುವುದು. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ನಿಮ್ಮ ರಹಸ್ಯವನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವರು. ಅವರಸದಲ್ಲಿ ಏನನ್ನೂ ಖರೀದಿ ಮಾಡುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸದೇ ಇರಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ. ಆತ್ಮವಿಶ್ವಾಸದೊಂದಿಗೆ ಕೈಗೊಂಡ ಕಾರ್ಯಗಳು ಯಶಸ್ವಿ. ಗೌರವವನ್ನು ಕಾಪಾಡಿಕೊಳ್ಳಲು ಗಂಭೀರವಾಗಿ ಇರುವಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.
...
Read More
This Year Prediction | 01 Jan 2025 to 31 Dec 2025
ಹೊಸ ವರ್ಷ ಆರಂಭವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ವರ್ಷದಲ್ಲಿ ವೃಷಭ ರಾಶಿಯವರಿಗೆ ಶುಭಾಶುಭಗಳ ಮಿಶ್ರಣವಿರಲಿದೆ. ಗುರುಬಲವು ಈ ವರ್ಷದ ಮಧ್ಯಾವಧಿಯಿಂದ ಆರಂಭವಾಗಲಿದೆ. ಶನಿಯು ನಿಮ್ಮ ಏಕಾದಶ ಸ್ಥಾನಕ್ಕೆ ಬರಲಿದ್ದಾನೆ. ರಾಹು ಹಾಗೂ ಕೇತುಗಳು ದಶಮ ಹಾಗೂ ಚತುರ್ಥ ಸ್ಥಾನಕ್ಕೆ ಬದಲಾಗಲಿದೆ. ಜಾತಕದಲ್ಲಿ ಶನಿಯು ಉಚ್ಚನಾಗಿದ್ದ, ಮಿತ್ರಕ್ಷೇತ್ರದಲ್ಲಿ, ಸ್ವಕ್ಷೇತ್ರದಲ್ಲಿ ಇದ್ದರೆ ಅಥವಾ ಶನಿಯ ದಶಾ ಕಾಲವಾಗಿದ್ದರೆ ಅವರಿಗೆ ಶುಭ. ಎಲ್ಲ ಕ್ಷೇತ್ರದಲ್ಲಿಯೂ ಜಯ ಸಿಗಲಿದೆ. ಗುರುದಶೆ ನಡೆಯುತ್ತಿದ್ದವರಿಗೂ ಈ ವರ್ಷ ಶುಭವೇ....
Read More