Today's Prediction
| 19 Dec 2025
ಮೌನವನ್ನು ನಿಮ್ಮ ಶಕ್ತಿಯಾಗಿಸಿಕೊಳ್ಳಿ. ಎಲ್ಲವನ್ನೂ ಹೇಳಬೇಕಿಲ್ಲ. ಅನಪೇಕ್ಷಿತ ಮಾತನ್ನು ಬಿಡುವುದು ಒಳ್ಳೆಯದು. ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ಕೃಷಿಯಲ್ಲಿ ಲಾಭವನ್ನು ಪಡೆಯಲು ಹೆಚ್ಚಿನ ಓಡಾಟ ಮಾಡಬೇಕಾಗುವುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು. ಸಂಗಾತಿಯು ನಿಮ್ಮ ನಡೆಯನ್ನು ಅನುಮಾನಸಿಬಹುದು. ಯಾರದೋ ಬಲವಂತಕ್ಕೆ ಸಿಕ್ಕಿಕೊಳ್ಳುವಿರಿ. ಉದ್ಯೋಗವನ್ನು ಬದಲಾಯಿಸಲು ಇರುವ ಉದ್ಯೋಗವನ್ನು ಬಿಟ್ಟುಬಿಡುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ಪ್ರಯತ್ನ ಸಾಲದು. ಒಳಗಿಟ್ಟ ಯೋಜನೆ ನಿಧಾನವಾಗಿ ರೂಪ ಪಡೆಯುತ್ತದೆ. ಹುಡುಗಾಟದ ಮನೋಭಾವವು ಇರಲಿದೆ. ಸ್ನೇಹಿತರ ಕೆಲವು ಸಂಗತಿಗಳು ನಿಮಗೆ ಇಷ್ಟವಾಗದು. ನಿಮ್ಮನ್ನು ಪ್ರಶಂಸಿಸಿದಂತೆ ಕಂಡರೂ ಅದು ತೆಗಳಿಕೆಯಾಗಿರಲಿದೆ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ.
...
Read More
This Year Prediction | 01 Jan 2025 to 31 Dec 2025
ಈ ವರ್ಷ ಕಳೆದ ವರ್ಷದಂತೆ ಕುಂಟುವ ಕಾಲವಲ್ಲ. ವೇಗವಾಗಿ ಸಾಗುವುದು. ಅನೇಕ ಶುಭ ಕಾರ್ಯಗಳನ್ನು ಮಾಡಲು ಈ ವರ್ಷ ಬಹಳ ಶುಭ. ಈ ವರ್ಷ ಬರುವ ಗುರು ಬಲವು ನಿಮ್ಮ ಜೀವನದ ದಿಕ್ಕನ್ನು ಬದಲಿಸಲಿದೆ. ಇನ್ನೂ ಶನಿಯು ಅಷ್ಟಮಕ್ಕೂ ಕೇತುವು ಸ್ವರಾಶಿಗೂ ರಾಹುವು ಸಪ್ತಮದಲ್ಲಿ ಇರಲಿದ್ದಾರೆ. ದಾಂಪತ್ಯದಲ್ಲಿ ಒತ್ತಡ ಇರಿಸುಮುರಿಸಿನ ಸಂದರ್ಭವು ಬರಲಿದೆ. ತಾಳ್ಮೆಯನ್ನು ಪರೀಕ್ಷಿಸುವ ಸನ್ನಿವೇಶಗಳು ಎದರಾಗಲಿವೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ವರ್ತನೆಯೂ ಲೆಕ್ಕಕ್ಕೆ ಬರುವುದು....
Read More