Today's Prediction
| 05 Dec 2025
ಅಡತಡೆಗಳಿಲ್ಲದೇ ಬೇಗಬೇಗನೆ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಹಣದ ಹರಿವು ತಾನಾಗಿಯೇ ಸರಿಯಾಗುವುದು. ಶತ್ರುಗಳಿಂದ ದೂರವಿರುವುದು ಒಳ್ಳೆಯದು. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಹಳೆಯ ನೋವುಗಳು ಮತ್ತೆ ಕಾಣಿಸಿಕೊಳ್ಳುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಇಚ್ಛೆ ಇರುವುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ. ಪ್ರಭಾವೀ ವ್ಯಕ್ತಿಗಳ ಸಹಕಾರದಿಂದ ನಿಮಗೆ ಜೀವನದ ಉತ್ತಮ ಮಾರ್ಗವು ಕಾಣಿಸುವುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆಯವರು ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ಆಧ್ಯಾತ್ಮಿಕ ಚಿಂತನೆ ನಿಮಗೆ ಅಧಿಕ ಸಂತೋಷವನ್ನು ಕೊಡುವುದು. ನಿರ್ಧಾರಗಳಲ್ಲಿ ಇರುವ ಸ್ಪಷ್ಟತೆಯನ್ನು ಅಧಿಕೃತಗೊಳಿಸಿಕೊಳ್ಳಿ. ಭವಿಷ್ಯದ ಕನಸು ಕಾಣುವಿರಿ. ಭೋಗವಸ್ತುಗಳ ಮಾರಾಟದಿಂದ ನಿಮಗೆ ಲಾಭವಾಗುವುದು. ಮಕ್ಕಳ ತೀರ್ಮಾನಕ್ಕೆ ನೀವು ಬದ್ಧರಾಗಬೇಕಾಗುವುದು.
...
Read More
This Year Prediction | 01 Jan 2025 to 31 Dec 2025
ಬಹಳ ಸುಖದಿಂದ ಕಾಲ ಕಳೆದ ನಿಮಗೆ ಈ ವರ್ಷ ಅದು ಕಡಿಮೆಯಾಗಲಿದೆ. ನವಮದಲ್ಲಿ ಇರುವ ಗುರುವು ದಶಮಕ್ಕೆ ಹೋಗುವನು. ಸಪ್ತಮದ ಇದ್ದ ರಾಹುವು ಷಷ್ಠಕ್ಕೆ ಬರುವನು. ಹಾಗೆಯೇ ಕೇತುವು ದ್ವಾದಶ ಸ್ಥಾನಕ್ಕೆ ಹೋಗುವನು. ಆದ್ದರಿಂದ ಈ ವರ್ಷ ಗ್ರಹಗಳು ಅಶುಭಸ್ಥಾನದಲ್ಲಿ ಇರುವುದರಿಂದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕಾರ್ಯದಲ್ಲಿ ಏರುಪೇರು ಆಗುವುದರಿಂದ ಮಾನಸಿಕವಾಗಿ ತಯಾರಿದ್ದರೆ ಎಂತಹ ಸ್ಥಿತಿಯನ್ನು ಸರಿದೂಗಿಸಿಕೊಳ್ಳಬಹುದು. ಪುರುಷ ಪ್ರಯತ್ನ ಹಾಗೂ ದೈವಾನುಗ್ರಹಗಳ ಫಲವಾಗಿ ಈ ವರ್ಷವನ್ನು ಗೆಲ್ಲಲು ಸಾಧ್ಯ....
Read More