Today's Prediction
| 20 Dec 2025
ಕೆಲಸದಲ್ಲಿ ನಿಖರತೆಯಿಂದ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಶ್ರಮಕ್ಕೆ ಗಂಭೀರ ಫಲವನ್ನು ನಿಧಾನವಾಗಿ ಪಡೆಯುವಿರಿ. ನಿಮಗೆ ಇಂದು ಯಾರಾದರೂ ಧೈರ್ಯ ತುಂಬುವವರ ಅವಶ್ಯಕತೆ ಇರಲಿದೆ. ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಸಾಲ ಕೊಟ್ಟವರು ನಿಮ್ಮನ್ನು ನಾನಾ ಪ್ರಕಾರವಾಗಿ ಜರಿಯಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಯಾರೋ ಆಡಿದ ನಕಾರಾತ್ಮಕ ಮಾತಿಗೆ ಸತ್ತ್ವವನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಸಣ್ಣ ತಪ್ಪು ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ. ಕ್ರಮಬದ್ಧತೆ ಇಂದು ದೊಡ್ಡ ಸಹಾಯ. ಸಮತೋಲನವೇ ದಿನದ ಸಾರ.
...
Read More
This Year Prediction | 01 Jan 2025 to 31 Dec 2025
ಈ ವರ್ಷ ನಿಮಗೆ ಶುಭಪ್ರದವಾಗಿದೆ. ಕಳೆದ ವರ್ಷದ ಎಲ್ಲ ಸಂಕಟವನ್ನು ದೂರಮಾಡಿಕೊಂಡು ಹೊಸ ಹುರುಪಿನಲ್ಲಿ ನೀವು ಮುಂದುವರಿಯುವಿರಿ. ಗುರುಬಲವು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು. ಪಂಚಮದ ರಾಹುವು ಹಾಗೂ ಏಕಾದಶದಲ್ಲಿ ಕೇತು ಮತ್ತು ಷಷ್ಠದಲ್ಲಿ ಶನಿ ಇವರು ಅರ್ಧವರ್ಷಗಳ ಕಾಲ ಸ್ಥಿತವಾಗಿರುವ ಗ್ರಹಗಳಾಗಿವೆ. ವಿದ್ಯಾಭ್ಯಾಸ ಹಾಗೂ ಆದಾಯ ವಿಚಾರದಲ್ಲಿ, ಆರೋಗ್ಯದಲ್ಲಿ ಸ್ಥಿರತ್ವ ಉಳಿಯುವುದು....
Read More