ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಮೇಲೆ ಅವಹೇಳನಕರವಾದ ಸಂಗತಿ ಪ್ರಸಾರ
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ಮಂಗಳವಾರದಂದು ನಿರಾತಂಕ, ಆಸೆಯಿಂದ ಉದ್ಯೋಗ ಬದಲು, ಅಸಮಯದ ಆಹಾರ, ವೈಯಕ್ತಿಕ ವಿರೋಧ, ದಾನಧರ್ಮ, ಹಿತಶತ್ರು ದೂರ, ವಿಪತ್ತು, ಅಧಿಕಾರ, ವಿದ್ಯೆಯ ಉಪಯೋಗ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಶೂಲಿ, ಕರಣ : ಗರಜ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 56 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:01 – 16:29, ಯಮಗಂಡ ಕಾಲ 09:08 – 10:36, ಗುಳಿಕ ಕಾಲ 12:04 – 13:32.
ಶರನ್ನವರಾತ್ರದ ಒಂಭತ್ತನೇ ದಿನ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಸಿದ್ಧಿದಾತ್ರೀ ದೇವಿಯು ಎಲ್ಲ ಕಾರ್ಯಗಳನ್ನು ಸಿದ್ಧಿಸಿಕೊಡಲಿ.
ಮೇಷ ರಾಶಿ: ಯಾರಾದರೂ ನಿಮ್ಮ ದೌರ್ಬಲ್ಯವನ್ನು ಅರಿತು ನಿಮ್ಮನ್ನು ಪೀಡಿಸಬಹುದು. ಇಂದು ನಿಮ್ಮ ಪ್ರಯತ್ನದಿಂದ ಯಶಸ್ಸು ಸಿಗುವುದು. ಆರೋಗ್ಯದ ಮೇಲೆ ಸಣ್ಣ ಸಮಸ್ಯೆಗಳು ಬರಬಹುದು. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಿಲ್ಲ. ಆನುವಂಶಿಕ ಖಾಯಿಲೆಯಿಂದ ದುಃಖಪಡಬೇಕಾದೀತು. ಸಂಗಾತಿಯ ಇಂಗಿತವನ್ನು ಅರಿಯುವ ಪ್ರಯತ್ನ ಮಾಡುವಿರಿ. ಅಪಮಾನವಾದ ಸ್ಥಳದಲ್ಲಿಯೇ ಗೌರವವು ಸಿಗಲಿದೆ.
ವೃಷಭ ರಾಶಿ; ನಿಮ್ಮ ಕೈಮೀರಿದ ಸಂಗತಿಗಳಿಗೆ ಜವಾಬ್ದಾರಿಯನ್ನು ತೆಗೆದುಕಕೊಳ್ಳಬೇಕಿಲ್ಲ. ವೃತ್ತಿ ಜೀವನದಿಂದ ನಿಮಗೆ ಗೌರವವು ಸಿಗಬಹುದು. ಆರೋಗ್ಯದ ವ್ಯತ್ಯಾಸವನ್ನು ನೀವು ನಿರ್ಲಕ್ಷ್ಯ ಮಾಡುವಿರಿ.ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ಇರಲಿವೆ. ಉದ್ಯಮದ ಅಪಾಯದ ಬಗ್ಗೆ ಎಚ್ಚರಿಕೆ ಇರಲಿ. ಯಾರ ಜೊತೆಯೂ ನೋವಾಗುವಂತೆ ವರ್ತಿಸುವುದು ಬೇಡ. ವೃತ್ತಿಜೀವನದಲ್ಲಿ ಆದ ಅಚಾತುರ್ಯದಿಂದ ಭಯವಾಗುವುದು. ನಿಮ್ಮ ನಂಬಿಕೆಯನ್ನು ಯಾರಾದರೂ ಬದಲುಮಾಡಬಹುದು.
ಮಿಥುನ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ನೀವು ಇಂದು ನಿರೀಕ್ಷಿತ ಹಂತಕ್ಕೆ ಹೋಗುತ್ತಿರುವುದು ಸಂತೋಷದ ಸಂಗತಿಯಾಗಲಿದೆ. ದೂರ ಪ್ರಯಾಣವು ನಿಮಗೆ ಖುಷಿ ಕೊಡಬಹುದು. ಭೋಜನವನ್ನು ಸರಿಯಾದ ಸಮಯಕ್ಕೆ ಮಾಡಿ. ಇಲ್ಲವಾದರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಹೂಡಿಕೆಯಿಂದ ಪ್ರಯೋಜನವಾಗದು ಎಂದು ಅನ್ನಿಸಬಹುದು. ಹೊಂದಾಣಿಕೆಯ ಸ್ವಭಾವವನ್ನು ಬುದ್ಧಿಪೂರ್ವಕವಾಗಿ ಬೆಳೆಸಿಕೊಳ್ಳಬೇಕು.
ಕರ್ಕಾಟಕ ರಾಶಿ: ಸಂಬಂಧಗಳನ್ನು ನಿಮ್ಮ ಬಳಸಿಕೊಳ್ಳಬಹುದು. ನಿಮ್ಮ ಕೆಲಸದಲ್ಲಿ ನೀವು ತೊಡಗಿಕೊಳ್ಳಿ. ಮನಸ್ತಾಪಗಳು ನೆಮ್ಮದಿಯನ್ನು ಹಾಳು ಮಾಡುವುದು. ಕಾಲು ಕೆರೆದು ನಿಮ್ಮ ಬಳಿ ಜಗಳಕ್ಕೆ ಬರಬಹುದು. ಸಂಗಾತಿಯಿಂದ ನಿಮ್ಮ ಯೋಚನೆಗೆ ಪ್ರೋತ್ಸಾಹವು ಸಿಗಲಿದೆ. ಅಪರಿಚಿತ ಕರೆಗಳಿಗೆ ಸ್ಪಂದಿಸುವುದು ಬೇಡ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ.
ಸಿಂಹ ರಾಶಿ: ಇಂದು ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ ನಿಮಗೆ ನಿಯಂತ್ರಣ ಸಿಗದಾದೀತು. ಇಂದು ನೀವು ಬಹಳ ಜಾಣ್ಮೆಯಿಂದ ವ್ಯವಹಾರವನ್ನು ಮಾಡುವಿರಿ. ಭೂಮಿಯ ಖರೀದಿಯನ್ನು ನೀವು ಮಾಡವ ಯೋಚನೆ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ಮಾತುಗಳನ್ನು ಕಡಿಮೆ ಮಾಡಿದಷ್ಟು ಒಳ್ಳೆಯದೇ. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ವ್ಯಾವಹಾರಿಕವಾದ ಅಪವಾದಗಳು ಬರಬಹುದು.
ಕನ್ಯಾ ರಾಶಿ: ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಬೇರೆ ಕಡೆಯಿಂದ ಬರುವ ಅತಿಯಾದ ಒತ್ತಡದಿಂದ ಮನಸ್ಸು ಹಾಳಾಗುವುದು. ಸ್ತ್ರೀಯರ ಸಹಾಯಕ್ಕೆ ನೀವು ಹೋಗುವಿರಿ. ಹೇಳಿಕೊಂಡು ನಿಮ್ಮ ದುಃಖವನ್ನು ಕಡಿಮೆ ಮಾಡಿಕೊಳ್ಳಬಹುದು. ಯಾರದೋ ಮೂಲಕ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ತೃಪ್ತಿ ಇರದು. ಆಸ್ತಿಯ ವಿಚಾರದಲ್ಲಿ ಕಲಹವಾಗುವುದು. ನಿಮ್ಮ ಒಳ ಮನಸ್ಸು ಹೇಳಿದಂತೆ ಕೇಳಿ. ನೆಮ್ಮದಿಗೆ ಅದೇ ದಾರಿ.
ತುಲಾ ರಾಶಿ: ವಿಶ್ವಾಸವನ್ನು ಗಳಿಸುವ ವಿಚಾರದಲ್ಲಿ ಸೋಲುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ಮನೆಯಲ್ಲಿ ಅತಿಥಿಗಳು ಇರುವರು. ದೂರದಲ್ಲಿರುವ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿರುವರು. ಆತ್ಮೀಯರ ಒಡನಾಟದಿಂದ ಸಂತೋಷವು ನೆಮ್ಮದಿಯು ಹೆಚ್ಚುವುದು. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ವಿದೇಶದ ವ್ಯಾಮೋಹವು ನಿಮಗೆ ದೂರಾಗುವುದು.
ವೃಶ್ಚಿಕ ರಾಶಿ: ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಹಿರಿಯಿಂದ ಆಶೀರ್ವಾದವನ್ನು ಪಡೆಯುವಿರಿ. ವೈಯಕ್ತಿಕ ಕೆಲಸವನ್ನು ಮಾಡಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ನಿಮಗೆ ಬಾರದೇ ಹೋಗಬಹುದು. ಏಕಾಂತವು ನಿಮಗೆ ಬಲವನ್ನು ಕೊಡಬಹುದು. ಸ್ವಾರ್ಥವನ್ನು ಗೊತ್ತಾಗದಂತೆ ಬೆಳೆಸಿಕೊಳ್ಳುವಿರಿ. ನ್ಯಾಯದ ವಿಚಾರದಲ್ಲಿ ನೀವು ಸ್ವಲ್ಪ ಹಿನ್ನಡೆ ಪಡೆಯಬಹುದು.
ಧನು ರಾಶಿ: ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ನಿಮ್ಮವರನ್ನು ಕಳೆದುಕೊಳ್ಳುತ್ತೇನೆ ಎಂಬ ಭಯವು ಇರುವುದು. ವಾಸ್ತವದಲ್ಲಿ ಬದುಕುವುದನ್ನು ಕಲಿಯಿರಿ. ನೀವು ಮಾಡುವ ಕಾರ್ಯದಲ್ಲಿ ಲೋಪಬಾರದಂತೆ ನೋಡಿಕೊಳ್ಳಿ. ನಿಮ್ಮ ಉದ್ಯಮವನ್ನು ವಿಸ್ತರಿಸಲು ಯೋಚಿಸುವಿರಿ. ವಿದ್ಯಾರ್ಥಿಗಳು ಯಶಸ್ಸಿಗಾಗಿ ದಾರಿ ಹುಡುಕುವಿರಿ. ಸಂಗಾತಿಯಿಂದ ನಿಮಗೆ ಉಡುಗೊರೆಯು ಸಿಗುವುದು. ವಿದೇಶೀ ಬಂಧುಗಳ ಜೊತೆ ವ್ಯಾವಹಾರಿಕ ಮಾತುಕತೆಗಳು ನಡೆಯುವುದು.
ಮಕರ ರಾಶಿ; ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ನಿಮ್ಮ ಕಾರ್ಯಕ್ಕೆ ವಿಘ್ನವು ಬರಲಿದ್ದು ನಕಾರಾತ್ಮಕ ನಿಮ್ಮಲ್ಲಿ ಆತಂಕವು ಸೃಷ್ಟಿಯಾಗಬಹುದು. ಕೆಲವು ವಿಚಾರಗಳನ್ನು ನೀವು ನಿರ್ಲಕ್ಷ್ಯಿಸದಿದ್ದರೆ ಅದು ದೊಡ್ಡದಾಗಬಹುದು. ಆಪ್ತರಿಗೆ ಅಮೂಲ್ಯವಾದ ಕೊಡುಗೆಯನ್ನು ಕೊಡುವಿರಿ. ಕಳೆದ ದುಃಖದ ಸಮಯವನ್ನು ಮತ್ತೆ ನೆನಪಿಸಿಕೊಳ್ಳುವಿರಿ. ಉದ್ವೇಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳಿ.
ಕುಂಭ ರಾಶಿ: ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ನಿದ್ರೆಯಲ್ಲಿ ಕಂಡ ಕನಸಿನಿಂದ ನಿಮಗೆ ಭಯವಾಗುವುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಭಕ್ತಿಯು ಕಡಿಮೆ ಆಗಬಹುದು. ನಿಮಗೆ ಬೇಕಾದ ವಸ್ತುವೇ ಆದರೂ ಅದನ್ನು ಕೇಳಿದವರಿಗೆ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗುವ ಸಾಧ್ಯತೆ ಇದೆ. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲರೂ ಇದ್ದರೂ ಏಕಾಂಗಿ ಎಂದು ಅನ್ನಿಸಬಹುದು.
ಮೀನ ರಾಶಿ: ದೂರದ ಬಂಧುವನ್ನು ನೀವು ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳದೇ ಇದ್ದುದಕ್ಕೆ ಬೇಸರವಾಗಬಹುದು. ವಿವಾಹದ ಮಾತುಕತೆಗೆ ಕುಟುಂಬದ ಜೊತೆ ತೆರಳುವಿರಿ. ನಿಮ್ಮ ಬಹುಕಾಲದ ಇಷ್ಟವನ್ನು ಪೂರೈಸುವಿರಿ. ಎಲ್ಲರಲ್ಲಿಯೂ ನಕಾರಾತ್ಮಕ ಅಂಶಗಳನ್ನು ಗಮನಿಸುವಿರಿ. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು.
ಲೋಹಿತ್ ಹೆಬ್ಬಾರ್ – 8762924271 (what’s app only)




