AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ವಿವಾಹಕ್ಕೆ ಬರುವ ಅಡೆತಡೆಯ ನಿವಾರಣೆ, ಬೆಂಬಲ

ಶಾಲಿವಾಹನ ಶಕ ವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಭಾನುವಾರದಂದು ಒತ್ತಡ ನಿವಾರಣೆ, ಶಾಂತಚಿತ್ತ, ಉದರ ರೋಗ, ಅಪಹಾಸ್ಯ, ಹಿರಿಯರ ಸಹವಾಸ, ಮರೆವು, ಹಳೆಯ ವಾಹನ ಖರೀದಿ ಇವೆಲ್ಲ ಈ ದಿನದ ವಿಶೇಷ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ವಿವಾಹಕ್ಕೆ ಬರುವ ಅಡೆತಡೆಯ ನಿವಾರಣೆ, ಬೆಂಬಲ
ದಿನ ಭವಿಷ್ಯImage Credit source: Getty images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 18, 2026 | 1:04 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸುಕರ್ಮ, ಕರಣ : ಬವ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 58 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:30 – 17:58, ಯಮಗಂಡ ಕಾಲ 12:06 – 13:33, ಗುಳಿಕ ಕಾಲ 15:01 – 16:30.

ಶರನ್ನವರಾತ್ರದ ಏಳನೇ ದಿನ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಕಾಲರಾತ್ರಿ ದೇವಿಯು ಸಕಲರ ಸಂಕಟ ಎನ್ನುವ ರಾತ್ರಿಯನ್ನು ದೂರ ಮಾಡಲಿ.

ಮೇಷ ರಾಶಿ: ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಆಕಸ್ಮಿಕವಾಗಿ ಅಲ್ಪ ಸಂಪತ್ತು ಬಂದರೂ ಅದು ನಷ್ಟವಾಗಿ ಹೋಗುವುದು. ದಾಂಪತ್ಯದಲ್ಲಿ ಒಲವು ಹೆಚ್ಚಾಗುವುದು. ತಾಳ್ಮೆಯನ್ನು ಕಳೆದುಕೊಳ್ಳುವಷ್ಟು ಕೋಪವು ಬೇಡ. ಹಲವು ಆದಾಯ ಮೂಲಗಳಲ್ಲಿ ಇಂದು ಒಂದು ಮಾತ್ರ ಉಳಿದುಕೊಳ್ಳುವುದು. ನಿಮ್ಮ ಉದ್ಯಮವನ್ನು ನಿಲ್ಲಿಸುವ ಚಿಂತನೆ ಮಾಡುವಿರಿ. ನಿಮ್ಮ ಆರ್ಥಿಕತೆಯನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ.

ವೃಷಭ ರಾಶಿ: ಇಂದು ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ನಿಮ್ಮ ಮನಸ್ಸು ಕಿರಿಕಿರಿಯಿಂದ ಹೊರಬರಲು ಸಮಯವನ್ನು ತೆಗೆದುಕೊಳ್ಳುವುದು. ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯನ್ನು ಮುಟ್ಟಲು ಹೆಚ್ಚು ಶ್ರಮ ಹಾಗೂ ಸಮಯವನ್ನು ಕೊಡಬೇಕಾಗುವುದು. ಕೇಳಿದಷ್ಟಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ.

ಮಿಥುನ ರಾಶಿ: ಹೂಡಿಕೆಯನ್ನು ಮಾಡುವ ವಿಚಾರವು ನಿಮ್ಮಲ್ಲಿ ಬಲವಾಗಿ ಇರುವುದು. ಅದೃಷ್ಟವು ಇಂದು ಕೈಕೊಡಬಹುದು. ಅಧಿಕ ಶ್ರಮವಿದ್ದರೂ ಫಲವು ಮಾತ್ರ ಅಲ್ಪವೇ ಸಿಗುವುದು. ದೂರ ಪ್ರಯಾಣದಿಂದ ಪ್ರಯಾಸವಾಗುವುದು. ಇಂದಿನ ನಿಮ್ಮ ಆಲೋಚನೆಗಳಿಗೆ ಹಲವರಿಂದ ಮಾನ್ಯತೆ ಪಡೆಯುವುದು. ಕೃಷಿಯಲ್ಲಿ ಅಧಿಕ ಆದಾಯವನ್ನು ಪಡೆಯಬೇಕು ಎನ್ನಿಸುವುದು. ನೀರನಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ.

ಕರ್ಕಾಟಕ ರಾಶಿ: ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಹಣದ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೆನಿಸಬಹುದು. ನಿಮ್ಮವರನ್ನು ಅವಶ್ಯಕತೆಗಷ್ಟೇ ಬಳಸಿಕೊಳ್ಳುವಿರಿ. ರಮಣೀಯತೆಯು ನಿಮಗೆ ಇಷ್ಟವಾಗುವುದು. ಕಲಾ‌ಕ್ಷೇತ್ರದವರಿಗೆ ಒಮ್ಮೆಲೆ ಒತ್ತಡ ಬರಲಿದ್ದು ನಿರ್ವಹಿಸುವುದು ಕಷ್ಟ. ದೈವ ಬಲವನ್ನು ನಂಬಿ ನೀವು ಕಾರ್ಯವನ್ನು ಮಾಡುವಿರಿ. ನಿಮ್ಮ ಸ್ವಂತ ಕೆಲಸಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರುವಿರಿ.

ಸಿಂಹ ರಾಶಿ: ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನ ಇರಲಿದ್ದು ಅವರ ಮೇಲೆ ಕೋಪಗೊಳ್ಳುವಿರಿ. ನಿಮ್ಮ ತನವನ್ನು ಬಿಟ್ಟು ನೀವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾರಿರಿ. ಯಾರ ಸಹಾಯವನ್ನೂ ಪಡೆಯದೆ ನೀವು ನಿಮ್ಮ ಕಾರ್ಯವನ್ನು ನಿಧಾನವಾಗಿಯೇ ಮಾಡುವಿರಿ. ನಿಮ್ಮದಾದ ಕೆಲವು ವಿಚಾರಗಳನ್ನು ಅನ್ಯರ ಮೇಲೆ ಹೇರುವಿರಿ. ಅಮೂಲ್ಯ ವಸ್ತುವೊಂದು ಕಣ್ಮರೆಯಾಗಬಹುದು. ಅನೌಪಚಾರಿಕವಾಗಿ ಅಧಿಕಾರಿಗಳ ಜೊತೆ ನಡೆದುಕೊಳ್ಳುವಿರಿ.

ಕನ್ಯಾ ರಾಶಿ: ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ಮಾನಸಿಕವಾಗಿ ಸಬಲರಾಗುವ ಅವಶ್ಯಕತೆ ಇರಲಿದೆ‌. ಸ್ವಂತ ಉದ್ಯಮವನ್ನು ಮಾಡುತ್ತಿದ್ದರಿಗೆ ನಿರೀಕ್ಷಿತ ಲಾಭದ ಮಟ್ಟವನ್ನು ತಲುಪುವುದು ಕಷ್ಟವಾಗುವುದು. ಸ್ತ್ರೀಯರ ಜೊತೆ ನಿಮ್ಮ ವ್ಯವಹಾರವು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಸಂಸಾರದ ಹೊಣೆಗಾರಿಕೆಯನ್ನು ಕಷ್ಟದಿಂದ ನಿರ್ವಹಿಸುವಿರಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು.

ತುಲಾ ರಾಶಿ: ನಿಮ್ಮ ಕಡೆಗಣಿಸುತ್ತಿರುವುದು ನಿಮಗೆ ಗೊತ್ತಾಗಿ ಬೇಸರವಾಗುವುದು. ಸ್ನೇಹಿತರಿಂದ ನೀವು ಸಹಾಯವನ್ನು ಬಯಸುವಿರಿ. ಕಛೇರಿಯ ಕೆಲಸಕ್ಕಾಗಿ ಓಡಾಟವು ಇರಲಿದೆ. ದಾಂಪತ್ಯದ ಸಾಮರಸ್ಯವನ್ನು ನೀವು ಉಳಿಸಿಕೊಳ್ಳಿ. ನಿಮ್ಮದಲ್ಲದ ಕೆಲಸವು ನಿಮಗೇ ಬರಬಹುದು. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಮಾತುಗಳು ಕೆಲವರಿಗೆ ಇಷ್ಟವಾಗದೇ ಹೋಗುವುದು. ಪ್ರೇಮವನ್ನು ನಿಭಾಯಿಸುವುದು ಕಷ್ಟವಾಗುವುದು. ಪ್ರಿಯವಾದ ವಸ್ತುವನ್ನು ಪಡೆಯಲು ಹಣದ ಅಭಾವವಿರುವುದು.

ವೃಶ್ಚಿಕ ರಾಶಿ: ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಅಧಿಕಾರದಿಂದ ನಿಮ್ಮ ವರ್ತನೆಯು ಬದಲಾಗಬಹುದು. ನೌಕರರ ಬಗ್ಗೆ ನಿಮಗೆ ಅಸಮಾಧಾನ ಇರುವುದು. ಸಂತೋಷವನ್ನು ನೀವು ಹಂಚಿಕೊಳ್ಳುವಿರಿ. ನಿಮ್ಮ ಕಾರ್ಯಸಾಧನೆಗೆ ಯಾರನ್ನಾದರೂ ಬಳಸಿಕೊಳ್ಳುವಿರಿ. ನಿಮ್ಮ ಕೆಲಸಗಳಿಗೆ ನಿಗದಿತ ಸಮಯವನ್ನು ಕೊಡುವುದು ಮುಖ್ಯವಾಗಬಹುದು. ಧಾರ್ಮಿಕ ಆಚರಣೆಯಲ್ಲಿ ಸ್ವಲ್ಪ ತೊಡಗುವಿರಿ. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು.‌

ಧನು ರಾಶಿ: ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು. ನಿಮ್ಮ ಉದ್ಯೋಗವು ಗೋಡೆಯ ಮೇಲಿರುವ ದೀಪದಂತೆ ಇರುವುದು. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ತೊಡಕುಗಳು ಬರಬಹುದು. ಸೋಮಾರಿತನದ ವಿಳಂಬ ಮಾಡುವುದು ಬೇಡ. ದುಸ್ಸಾಧ್ಯವಾದ ಕೆಲಸಗಳಿಗೆ ನೀವು ಪ್ರಯತ್ನಶೀಲರಾಗುವುದು ಬೇಡ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು.

ಮಕರ ರಾಶಿ: ನೀವು ಇಂದು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ನಿಮಗೆ ಅಸಾಧ್ಯ ಎಂದು ಗೊತ್ತಿದ್ದರೂ ಬೇರೆಯವರ ಒತ್ತಾಯಕ್ಕೆ ಕೆಲಸವನ್ನು ಮಾಡುವಿರಿ. ನಿಮ್ಮ ನೈಜ‌ಸ್ವಭಾವವು ನಿಮಗೆ ತಿಳಿಯಲಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಲು ನಿಮಗೆ ಯಾವ‌ ಅಡ್ಡಿಯೂ ಇರುವುದಿಲ್ಲ. ವಿದ್ಯಾಭ್ಯಾಸದಲ್ಲಿ ನೀವು ಅಂದುಕೊಂಡಂತೆ ಆಗದು. ಯಾರದೋ ವಿಚಾರಕ್ಕೆ ನೀವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ.

ಕುಂಭ ರಾಶಿ: ಖರೀದಿಸಬೇಕಾದ ವಸ್ತಗಳು ಬಹಳ ಇರಲಿವೆ. ಭವಿಷ್ಯದ ಬಗ್ಗೆ ನಿಮಗೆ ಕೆಲವರು ಮಾರ್ಗದರ್ಶನ ಮಾಡಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉದ್ಯೋಗಕ್ಕೆ ಹತ್ತಾರು ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮರಿಗೆ ನೀವು ಬೆಲೆಯನ್ನು ಕೊಡುವಿರಿ. ಕಣ್ತಪ್ಪಿನ ದೋಷದಿಂದ ಎಚ್ಚರಿಕೆಯಿಂದ ಇರಬೇಕು. ಅವಶ್ಯಕತೆ ಇರುವ ವಸ್ತುಗಳನ್ನು ಯಾರಿಂದಲೂ ಕೇಳಿ ಪಡೆಯಲಾರಿರಿ.

ಮೀನ ರಾಶಿ: ಹಣಕಾಸಿನ ವಿಚಾರದಲ್ಲಿ ಎಲ್ಲವೂ ಸರಿಯಿದ್ದರೂ ನೆಮ್ಮದಿಯು ಸರಿಯಾಗಿರದು. ನಿಮ್ಮ ವರ್ತನೆಯನ್ನು ಕೈ ಮಾಡಿ ತೋರಿಸಬಹುದು. ಅತಿಯಾದ ಮಾತು ಇತರರಿಗೆ ತೊಂದರೆ ಕೊಡಬಹುದು. ಹಿತಶತ್ರುಗಳ ಪೀಡೆಯು ಉತ್ಸಾಹವು ಕುಗ್ಗಿಸಬಹುದು. ಯಾವ ವಿಚಾರಗಳಿಗೂ ಅತಿಯಾದ ಚಿಂತೆಯ ಅವಶ್ಯಕತೆ ಇರದು. ನಂಬಿಕೆ ಇಡುವುದಾದರೆ ಪೂರ್ಣವಾಗಿಡಿ.

ಲೋಹಿತ್ ಹೆಬ್ಬಾರ್ – 8762924271 (what’s app only)

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More