AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್ 4ನೇ ವಾರದ ರಾಶಿಭವಿಷ್ಯ: ಈ 3 ರಾಶಿಗಳಿಗೆ ಶುಭಸುದ್ದಿ, ಕೆಲವರಿಗೆ ಹೆಚ್ಚಲಿದೆ ಖರ್ಚು!

ಅಕ್ಟೋಬರ್ ನಾಲ್ಕನೇ ವಾರವು ಶುಭ ಸಮಾಚಾರ, ಹೊಸ ಕೆಲಸದ ತಯಾರಿ ಮತ್ತು ಸಣ್ಣ ನಿರ್ಧಾರಗಳಿಂದ ದೊಡ್ಡ ಯಶಸ್ಸು ತರಲಿದೆ. ಆದಾಗ್ಯೂ, ವಾರಾಂತ್ಯದಲ್ಲಿ ಅಧಿಕ ಖರ್ಚು ಮತ್ತು ಕೆಲವು ವಿಷಯಗಳಲ್ಲಿ ಸಂಯಮ ಅಗತ್ಯವಿದೆ. ಗುರು, ಶನಿ, ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸ್ಥಾನಗಳು ಪ್ರತಿಯೊಂದು ರಾಶಿಗಳ ವೃತ್ತಿ, ಪ್ರೇಮ, ಆರ್ಥಿಕ ಮತ್ತು ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ವಾರ ತಿಳಿಯಿರಿ.

ಅಕ್ಟೋಬರ್ 4ನೇ ವಾರದ ರಾಶಿಭವಿಷ್ಯ: ಈ 3 ರಾಶಿಗಳಿಗೆ ಶುಭಸುದ್ದಿ, ಕೆಲವರಿಗೆ ಹೆಚ್ಚಲಿದೆ ಖರ್ಚು!
ವಾರ ಭವಿಷ್ಯImage Credit source: Getty images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Oct 18, 2026 | 1:06 AM

Share

ಅಕ್ಟೋಬರ್ ತಿಂಗಳ ನಾಲ್ಕನೇ ವಾರ ಶುಭ ಸಮಾಚಾರ, ವಾರಾಂತ್ಯದಲ್ಲಿ ಅಧಿಕ ಖರ್ಚು, ಹೊಸ ಕೆಲಸದ ತಯಾರಿ, ಸಂಯಮ, ಸಣ್ಣ ನಿರ್ಧಾರದಿಂದ ದೊಡ್ಡ ಯಶಸ್ಸು ಇವೆಲ್ಲವೂ ಈ ವಾರದ ವಿಶೇಷವಾಗಿರಲಿದೆ.

ಮೇಷ ರಾಶಿ: ಈ ವಾರ ಗುರು ನಿಮ್ಮ ನಾಲ್ಕನೇ ಮನೆಯಲ್ಲಿ ಉಚ್ಚನಾಗಿ ಮನೆಯಲ್ಲಿ ಸುಖ, ಸಂತೋಷ ತರುತ್ತಾನೆ. ಆದರೆ ಕುಜ ನೀಚನಾಗಿರುವುದರಿಂದ ಕೋಪ ಹತೋಟಿಯಲ್ಲಿರಲಿ. ವಿಜಯದಶಮಿಯಂದು ಶುಭ ಸುದ್ದಿ ಸಿಗುವ ಸೂಚನೆ.

ವೃಷಭ ರಾಶಿ: ಗುರುವಿನ ಬಲದಿಂದ ಧೈರ್ಯ ಹೆಚ್ಚುತ್ತದೆ, ಒಡಹುಟ್ಟಿದವರ ಬೆಂಬಲ ಸಿಗಲಿದೆ. ಶನಿ ವಕ್ರಿಯಾಗಿ ಲಾಭಸ್ಥಾನದಲ್ಲಿದ್ದು ಹಳೆಯ ಹಣ ಕೈಸೇರುವ ಯೋಗ ತೋರಿಸುತ್ತಾನೆ. ವಾರಾಂತ್ಯದಲ್ಲಿ ಖರ್ಚು ನಿಯಂತ್ರಿಸಿ.

ಮಿಥುನ ರಾಶಿ: ಈ ವಾರ ಸೂರ್ಯ-ಶುಕ್ರ ಪಂಚಮದಲ್ಲಿ ಸೇರಿ ಪ್ರೇಮ, ಕಲೆ, ಮಕ್ಕಳ ವಿಷಯಗಳಲ್ಲಿ ಹರ್ಷ ತರುತ್ತಾರೆ. ಆದರೆ ಬುಧ ವಕ್ರಿಯಾಗುವ ಕಾಲದಲ್ಲಿ ಮೊದಲು ದಾಖಲೆಗಳಿಗೆ ಸಹಿ ಹಾಕುವಾಗ ಎರಡು ಬಾರಿ ಓದಿ.

ಕರ್ಕಾಟಕ ರಾಶಿ: ಗುರು ನಿಮ್ಮ ರಾಶಿಯಲ್ಲೇ ಉಚ್ಚನಾಗಿ ವ್ಯಕ್ತಿತ್ವಕ್ಕೆ ಕಳೆ ತುಂಬುತ್ತಾನೆ, ಆದರೆ ಕುಜ ನೀಚನಾಗಿ ಆರೋಗ್ಯ ಮತ್ತು ಆತುರದ ವಿಷಯದಲ್ಲಿ ಎಚ್ಚರ ಕೇಳುತ್ತಾನೆ. ಗುರುವಿನ ಈ ಕೊನೆಯ ವಾರದ ಆಶೀರ್ವಾದವನ್ನು ಬಳಸಿಕೊಳ್ಳಿ.

ಸಿಂಹ ರಾಶಿ: ನಾಲ್ಕನೇ ವಾರ ಗುರು ದ್ವಾದಶದಲ್ಲಿದ್ದು ಖರ್ಚು ಹೆಚ್ಚಿಸಬಹುದು. ಈ ವಾರ ನಿಮ್ಮ ರಾಶಿಗೆ ಗುರು ಬರುವ ಮೊದಲು ತಯಾರಿ ನಡೆಸಿ. ದೊಡ್ಡ ನಿರ್ಧಾರಗಳನ್ನು ಸ್ವಲ್ಪ ಮುಂದೂಡುವುದೇ ಜಾಣತನ.

ಕನ್ಯಾ ರಾಶಿ: ಲಾಭಸ್ಥಾನದಲ್ಲಿ ಗುರು ಇರುವುದರಿಂದ ಆದಾಯ ಮತ್ತು ಸ್ನೇಹಿತರ ಮೂಲಕ ಅವಕಾಶಗಳು ಒಲಿಯುತ್ತವೆ. ಶನಿ ವಕ್ರಿಯಾಗಿ ಸಂಗಾತಿಯ ಜೊತೆ ತಾಳ್ಮೆಯ ಮಾತುಕತೆ ಬೇಡುತ್ತಾನೆ.

ತುಲಾ ರಾಶಿ: ಸೂರ್ಯ ನೀಚನಾಗಿ ನಿಮ್ಮ ರಾಶಿಯಲ್ಲಿ, ಶುಕ್ರ-ಬುಧರ ಜೊತೆನಾಗಿದ್ದು ಆತ್ಮವಿಶ್ವಾಸ ಸ್ವಲ್ಪ ಕುಗ್ಗಿದಂತೆ ಅನಿಸಬಹುದು, ಆದರೆ ಶುಕ್ರ ಸ್ವರಾಶಿಯಲ್ಲಿದ್ದು ಸೌಂದರ್ಯ, ಸಂಬಂಧಗಳಲ್ಲಿ ಮೋಡಿ ಉಳಿಯುತ್ತದೆ. ಈ ವಾರದ ಶುಕ್ರ ಪ್ರದೋಷ ನಿಮಗೆ ವಿಶೇಷ.

ವೃಶ್ಚಿಕ ರಾಶಿ: ಗುರು ಒಂಬತ್ತನೇ ಮನೆಯಲ್ಲಿ ಉಚ್ಚನಾಗಿ ಭಾಗ್ಯದ ಬಾಗಿಲು ತೆರೆಯುತ್ತಾನೆ. ಪ್ರಯಾಣ, ಗುರುಹಿರಿಯರ ಆಶೀರ್ವಾದ, ಧಾರ್ಮಿಕ ಕಾರ್ಯ ಫಲ ಕೊಡಲಿವೆ. ಶನಿ ಪಂಚಮದಲ್ಲಿ ವಕ್ರಿ, ಮಕ್ಕಳ ವಿಷಯದಲ್ಲಿ ಸಹನೆ ಇರಲಿ.

ಧನು ರಾಶಿ: ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಅನಿರೀಕ್ಷಿತ ತಿರುವುಗಳ ವಾರ. ಅರ್ಥವಾಗದ ವಿಷಯಗಳ ಮೇಲೆ ಹೂಡಿಕೆ ಬೇಡ. ಆದರೆ ಲಾಭಸ್ಥಾನದ ಸೂರ್ಯ-ಶುಕ್ರರು ಆದಾಯಕ್ಕೆ ಬೆಂಬಲ ನೀಡುತ್ತಾರೆ.

ಮಕರ ರಾಶಿ: ಚಂದ್ರ ನಿಮ್ಮ ರಾಶಿಯಲ್ಲಿ ಹಬ್ಬದ ದಿನಗಳಲ್ಲಿ ಸಂಚರಿಸಿ ಮನಸ್ಸಿಗೆ ಹರ್ಷ ತರುತ್ತಾನೆ. ವೃತ್ತಿಯಲ್ಲಿ ಸೂರ್ಯ ನೀಚನಾದ್ದರಿಂದ ಮೇಲಧಿಕಾರಿಗಳ ಜೊತೆ ವಿನಯದಿಂದ ನಡೆದುಕೊಳ್ಳಿ. ಸಂಗಾತಿಯಿಂದ ಸಿಹಿ ಅಚ್ಚರಿ.

ಕುಂಭ ರಾಶಿ: ರಾಹು ನಿಮ್ಮ ರಾಶಿಯಲ್ಲೇ ಇದ್ದು ಮನಸ್ಸಿನಲ್ಲಿ ಹೊಸ ಹೊಸ ಯೋಚನೆಗಳ ಸುಳಿ ಎಬ್ಬಿಸುತ್ತಾನೆ. ಮಾತಿನಲ್ಲಿ ಸಂಯಮ ಬೇಕು. ಈ ವಾರದ ಚಂದ್ರ ಸಂಚಾರ ನಿಮಗೆ ಹೊಸ ಚೈತನ್ಯ ಕೊಡುತ್ತದೆ.

ಮೀನ ರಾಶಿ: ಶನಿ ನಿಮ್ಮ ರಾಶಿಯಲ್ಲೇ ವಕ್ರಿಯಾಗಿ ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತಾನೆ. ಗುರು ಪಂಚಮದಲ್ಲಿ ಉಚ್ಚನಾಗಿ ಸೃಜನಶೀಲತೆ, ಪ್ರೀತಿಯಲ್ಲಿ ಯಶಸ್ಸು ಕೊಡುತ್ತಾನೆ. ವಾರದ ಮಧ್ಯದ ಅನಂತರ ಚಂದ್ರ ನಿಮ್ಮ ರಾಶಿಗೆ ಬಂದು ಮನಸ್ಸು ಹಗುರಾಗುತ್ತದೆ.

ಲೋಹಿತ್ ಹೆಬ್ಬಾರ್

Published On - 1:05 am, Sun, 18 October 26

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More