Horoscope for 1 June 2024: ಜೂನ್ ತಿಂಗಳ ಮೊದಲ ದಿನ ಯಾವ ರಾಶಿಗೆ ಏನು ಫಲ?
2024 ಜೂನ್ 01ರ ದಿನ ಭವಿಷ್ಯ: ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜೂನ್ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:17ರಿಂದ ಬೆಳಗ್ಗೆ 10:54ರ ವರೆಗೆ, ಯಮಘಂಡ ಕಾಲ 14:07 ರಿಂದ 15:44ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:04 ರಿಂದ ಬೆಳಿಗ್ಗೆ 07:41ರ ವರೆಗೆ.
ಮೇಷ ರಾಶಿ :ಇಂದು ನಿಮಗೆ ಗುರುಸಮಾನರ ಭೇಟಿಯಾಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ಅವಮಾನವಾಗು ಸಂದರ್ಭವಿದ್ದರೆ ಅಲ್ಲಿಂದ ದೂರನಡೆಯಿರಿ. ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ಕೆಲವರ ನಕಾರಾತ್ಮಕ ಮಾತುಗಳನ್ನು ನಗಣ್ಯ ಮಾಡುವಿರಿ. ಒಳ್ಳೆಯ ಕೆಲಸವು ಆಗಿಲ್ಲ ಎಂಬ ನೋವು ಇರಲಿದೆ. ತಾಳ್ಮೆಯನ್ನು ಇಟ್ಟುಕೊಂಡು ವ್ಯವಹರಿಸವುದು ಉತ್ತಮ. ಮನಃಶಾಂತಿಯನ್ನು ಬಯಸಿ ಪ್ರಶಾಂತವಾದ ಪ್ರದೇಶಕ್ಕೆ ಹೋಗಬಹುದು. ನಿಮ್ಮನ್ನು ಯಾರಾದರೂ ಪ್ರಶಂಸಿಸಲಿ ಎನ್ನುವ ಭಾವ ಇರುವುದು. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ. ಕತ್ತಲಿನಲ್ಲಿ ಗುದ್ದಾಡಿ ಕೈ ನೋವು ಮಾಡಿಕೊಳ್ಳುವಿರಿ.
ವೃಷಭ ರಾಶಿ :ಇಂದು ಬಹಳ ಸುಖವಾಗಿರುವ ದಿನ. ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮಗೆ ಪ್ರಶಂಸೆಗಳು ಸಿಗಲಿವೆ. ಯಾವುದನ್ನೂ ಪರಿಶೀಲಿಸದೇ ಸ್ವೀಕರಿಸಬೇಡಿ. ಅನಿರೀಕ್ಷಿತ ಹಣವೂ ಸಿಗಬಹುದು. ಆತ್ಮಗೌರವಕ್ಕೆ ಧಕ್ಕೆ ಬರುವ ಕಾರ್ಯಗಳನ್ನು ಬಿಡುವಿರಿ. ನಿಮ್ಮ ತಲೆಯಲ್ಲಿ ಇರುವ ನೂರಾರು ಯೋಜನೆಯನ್ನು ಹೇಳಲು ಹೋಗಿ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳುವಿರಿ. ಕಲಾವಿದರಾಗುವ ಮನಸ್ಸು ಹೆಚ್ಚುವುದು. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು. ಆದಷ್ಟು ಎಚ್ಚರಿಕೆಯಿಂದ ಇರಿ. ಸರ್ಕಾರಿ ನಿಯಮಗಳ ಉಲ್ಲಂಘನೆ ಬೇಡ. ಸ್ತ್ರೀಯರಿಂದ ಲಾಭವನ್ನು ಪಡೆಯುವಿರಿ. ಇಂದಿನ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹವನ್ನು ಜಾಗರೂಕಗೊಳಿಸುವುದು. ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಸಿಲುಕುವಿರಿ. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ ಸಮಯವನ್ನು ವ್ಯರ್ಥ ಮಾಡುವಿರಿ.
ಮಿಥುನ ರಾಶಿ :ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸಿದ್ದೀರಿ. ನಿಮ್ಮವರೇ ನಕಾರಾತ್ಮಕ ಮಾತುಗಳನ್ನು ಹೇಳಿ ದಾರಿಬತಪ್ಪಿಸುವರು ಅಥವಾ ಅವಮಾನ ಮಾಡುವರು. ನೀವು ವೈದ್ಯವೃತ್ತಿಯಲ್ಲಿ ನಿರತರಾಗಿದ್ದರೆ ಇಂದು ಅತಿಯಾದ ಮಾನಸಿಕ ಒತ್ತಡದಲ್ಲಿ ಇರುವಿರಿ. ಅಪಾರ್ಥ ಮಾಡಿಕೊಳ್ಳುವ ಸನ್ನಿವೇಶವೇ ಹೆಚರಚಿರುವುದು. ಸಂಪತ್ತನ್ನು ಅಪರಿಚಿತ ಸ್ಥಳದಲ್ಲಿ ಇಟ್ಟು ಕಳೆದುಕೊಳ್ಳುವಿರಿ. ದ್ವೇಷವನ್ನು ಬಿಟ್ಟು ಮುಂದುವರಿಯುವುದು ಒಳ್ಳೆಯದು. ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು.
ಕಟಕ ರಾಶಿ :ನಿಮ್ಮ ಆತುರವು ಕೆಲಸವನ್ನು ಹಾಳುಮಾಡಿಕೊಳ್ಳಲು ಸಾಕು. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಅತಿಯಾದ ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಪೂರೈಸುವಿರಿ. ಸ್ನೇಹಿತರ ಆಗಮನವು ಸಂಕಟವನ್ನು ತಂದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವುದಿಲ್ಲ. ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವುದು ನಿಮ್ಮ ದೃಢವಾದ ನಂಬುಗೆಯಾಗಿದೆ. ಉದ್ವೇಗದಲ್ಲಿ ನಿಮ್ಮ ವರ್ತನೆಗಳು ಸಾಮಾನ್ಯರಿಗೆ ಬೇರೆ ಅರ್ಥವನ್ನೇ ಕೊಡುವುದು. ವೈವಾಹಿಕ ಜೀವನವು ನಿಮಗೆ ಬೇಸರವೆನಿಸಬಹುದು. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನವು ಸಿಗದೇ ಇರಬಹುದು. ಜಲೋದ್ಯಮದಿಂದ ಉತ್ತಮಲಾಭವು ಸಿಗುವುದು. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸವು ನಿಮಗೆ ಗೊತ್ತಿಲ್ಲದೇ ಆಗುವುದು.
ಸಿಂಹ ರಾಶಿ :ಇಂದು ನಿಮ್ಮವರು ಯಾರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ಮಕ್ಕಳಿಗೆ ನಿಮ್ಮ ಪ್ರೀತಿ ಹೆಚರಚಾಗುವುದು. ವ್ಯಾಪರ ಅಥವಾ ಉದ್ಯಮವು ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಇಟ್ಟು ಮೇಲೇರಲು ಆರಂಭಿಸಿದೆ. ಕೃಷಿಯ ಕಾರ್ಯದಲ್ಲಿ ಮನಸ್ಸಾಗಿ ಕೆಲವು ಅಪರೂಪದ ಸಸ್ಯಗಳನ್ನು ನೆಡಲಿದ್ದೀರಿ. ಇಂದು ನೀವು ದಾರಿ ತಪ್ಪುವ ಸಂಭವವಿದೆ. ಸಂಗಾತಿಯನ್ನು ಹುಡುಕುವ ಕೆಲಸವು ನಿಮಗೆ ಬೇಸರವನ್ನು ತರಿಸುವುದು. ಮಾತುಗಳನ್ನು ಕಡೆ ಆಡುವುವಿರಿ. ಇಂದು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಿದರೆ, ಅದು ನಿಮಗೆ ಒಳ್ಳೆಯದು. ನೆರೆ ಮನೆಯವರ ಜೊತೆ ಕಲಹವಾಗಬಹುದು. ದಿನ ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕಾಗಿ ಬರಬಹುದು.
ಕನ್ಯಾ ರಾಶಿ :ಭೂಮಿಯ ವಿಚಾರದಲ್ಲಿ ಸರಿಯಾದ ಮಾಹಿತಿ ಸಿಗದೇ ಮೋಸಹೋಗಬೇಕಾದೀತು. ಯಥಾಯೋಗ್ಯ ದಾನವನ್ನೂ ನೀವು ಮಾಡಲಿದ್ದೀರಿ. ಮಾತಗಾರರಾಗಿದ್ದರೆ ನಿಮಗೆ ಪ್ರಶಂಸೆಗಳು ಸಿಗಬಹುದು. ವಂಚನೆ ಮಾಡಿದ್ದೀರಿ ಎಂಬ ಅಪವಾದ ಬರಬಹುದು. ಹೊಸ ವಸ್ತ್ರಗಳನ್ನು ಧರಿಸುವಿರಿ. ಶ್ರಮವಹಿಸದೇ ಫಲವನ್ನು ಅಪೇಕ್ಷಿಸುವುದು ನಿಮ್ಮ ಅಸಾಮರ್ಥ್ಯವನ್ನು ತೋರಿಸುವುದು. ದಾನವಾಗಿ ಅಪರೂಪದ ವಸ್ತುಗಳು ಸಿಗಲಿವೆ. ನೀವು ಕೆಲವು ಇನ್ನೊಬ್ಬರಿಗೆ ತೊಂದರೆಯಾಗುವಂತಹ ಚಟುವಟಿಕೆಗಳನ್ನು ತಡೆಯಬೇಕು. ಜಾಣತನವು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಬಹಿಶ್ಶತ್ರುಗಳಿಗಿಂತ ಅಂತಶ್ಶತ್ರುಗಳ ಬಗ್ಗೆ ಎಚ್ಚರ ಅವಶ್ಯಕ. ತಾಯಿಯ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿ.
ತುಲಾ ರಾಶಿ :ಹೊಸ ಉದ್ಯೋಗವನ್ನು ಹುಡುಕುವ ಕೆಲಸಕ್ಕೆ ಹೆಚ್ಚು ಓಡಾಟ ಆಗಬಹುದು. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಿರಂತರ ಯತ್ನವನ್ನು ಮಾಡುವಿರಿ. ಉತ್ತಮವಾದ ಆಹಾರವನ್ನು ತಿನ್ನಬೇಕು ಎಂದು ಬಯಸಿ ಮನೆಯಿಂದ ದೂರ ಹೋಗುವಿರಿ. ಮನೆಯನ್ನು ಕಟ್ಟುವ ವಿಚಾರವು ಪತ್ನಿಯಿಂದ ಬರಲಿದ್ದು ಬಹಳ ಸಂತೋಷವಾಗಲಿದೆ. ತಾಯಿಯ ಆರೋಗ್ಯವು ಕೆಡಲಿದ್ದು ಚಿಕಿತ್ಸೆಯನ್ನು ಕೊಡಿಸುವಿರಿ. ಅಲ್ಪ ಭೋಜನದಿಂದ ತೃಪ್ತಿ ಇರಲಿದೆ. ಯಾರನ್ನೋ ನಿಮಗೆ ಹೋಲಿಸಿಕೊಳ್ಳುವುದು ಬೇಡ. ಕ್ರಮಬದ್ಧವಾದ ಆಲೋಚನೆಗಳು ನಿಮಗೆ ಸ್ಫೂರ್ತಿಯನ್ನು ಕೊಡಬಹುದು. ಪರಸ್ಪರ ಸಹಕಾರದ ಭಾವನೆ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಮಕ್ಕಳಿಗೆ ಹಣವನ್ನು ಕೊಟ್ಟು ತಪ್ಪು ದಾರಿಗೆ ಕಳುಹಿಸುವಿರಿ. ನಿಮ್ಮ ಬಗ್ಗೆ ಸುಳ್ಳು ವದಂತಿಗಳು ಹರಡಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ ಹಣವನ್ನು ಕಳೆದುಕೊಳ್ಳಬೇಕಾಗಬಹುದು.
ವೃಶ್ಚಿಕ ರಾಶಿ :ನಿಮಗೆ ಇಂದು ಸಂಬಂಧಗಳ ಬೆಲೆಯು ಅರ್ಥವಾಗಲಿದೆ. ಎಲ್ಲವುದನ್ನೂ ವಿರೋಧಿಸುವುದು ಸರಿಯಾಗದು. ಮನೆಯಲ್ಲಿಯೇ ಇದ್ದು ಬೇಸರವಾಗಲಿದೆ. ಯಾರ ಜೊತೆಗಾದರೂ ಹೊರಗೆ ಸುತ್ತಾಡಲು ಬಯಸುವಿರಿ. ಕಛೇರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಸೇವೆಗೆ ಮೆಚ್ವುಗೆ ಸಿಗಬಹುದು. ಸ್ನೇಹಿತರು ನಿಮ್ಮ ಮಾತಿಗೆ ಬೆಲೆ ಕೊಡುವರು. ಸಕಾರಾತ್ಮಕೆ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಅಪರಿಚಿತ ಕರೆಗಳಿಗೆ ಕಿವಿಗೊಡದೇ ನಿಮ್ಮ ಕೆಲಸವನ್ನು ಮಾಡಿ. ಇನ್ನೊಬ್ಬರನ್ನು ನೋಡಿ ನೀವು ಕಲಿಯುವುದು ಬಹಳಷ್ಟು ಇದೆ ಎಂದು ಅರಿವಾಗಬಹುದು. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯಲಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿಯಲ್ಲಿ ಶ್ರಮಿಸಬೇಕಾಗುತ್ತದೆ. ವಾಹನದ ದಾಖಲೆಗಳನ್ನು ಪರಿಶೀಲಿಸಿಕೊಂಡು ಚಲಾಯಿಸಿ. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು.
ಧನು ರಾಶಿ :ಇಂದು ನೀವು ಬಹಳ ಚಾತುರ್ಯದಿಂದ ಕೆಲಸವನ್ನು ಮಾಡಿದರೂ ನಷ್ಟವಾಗಬಹುದು. ಆರೋಗ್ಯದ ವಿಚಾರದಲ್ಲಿ ಚಿಂತೆ ಬೇಡ. ಸರಿಮಾಡಿಕೊಳ್ಳುವ ಬಗ್ಗೆ ಚಿಂತಿಸಿ. ದುಪ್ಪಟ್ಟು ವ್ಯಯಿಸುವ ಸನ್ನಿವೇಶಗಳು ಇಂದು ಬರಬಹುದು. ಉದ್ವೇಗದಿಂದ ಕೆಲವೊಂದು ಸಮಸ್ಯೆಗಳನ್ನು ತಂದುಕೊಳ್ಳುವಿರಿ. ನ್ಯಾಯಾಲಯದಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ. ಇಷ್ಟ ಪಟ್ಟು ಮಾಡುವ ಕೆಲಸವು ಸಂತೋಷವನ್ನು ಕೊಡಲಿದೆ. ದಾಂಪತ್ಯದಲ್ಲಿ ಅಪಮಬಿಕೆಗಳು ತಲೆ ಹಾಕಬಹುದು. ನೀವು ಬಹಳ ಸಮಯದ ಅನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಸಂಗಾತಿಯ ನಡುವಣ ಭಿನ್ನಾಭಿಪ್ರಾಯವನ್ನು ಮಾತನಾಡಿ ಪರಿಹರಿಸಬಹುದು. ನಿಮ್ಮ ಹಳೆಯ ತಪ್ಪುಗಳಿಂದ ನೀವು ಕಲಿಯಬೇಕು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ದೇಹವನ್ನು ದಂಡಿಸಲಾಗದ ಸ್ಥಿತಿ ಇರುವುದು.
ಮಕರ ರಾಶಿ :ಇಂದು ನಿಮ್ಮ ದಾಂಪತ್ಯ ಜೀವನವು ಸುಖವಾಗಿರುವುದು. ಮಕ್ಕಳ ಜೊತೆ ಪತಿ ಪತ್ನಿಯರಿಬ್ಬರೂ ಕಾಲವನ್ನು ಕಳೆಯುವಿರಿ. ದೂರದ ಊರಿಗೆ ಪ್ರಯಾಣ ಹೋಗುವ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನಕಾರಾತ್ಮಕ ಭಾವನೆಗಳಿಗೆ ಅವಕಾಶವನ್ನು ಕೊಡಬೇಡಿ. ನಿಮ್ಮ ಶತ್ರುಗಳನ್ನು ನೀವು ಕಂಡುಕೊಳ್ಳುವಿರಿ. ನಿಮ್ಮ ವ್ಯಕ್ತಿತ್ವದ ಪರೀಕ್ಷೆ ಆಗಲಿದೆ. ಸಜ್ಜನರ ಸಹವಾಸವು ನಿಮಗೆ ಸಿಗಬಹುದು. ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ಯಾರನ್ನೂ ನೀವು ಇಷ್ಟಪಡಲಾರಿರಿ. ಮಾತುಗಳು ಕಿರಿಕಿರಿ ಎನಿಸಬಹುದು. ಇಂದು ಕೆಲವು ಸಂದರ್ಭದಲ್ಲಿ ಸುಳ್ಳು ಹೇಳಬೇಕಾಗಬಹುದು. ನಿಮ್ಮ ಸಂಪೂರ್ಣ ಗಮನವು ವೈಯಕ್ತಿಕ ವಿಷಯಗಳ ಮೇಲೆ ಇರುತ್ತದೆ. ನಿಮ್ಮ ಸಂತೋಷಕ್ಕಾಗಿ ನಿಮ್ಮ ಸ್ಥಾನ ಇರುವುದಿಲ್ಲ. ಮಕ್ಕಳ ಪಕ್ಷದಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಸಂಗಾತಿಯಿಂದ ನೀವು ಎಲ್ಲದಕ್ಕೂ ಬೆಂಬಲ ಪಡೆಯುವಿರಿ.
ಕುಂಭ ರಾಶಿ :ನೀವು ಮಾಡುವ ವೃತ್ತಿಯಿಂದ ಊಹಿಸದ ಯಶಸ್ಸು ಸಿಗುವುದು. ಅನಿರೀಕ್ಷಿತ ತಿರುವುಗಳು ಗೊಂದಲವನ್ನು ಉಂಟುಮಾಡೀತು. ನಿಮ್ಮ ಗೆಳೆತನವು ಖುಷಿ ಕೊಡುವುದು. ಅತಿಯಾದ ಆಲೋಚನೆಗಳು ಮಾನಸಿಕ ನೆಮ್ಮದಿಯನ್ನು ದೂರಮಾಡಲಿವೆ. ಅತಿಯಾದ ಸಲುಗೆ ನಿಮಗೆ ಅಸಹ್ಯವಾದೀತು. ಆತ್ಮಾವಲೋಕನದ ಅವಶ್ಯಕತೆ ಇರಲಿದೆ. ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವ ಆಲೋಚನೆಯನ್ನು ಮಾಡುವಿರಿ. ಆರ್ಥಿಕವಾಗಿ ಸ್ವಲ್ಪ ಗಟ್ಟಿಯಾಗಬಹುದಾಗಿದೆ. ಕೃಷಿಯ ಕುರಿತು ಆಸಕ್ತಿ ಬರಲಿದೆ. ಎದುರಾಳಿಯು ನಿಮ್ಮ ವಿರುದ್ಧ ಸಂಚು ಮಾಡಬಹುದು. ಮನೆಯನ್ನು ನವೀಕರಿಸಲು ಸಹ ನೀವು ಹೆಚ್ಚು ಗಮನಹರಿಸುತ್ತೀರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡಬೇಕೆನಿಸುವುದು.
ಮೀನ ರಾಶಿ : ಇಂದಿನ ನಿಮ್ಮ ವಹಿವಾಟುಗಳು ಗೊಂದಲದಿಂದ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡಬೇಕಾಗಬಹುದು. ಮನೆಗೆ ಅವಶ್ಯವಿರುವ ವಸ್ತುಗಳನ್ನು ಖರೀದಿಸುವಿರಿ. ನಿಮ್ಮನ್ನು ವಿರೋಧಿಸುವ ವ್ಯಕ್ತಿಗಳು ಹುಟ್ಟಿಕೊಳ್ಳಬಹುದು. ಆರ್ಥಿಕತೆಯ ಸುಧಾರಣೆಗೆ ನಿಮ್ಮದೇ ಯೋಜನೆಗಳನ್ನು ಹಾಕಿಕೊಳ್ಳುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ನೆಮ್ಮದಿಯ ಕೊರತೆ ಕಾಣಿಸಬಹುದು. ಬಂಧುಗಳ ಜೊತೆ ದುಃಖವನ್ನು ಹಂಚಿಕೊಳ್ಳುವಿರಿ. ಸ್ವಾಭಿಮಾನವು ಹೆಚ್ಚು ಕಾಣಿಸುವುದು. ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯವನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಸಹೋದರನಿಂದ ಆರ್ಥಿಕ ಸಹಕಾರವನ್ನು ನಿರೀಕ್ಷಿಸುವಿರಿ. ಆರೋಗ್ಯವು ಉತ್ತಮವಾಗಲಿದ್ದು, ಮೊದಲಿನ ಸ್ಥಿತಿಗೆ ಮರಳುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)