ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಸ್ವಾತಂತ್ರ್ಯಕ್ಕೆ ಹಲವರಿಂದ ತೊಂದರೆ ಬರಲಿದೆ…
21 ಅಕ್ಟೋಬರ್ 2026ರ ಇಂದಿನ ನಿತ್ಯ ಭವಿಷ್ಯ. ಈ ದಿನ ಮೇಷದಿಂದ ಮೀನದವರೆಗೆ ೧೨ ರಾಶಿಗಳಿಗೂ ಯಾವ ರೀತಿಯ ಫಲಗಳಿರಲಿವೆ? ಉದ್ಯೋಗ, ವ್ಯಾಪಾರ, ಹಣಕಾಸು, ಕೌಟುಂಬಿಕ ಜೀವನ, ಆರೋಗ್ಯ ಮತ್ತು ಪ್ರೀತಿ ವಿಚಾರದಲ್ಲಿ ನಿಮ್ಮ ಅದೃಷ್ಟ ಹೇಗೆ ಇರಲಿದೆ ಎಂಬುದನ್ನು ತಿಳಿಯಿರಿ. ಪ್ರತಿಯೊಂದು ರಾಶಿಯ ಸಂಪೂರ್ಣ ಜ್ಯೋತಿಷ್ಯ ಭವಿಷ್ಯಕ್ಕಾಗಿ ಮುಂದೆ ಓದಿ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಬುಧವಾರದಂದು ತಾಯಿಯ ಸೇವೆ, ನಿರಂತರ ಕಾರ್ಯ, ಮೇಲ್ನೋಟದ ತೀರ್ಮಾನ, ಅಕ್ರಮ ಮಾರ್ಗ, ಹಣದ ಮದ, ಮಾತಿನ ತಿರಸ್ಕಾರ, ಉದ್ಯಮದಲ್ಲಿ ಒತ್ತಡ, ಇವೆಲ್ಲ ಇಂದಿನ ಭವಿಷ್ಯ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಗಂಡ, ಕರಣ : ವಣಿಜ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 56 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:04 – 13:32, ಯಮಗಂಡ ಕಾಲ 07:40 – 09:08, ಗುಳಿಕ ಕಾಲ 10:36 – 12:04
ಮೇಷ ರಾಶಿ : ಬಹಳ ದಿನಗಳಿಂದ ಮಾಡಬೇಕಿದ್ದ ಆಭರಣ ಖರೀದಿಯನ್ನು ಮುಂದೂಡಿ ಇಂದು ಖರೀದಿಸುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಿಸುವವರಾಗಿದ್ದರೆ ನಿಮಗೆ ಅನೇಕ ವಸ್ತುಗಳು ಲಾಭವಾಗಿ ಬರಲಿವೆ. ಬೇಡದ ಕಾರ್ಯಕ್ಕೆ ದುಡ್ಡನ್ನು ಹಾಕಿ ಕಳೆದುಕೊಳ್ಳುವಿರಿ. ವೃತ್ತಿಯನ್ನೇ ನಂಬಿ ಜೀವನವನ್ನು ನಡೆಸುವವರಿಗೆ ಹಠಾತ್ ಆಗಿ ಕೆಲಸದಿಂದ ಕೈ ಬಿಡಬಹುದು. ವಿದ್ಯಾರ್ಥಿಗಳಿಗೆ ಆಪಾದನೆ ಬರಬಹುದು. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು.
ವೃಷಭ ರಾಶಿ : ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡುವಿರಿ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡುವ ತಾಳ್ಮೆ ಹಾಗೂ ಸಮಯ ಎರಡೂ ಇರಬಾರದು. ಇನ್ನೊಬ್ಬರನ್ನು ಬೊಟ್ಟು ತೋರಿಸುವುದು ಕಡಿಮೆ ಮಾಡಿ. ಎಷ್ಟೇ ಪ್ರಯತ್ನಿಸಿದರೂ ಸುಮ್ಮನೆ ಇರಲು ಆಗದು.
ಮಿಥುನ ರಾಶಿ : ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗುವುದು. ನಿಮ್ಮ ವಾಹನಕ್ಕಾಗಿ ಅಧಿಕ ಖರ್ಚನ್ನು ಮಾಡಬೇಕಾಗಿ ಬರಬಹುದು. ಆಲಸ್ಯದಿಂದ ಇರುವ ಕಾರಣ ಕಛೇರಿಯಲ್ಲಿ ಮೇಲಾಧಿಕಾರಿಯಿಂದ ನಿಮಗೆ ಸೂಚನೆ ಬರಬಹುದು. ಮಾರಾಟದಿಂದ ಆರ್ಥಿಕ ತೊಂದರೆಯು ನೀಗುವುದು. ಧಾರ್ಮಿಕ ಕಾರ್ಯಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳುವಿರಿ. ಬಿಡುಗಡೆಗಾಗಿ ದಾರಿಯನ್ನು ನೀವೇ ಹುಡುಕಿಕೊಳ್ಳುವಿರಿ.
ಕರ್ಕಾಟಕ ರಾಶಿ : ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ವಿವಾಹಕ್ಕೆ ಸಂಬಂಧಿಸಿದಂತೆ ಪ್ರತಿಬಂಧಕಗಳು ಬರಲಿದ್ದು ನಿಶ್ಚಯವಾದ ವಿವಾಹವು ಅನ್ಯಾನ್ಯ ಕಾರಣಗಳಿಂದ ಮುಂದೆ ಹೋಗುವುದು. ಪುಣ್ಯಶಾಲಿಗಳ ಸಂಗವು ಸಿಗಬಹುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಹೊರಗಡೆಗೆ ಕೃಷಿಯ ಉತ್ಪನ್ನದ ಮಾರಾಟ ಮಾಡುವಿರಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ.
ಸಿಂಹ ರಾಶಿ : ನಿಮ್ಮ ಬಗ್ಗೆ ಎಚ್ಚರಿಕೆಯಂತೂ ಇರಲಿ. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ಆಸ್ತಿಯ ಖರೀದಿಯ ವಿಚಾರದಲ್ಲಿ ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಾಗದೇ ಒದ್ದಾಡುವಿರಿ. ಅನಾರೋಗ್ಯದವರು ಮಿತಿಮೀರಿ ಆಹಾರ ಸೇವಿಸುವುದು ಬೇಡ. ಅಪರಿಚಿತರಿಗೆ ನೀವು ಸಭ್ಯರಂತೆ ತೋರುವಿರಿ. ನಿಮ್ಮ ಬಗ್ಗೆ ಇದ್ದ ಪೂರ್ವಾಗ್ರಹದ ಭಾವನೆಗಳು ನಿಮ್ಮಇಂದಿನ ವರರ್ತನೆಯಿಂದ ಬದಲಾಗಬಹುದು.
ಕನ್ಯಾ ರಾಶಿ : ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಇಂದು ನೀವು ಬಂಧುಗಳಿಗೆ ಸಹಕಾರ ಮಾಡುವಿರಿದಾರೂ ಪ್ರತಿಫಲದ ಅಪೇಕ್ಷೆಯು ಇರಲಿದೆ. ದೈನ್ಯದಿಂದ ಏನನ್ನೂ ಯಾರ ಬಳಿಯೂ ಕೇಳುವುದು ಬೇಡ. ಪ್ರೇಯಸಿಯನ್ನು ಕಾಣದೇ ಬೇಸರಿಸುವಿರಿ. ಕುಲದೇವರ ಉಪಾಸನೆಯಿಂದ ಮನಸ್ಸಿಗೆ ನೆಮ್ಮದಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಉತ್ತಮ.
ತುಲಾ ರಾಶಿ : ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ. ನಿಮಗೆ ಗೊತ್ತೇ ಇರದ ಕೆಲಸದಿಂದ ನಿಮಗೆ ಅಪವಾದವು ಕೇಳಿಬರುವುದು. ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲೂ ಆಗದು. ಬೇರೆ ಬೇರೆ ಆಲೋಚನೆಯು ನಿಮ್ಮ ಕೆಲಸದ ವೇಗವನ್ನು ನಿಯಂತ್ರಿಸುವುದು. ಅವಕಾಶದಿಂದ ವಂಚಿತರಾದರೂ ಏನೂ ಅನಿಸದು. ಕೆಲವನ್ನು ಅಳೆದು ತೂಗಿ ಮಾತಾನಾಡಿದರೆ ಮಾತ್ರ ನೀವು ಎಲ್ಲರ ಜೊತೆ ಸೌಹಾರ್ದದಿಂದ ಇರಲು ಸಾಧ್ಯ.
ವೃಶ್ಚಿಕ ರಾಶಿ : ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಗೆಳೆಯರು ಮಾಡಿದ ತಮಾಷೆಯು ನಿಮಗೆ ಕಂಟಕವಾಗಬಹುದು. ನಿಮ್ಮ ಇಂದಿನ ಕೆಲಸವು ಆದರೂ ಅದಕ್ಕೆ ಹೆಚ್ಚು ಶ್ರಮ, ಸಮಯ ಎರಡನ್ನೂ ಕೊಡಬೇಕಾದೀತು. ಈ ದಿನವನ್ನು ಬಹಳ ಕಷ್ಟದಿಂದ ಕಳೆಯಬೇಕಾಗುವುದು. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಗಳೂ ಇರಲಿ. ಬಂಧುಗಳ ಮನೆಯಲ್ಲಿ ನೀವು ಸಂಭ್ರಮಿಸುವಿರಿ. ಇಂದಿನ ಕೆಲವು ಸಂದಿಗ್ಧವಾದ ಪರಿಸ್ಥಿತಿಯನ್ನು ನೀವು ಸರಳವಾಗಿ ನಿಭಾಯಿಸಲು ಕಲಿಯುವ ಅವಶ್ಯಕತೆ ಇದೆ.
ಧನು ರಾಶಿ : ಅಧಿಕಾರ ಪ್ರಾಪ್ತಿಯ ಬೆನ್ನಲ್ಲೇ ಶತ್ರುಗಳನ್ನೂ ಕಟ್ಟಿಕೊಳ್ಳುವಿರಿ. ಹಿತಶತ್ರುಗಳಿಂದ ಎಚ್ಚರವಾಗಿರುವುದು ಅವಶ್ಯಕ. ಚಂಚಲವಾದ ಮನಸ್ಸು ನಿಮ್ಮ ಸಂಗತಿಯನ್ನು ಮರೆಮಾಚಿಸಬಹುದು. ಹೂಡಿಕೆಯಲ್ಲಿ ನಿಮಗೆ ಪೂರ್ಣ ಮನಸ್ಸು ಇರದು. ನಿಮ್ಮ ಮನಸ್ಸು ನಕಾರತ್ಮಕ ಚಿಂತನೆಯಲ್ಲಿಯೇ ಹೆಚ್ಚು ಇರಲಿದೆ. ಆಪ್ತರ ಜೊತೆ ವಿವಾದವಾಗಬಹುದು. ದಾಂಪತ್ಯಜೀವನವು ಅಲ್ಪ ಸರಸ ಸ್ವಲ್ಪ ವಿರಸದಿಂದಲೂ ಇರುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು.
ಇದನ್ನೂ ಓದಿ: ಅಕ್ಟೋಬರ್ 4ನೇ ವಾರದ ರಾಶಿಭವಿಷ್ಯ: ಈ 3 ರಾಶಿಗಳಿಗೆ ಶುಭಸುದ್ದಿ, ಕೆಲವರಿಗೆ ಹೆಚ್ಚಲಿದೆ ಖರ್ಚು!
ಮಕರ ರಾಶಿ : ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗುವುದು. ಕಾರ್ಯದ ಕಡೆ ಹೆಚ್ಚು ಗಮನವಿರಲಿ. ಯಾರಿಗೂ ಸಾಲವಾಗಿ ಹಣವನ್ನು ಕೊಡುವುದು ಬೇಡ. ಪುನಃ ಬರುತ್ತದೆ ಎಂಬ ನಿರೀಕ್ಷೆಯೂ ಬೇಡ. ನೀವಾಡುವ ಮಾತು ಜವಾಬ್ದಾರಿಯುತ ಸ್ಥಾನದಿಂದ ಬರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಕುಟುಂಬದ ವಿಚಾರವನ್ನು ನೀವೇ ಎತ್ತಿಕೊಂಡು ಕಲಹವನ್ನು ಸೃಷ್ಟಿಸಿ ಆಮೇಲೆ ಜಾರಿಕೊಳ್ಳುವಿರಿ.
ಕುಂಭ ರಾಶಿ : ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಆರದ ಗಾಯಕ್ಕೆ ಮತ್ತಷ್ಟು ಬಿಸಿ ತಗುಲೀತು. ನೀವಾಡಿದ ಸುಳ್ಳು ನಿಮ್ಮವರ ಮನಸ್ಸಿಗೆ ನಾಟುವುದು. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗುವುದು. ನಿಮಗೆ ಸಿಗಬೇಕೆಂದಿದ್ದರೆ ಅದನ್ನು ಬದಲಿಸಲಾಗದು. ಕುಟುಂಬದಲ್ಲಿ ನಿಮ್ಮ ಪಾತ್ರವನ್ನು ಗಮನನಿಸಿಕೊಳ್ಳಿ. ವಿಶ್ರಾಂತಿಯ ಅವಶ್ಯಕತೆ ಇರಲಿದೆ.
ಮೀನ ರಾಶಿ : ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿ ರಿಂದಲೇ ನೋಡುವುದು ಕಷ್ಟ. ನಿಮಗೆ ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳಬೇಕು ಎಂದು ಅನ್ನಿಸುವುದು. ಸಹೋದ್ಯೋಗಿಗಳ ಸಹಕಾರದಿಂದ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ನಿಮಗೆ ಅಚ್ಚರಿಯನ್ನು ಉಂಟುಮಾಡಬಹುದು. ದೈವಕೃಪೆ ಸ್ವಲ್ಪ ಕಡಿಮೆ ಇದ್ದು ಅದನ್ನು ಹೆಚ್ಚು ಮಾಡಿಕೊಳ್ಳಿ. ಮಾಡಲೇಬೇಕಾದ ಕಾರ್ಯಗಳ ಬಗ್ಗೆ ಹೆಚ್ಚು ಗಮನ ಅಗತ್ಯ.
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 am, Wed, 21 October 26
