Nitya Bhavishya: ಈ ರಾಶಿಯವರು ಎಚ್ಚರವಾಗಿರಿ, ಏಕೆಂದರೆ ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಏರೆಪೇರಾಗುವ ಸಾಧ್ಯತೆ ಇದೆ

2023 ಜನವರಿ 27 ಶುಕ್ರವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರು ಎಚ್ಚರವಾಗಿರಿ, ಏಕೆಂದರೆ ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಏರೆಪೇರಾಗುವ ಸಾಧ್ಯತೆ ಇದೆ
ರಾಶಿ ಭವಿಷ್ಯImage Credit source: Marca.Com
Follow us
TV9 Web
| Updated By: Rakesh Nayak Manchi

Updated on: Jan 27, 2023 | 5:04 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 26 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ: ಮಾಘ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ರೇವತೀ, ಯೋಗ: ಸಿದ್ಧ, ಕರಣ: ತೈತಿಲ, ಸೂರ್ಯೋದಯ- ಬೆಳಗ್ಗೆ 07 ಗಂಟೆ 02 ನಿಮಿಷ ಮತ್ತು ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 11:20 ರಿಂದ ಮಧ್ಯಾಹ್ನ 12:45ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 3:37ರಿಂದ 5:02ರವರೆಗೆ, ಗುಳಿಕ ಕಾಲ ರಾತ್ರಿ 08:29 ರಿಂದ 09:54ರವರೆಗೆ.

  1. ಮೇಷ: ಧನಾಗಮನವಾಗುವ ದಿನವು ಇಂದಾಗಲಿದೆ. ನಿಮ್ಮನ್ನು ಪ್ರಕಟಗೊಳಿಸಿಕೊಳ್ಳುವ ದಿನವೂ ಆಗಲಿದೆ. ಆರೋಗ್ಯದ ಬಗ್ಗೆ ಗಮನಕೊಡುವ ಅವಶ್ಯಕತೆ ಹೆಚ್ಚಿದೆ. ಪ್ರಯಾಣವನ್ನು ಮಾಡುವ ಮನಸ್ಸನ್ನು ಮಾಡಬೇಡಿ. ಆಲಸ್ಯದಿಂದ ನಿಮ್ಮ‌ ಕಾರ್ಯಗಳು ಆಗದೇ ಇರಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳಬಹುದು. ಶತ್ರುತ್ವವನ್ನು ಸಾಧಿಸಲು ಹೋಗಬೇಡಿ. ಚಂಚಲವಾದ ಮನಸ್ಸನ್ನು ನಿಯಂತ್ರಿಸಿ. ಸಾಲವನ್ನು ಮಾಡಬೇಕಾಗಿಬರಬಹುದು. ಆಲೋಚಿಸಿ ನಿರ್ಧಾರವನ್ನು ಮಾಡಿಕೊಳ್ಳಿ.
  2. ವೃಷಭ: ಅನಿರೀಕ್ಷಿತವಾಗಿ ಧನಾಗಮನವಾಗಬಹುದು. ನಿಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯಲಿವೆ. ನಿಮ್ಮ ಮನಸ್ಸಿಗೆ ನೋವಾಗಲೂಬಹುದು. ಕುಟುಂಬದವರ ಜೊತೆ ಕಲಹವು ಉಂಟಾಗಬಹುದು. ಅಶುಭವಾರ್ತೆಯಿಂದ ಸ್ವಲ್ಪ ಉದ್ವಿಗ್ನಗೊಳ್ಳಲಿದ್ದೀರಿ. ಅನಿವಾರ್ಯವಾಗಿ ಬಂದ ಪ್ರಯಾಸದಿಂದ ನಿಮಗೆ ಕಿರಿಕಿರಿಯಾಗಲಿದೆ. ವಿದ್ಯಾರ್ಥಿಗಳಿಗೆ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ. ಸ್ವಂತ ತೀರ್ಮಾನವು ಅಸಾಧ್ಯವಾದರೆ ಹಿರಿಯರ ಜೊತೆ ಚರ್ಚಿಸಿ ಮುನ್ನಡೆಯಿರಿ.
  3. ಮಿಥುನ: ಆರ್ಥಿಕ ಸ್ಥಿತಿಯು ವೃದ್ಧಿಗೊಳ್ಳುವ ಸಾಧ್ಯತೆ ಇದೆ. ಅಂದುಕೊಂಡಂತೆ ಆಗಿಲ್ಲವೆಂದು ಅಸಮಾಧಾನವು ಇರಲಿದೆ. ನಿಮ್ಮ ಆಸ್ತಿಯನ್ನು ಪರರ ಪಾಲಾಗಬಹುದು ಎಂಬ ಆತಂಕವಾಗಲಿದೆ. ಆರೋಗ್ಯದ ವ್ಯತ್ಯಾಸದಿಂದ ನೆಮ್ಮದಿಯು ದೂರಾಗಬಹುದು. ಮೊದಲು ಮಾಡಿಕೊಂಡ ತಪ್ಪಿನಿಂದ ಇಂದು ನೀವು ಪಶ್ಚಾತ್ತಾಪಪಡಬೇಕಾಗಬಹುದು. ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಕ್ರಮದ ಕುರಿತು ಆಲೋಚಿಸುವಿರಿ.
  4. ಕಟಕ: ಕುಟುಂಬಕ್ಕೆ ಸಂಬಂಧಿಸಿದ ಖರ್ಚು ಹೆಚ್ಚಾಗಲಿದೆ. ನೀವು ಮಾಡಲು ಹೊರಟ ಕಾರ್ಯಗಳಿಂದ‌ ನಷ್ಟವಾಗುವ ಸಾಧ್ಯತೆ ಇದೆ. ಇದು ನಿಮಗೆ ಹತಾಶಭಾವವನ್ನು ಉಂಟುಮಾಡುವುದು. ನಿಮ್ಮ ರಹಸ್ಯ ವಿಚಾರಗಳು ಎಲ್ಲರಿಗೂ ಗೊತ್ತಾಗಿ ನಿಮಗೆ ಮುಜುಗರವಾಗಬಹುದು. ಬಂಧುಗಳು ನಿಮ್ಮ ವರ್ತನೆಯಿಂದ ದೂರಾಗಬಹುದು. ಮಾತಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
  5. ಸಿಂಹ: ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಏರೆಪೇರಾಗುವ ಸಾಧ್ಯತೆ ಇದೆ. ದುರಭ್ಯಾಭ್ಯಾಸವುಳ್ಳವರಿಗೆ ಅನಾರೋಗ್ಯವು ಕಾಡಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಸಹಾಯಮಾಡಲು ಬರಬಹುದು. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ವಿವಾದಗಳು ಆಗಬಹುದು. ಸ್ವಲ್ಪಮಟ್ಟಿನ ಧನಾಗಮನವಾಗಬಹುದು. ನಿರಂತರ ಪರಿಶ್ರಮದ ಕಾರ್ಯಕ್ಕೆ ಫಲವು ಸಿಗಬಹುದಾಗಿದೆ. ದುಡುಕಿ ಅರ್ಥವನ್ನು ಮಾಡಿಕೊಳ್ಳುವುದು ಬೇಡ.
  6. ಕನ್ಯಾ: ಉದ್ಯೋಗದ ಸ್ಥಳದಲ್ಲಿ ನಿಮಗೆ ಪ್ರಶಂಸೆ ಸಿಗಲಿದೆ. ಭಡ್ತಿಯೂ ಸಿಗಬಹುದು. ಅವಿವಾಹಿತರಿಗೆ ವಿವಾಹಭಾಗ್ಯವು ಸಿಗಬಹುದು. ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳಬಹುದು. ಮನೆಯಿಂದ ದೂರದಲ್ಲಿ ವಾಸಮಾಡಬೇಕಾಗಿಬರಬಹುದು. ಅಗ್ನಿಯ ಭೀತಿಯು ಉಂಟಾಗಬಹುದು. ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ ಇದೆ. ಧಾರ್ಮಿಕಕ್ಷೇತ್ರದವರಿಗೆ ಶುಭವಾಗಬಹುದು. ಒತ್ತಡವನ್ನು ಈಗಲೇ ಕಡಿಮೆಮಾಡಿಕೊಳ್ಳಲು ತೀರ್ಮಾನಿಸಿ.
  7. ತುಲಾ: ಭೂಮಿಗೆ ಸಂಬಂಧಿಸಿದ ವಿವಾದಗಳು ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ. ಹೆಚ್ಚು ಧನವ್ಯಯವಾಗುವ ಸಾಧ್ಯತೆ ಇದೆ. ಹಿರಿಯ, ದೇವರ ನಿಂದನೆಯೂ ನಿಮ್ಮ ಹತಾಶಭಾವದಿಂದ ನಡೆಯಲಿವೆ. ಸತತ ಸೋಲುಂಡ ನಿಮಗೆ ಉತ್ಸಾಹವೇ ಇಲ್ಲದಂತಾಗಬಹುದು. ಯಾವದೂ ಅನರ್ಥವಾದ ಕಾರ್ಯಗಳನ್ನು ಮಾಡಲು ಹೋಗಬೇಡಿ. ಇನ್ನಷ್ಟು ದುಃಖಿಸಬೇಕಾದ ಸನ್ನಿವೇಶವು ಬರಬಹುದು. ಪೂರ್ವಾಪರಜ್ಞಾನವಿಲ್ಲದೇ ತೀರ್ಮಾನಕ್ಕೆ ಬರುವುದು ಬೇಡ.
  8. ವೃಶ್ಚಿಕ: ಓದಿನ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಆರಕ್ಷಕರಾಗುವ ಮನಸ್ಸುಳ್ಳವರಿಗೆ, ರಕ್ಷಣಾವಿಭಾಗದಲ್ಲಿ ಕಾರ್ಯವನ್ನು ಮಾಡುವವರಿಗೆ ಸದವಕಾಶವು ಸಿಗಲಿದೆ. ಭೂವ್ಯವಹಾರದಲ್ಲಿ ಜಯವನ್ನು ಪಡೆಯಲು ನ್ಯಾಯಾಲಯಕ್ಕೆ ಹೋಗಬೇಕಾಗಬಹುದು. ಅಧಿಕಾರವನ್ನು ದುರುಯೋಗಪಡಿಸಿಕೊಳ್ಳಬೇಡಿ. ಜಾಗರೂಕತೆಯಿಂದ ನಿರ್ವಹಿಸಿ. ಧಾರ್ಮಿಕ ಕಾರ್ಯವನ್ನು ಮಾಡುವ ಯೋಗವು ಇರಲಿದೆ. ಉಪಕಾರಕ್ಕೆ ಪ್ರತ್ಯುಪಕಾರವು ಸಿಗಲಿದೆ.
  9. ಧನು: ನಿಮ್ಮ ಸಂಗಾತಿಯ ವರ್ತನೆಯನ್ನು ನೀವು ಸಹಿಸಲಾರಿರಿ. ಪುನರಾವರ್ತಿತವಾದ ವರ್ತನೆಗಳು ನಿಮಗೆ ಮಾನಸಿಕ ಹಿಂಸೆಯನ್ನು ಕೊಡುವುದು. ದುಶ್ಚಟಕ್ಕೆ ಬೀಳಬಹುದು. ಉದ್ಯೋಗದಲ್ಲಿ ಸ್ಥಾನಾಂತರವಾಗಬಹುದು ಅಥವಾ ಕಳೆದುಕೊಳ್ಳಲೂಬಹುದು. ಅನಿರೀಕ್ಷಿತ ಧನವ್ಯಯವು ನಿಮಗೆ ನಿರಾಶೆಯನ್ನು ಉಂಟುಮಾಡುವುದು. ಸ್ನೇಹಿತರು ನಿಮ್ಮ ಜೊತೆಗಿದ್ದು ಸಮಾಧಾನ ಮಾಡುವರು.
  10. ಮಕರ: ಅಂದುಕೊಂಡಲ್ಲಿಗೆ ಹೋಗಲಾಗದೇ ಸಂಕಟಪಡಬೇಕಾಗಬಹುದು. ದಾಂಪತ್ಯದಲ್ಲಿ ವಿವಾದಗಳು ನಡೆಯುವುವು. ಪರಸ್ಪರ ದ್ವೇಷವನ್ನು ಸಾಧಿಸಲು ಹೊರಡಬೇಕಾದ ಸ್ಥಿತಿಯು ಬರಬಹುದು. ಅಪವಾದವು ನಿಮಗೆ ಬರಬಹುದು. ಪರಸ್ತ್ರೀಯರಿಂದ ನಿಮಗೆ ಕಲಂಕತರುವ ಪ್ರಯತ್ನಗಳು ಆಗಬಹುದು. ಕೃಷಿಕಾರ್ಯದಿಂದ ಹಣವನ್ನು ಸಂಪಾದಿಸಬಹುದಾಗಿದೆ. ವಿದ್ಯುತ್ ಉಪಕರಣಗಳಿಂದ ನಷ್ಟವಾಗುವ ಸಾಧ್ಯತೆ ಇದೆ.
  11. ಕುಂಭ: ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಮಿತ್ರರು ಶತ್ರುಗಳಾಗಬಹುದು ನಿಮ್ಮ ಮಾತು ಹಾಗು ವರ್ತನೆಯಿಂದ. ಅವರ ಬಗ್ಗೆ ಗಮನವಿರಲಿ ಹಾಗಯೇ ಮಾತಿನ ಬಗ್ಗೆಯೂ ಇರಲಿ. ಸಮಯಸ್ಫೂರ್ತಿಗೆ ಪ್ರಶಂಸೆಯು ಸಿಗಲಿದೆ. ಸ್ವಗೃಹದಲ್ಲಿಯೇ ವಾಸಮಾಡುವ ಮನಸ್ಸು ಮಾಡುವಿರಿ. ಮಕ್ಕಳು ಸಂತಸದ ವಾರ್ತೆಯನ್ನು ಹೇಳುವವರು. ಸ್ವಲ್ಪಮಟ್ಟಿನ ಆಲಸ್ಯವಿರಲಿದೆ.
  12. ಮೀನ: ವಾಹನವನ್ನು ಚಲಿಸುವಾಗ ಜಾಗರೂಕರಾಗಿರಿ. ಆಸ್ತಿಯ ವಿಚಾರದಲ್ಲಿ ವಿವಾದಗಳು ಆಗಬಹುದು. ಹಿರಿಯರ ಜೊತೆ ಚರ್ಚಿಸಿ ಮುಂದುವರಿಯಿರಿ. ಭೂಮಿಯ ವ್ಯವಹಾರಸ್ಥರಿಗೆ ಸ್ವಲ್ಪ ಹಿನ್ನೆಡೆ ಇರಲಿದೆ. ಶುಭಸಮಾರಂಭಗಳಿಗೆ ತೆರಳುವ ಮತ್ತು ಮಾಡುವ ಮನಸ್ಸನ್ನು ಹೊಂದುವಿರಿ. ಆದ ಖರ್ಚುಗಳ ಬಗ್ಗೆ ಅರಿಯಾದ ಬೇಸರ ಬೇಡ. ಉಳಿತಾಯದ ಬಗ್ಗೆ ಗಮನ ನೀಡುವುದು ಉತ್ತಮ. ಅವಕಾಶಗಳು ಎಷ್ಟೇ ಇದ್ದರೂ ಯೋಗವಿದ್ದಷ್ಟೇ ಸಿಗುವುದು ಎಂಬ ಮಾತು ನೆನಪಿರಲಿ.

-ಲೋಹಿತಶರ್ಮಾ ಇಡುವಾಣಿ

ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಸುರ್ಜೆವಾಲಾ ಭೇಟಿ ನಾಯಕರ ಆಂತರಿಕ ಕಾದಾಟವನ್ನು ತಹಬದಿಗೆ ತರುವುದೆ?‘
ಸುರ್ಜೆವಾಲಾ ಭೇಟಿ ನಾಯಕರ ಆಂತರಿಕ ಕಾದಾಟವನ್ನು ತಹಬದಿಗೆ ತರುವುದೆ?‘
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೊಂದಿಗೂ ನನ್ನ ತಿಕ್ಕಾಟವಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೊಂದಿಗೂ ನನ್ನ ತಿಕ್ಕಾಟವಿಲ್ಲ: ಜಾರಕಿಹೊಳಿ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ