Weekly Horoscope:ಜನವರಿ 29ರಿಂದ ಫೆಬ್ರವರಿ 4ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

ಜನವರಿ 29ರಿಂದ ಫೆಬ್ರವರಿ 04ರ ವರೆಗೆ ವಾರ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಲಾಭದಾಯಕ..? ಯಾವ ರಾಶಿಯವರಿಗೆ ನಷ್ಟ? ಎನ್ನುವುದನ್ನು ತಿಳಿದುಕೊಳ್ಳಿ.

Weekly Horoscope:ಜನವರಿ 29ರಿಂದ ಫೆಬ್ರವರಿ 4ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಪ್ರಾತಿನಿಧಿಕ ಚಿತ್ರImage Credit source: worcestermag.com
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 29, 2023 | 6:20 AM

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ(Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಜನವರಿ 29ರಿಂದ ಫೆಬ್ರವರಿ 04ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

ಮೇಷ: ಏಕಾದಶದ ಅಧಿಪತಿ ಏಕಾದಶದಲ್ಲಿ ಇರುವುದು ಸಂಪತ್ತಿನ ಆಗಮನವಾಗುವ ಸೂಚನೆಯಾಗಿದೆ. ಧನಾಧಿಪತಿಯೂ ಏಕಾದಶಾಧಿಪತಿಯ ಜೊತೆಗೂಡಿದ್ದಾನೆ. ದಶಮದ ಸೂರ್ಯ ಉದ್ಯೋಗದಲ್ಲಿ ಸ್ಥಿರತ್ವವನ್ನು ಕೊಡುವನು. ಧರ್ಮಶ್ರದ್ಧೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಗಳನ್ನು ನವಮದ ಬುಧನು ನೀಡುವನು. ದ್ವಾದಶದ ಗುರುವು ನಿಮಗೆ ಸ್ವಲ್ಪಮಟ್ಟಿನ ಹಿನ್ನಡಿಲೆಯನ್ನು ತರಬಹುದು. ಉದ್ಯೋಗದ ನಿಮಿತ್ತ ಸ್ಥಳಾಂತರವೂ ಆಗಲಿದೆ. ಭೂಮಿಯ ವ್ಯವಹಾರದಲ್ಲಿ ಮನೆ ಕಟ್ಟುವ ವಿಚಾರದಲ್ಲಿ ಸುಗಮಗತಿ ಇರಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಗುರುದರ್ಶನ ನಿಮ್ಮ ಅಲ್ಪದೋಷವನ್ನೂ ದೂರ ಮಾಡುವುದು.

ವೃಷಭ: ಏಕಾದಶಾಧಿಪತಿ ಗುರುವು ನಿಮಗೆ ಅನೇಕ ಲಾಭವನ್ನು ಅನುಕೂಲವನ್ನೂ ಯಶಸ್ಸನ್ನು ತಂದು ಕೊಡುವನು. ದಶಮಸ್ಥಾನದಲ್ಲಿ ಶನಿ ಹಾಗೂ ಶುಕ್ರರಿದ್ದಾರೆ. ಒಳ್ಳೆಯ ಕಾರ್ಯಗಳು ನಿಮ್ಮಿಂದ ಆಗಲಿದೆ. ಕಲೆಯಲ್ಲಿ ಆಸಕ್ತಿ ಇರುವವರಿಗೆ ಹೆಚ್ಚು ಅನುಕೂಲವಿರಲಿದೆ. ಧನಾಗಮನವೂ ಆಗುವ ಸಾಧ್ಯತೆ ಇದೆ. ತಂದೆಯ ಕಡೆಯಿಂದ ಸಂಪತ್ತು ಅಥವಾ ವಸ್ತುಗಳು ಸಿಗಬಹುದು. ಅಷ್ಟಮದ ಬುಧನು ನಿಮ್ಮ ಸಣ್ಣ ಮಟ್ಟಿನ ನೋವನ್ನು ಕೊಡುವನು. ಸ್ವರಾಶಿಯಲ್ಲಿ ಸ್ಥಿತನಾದ ಕುಜನು ಆತ್ಮಸ್ಥೈರ್ಯವನ್ನು ಕೊಡುವನು. ಗುರುಬಲವುಳ್ಳ ನಿಮಗೆ ಸದ್ಯ ಅನುಕೂಲದ ಸಂದರ್ಭಗಳು ಇರಲಿವೆ.

ಮಿಥುನ: ಶನಿ ಮತ್ತು ಶುಕ್ರರು ನವಮದಲ್ಲಿ ಇದ್ದು ನಿಮಗೆ ಸಲಕ ಶುಭವನ್ನೂ ತರಲಿರುವರು‌.‌ ಸಂತಾನಪ್ರಾಪ್ತಿಯಾಗಲಿದೆ. ಧಾರ್ಮಿಕವಾದ ಕಾರ್ಯಗಳಲ್ಲಿ ಭಾಗವಹಿಸುವಿರಿ. ವಾಹನಲಾಭವೂ ಆಗಬಹುದು. ನಿಮಗೆ ಸಂತೋಷವನ್ನು ಕೊಡುವ ಸಂಗತಿಗಳೇ ಹೆಚ್ಚಾಗಿ ಇರಲಿವೆ. ಅಷ್ಟಮದ ರವಿಯು ರಾಜನಿಂದ ಸಂಕಟವನ್ನು ತರಿಸುವನು. ಸಪ್ತಮದ ಬುಧ ಸಂಗಾತಿಯನ್ನು ತೋರಿಸುವನು. ದೂರಾದ ಬಂಧವು ಮತ್ತೆ ಹತ್ತಿರವಾಗಲಿದೆ. ಪಂಚಮದ ಕೇತುವು ವಿದ್ಯಾಭ್ಯಾಸಕ್ಕೆ ಸ್ವಲ್ಪ ತಡೆಯನ್ನು ಒಡ್ಡುವನು.

ಕಟಕ: ಅಷ್ಟಮದ ಶುಕ್ರ ಮತ್ತು ಶನಿಯು ನಿಮಗೆ ಅಷ್ಟಾಗಿ ಅನುಕೂಲವಿಲ್ಲ. ಒಳ್ಳೆಯದು ಬರುವುದಿದ್ದರೂ ನಿಧಾನವಾಗಿ ಬರಬಹುದು. ಸ್ತ್ರೀಯರಿಗೆ ಸಂಬಂಧಪಟ್ಟ ಅಪವಾದಗಳು ಬರಬಹುದು. ಅಷ್ಟಮದ ಶನಿಯು ಆರೋಗ್ಯವನ್ನು ಕಾಪಾಡುವನು. ಪ್ರಾಣಾಂತಿಕವಾದ ರೋಗದಿಂದಲೂ ಮುಕ್ತವಾಗುವುದು. ನವಮದ ಗುರು ನಿಮ್ಮನ್ನು ಒಳ್ಳೆಯ ಕಾರ್ಯಕ್ಕೆ ಪ್ರೇರಿಸುವನು. ವರ್ತಮಾನದಲ್ಲಿ ಉಂಟಾಗುವ ತೊಂದರೆಗಳಿಂದ ರಕ್ಷಣೆ ನೀಡುವನು. ಸಪ್ತಮದ ಸೂರ್ಯನು ದಾಂಪತ್ಯದಲ್ಲಿ ಸ್ವಲ್ಪಮಟ್ಟಿನ ವೈಮನಸ್ಯವನ್ನು ತರುವನು. ಷಷ್ಠದ ಬುಧನು ಶತ್ರುಗಳನ್ನು ಹೆಚ್ಚಿಸುವನು. ಸಾಲಗಳನ್ನೂ ಮಾಡಿಸುವನು. ಏಕಾದಶದ ಕುಜನಿಂದ ಭೂಮಿಲಾಭವಾಗಲಿದೆ.

ಸಿಂಹ: ಸಪ್ತಮ ಶನಿ ಹಾಗೂ ಶುಕ್ರರರಿಂದ ಸಂಗಾತಿಯ ಲಾಭವಾಗಲಿದೆ ಹಾಗೂ ವಿವಾಹವು ವಿಳಂಬವಾಗಲಿದೆ. ಅಷ್ಟಮದ ಗುರುವು ಹೆಚ್ಚು ಮಾಡಿಸುವನು. ಪಾದಕ್ಕೆ ಸಂಬಂಧಿಸಿದ ರೋಗಗಳನ್ನು ತರಿಸಬಹುದು. ದಶಮದ ಕುಜನು ತಂತ್ರಜ್ಞಾನದ ವೃತ್ತಿಯವರಿಗೆ ಅಧಿಕ ಶ್ರೇಯಸ್ಸನ್ನು ಕೊಡಿಸುವನು. ಪಂಚಮದ ಬುಧನು ನಿಮ್ಮ ಪ್ರತಿಭೆಯನ್ನು ಪ್ರಕಾಶಗೊಳಿಸುವನು. ಸಂತಾನದಿಂದ ಸಂತಸವನ್ನು ಕೊಡಿಸುವನು. ಮಕ್ಕಳಿಂದ ಶುಭವಾರ್ತೆಯು ಬರುವುದು. ನವಮದ ರಾಹುವು ಧರ್ಮದಲ್ಲಿ ನಿರಾಸಕ್ತಿಯನ್ನು ಮೂಡಿಸುವನು. ಪುಣ್ಯವನ್ನು ಅನುಭವಿಸಲು ಆಗದ ಸ್ಥಿತಿಯು ಬರಬಹುದು. ತೃತೀಯದ ಕೇತುವು ಧೈರ್ಯವನ್ನು ನೀಡಲಿದ್ದಾನೆ. ಸಾಮರ್ಥ್ಯವು ಗೊತ್ತಾಗುವುದು.

ಕನ್ಯಾ: ಕೆಲಸವನ್ನು ನಿಶ್ಚಿಂತೆಯಿಂದ ಮಾಡಬಹುದಾಗಿದೆ. ನಿಮ್ಮ ಕಾರ್ಯಗಳಿಗೆ ಆತಂಕಗಳು ಇರುವುದಿಲ್ಲ. ಅವಿವಾಹಿತರಿಗೆ ವಿವಾಹವು ಶೀಘ್ರವಾಗಿ ಆಗುವುದು. ಪುತ್ರ ಪುತ್ರಪ್ರಾಪ್ತಿಯ ಸುವಾರ್ತೆ ಬರಲಿದೆ. ಸಪ್ತಮದ ಗುರುವು ನಿಮಗೆಲ್ಲ ಭಾಗ್ಯವನ್ನೂ ಕರುಣಿಸುವನು. ನವಮದ ಕುಕರ್ಮಗಳಿಗೆ ಪ್ರೇರಿಸುವನು. ಚತುರ್ಥದ ಬುಧನಿಂದ ಕುಟುಂಬಸೌಖ್ಯವು ಸಿಗಲಿದೆ. ಪಂಚಮದ ರವಿಯು ವಿದ್ಯೆಯನ್ನು ಪ್ರಕಾಶಿಸುವವನೇ ಆಗಿದ್ದಾನೆ. ವಿದೇಶಕ್ಕೆ ಹೋಗುವ ಸಾಧಯತೆಯೂ ಇದೆ. ದ್ವಿತೀಯದ ಕೇತುವು ಸಂಪತ್ತನ್ನು ನಾಶಮಾಡಿಸಬಹುದು. ಅಷ್ಟಮದ ರಾಹುವುದು ಆರೋಗ್ಯವನ್ನು ಕೊಡುವನು. ವಾಹನವನ್ನು ಚಲಿಸುವಾಗ ಜಾಗರೂಕರಾಗಿರಿ.

ತುಲಾ: ಪಂಚಮದ ಶನಿಯು ನಿಮ್ಮ ಸಾಮರ್ಥ್ಯದ, ಪ್ರತಿಭೆಯ ಅನಾವರಣವು ವಿಳಂಬವಾಗಿ ಆಗಲಿದೆ. ದಿನದ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಒತ್ತಡವೂ ಅಧಿಕವಾಗಬಹುದು. ನಿಮ್ಮ ಕೆಲಸದಲ್ಲಿ ನಿಷ್ಠೆ ಇರಲಿ. ಪ್ರಾಮಾಣಿಕತೆಯನ್ನು ಕಳೆದುಕೊಳ್ಳಲು ಹೋಗುವುದು ಬೇಡ. ಮುಂದೆ ಇದೇ ಧನಾತ್ಮಕವಾಗಿ ಪರಿವರ್ತನೆಯಾವುದು. ಹೊಸ ಉದ್ಯೋಗವನ್ನು ಮಾಡಲು ಯೋಜನೆಯನ್ನು ಮಾಡಿ. ಕಾರ್ಯಾರಂಭ ಬೇಡ. ತೃತೀಯ ಬುಧನು ಸಹೋದರಸಖ್ಯವನ್ನು ಕೊಡುವನು. ಚತುರ್ಥದ ಸೂರ್ಯನು ದಾಯಾದಿ ಸೌಖ್ಯವನ್ನು ಕೊಡುವನು. ಷಷ್ಠದ ಗುರುವು ಹಿರಿಯರ ಅನಾದರ, ದೈವದ ಮೇಲೆ ಅಪನಂಬಿಕೆಗಳನ್ನು ಕೊಡುವನು. ಉದ್ವೇಗದ ಸ್ಥಿತಿ ಬಂದಾಗ ಮನಸ್ಸು ಹಾಗೂ ಬುದ್ಧಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ.

ವೃಶ್ಚಿಕ: ಶನಿಯು ಚತುರ್ಥದಲ್ಲಿ ಇದ್ದಾನೆ. ಕುಟುಂಬಸೌಖ್ಯವನ್ನು ಕಡಿಮೆ‌ಮಾಡಬಹುದು. ಪಂಚಮದ ಗುರು ನಿಮಗೆ ಶುಭವನ್ನೇ ಮಾಡುವನು. ವಿದ್ಯಾಕ್ಷೇತ್ರದಲ್ಲಿ ಇರುವವರಿಗೆ ಉತ್ತಮವಾದುದೇ ಆಗಲಿದೆ. ಧನಾಗಮವು ಚೆನ್ನಾಗಿ ಇರಲಿದೆ. ಮಾಡುವ ಕಾರ್ಯದಲ್ಲಿ ಸಂತೃಪ್ತಿ ಹಾಗೂ ಖುಷಿ ಇರಲಿದೆ. ಷಷ್ಠದ ರಾಹುವು ನಿಮಗೆ ಶತ್ರುಸಂಹಾರಕನಾಗಿ ಇರುವನು. ಅವರೆಲ್ಲರೂ ಮಿತ್ರರಾಗುವಂತೆ ನೋಡಿಕೊಳ್ಳುವನು. ಕಾರ್ಯದಲ್ಲಿ ಧೈರ್ಯವನ್ನು ಕೊಡುವನು. ಋಣಬಾಧೆಯಿಂದ‌ ಮುಕ್ತನನ್ನಾಗಿ‌ಮಾಡಬಹುದಿ. ದ್ವಾದಶದ ಕೇತುವು ಕೇತು ಧನವನ್ನು ಕೆಟ್ಟ ಕೆಲಸಗಳಿಗೆ ವ್ಯಯಿಸಿಯಾನು. ವಿವಾಹವನ್ನು ಇಷ್ಟಪಡುವವರಿಗೆ ಈಗ ಗುರು ಬಲವಿದೆ, ವಿವಾಹವನ್ನು ಮಾಡಿ ಮುಗಿಸಿಕೊಳ್ಳಿ.

ಧನಸ್ಸು: ಏಳುವರೆ ಶನಿಯ ಕಾಟದಿಂದ‌ ಮುಕ್ತರಾಗಿದ್ದೀರಿ‌. ತೃತೀಯದಲ್ಲಿ ಇರುವ ಶನಿಯು ನಿಮಗೆ ಸರ್ವಶುಭವನ್ನು ಮಾಡಯವನು. ಅಸಾಧ್ಯವಾದ ಕೆಲಸಗಳನ್ನು ಪುನಃ ಮಾಡುವಿರಿ. ಹಣದ ಮೂಲವೂ ಚೆನ್ನಾಗಿ ಇರಲಿದೆ. ದ್ವಿತೀಯದಲ್ಲಿರುವ ರವಿಯು ತಂದೆಯಿಂದ ಸಂಪತ್ತು ಸಿಗುವ ಹಾಗೆ ಮಾಡುವನು. ಚತುರ್ಥದ ಗುರುವು ಪೂರ್ಣಶುಭನಲ್ಲ. ವೃತ್ತಿಯಲ್ಲಿ ಕುಟುಂಬದಲ್ಲಿ ಅನನುಕೂಲತೆಗಳು ಆಗಬಹುದು. ಷಷ್ಠದ ಕುಜನು ಧನಲಾಭವನ್ನು ಮಾಡಿಸುವನು. ಭೂಮಿಯ ವಿವಾದಗಳನ್ನು ನಾಶ ಮಾಡಿಸುವನು. ಶತ್ರುಗಳ ಉಪಟಳವಿರುವುದಿಲ್ಲ‌. ತೃತೀಯದಲ್ಲಿ ಶುಕ್ರ ಮತ್ತು ಶನಿ ಶ್ರೇಯಸ್ಕರರು.

ಮಕರ:  ಜನ್ಮರಾಶಿಯಲ್ಲಿದ್ದ ಶನಿಯಿಂದ ದ್ವಿತೀಯಕ್ಕೆ ಹೋಗಿದ್ದಾನೆ. ಏಳುವರೆ ಶನಿಯು ಕೊನೆಯ ಭಾಗದಲ್ಲಿ ಇದ್ದಾನೆ. ಇಷ್ಟು ವರ್ಷ ಶ್ರಮವಹಿಸಿಸರೂ ಸಿಗದ ಫಲವು ಅಲ್ಪಶ್ರಮದಿಂದ ಸಿಗಲಿದೆ. ಆತುರಪಡದೇ ಇದ್ದರೆ ನಿಮ್ಮ ಯೋಗ್ಯತೆ ತಕ್ಕ ಕೆಲಸ, ಅವಕಾಶಗಳು ಸಿಗಲಿವೆ. ತೃತೀಯದ ಗುರುವಿ ಸಹೋದರರಿಂದ ಸಹಕಾರವು ಸಿಗುವಂತೆ ಮಾಡುವನು. ಚತುರ್ಥದ ರಾಹುವು ತಾಯಿಯ ಆರೋಗ್ಯಕ್ಕೆ ತೊಂದರೆಯನ್ನು ತರುವನು. ಪಂಚಮದ ಕುಜನಿಂದ ಮಕ್ಕಳಿಂದ ಲಾಭವೂ ಆಗಲಿದೆ. ಅವಕಾಶ ಸಿಕ್ಕಿಯೂ ವಂಚಿತರಾಗುವುದು ಬೇಡ. ದ್ವಿತೀಯದ ಶುಕ್ರನು ಸ್ತ್ರೀಯರಿಂದ ಸಹಾಯವನ್ನು ಮಾಡಿಸುತ್ತಾನೆ.

ಕುಂಭ: ಜನ್ಮರಾಶಿಗೆ ಶನಿಯ ಪ್ರವೇಶವಾಗಿದೆ. ಆಲೋಚನೆಗಳನ್ನು ಒಬ್ಬರೇ ಮಾಡದೇ ಕುಟುಂಬದ ಜೊತೆ ಮಾಡಿ ತೀರ್ಮಾನಿಸಿ. ಅಪವಾದದಿಂದ ಸಿಕ್ಕಿ ಲಹಾಕಿಕೊಳ್ಳುವ ಸಾಧ್ಯತೆ ಇದೆ. ಆರ್ಥಿಕಸ್ಥಿತಿ ಉತ್ತಮವಾಗಿರುತ್ತದೆ. ಅಪರಿಚಿತರ ಜೊತೆ ವ್ಯವಹಾರವನ್ನು ನೋಡಿ ಮಾಡಿ. ಸಾಲವನ್ನು ಮಾಡಲು ಹೋಗಬೇಡಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ದಶಮದ ಬುಧ ವೃತ್ತಿಯಲ್ಲಿ ಶುಭವನ್ನೇ ಮಾಡುವನು. ಚತುರ್ಥದ ಕುಜನು ಕುಟುಂಬದಲ್ಲಿ ವಿವಾದವನ್ನು ಎಬ್ನಿಸಬಹುದಿ. ತೃತೀಯದ ರಾಹುವು ಧೈರ್ಯದಾಯಕನಾಗಿದ್ದಾನೆ. ಧೈರ್ಯವನ್ನು ಬೇಕಾದಲ್ಲಿ ಮಾತ್ರ ಬಳಸಿ. ಪ್ರಥಮದ ಶುಕ್ರನು ನಿಮಗೆ ಶುಭದಾಯಕನಾಗಿರುತ್ತಾನೆ.

ಮೀನ:  ದ್ವಾದಶದ ಶನಿ ಹಾಗು ಶುಕ್ರರು ನಿಮ್ಮ ಯೋಜನೆಗಳನ್ನು ತಲೆಕೆಳಗೆ ಮಾಡಿದ್ದಾರೆ. ಅನಾಯಾಸವಾಗಿ ಹೋಗುತ್ತಿದ್ದ ಕಾರ್ಯಗಳು ಕುಂಟಲಾರಂಭಿಸಿವೆ. ಯಾವ ಕಾರ್ಯವೂ ಮುಕ್ತಾಯವಾಗುವುದು ಎನ್ನುವ ನಂಬಿಕೆ ಇಲ್ಲ. ಹಣಕಾಸಿನ ತೊಂದರೆ ಕಾಣಿಸುವ ಸಾಧ್ಯತೆ ಇದೆ. ಬಂಧುಗಳ ಜೊತೆ, ಸ್ನೇಹಿತರ ಜೊತೆ ಕಲಹವಾಗಬಹುದು.‌ ದೂರದ‌ ಪ್ರಯಾಣ ಮಾಡುವ ಸಂದರ್ಭಗಳು ಇಚ್ಛೆ ಇಲ್ಲದಿದ್ದರೂ ಬರುವುದು.‌ ಏಕಾದಶದ ಸೂರ್ಯನು ನಿಮಗೆ ಶುಭದಾಯಕನಾಗಿರುತ್ತಾನೆ. ಪಾಗಳಿಗೆ ನೋವು, ಗಾಯಗಳು ಆಗಬಹುದು.‌ ಏಳುವರೆ ಶನಿಯು ಆರಂಭವಾಗಿದೆ.

ಲೇಖನ-ಲೋಹಿತಶರ್ಮಾ, ಇಡುವಾಣಿ

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ