Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 29ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 29ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 29ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರImage Credit source: istockphoto.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 29, 2023 | 5:03 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 29ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವೇನಾದರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಲ್ಲಿ ಈ ದಿನ ಯಾವುದಾದರೂ ಒಂದು ಕಾರಣಕ್ಕೆ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಬಹಳ ವರ್ಷಗಳಿಂದ ಭೇಟಿಗೆ ಸಿಗದಿದ್ದ ಸ್ನೇಹಿತರು/ಸ್ನೇಹಿತೆಯರನ್ನು ಭೇಟಿ ಆಗುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಎಚ್ಚರಿಕೆಯನ್ನು ವಹಿಸಿ. ಯುಪಿಐ ವ್ಯಾಲೆಟ್‌ಗಳನ್ನು ಬಳಸುವಾಗ ಸಂಖ್ಯೆಯನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಎಲ್ಲವೂ ಗೊಂದಲವಾಗಿದೆ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡುವಂಥ ಸಾಧ್ಯತೆ ಇದೆ. ನಿಮ್ಮ ಮೇಲೆ ಸುಖಾಸುಮ್ಮನೆ ಇತರರು ಅನುಮಾನ ಪಡುವಂಥ ಸನ್ನಿವೇಶವನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ. ಇಂಥ ಸನ್ನಿವೇಶಕ್ಕೆ ನೇರವಂತಿಕೆಯೊಂದೇ ಪರಿಹಾರ. ಪಾರದರ್ಶಕತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಹಣಕಾಸು ವ್ಯವಹಾರವನ್ನು ನಿತ್ಯವೂ ಮಾಡುವಂಥವರು ಈ ದಿನ ಸಾಮಾನ್ಯಕ್ಕಿಂತ ಹೆಚ್ಚು ಜಾಗ್ರತೆ ವಹಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇತರರು ಆಡಿದ ಮಾತೋ ಅಥವಾ ನಡೆದುಕೊಂಡ ರೀತಿಯಿಂದಾಗಿಯೋ ದಿಢೀರನೆ ಮಂಕು ಬಡಿದವರಂತೆ ಆಗುತ್ತೀರಿ. ಒಂದು ವೇಳೆ ನಾನಾ ಘಟನೆಗಳಿಂದ ಬೇಸರವಾಗಿ ಮನಸ್ಥಿತಿ ಕೆಲಸಕ್ಕೆ ಸಹಕರಿಸುತ್ತಿಲ್ಲ ಎಂದಾದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಅಥವಾ ಮುಖ್ಯವಾದ ಕೆಲಸಗಳು ಇದ್ದಲ್ಲಿ ಮುಂದೂಡಿ. ಶನೈಶ್ಚರನ ಗುಡಿಗೆ ಈ ದಿನ ಭೇಟಿ ನೀಡಿ. ಇದರ ಜತೆಗೆ ಗೋವಿಗೆ ಬಾಳೆಹಣ್ಣು ನೀಡಿ. ‌ ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ಪ್ರವಾಸಕ್ಕೋ ತೀರ್ಥಕ್ಷೇತ್ರಕ್ಕೋ ಅಥವಾ ಬೇರೆಲ್ಲೇ ಆದರೂ ತೆರಳಿದ್ದಲ್ಲಿ ನೀರಿನಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನೀರಿನಿಂದ ಅಪಾಯ ಎದುರಾಗಬಹುದಾದ ಸಂಭವ ಇದೆ. ಆದ್ದರಿಂದ ಮುಂಜಾಗ್ರತೆ ವಹಿಸಿ. ಇನ್ನು ಯುವ ರಾಜಕಾರಣಿಗಳು ಎಂದಿದ್ದಲ್ಲಿ ಹೊಸ ಹುದ್ದೆಗಳು ನಿಮಗೆ ದೊರೆಯುವಂಥ ಸಾಧ್ಯತೆಗಳಿವೆ. ಒಂದು ವೇಳೆ ನಿಮಗೆ ಈ ಜವಾಬ್ದಾರಿಯು ಸವಾಲು ಅಂತೆನಿಸಿದರೂ ಅದನ್ನು ಒಪ್ಪಿಕೊಳ್ಳಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ನಿಮ್ಮನ್ನು ಮರೆವಿನ ಸಮಸ್ಯೆ ವಿಪರೀತವಾಗಿ ಕಾಡಲಿದೆ. ನೀವು ಈ ಹಿಂದೆ ಹೇಳಿದ್ದ ವಿಚಾರವನ್ನು ಈಗ ಸ್ವತಃ ನೀವೇ ಮರೆತು, ಬೇರೆಯವರ ಮೇಲೆ ತಪ್ಪನ್ನು ಹೊರೆಸುವ ಸಾಧ್ಯತೆ ಇದೆ. ಆದ್ದರಿಂದ ಎದುರಿನವರು ಹೇಳಿದ ಮಾತನ್ನೂ ಸ್ವಲ್ಪ ಲಕ್ಷ್ಯ ಇಟ್ಟು ಕೇಳಿಸಿಕೊಳ್ಳಿ, ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳಿ. ಈ ದಿನ ನಿಮಗೆ ಪಾರ್ಟಿಗಳಿಗೆ, ಗೆಟ್ ಟು ಗೆದರ್‌ಗೆ ಆಹ್ವಾನ ಬರಲಿದೆ. ಅದಕ್ಕೆ ಹೋದರೂ ಸ್ವಂತ ವಾಹನದಲ್ಲಿ ಬೇಡ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಗಂಭೀರವಾದ ಪ್ರಯತ್ನಗಳನ್ನು ಆರಂಭಿಸುತ್ತೀರಿ. ಇನ್ನು ಈ ಮಧ್ಯೆ, ಸುಮ್ಮನೆ ಹವ್ಯಾಸಕ್ಕೆ ಅಂತ ಶುರು ಮಾಡಿದ ಸಂಗತಿಯೊಂದು ನಿಮ್ಮ ಆದಾಯಕ್ಕೆ ದಾರಿ ಮಾಡಿಕೊಡುವ ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಅದರ ಬಗ್ಗೆ ನಿಮಗೆ ಸಂಪೂರ್ಣ ನಂಬಿಕೆ ಮೂಡಬೇಕು. ಇನ್ನು ಅಡುಗೆ ಕೆಲಸ ಮಾಡುವವರು, ಪುರೋಹಿತರು, ಜ್ಯೋತಿಷಿಗಳಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ವಧು/ವರ ದೊರೆಯುವ ಸಾಧ್ಯತೆಗಳಿವೆ. ಸೋಷಿಯಲ್ ಮೀಡಿಯಾಗಳ ಮೂಲಕ ಪರಿಚಯವಾದವರು ಆಪ್ತರಾಗುವ, ಸ್ನೇಹವು ಸಂಬಂಧಕ್ಕೆ ತಿರುಗುವ ಸಾಧ್ಯತೆಗಳಿವೆ. ಬಹಳ ಸಮಯದಿಂದ ನೀವು ನಿರೀಕ್ಷೆ ಮಾಡುತ್ತಿದ್ದ ಬೆಳವಣಿಗೆಯೊಂದು ನಡೆಯುವಂಥ ಸಾಧ್ಯತೆಗಳಿವೆ. ಈ ದಿ‌‌ನ ನರಸಿಂಹ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ, ಸಾಧ್ಯವಾದಲ್ಲಿ ಅಭಿಷೇಕವೋ ಅರ್ಚನೆಯೋ ಮಾಡಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಾನಾ ಕಾರಣಗಳಿಂದಾಗಿ ಅಥವಾ ನಿಮ್ಮನ್ನು ನೀವು ಬೇರೆಯವರ ಜತೆಗೆ ಹೋಲಿಕೆ ಮಾಡುವುದರಿಂದಾಗಿ ಈ ದಿನ ನಿಮ್ಮಲ್ಲಿ ಪಾಪ ಕರ್ಮಗಳ ಬಗ್ಗೆ ಆಸಕ್ತಿ ಹೆಚ್ಚು ಆಗುತ್ತವೆ. ಸಂಗಾತಿ ಬಗ್ಗೆ ಇಲ್ಲ ಸಲ್ಲದ ಅನುಮಾನ, ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಸೆಳೆತ ಇತ್ಯಾದಿ ಅನಪೇಕ್ಷಿತ ಆಲೋಚನೆಗಳು ಬರುತ್ತವೆ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಗಣಪತಿ- ಸುಬ್ರಹ್ಮಣ್ಯ ಆರಾಧನೆ ಮಾಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಅಡ್ವರ್ಟೈಸಿಂಗ್ ಏಜೆನ್ಸಿ ನಡೆಸುತ್ತಿರುವವರು, ಎಚ್ ಆರ್ ಏಜೆನ್ಸಿಗಳು ನಡೆಸುತ್ತಿರುವವರು, ಕಟ್ಟಡ ನಿರ್ಮಾಣ ವೃತ್ತಿಯಲ್ಲಿ ಇರುವವರಿಗೆ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾತುಕತೆ ಆಗುವ ಸಾಧ್ಯತೆ ಇದೆ. ಸ್ನೇಹಿತರು ಅಥವಾ ಸಂಬಂಧಿಕರ ಮೂಲಕವಾಗಿ ಈ ಅವಕಾಶ ಬರುವ ಸಾಧ್ಯತೆ ಇದೆ. ಕುಟುಂಬದವರ ತೀರ್ಥಯಾತ್ರೆಗಾಗಿ ಹಣ ಖರ್ಚು ಮಾಡಲಿದ್ದೀರಿ. ಎಣ್ಣೆಯಲ್ಲಿ ಕರಿದ ಪದಾರ್ಥ, ಮಸಾಲೆಯುಕ್ತ ಪದಾರ್ಥಗಳನ್ನು ಸೇವನೆ ಮಾಡಬೇಡಿ. ಅಲರ್ಜಿ ಆಗಬಹುದು.

ಲೇಖನ- ಎನ್‌.ಕೆ.ಸ್ವಾತಿ

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ