Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 30ರಿಂದ ಜುಲೈ 6ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 30ರಿಂದ ಜುಲೈ 6ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 30ರಿಂದ ಜುಲೈ 6ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 29, 2024 | 6:24 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 30ರಿಂದ ಜುಲೈ 6ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇತರರು ನಿಮ್ಮನ್ನು ನೋಡಿದಾಗ ಈ ವ್ಯಕ್ತಿ ಅದೆಷ್ಟು ಸಂತೋಷ, ನೆಮ್ಮದಿಯಿಂದ ಇದ್ದಾರೆ ಎಂದುಕೊಳ್ಳುತ್ತಾರೆ. ಆದರೆ ಅಂತರಂಗದಲ್ಲಿ ನಿಮಗೆ ಒಂದು ಬಗೆಯ ಬೇಸರ ಕಾಡುತ್ತದೆ. ನೀವು ಅಂದುಕೊಂಡಂತೆ ಬೆಳವಣಿಗೆಗಳು ಆಗಲಿಲ್ಲ- ಆಗುತ್ತಿಲ್ಲ ಎಂಬ ಜುಗುಪ್ಸೆ ನಿಮಗಿರುತ್ತದೆ. ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅಥವಾ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ತಮ್ಮ ತಾಯ್ನಾಡಿಗೆ ವಾಪಸ್ ಹೋಗಬೇಕು ಎಂಬ ಚಡಪಡಿಕೆ ಜಾಸ್ತಿ ಆಗುತ್ತದೆ. ವಾಹನ ಅಥವಾ ಫ್ಲ್ಯಾಟ್ ಗೆ ಮುಂಗಡ ನೀಡಿ, ಬುಕ್ ಮಾಡಿದಂಥವರಿಗೆ ನಿರೀಕ್ಷಿತ ಸಮಯದಲ್ಲಿ ಕೈ ಸೇರುವುದು ಅಸಾಧ್ಯ ಎಂಬುದು ಅರಿವಿಗೆ ಬರುತ್ತದೆ. ನಿಮ್ಮ ಕೈಯಲ್ಲಿರುವ ಹಣವು ಅಂದುಕೊಂಡ ಕೆಲವು ಉದ್ದೇಶಗಳಿಗೆ ಸಾಕಾಗುವುದಿಲ್ಲ ಎಂಬುದು ಗಮನಕ್ಕೆ ಬರಲಿದೆ. ನಿಮ್ಮಲ್ಲಿ ಕೆಲವರಿಗೆ ಬ್ಯಾಂಕ್ ವ್ಯವಹಾರಗಳಲ್ಲಿ ಅಧಿಕಾರಿಗಳ ಜತೆಗೆ ಅಭಿಪ್ರಾಯ ಭೇದಗಳು- ಮನಸ್ತಾಪಗಳು ಉದ್ಭವಿಸಲಿವೆ. ಕೃಷಿಕರಿಗೆ ನೀರಿನಿಂದ ತೊಂದರೆಗಳು ಆಗಲಿವೆ. ನಿಮ್ಮ ಗಮನಕ್ಕೆ ಬಾರದೆ ವಿಪರೀತ ನೀರು ಹರಿದು, ಬೆಳೆ- ಫಸಲು, ಉತ್ಪನ್ನಗಳ ನಷ್ಟವಾಗಬಹುದು. ಅಥವಾ ನೀವು ನೀರು ಹರಿಸುವುದಕ್ಕೋ ಅಥವಾ ನೀರು ಬಾರದಂತೆ ನೋಡಿಕೊಳ್ಳಿ ಎಂದು ಹೇಳಿರುವಂಥ ವ್ಯಕ್ತಿಯು ಅದನ್ನು ಸರಿಯಾಗಿ ಮಾಡದೆ ಅಥವಾ ಅದನ್ನು ಮರೆತುಬಿಟ್ಟು ಅದರಿಂದಾಗಿ ಸಮಸ್ಯೆಗಳಾಗಬಹುದು. ಬೇರೆಯವರಿಗೆ ಕೆಲಸ ಹೇಳಿದಲ್ಲಿ ಹೇಗಿದ್ದರೂ ಮಾಡಿಯೇ ಮಾಡುತ್ತಾರೆ ಎಂಬ ಅತಿಯಾದ ವಿಶ್ವಾಸ ಬೇಡ. ವೃತ್ತಿನಿರತರು ವಿಪರೀತ ಕೆಲಸದ ಒತ್ತಡದಲ್ಲಿ ಇರುತ್ತೀರಿ. ನಿಮ್ಮ ಮೇಲೆ ಇತರರಿಗೆ ನಿರೀಕ್ಷೆ ಜಾಸ್ತಿ ಆಗುತ್ತದೆ. ನಿಮ್ಮ ಜೊತೆಗೆ ಕೆಲಸ ಮಾಡುವಂಥವರು ತಮ್ಮ ಮೂಗಿನ ನೇರಕ್ಕೆ ಮಾತನಾಡುವುದರಿಂದ ನಿಮಗೆ ಬೇಸರಕ್ಕೆ ಕಾರಣವಾಗಲಿದೆ. ನೀವು ಒಪ್ಪಿಕೊಂಡ ಯಾವುದೇ ಕೆಲಸವನ್ನು ಪೂರ್ತಿಯಾಗಿ ಮಾಡುವುದಕ್ಕೆ ಸಮಯವನ್ನು ಮೀಸಲಿಡಿ. ಒಪ್ಪಂದದ ನವೀಕರಣ ಇದ್ದಲ್ಲಿ ಭಾರೀ ಚೌಕಾಶಿಗೆ ಇಳಿಯುತ್ತಾರೆ. ಆದಾಯದ ಮೂಲದಲ್ಲಿ ಏರಿಕೆ ಆಗಲಿದೆ ಎಂದು ನೀವು ಹಾಕಿಕೊಂಡಿದ್ದ ಲೆಕ್ಕಾಚಾರ ಅಂದುಕೊಂಡ ದಿಕ್ಕಿನಲ್ಲಿ ಸಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಸಣ್ಣ ಮಟ್ಟದಲ್ಲಿಯಾದರೂ ಕಿರಿಕಿರಿ ಎನಿಸುವುದಕ್ಕೆ ಶುರುವಾಗಲಿದೆ. ನಿಮ್ಮ ನಿರ್ಧಾರ, ವೈಯಕ್ತಿಕ ತೀರ್ಮಾನಗಳು, ಆದ್ಯತೆಗಳು ಹೀಗೆ ಎಲ್ಲದರಲ್ಲೂ ಜನ ಮೂಗು ತೂರಿಸಿಕೊಂಡು ಬಂದು, ಸವಾರಿ ಮಾಡುತ್ತಿದ್ದಾರೆ ಎಂದೆನಿಸಲಿದೆ. ಮೊದಲಿನಂತೆ ಸ್ವತಂತ್ರವಾಗಿ ಇರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹಲುಬಿಕೊಳ್ಳುವಂತಾಗುತ್ತದೆ. ಮಹಿಳೆಯರು ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಂದ ಚಿಂತೆಗೆ ಗುರಿ ಆಗುತ್ತೀರಿ. ವೈದ್ಯಕೀಯ ವೆಚ್ಚಗಳು ಹೆಚ್ಚಲಿವೆ. ಈ ವಾರ ದುರ್ಗಾದೇವಿಯ ಆರಾಧನೆಯನ್ನು ಮಾಡಿಕೊಳ್ಳುವುದರಿಂದ ನಿಮ್ಮ ಕೆಲವು ಸಮಸ್ಯೆಗಳು ಸಲೀಸಾಗಿ ಪರಿಹಾರ ಆದಂತಾಗುತ್ತದೆ. ಇನ್ನು ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಕೂಗಾಟ- ಕಿರುಚಾಟ ಬೇಡ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಹಾಕಿಕೊಂಡಿದ್ದ ಗುರಿಗಳು ಒಂದೊಂದಾಗಿ ಮುಗಿಯುತ್ತಾ ಬರುತ್ತವೆ. ಹಣಕಾಸಿನ ಸ್ಥಿತಿಯೂ ಈ ಹಿಂದಿಗಿಂತ ಉತ್ತಮವಾಗುತ್ತಾ ಸಾಗುತ್ತದೆ. ಇನ್ನು ನಿಮ್ಮಲ್ಲಿ ಕೆಲವರು ಆರ್ಥಿಕವಾಗಿ ಬಲಗೊಳ್ಳಬೇಕು ಎಂಬ ಕಾರಣಕ್ಕೆ ಹೆಚ್ಚಿನ ಲಾಭ ಅಥವಾ ದೀರ್ಘಾವಧಿಗೆ ಆದಾಯ ತರುವಂಥ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ವೈದ್ಯಕೀಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ನೀವು ಬಳಸುವಂಥ- ಸಂಸ್ಥೆಯಿಂದ ನಿಮಗೆ ನೀಡಿರುವಂಥ ಲ್ಯಾಪ್ ಟಾಪ್, ಡಾಂಗಲ್, ಹಾಟ್ ಸ್ಪಾಟ್ ಈ ರೀತಿಯಾದದ್ದನ್ನು ಜೋಪಾನವಾಗಿ ನೋಡಿಕೊಳ್ಳಿ. ಒಂದು ವೇಳೆ ನೀವೇನಾದರೂ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತೀರಿ ಅಂತಾದಲ್ಲಿ ಇಂಥ ವಸ್ತುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಮುಖ್ಯ. ವಿವಾಹ ವಯಸ್ಕರಾಗಿರುವವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯುವ ಸಾಧ್ಯತೆಗಳಿವೆ. ಕೃಷಿಕರಿಗೆ ಕೌಟುಂಬಿಕ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಮಕ್ಕಳ ಮದುವೆ, ಶಿಕ್ಷಣ ಮೊದಲಾದವುಗಳಿಗೆ ಹಣ ಹೊಂದಿಸುವುದು ಆದ್ಯತೆ ಪಡೆದುಕೊಳ್ಳುತ್ತವೆ. ಹೇಗೆ ಹಣ ಹೊಂದಿಸಬೇಕು ಎಂಬ ನಿಮ್ಮ ಆಲೋಚನೆಗೆ ಇತರರು ಸಹ ಒಪ್ಪಿಗೆ ಸೂಚಿಸಲಿದ್ದಾರೆ. ನಿಮ್ಮಲ್ಲಿ ಕೆಲವರಿಗೆ ಭೂಮಿ ಖರೀದಿ ಮಾಡುವಂತೆ ಸ್ನೇಹಿತರ ಮೂಲಕ ಪ್ರಸ್ತಾವ ಬರಲಿದೆ. ಇದನ್ನು ನೀವು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಸಹ ಇದೆ. ವೃತ್ತಿನಿರತರಿಗೆ ಗೌರವ- ಮರ್ಯಾದೆಗಳು ಮುಖ್ಯ ಎನಿಸುತ್ತವೆ. ಈಗ ನೀವು ಕಾರ್ಯ ನಿರ್ವಹಿಸುವಂಥ ಸ್ಥಳದಲ್ಲಿ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದೆನಿಸುವುದಕ್ಕೆ ಶುರು ಆಗಲಿದೆ. ಇದೇ ಕಾರಣಕ್ಕೆ ಹೊಸದಾಗಿ ನೀವೇ ಕಚೇರಿಯನ್ನು ಆರಂಭಿಸುವುದಕ್ಕೆ ಅಥವಾ ಹೊಸಬರ ಜತೆಗೆ ಪಾರ್ಟನರ್ ಷಿಪ್ ನಲ್ಲಿ ಮುಂದುವರಿಯುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಇನ್ನು ನಿಮ್ಮ ಗುರಿಗಾಗಿ ಇಲ್ಲಿಯ ತನಕ ಮಾಡಿರುವಂಥ ಉಳಿತಾಯ, ಹೂಡಿಕೆ ಹಣವನ್ನು ಹಿಂತೆಗೆದುಕೊಳ್ಳುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಇಂಟರ್ನ್ ಷಿಪ್ ದೊರೆಯುವ ಬಗ್ಗೆ ಸೂಚನೆ ದೊರೆಯಲಿದೆ. ಪ್ರವೇಶ ಪರೀಕ್ಷೆಗಳನ್ನು ಈಗಾಗಲೇ ಬರೆದಿದ್ದೀರಿ ಅಂತಾದಲ್ಲಿ ಅದರಲ್ಲಿ ನೀವು ಅಂದುಕೊಂಡಷ್ಟು ಅಂಕಗಳು ಬಾರದೆ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ಸಣ್ಣ ಅವಧಿಗಾದರೂ ವಿದೇಶಗಳಿಗೆ ಅಥವಾ ಕ್ಲೈಂಟ್ ಸ್ಥಳಗಳಿಗೆ ತೆರಳಬೇಕು ಎಂಬ ಬಗ್ಗೆ ಸೂಚಿಸಬಹುದು. ಇನ್ನು ಇದೇ ವೇಳೆ ಬಡ್ತೊ ದೊರೆಯುವ ಅವಕಾಶಗಳು ಸಹ ಇವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಯಾವ ವ್ಯಕ್ತಿಗಳಿಂದ ಏನೂ ಪ್ರಯೋಜನ ಆಗದು, ಯಾವ ರೀತಿಯಲ್ಲೂ ನೆರವಾಗುವುದಿಲ್ಲ ಅಂದುಕೊಂಡಿರುತ್ತೀರೋ ಅಂಥವರಿಂದ ದೊಡ್ಡ ಮಟ್ಟದಲ್ಲಿ ಸಹಾಯ ಆಗುತ್ತದೆ. ಬ್ಯಾಂಕ್ ನಲ್ಲಿ ದೊಡ್ಡ ಮಟ್ಟದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಇಷ್ಟು ಸಮಯ ಕಾಡುತ್ತಿದ್ದ ಅಡೆತಡೆಗಳು ನಿವಾರಣೆ ಆಗುತ್ತಿವೆ. ಸರ್ಕಾರದ ಯೋಜನೆಗಳಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಹ ಅದರಲ್ಲಿ ಅನುಕೂಲ ಆಗಿಬರುವ ಸೂಚನೆಗಳು ದೊರೆಯಲಿವೆ. ಪಿತ್ರಾರ್ಜಿತ ಆಸ್ತಿ ಬರಬೇಕಾಗಿದ್ದು, ಈ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಯುತ್ತಿದೆ ಎಂದಾದಲ್ಲಿ ಅದೊಂದು ತುದಿ ಮುಟ್ಟುವ ಸಾಧ್ಯತೆಗಳಿವೆ. ಕೆಲವರಿಗೆ ಇದು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವಂಥದ್ದಲ್ಲ ಅಥವಾ ಈ ವಿಚಾರದಲ್ಲಿ ತಮಗೆ ಅನ್ಯಾಯ ಆಗುತ್ತಿದೆ ಎಂದೆನಿಸಬಹುದು. ಆದರೆ ಆ ಕಾರಣಕ್ಕಾಗಿ ಸಿಟ್ಟಾಗಿ, ಕೂಗಾಟ- ಕಿರುಚಾಟ ಮಾಡಿಕೊಂಡಿರೋ ಏನೂ ಪ್ರಯೋಜನಕ್ಕೆ ಆಗದಂತೆ ಸನ್ನಿವೇಶ ಸೃಷ್ಟಿ ಆಗುತ್ತದೆ. ಇತರರ ಸಮಾಧಾನದ ಮಾತುಗಳನ್ನು ನಿಮ್ಮನ್ನು ಹಂಗಿಸುವುದಕ್ಕಾಗಿ ಆಡುತ್ತಿರುವುದು ಎಂದು ಭಾವಿಸಬೇಡಿ. ಕೃಷಿಕರಿಗೆ ಜಮೀನಿನಲ್ಲಿ ಅಥವಾ ನಿಮಗೆ ಇರುವಂಥ ಭೂಮಿಯಲ್ಲಿ ಗೋದಾಮು, ತಾತ್ಕಾಲಿಕವಾದ ಪಶು ಸಾಕಣೆ ಶೆಡ್ ಮೊದಲಾದವು ನಿರ್ಮಾಣ ಮಾಡುವುದಕ್ಕೆ ಸ್ಥಳವನ್ನು ಕೇಳಿಕೊಂಡು ಬರುವಂಥ ಯೋಗ ಇದೆ. ಬಾಡಿಗೆ ಅಥವಾ ಭೋಗ್ಯದ ಮೊತ್ತವನ್ನು ಸರಿಯಾಗಿ ಮಾತನಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ವೃತ್ತಿನಿರತರಿಗೆ ಮೊದಲಿನ ಉತ್ಸಾಹದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಿಮಗೆ ಬಹಳ ಆಪ್ತರಾದ ವ್ಯಕ್ತಿಯೊಬ್ಬರು ಇತರರ ಬಳಿ ಇಂಥ ಮಾತು ಆಡಿದರಂತೆ- ಅಂಥ ಮಾತು ಅಂದರಂತೆ ಎಂಬ ಮಾತುಗಳು ನಿಮ್ಮ ತನಕ ಬರುತ್ತದೆ. ನೀವು ಒಪ್ಪಿಕೊಂಡಂಥ ದೊಡ್ಡ ಕೆಲಸವೊಂದು ಮುಂದೇನು ಮಾಡುವುದು ಎಂಬ ಆತಂಕವನ್ನು ತಂದೊಡ್ಡುತ್ತದೆ. ನಿಮ್ಮ ಸ್ವಾಭಿಮಾನ, ಪ್ರತಿಷ್ಠೆ ಇವೆಲ್ಲಕ್ಕೂ ಪೆಟ್ಟು ಬೀಳಬಹುದು ಎಂಬ ಚಿಂತೆ ಬಲವಾಗಿ ಕಾಡುತ್ತದೆ. ವಿದ್ಯಾರ್ಥಿಗಳಿಗೆ ಮನೆಯಿಂದ ದೂರ ಇದ್ದು, ವ್ಯಾಸಂಗ ಮುಂದುವರಿಸಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಅಥವಾ ನೀವು ಈ ಹಿಂದೆ ಯಾವಾಗಲೋ ಕೇಳಿದ್ದಿರಿ ಎಂಬ ಕಾರಣಕ್ಕೆ ಕುಟುಂಬದಲ್ಲಿ ಮಾತುಕತೆಯಾಡಿ, ಹಾಸ್ಟೆಲ್ ಅಥವಾ ಪಿ.ಜಿಯಲ್ಲಿ ಇರಿಸಿ, ಓದಿಸುವುದಕ್ಕೆ ತೀರ್ಮಾನ ಮಾಡಬಹುದು. ಮಹಿಳೆಯರಿಗೆ ನಿಮ್ಮಲ್ಲಿ ಯಾರು ಡೈವೋರ್ಸ್ ಗಾಗಿ ಪ್ರಯತ್ನ ಮಾಡುತ್ತಿದ್ದೀರಿ, ಅಂಥವರಿಗೆ ವಿಚ್ಛೇದನ ದೊರೆಯಲಿದೆ. ಅದೇ ರೀತಿ ಎರಡನೇ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಕೂಡ ಕೂಡಿಬರಬಹುದು. ನಿಮಗೆ ಸಾಧ್ಯವಾದಲ್ಲಿ ವಿಷ್ಣುಸಹಸ್ರನಾಮ ಶ್ರವಣ ಅಥವಾ ಪಠಣ ಮಾಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮನೆ ಕಟ್ಟುವುದಕ್ಕೆ ಈಗಿನ್ನೂ ಆರಂಭಿಸಿದ್ದೀರಿ ಅಂತಾದಲ್ಲಿ ಯೋಜನೆಯಂತೆ ಮುಂದುವರಿಸಿಕೊಂಡು ಹೋಗುವುದು ಬಹಳ ಮುಖ್ಯವಾಗುತ್ತದೆ. ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಅಳತೆ ಮೀರಿ ಪ್ಲಾನ್ ಹಾಕಿಕೊಂಡಲ್ಲಿ ಆ ನಂತರ ಪರಿತಪಿಸುವಂತಾಗುತ್ತದೆ. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ನಿಯೋಜನೆ ಮೇಲೆ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಇನ್ನು ಯಾರು ಬಡ್ತಿ, ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದೀರಿ ಈ ಬಗ್ಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಆದರೆ ಇದಕ್ಕಾಗಿ ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನಿತ್ಯದ ಕೆಲಸಗಳಲ್ಲಿ ಕೆಲವು ಮಟ್ಟಿಗೆ ಗೊಂದಲ ಏರ್ಪಡಬಹುದು. ಇನ್ನೊಬರು ಮಾಡುತ್ತಾರೆ ಎಂದುಕೊಂಡು ನೀವು ಹಾಗೂ ನೀವೇ ಮಾಡುತ್ತಿರಿ ಎಂದುಕೊಂಡು ಇತರರು ಗೊಂದಲ ಮಾಡಿಕೊಂಡು ಕೆಲಸವು ಕೊನೆ ಕ್ಷಣದ ಹಾಗೇ ಬಾಕಿ ಉಳಿದುಹೋಗುವ ಸಾಧ್ಯತೆ ಇದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರೆಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಇರುವವರಿಗೆ ಆದಾಯ ಜಾಸ್ತಿ ಆಗುವ ಜತೆಗೆ ಹೆಸರು, ಕೀರ್ತಿ ಹಾಗೂ ಮನ್ನಣೆ ಕೂಡ ಜಾಸ್ತಿ ಆಗುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ಆಯೋಜನೆ ಆಗಲಿದೆ. ಇದಕ್ಕಾಗಿ ಹಣಕಾಸು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ವೃತ್ತಿನಿರತರು ಹೊಸ ವಾಹನ, ಲ್ಯಾಪ್ ಟಾಪ್, ಕಚೇರಿಗೆ ಬೇಕಾದಂಥ ಸಲಕರಣೆಗಾಗಿ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ. ಇದಕ್ಕಾಗಿ ಹಣಕಾಸಿನ ಹೊಂದಾಣಿಕೆ ಮಾಡಬೇಕಾಗುತ್ತದೆ. ಬ್ಯಾಂಕ್ ಗಳಲ್ಲಿ ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಇದಕ್ಕೆ ಕೆಲವರು ಉತ್ತೇಜನ ನೀಡಲಿದ್ದಾರೆ. ಇದರ ಜತೆಗೆ ಕೆಲವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕಡಿಮೆ ಆಗಬಹುದು. ಪಠ್ಯೇತರ ಸಂಗತಿಗಳಲ್ಲಿ ನಿಮ್ಮ ಮನಸ್ಸು ವಾಲುವುದರಿಂದ ಮನೆಯಲ್ಲಿ ಕೂಡ ಆಕ್ಷೇಪಣೆಗಳು ಕೇಳಿಬರಲಿವೆ. ನಿಮಗೆ ಯಾವುದರಲ್ಲೂ ಆಸಕ್ತಿಯಿಲ್ಲ ಎಂದು ನಿಂದೆ ಮಾತುಗಳನ್ನು ಸಹ ಕೇಳಿಸಿಕೊಳ್ಳಬೇಕಾಗುತ್ತದೆ. ಗ್ಯಾಜೆಟ್ ಗಳನ್ನು ಖರೀದಿಸಲೇಬೇಕು ಎಂದು ಹಠ ಹಿಡಿಯುವುದಕ್ಕೆ ಹೋಗಬೇಡಿ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಇದ್ದಲ್ಲಿ ಏಳ್ಗೆ ಸಾಧ್ಯತೆಗಳು ಹೆಚ್ಚಾಗಿವೆ. ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಕಡೆಗೆ ಗಮನವನ್ನು ನೀಡಬೇಕು. ಸರ್ಕಾರದ ಹಣ ಸಹಾಯ ಅಥವಾ ಒಂದು ವೇಳೆ ಅರ್ಜಿ ಹಾಕಿಕೊಂಡಿದ್ದಲ್ಲಿ ಸೈಟು- ಭೂಮಿ ಸಹ ದೊರೆಯಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಹಣಕಾಸಿನ ವಿಚಾರಕ್ಕೋ ಕೆಲಸಗಳನ್ನು ಮಾಡಿಸಿಕೊಡುವುದಾಗಿಯೋ ಈ ಹಿಂದೆ ಯಾವಾಗಲೋ ಕೊಟ್ಟ ಮಾತಿಗೆ ಈಗ ಪಶ್ಚಾತ್ತಾಪ ಪಡುವಂತಾಗುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಿ, ಇನ್ನೇನು ಕೆಲಸ ಕಳೆದುಕೊಂಡು ಬಿಟ್ಟೆ ಎಂಬ ಆತಂಕಕ್ಕೆ ಗುರಿ ಆಗುತ್ತೀರಿ. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರದಂತೆ ಜಾಗ್ರತೆಯನ್ನು ವಹಿಸಿ. ಇನ್ನು ಈಗಾಗಲೇ ಬಿಪಿ- ಶುಗರ್ ಇರುವಂಥವರಿಗೆ ಭುಜ, ಮೀನಖಂಡ, ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಪಾರ್ಟಿಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ವೇಗ ದೊರೆಯುತ್ತದೆ. ಮನೆಗೆ ಹೊಸ ವಸ್ತುಗಳನ್ನು ತರಲಿದ್ದೀರಿ. ಕೃಷಿಕರಿಗೆ ಇಷ್ಟು ಸಮಯ ನೀವು ಕಲಿಯಬೇಕು ಎಂದುಕೊಂಡಿದ್ದಂಥ ಹೊಸ ವಿಚಾರಗಳನ್ನು ಕಲಿಯುವ ಯೋಗ ಇದೆ. ಇನ್ನು ಇದೇ ಕಾರಣಕ್ಕಾಗಿ ದೂರ ಪ್ರಯಾಣ ಮಾಡುವ ಯೋಗ ಇದೆ. ಪಶು ಸಾಕಣೆ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಡೇರಿ ವ್ಯವಹಾರವನ್ನು ಈಗಾಗಲೇ ಮಾಡುತ್ತಿದ್ದಲ್ಲಿ ಆದಾಯದ ಹರಿವು ಉತ್ತಮವಾಗಲಿದೆ. ಇನ್ನು ಮಕ್ಕಳ ಸಲುವಾಗಿ ಹೊಸ ವಾಹನವನ್ನು ಖರೀದಿಸಲಿದ್ದೀರಿ. ಒಟ್ಟಿನಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದ್ದು, ಕುಟುಂಬದಲ್ಲಿ ವೃದ್ಧಿ ಕಾರ್ಯಗಳು ನಡೆಯಲಿವೆ. ವೃತ್ತಿನಿರತರು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ವಿಲಾಸಿಯಾದ ಕಾರು ಖರೀದಿ ಮಾಡುವಂಥ ಯೋಗ ಇದೆ. ಒಂದು ವೇಳೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದಿರುವವರು ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ, ಹೊಸದನ್ನೇ ಕೊಂಡುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ನೀವು ಇದಕ್ಕಾಗಿ ಮಾಡುವ ಸಾಲವೋ ಅಥವಾ ಬೇರೆ ರೀತಿ ಹಣದ ಹೊಂದಾಣಿಕೆಯನ್ನೋ ಬೇಗ ಹಿಂತಿರುಗಿಸುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ನಿರ್ಧಾರದ ಬಗ್ಗೆ ಆತಂಕಗೊಳ್ಳಬೇಡಿ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ಆದ್ದರಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವ ಯಾವುದೇ ಅವಕಾಶವನ್ನೂ ಕೈ ಚೆಲ್ಲಬೇಡಿ. ಇನ್ನು ಕೆಲವು ಸ್ಥಳಗಳಿಗೆ ತೆರಳಬೇಕಾದ ವ್ಯಕ್ತಿಗಳು ಬಾರದೆ ಅಲ್ಲಿಗೆ ನೀವೇ ಹೋಗಬೇಕಾದ ಸ್ಥಿತಿ ಉದ್ಭವಿಸಲಿದೆ. ಮಹಿಳೆಯರು ವಾಹನ ಚಲಾಯಿಸುವಂತಿದ್ದರೆ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ನೋ ಪಾರ್ಕಿಂಗ್, ಒನ್ ವೇ ಅಂಥ ಕಡೆ ವಾಹನ ನಿಲ್ಲಿಸಿ, ದಂಡ ಬೀಳುವ ಸಾಧ್ಯತೆ ಸಹ ಇದೆ. ಅನಿವಾರ್ಯ ಅಂತಲ್ಲದಿದ್ದರೆ ಇದೊಂದು ವಾರ ವಾಹನ ಚಲಾಯಿಸಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಯಾರ ಮುಲಾಜು ನೋಡುವುದಿಲ್ಲ, ನೇರಾನೇರ ಮಾತನಾಡುತ್ತೇನೆ ಎಂದುಕೊಳ್ಳುವುದು, ಅವಮಾನ ಮಾಡಿದವರಿಗೆ ಅಲ್ಲಿಯೇ ಉತ್ತರ ನೀಡುತ್ತೇನೆ ಎಂದು ಹೊರಡುವುದು ಸರಿಯಲ್ಲ. ಏಕೆಂದರೆ ಎಲ್ಲ ಸಮಯದಲ್ಲೂ ನೇರವಂತಿಕೆ ಕೆಲಸಕ್ಕೆ ಬರುವುದಿಲ್ಲ. ನೀವು ಹೇಳುವ ವಿಚಾರ ಸರಿಯೇ ಇರಬಹುದು, ಅದರಿಂದ ಲಾಭವೇ ಆಗಬಹುದು. ಆದರೆ ಇಂಥ ವಿಚಾರವನ್ನು ಹೇಗೆ ಎದುರಿಗಿರುವವರಿಗೆ ದಾಟಿಸುತ್ತೀರಿ ಎಂಬುದು ಬಹಳ ಮುಖ್ಯವಾದ ಸಂಗತಿ. ನಿಮಗೆ ಈ ವಾರ ತುಂಬ ಮುಖ್ಯವಾದ ಸೂಚನೆ ಏನೆಂದರೆ, ಸಾಧ್ಯವಾದಷ್ಟೂ ಸಿಟ್ಟು ಕಡಿಮೆ ಮಾಡಿಕೊಳ್ಳಿ. ಪದಗಳನ್ನು ಆಡುವಾಗ ಅದರ ಪರಿಣಾಮದ ಬಗ್ಗೆ ಮುಂಚಿತವಾಗಿಯೇ ಅಂದಾಜು ಮಾಡಿಕೊಳ್ಳಿ. ಯಾರದೋ ಉದ್ಧಾರ ನಾನು ಮಾಡಿಬಿಡ್ತೀನಿ ಎಂಬ ಭ್ರಮೆ ಬೇಡ. ಇತರರ ಆತ್ಮಗೌರವಕ್ಕೆ ಚ್ಯುತಿ ಆಗುವಂಥ ಮಾತುಗಳನ್ನು ಆಡಬೇಡಿ. ಇದರಿಂದ ನಿಮ್ಮದೇ ಕೆಲಸಕ್ಕೆ ಪೆಟ್ಟು ಬೀಳಬಹುದು. ಇನ್ನು ಪೂರ್ತಿ ಮಾಹಿತಿ ಇಲ್ಲದ ಹೊರತು ಯಾವುದೇ ವಸ್ತುವಿನ ಬೆಲೆಯನ್ನು ಹೇಳಲಿಕ್ಕೆ ಹೋಗದಿರಿ. ಕೃಷಿಕರಿಗೆ ಅವರ ಕೆಲಸಕ್ಕೆ ಬೇಕಾದ ವಾಹನವನ್ನು ಖರೀದಿಸುವಂಥ ಯೋಗ ಇದೆ. ಅದರಲ್ಲೂ ಸೆಕೆಂಡ್ ಹ್ಯಾಂಡ್ ವಾಹನವನ್ನು ಕೊಳ್ಳುವಂಥ ಯೋಗ ಇದೆ. ಇದಕ್ಕಾಗಿ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿ ಸಾಲವನ್ನು ಪಡೆಯುವ ಯೋಗ ಇದೆ. ನಿಮಗೆ ಜಾಮೀನಿನ ಅಗತ್ಯ ಕಂಡುವಂದಲ್ಲಿ ಅದಕ್ಕೆ ಸಹ ಪ್ರಭಾವಿಗಳು ಶಿಫಾರಸು ಮಾಡಲಿದ್ದಾರೆ. ಇನ್ನು ಮನೆಯಲ್ಲಿ ಕೆಲವು ಸಣ್ಣ- ಪುಟ್ಟ ದುರಸ್ತಿಗಳನ್ನು ಮಾಡಿಸಿಕೊಳ್ಳಲು ಅಥವಾ ಗೋಡೌನ್, ಪಶು ಸಾಕಣೆಗೆ ಬೇಕಾದಂಥ ವ್ಯವಸ್ಥೆ ಮಾಡಿಕೊಳ್ಳಲು ಹಣ ಖರ್ಚಾಗಲಿದೆ. ವೃತ್ತಿನಿರತರು ತಮ್ಮ ಸೋಷಿಯಲ್ ಕಾಂಟ್ಯಾಕ್ಟ್ ವೃದ್ಧಿ ಮಾಡಿಕೊಳ್ಳಲಿದ್ದೀರಿ. ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಹೊಸ ಕ್ಲೈಂಟ್ ಗಳು ದೊರೆಯಲಿದ್ದಾರೆ. ಮನೆಯಲ್ಲಿ ಆಯೋಜಿಸಿದ ದೇವತಾ ಕಾರ್ಯಗಳಿಗೆ ಖರ್ಚು ಮಾಡಲಿದ್ದೀರಿ. ಶಾಶ್ವತವಾದ ಆದಾಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಿದ್ದೀರಿ. ವಿದ್ಯಾರ್ಥಿಗಳು ಆಟೋಟಗಳು, ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಸ್ಕಾಲರ್ ಷಿಪ್ ದೊರೆಯುವ ಸಾಧ್ಯತೆಗಳಿವೆ. ಮಹಿಳೆಯರು ಸ್ವಂತ ಉದ್ಯಮ, ವ್ಯವಹಾರ ನಡೆಸುತ್ತಿರುವವರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ, ಮೆಚ್ಚುಗೆ ದೊರೆಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮನೆ- ಅಪಾರ್ಟ್ ಮೆಂಟ್ ಸಂಬಂಧಿಸಿದ ಆಸ್ತಿ ಪತ್ರಗಳ ಸರ್ಟಿಫೈಡ್ ಕಾಪಿ, ಇಸಿ, ವಂಶವೃಕ್ಷ ಮೊದಲಾದ ದಾಖಲಾತಿಗಳನ್ನು ಸರಿ ಹೊಂದಿಸುವುದಕ್ಕೆ ನಿಮ್ಮ ಹೆಚ್ಚಿನ ಸಮತ ಹೋಗುತ್ತದೆ. ಆದರೆ ಈ ಅವಧಿಯಲ್ಲಿ ನೀವು ಕೈಗೆತ್ತಿಕೊಂಡ ಕೆಲಸ ಮುಗಿಸುವುದರೊಳಗೆ ಸಾಕು ಬೇಕಾಗುತ್ತದೆ. ಯಾರದೋ ಓಲೈಕೆಗಾಗಿ ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ, ನಿಮ್ಮೆದುರು ಕಾಣುವಂತೆಯೇ ಬೆನ್ನ ಹಿಂದೆಯೂ ಜನರು ಹಾಗೇ ಇರುತ್ತಾರೆ ಎಂಬ ಭಾವನೆಯಿದ್ದಲ್ಲಿ ಹೊರಬನ್ನಿ. ನಿಮ್ಮ ಪಾಲಿಗೆ ಬರುವಂಥ ಉದ್ಯೋಗ ಸ್ಥಳದ ಯಾವ ಅವಕಾಶವನ್ನೂ ಬೇರೆಯವರಿಗೆ ಬಿಟ್ಟುಕೊಡಲು ಹೋಗದಿರಿ. ನಿಂತು ಕೆಲಸ ಮಾಡುವಂಥ ಉದ್ಯೋಗದಲ್ಲಿ ಇರುವವರಿಗೆ ಕಾಲು ನೋವಿನ ಸಮಸ್ಯೆ ತೀವ್ರವಾಗಿ ಕಾಣಿಸಿಕೊಳ್ಳಬಹುದು, ಇದರ ಜತೆಗೆ ಅಥವಾ ಬೆನ್ನು ಹುರಿಯ ವಿಪರೀತ ನೋವು ಕಾಣಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಿಕೊಳ್ಳದಿರಿ. ಫೋನ್ ನಲ್ಲಿ ಮಾತನಾಡುವಾಗ ಇತರರ ವೈಯಕ್ತಿಕ ವಿಚಾರಗಳ ಚರ್ಚೆ ಮಾಡದಿರುವುದು ಉತ್ತಮ. ಹಾಗೊಂದು ವೇಳೆ ಮಾಡಿದಲ್ಲಿ ನಿಮ್ಮ ವಿರುದ್ಧ ಅಪಪ್ರಚಾರ, ಶತ್ರುತ್ವ ಬೆಳೆದುಬಿಡುತ್ತದೆ. ಕೃಷಿಕರು ತಾಳ್ಮೆ- ಸಂಯಮದಿಂದ ಇರುವುದು ಮುಖ್ಯವಾಗುತ್ತದೆ. ನಿಮಗೆ ಸನ್ಮಾನ ಸಮಾರಂಭಗಳನ್ನು ಆಯೋಜಿಸಿರುವುದಾಗಿ ಕೆಲವರ ಮೂಲಕ ಮಾಹಿತಿ ಬರಬಹುದು. ಆದರೆ ಆ ಬಗ್ಗೆ ಪೂರ್ತಿಯಾಗಿ ಒಳ್ಳೆ ಸುದ್ದಿ ಬರುವ ಮುನ್ನವೇ ಸಂಭ್ರಮಾಚರಣೆಯನ್ನು ಮಾಡುವುದಕ್ಕೆ ಆರಂಭಿಸಬೇಡಿ. ಅದೇ ರೀತಿಯಾಗಿ ಕೋರ್ಟ್- ಕಚೇರಿ ವಿಚಾರಗಳೇ ಇರಬಹುದು ಅಥವಾ ರಾಜಕಾರಣ, ಸಂಘ- ಸಂಸ್ಥೆಗಳ ಹುದ್ದೆಗಳ ಆಯ್ಕೆಯ ವಿಚಾರವೇ ಇರಬಹುದು. ವಿಷಯ ಖಾತ್ರಿ ಆಗುವ ಮೊದಲೇ ಸಂಭ್ರಮಿಸುವುದು ಬೇಡ. ಮನೆಯ ದುರಸ್ತಿ ಮಾಡಿಸಬೇಕು ಅಥವಾ ಈಗಾಗಲೇ ಇರುವಂಥ ಗೋದಾಮು, ಸಂಗ್ರಹಾಗಾರಗಳ ವಿಸ್ತರಣೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದೀರಿ. ವೃತ್ತಿನಿರತರಿಗೆ ತಮ್ಮ ಕೈ ಕೆಳಗೆ ಕೆಲಸ ಮಾಡುತ್ತಿರುವವರ ಬಗ್ಗೆ ನಾನಾ ದೂರುಗಳು ಕೇಳಿಬರಲಿವೆ. ಅದರಲ್ಲೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಆರೋಪ- ನಿಂದೆ ಕೇಳಿಬರಲಿದೆ. ಆದ್ದರಿಂದ ನೀವು ಇತರ ಕಡೆಗೆ ನಿಯೋಜನೆ ಮಾಡಿರುವ ಸಿಬ್ಬಂದಿಯ ಕೆಲಸಗಳ ಬಗ್ಗೆ ಸಂಬಂಧಪಟ್ಟವರಿಗೆ ಆಗಿಂದಾಗಲೇ ಅಪ್ ಡೇಟ್ ಮಾಡುವುದು ಉತ್ತಮ. ಇನ್ನು ವಿದ್ಯಾರ್ಥಿಗಳು, ಅದರಲ್ಲೂ ಸ್ನಾತಕೋತ್ತರ ಪದವಿ ಮಾಡುತ್ತಿರುವವರು ನಿಮಗೆ ಸಂಬಂಧವೇ ಪಡದ ವಿಚಾರಗಳಿಗೆ ಆಪ್ತರು- ಸ್ನೇಹಿತರ ಎದುರು ಅನುಮಾನಕ್ಕೆ ಗುರಿ ಆಗಬೇಕಾಗುತ್ತದೆ. ಸ್ವಂತಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಅನಿವಾರ್ಯವಾಗಿ ಇತರರಿಗೆ ಕೊಡಬೇಕಾಗಬಹುದು. ಮಹಿಳೆಯರು ರಾಜಕಾರಣದಲ್ಲಿ ಇರುವವರಾಗಿದ್ದಲ್ಲಿ ನಿಮಗಿಂತ ಪ್ರಭಾವಿ ಹುದ್ದೆಯಲ್ಲಿ ಇರುವವರು ತನ್ನ ಕೆಲವು ಕೆಲಸಗಳನ್ನು ನಿಮಗೆ ವಹಿಸಬಹುದು. ಇದರಿಂದಾಗಿ ಕೆಲಸದ ಒತ್ತಡ ಜಾಸ್ತಿ ಆಗಲಿದೆ. ತಾತ್ಕಾಲಿಕವಾಗಿಯಾದರೂ ವಿರಾಮ ಬೇಕು ಎಂಬ ಸನ್ನಿವೇಶ ಇದ್ದರೂ ನೀವು ಆ ಬಗ್ಗೆ ಕೇಳಿದ ಮೇಲೆ ಇಲ್ಲ ಎಂಬ ಉತ್ತರ ಬರುತ್ತದೆ. ಇದರಿಂದ ಒತ್ತಡ ಹೆಚ್ಚಾಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಅಂದುಕೊಂಡ ರೀತಿಯಲ್ಲಿ ಆದಾಯದ ಹರಿವು ಇರುವುದಿಲ್ಲ. ಹಣ ನೀಡುತ್ತೇನೆ ಎಂದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಬಹುದು. ಅದೇ ರೀತಿ ಯಾರು ಸ್ವಂತ ವ್ಯವಹಾರ, ಉದ್ಯಮ ಮಾಡುತ್ತಿದ್ದೀರಿ ಅಂಥವರಿಗೆ ಆದಾಯದಲ್ಲಿ ಇಳಿಕೆ ಆಗಲಿದೆ. ಸಾಲ ನೀಡಿದ್ದ ಹಲವರು ಅದನ್ನು ಹಿಂತಿರುಗಿಸುವಂತೆ ಒಂದೇ ಸಮಯಕ್ಕೆ ಕೇಳಲಿದ್ದಾರೆ. ನಿಮ್ಮಲ್ಲಿ ಕೆಲವರು ಬ್ಯಾಂಕ್ ನಲ್ಲಿ ಸಾಲ ಮಾಡಬಹುದು ಅಥವಾ ಚಿನ್ನವನ್ನು ಅಡಮಾನ ಮಾಡಿ, ಹಣವನ್ನು ಪಡೆದುಕೊಳ್ಳಬಹುದು. ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಸಮಸ್ಯೆ ಉಲ್ಬಣ ಆಗಬಹುದು. ಸ್ವಯಂ ವೈದ್ಯ ಮಾಡಿಕೊಳ್ಳುವುದರ ಬದಲು ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಬಗ್ಗೆ ಲಕ್ಷ್ಯ ನೀಡಿ. ಮಾಲ್ ಗಳಲ್ಲಿ, ಚಿತ್ರಮಂದಿರಗಳಲ್ಲಿ, ಪಿಜ್ಜಾ ಮಳಿಗೆಗಳಲ್ಲಿ ಕಾರ್ಯ ನಿರ್ವಹಿಸುವವರು ವಾಹನ ಚಲಾಯಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಚೀಟಿಯಲ್ಲಿ ಹಣ ಹಾಕಿರುವವರು ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುವುದಕ್ಕೆ ನಿರ್ಧರಿಸಲಿದ್ದೀರಿ. ಪ್ರಯಾಣದಲ್ಲಿ ಇರುವವರು ಬೆಲೆ ಬಾಳುವ ವಸ್ತುಗಳ ಕಡೆಗೆ ಲಕ್ಷ್ಯ ನೀಡಿ. ಕೃಷಿಕರು ಮನೆಯಲ್ಲಿ ಇರುವಂಥ ಪ್ರಮುಖ ಕಾಗದ- ಪತ್ರಗಳು ಇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದರ ನಕಲು ತೆಗೆಸುವುದಕ್ಕೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತೀರಿ ಎಂದಾದರೆ ಜೋಪಾನವಾಗಿ ವಾಪಸ್ ತಂದು, ಮನೆಯಲ್ಲಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ. ಸರ್ಕಾರಿ ಯೋಜನೆಗಳಿಗಾಗಿ ಅಪ್ಲೈ ಮಾಡಿದವರಿಗೆ ಅದರ ಲಾಭ ದೊರೆಯುವುದು ಇನ್ನಷ್ಟು ತಡವಾಗುವಂಥ ಸೂಚನೆ ದೊರೆಯಲಿದೆ. ಆದರೆ ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳದಿರಿ. ವೃತ್ತಿನಿರತರು ಪೊಲೀಸ್ ಠಾಣೆ, ಕೋರ್ಟ್- ಕಚೇರಿ ಎಂದು ಸುತ್ತಾಡುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಮಾಡುತ್ತಿರುವ ವೃತ್ತಿಯಲ್ಲಿ ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ. ನೀವು ನೀಡಿದ ರಸೀದಿಯಲ್ಲಿ ತಪ್ಪುಗಳು ಉಳಿಯದಂತೆ ನೋಡಿಕೊಳ್ಳಿ. ಒಂಚೂರು ನಿರ್ಲಕ್ಷ್ಯ ಮಾಡಿದರೂ ದೊಡ್ಡ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ತಮ್ಮ ಮೇಲೆ ನಂಬಿಕೆ ಉಳಿಸಿಕೊಳ್ಳುವುದು ಹರಸಾಹಸ ಆಗಲಿದೆ. ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ. ಅನುಮಾನಗಳನ್ನು ಪರಿಹರಿಸುವ ರೀತಿಯಲ್ಲಿ ಉತ್ತರವನ್ನು ನೀಡಿ. ಮಹಿಳೆಯರು ಗಾಸಿಪ್ ಗಳಿಂದ ದೂರ ಉಳಿಯುವುದು ಬಹಳ ಮುಖ್ಯ. ನಿಮಗೆ ಮಾಹಿತಿಯೇ ಇಲ್ಲದ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮಲ್ಲಿ ಯಾರು ಫಾರ್ಮ್ ಹೌಸ್ ಗಳ ಮೇಲೆ ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಿದ್ದೀರಿ ಅಂಥವರು ತಾತ್ಕಾಲಿಕವಾಗಿ ನಿರ್ಧಾರವನ್ನು ಮುಂದೂಡಬೇಕು ಎಂದುಕೊಳ್ಳುವ ಸಾಧ್ಯತೆ ಇದೆ. ಮನೆ, ಅಪಾರ್ಟ್ ಮೆಂಟ್ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವಂಥ ಯೋಗ ಇದೆ. ಒಂದು ವೇಳೆ ಈಗಾಗಲೇ ಸಿಕ್ಕಿಯಾಗಿದೆ ಅಂತಾದಲ್ಲಿ ಬ್ಯಾಂಕ್ ಲೋನ್ ಗಾಗಿ ಪ್ರಯತ್ನಿಸಿದಲ್ಲಿ ಸಾಲ ಮಂಜೂರು ಆಗುವಂಥ ಯೋಗ ಇದೆ. ಮನೆಗೆ ವಾಟರ್ ಫಿಲ್ಟರ್ ಅಥವಾ ನೀರಿನ ಶುದ್ಧತೆಗೆ ಸಂಬಂಧಿಸಿದಂಥ ಉಪಕರಣಗಳನ್ನು ಖರೀದಿ ಮಾಡಲಿದ್ದೀರಿ. ಸ್ಟ್ಯಾಂಡಪ್ ಕಾಮಿಡಿ, ಮ್ಯಾಜಿಕ್, ಅರ್ಥಶಾಸ್ತ್ರ ಉಪನ್ಯಾಸ ನೀಡುವವರಿಗೆ ಆದಾಯವು ಹೆಚ್ಚಾಗುವುದಕ್ಕೆ ಮಾರ್ಗ ಗೋಚರ ಆಗಲಿದೆ. ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಕೆಲಸದ ಬಗ್ಗೆ ಮಾಹಿತಿ ದೊರೆಯಬಹುದು. ಇನ್ನು ಈಗಾಗಲೇ ಇಂಟರ್ ವ್ಯೂ ನೀಡಿಯಾಗಿದೆ ಎಂದಾದಲ್ಲಿ ಕೆಲಸ ಸಿಗಲಿದೆ. ಸಂಗಾತಿಯ ಜತೆಗಿನ ಮಾತುಕತೆ ವಾದ- ವಾಗ್ವಾದಕ್ಕೆ ಹೋಗದಂತೆ ನೋಡಿಕೊಳ್ಳುವ ಕಡೆಗೆ ಗಮನ ಕೊಡಿ. ಕೃಷಿಕರು ಅಧ್ಯಯನ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಸರ್ಕಾರದಿಂದ ಸಹಾಯಧನ ಅಥವಾ ಅನುದಾನಗಳನ್ನು ನಿರೀಕ್ಷೆ ಮಾಡುತ್ತಿರುವವರಿಗೆ ಅದು ದೊರೆಯಲಿದೆ. ನೀವು ಮಾಡಿದ ಹೊಸ ಕೃಷಿ ಪ್ರಯೋಗಗಳು ಫಲ ನೀಡುವುದಕ್ಕೆ ಆರಂಭವಾಗುತ್ತದೆ. ಕೃಷಿ ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿರುವಂಥವರಿಗೆ ಪ್ರಭಾವಿಗಳ ಶಿಫಾರಸು ದೊರೆಯಲಿದೆ. ಸಂಬಂಧಿಗಳ ಅಥವಾ ಸ್ನೇಹಿತರು ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಲಿದ್ದಾರೆ. ಇತರರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ಕೆಲಸವನ್ನು ಮಾಡಿ ಮುಗಿಸುವುದರಲ್ಲಿ ಯಶಸ್ವಿ ಆಗಲಿದ್ದೀರಿ. ವೃತ್ತಿನಿರತರು ಗ್ಯಾಜೆಟ್, ಲ್ಯಾಪ್ ಟಾಪ್ ಹೀಗೆ ವೃತ್ತಿಗೆ ಸಂಬಂಧಿಸಿದ್ದನ್ನು ಖರೀದಿಸುವಂಥ ಯೋಗ ಇದೆ. ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡುವುದಕ್ಕೆ ಯೋಜನೆಯನ್ನು ರೂಪಿಸಲಿದ್ದೀರಿ. ಜತೆಯಲ್ಲಿ ಕೆಲಸ ಮಾಡುವವರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರನ್ನು ನೇಮಿಸಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡಲಿದ್ದೀರಿ. ಸ್ವಂತ ಕಚೇರಿ ಇರುವವರು ದುರಸ್ತಿಗೆ ಸ್ವಲ್ಪ ಮಟ್ಟದ ಹಣವನ್ನು ಖರ್ಚು ಮಾಡಲಿದ್ದೀರಿ. ವಿದ್ಯಾರ್ಥಿಗಳು ಸ್ನೇಹಿತರ ಮಧ್ಯೆ ಜನಪ್ರಿಯರಾಗಲಿದ್ದೀರಿ. ಶಿಕ್ಷಣ ಸಂಸ್ಥೆಯಲ್ಲಿ ನಾಯಕರಾಗಿ ಆಯ್ಕೆಯಾಗುವ ಯೋಗ ಸಹ ಇದ್ದು, ಇತರರು ನಿಮ್ಮನ್ನು ಅಚ್ಚರಿಯಿಂದ ನೋಡುವಂತಾಗುತ್ತದೆ. ಮಹಿಳೆಯರಿಗೆ ಮಕ್ಕಳ ಸಾಧನೆಯಿಂದ ಮನಸ್ಸಿಗೆ ನೆಮ್ಮದಿ, ತೃಪ್ತಿ ದೊರೆಯಲಿದೆ. ಗೆಳತಿ- ಗೆಳೆಯರ ಭೇಟಿಯಿಂದ ಮನಸ್ಸಿಗೆ ಸಂತೋಷ ದೊರೆಯಲಿದೆ.

ಲೇಖನ- ಎನ್‌.ಕೆ.ಸ್ವಾತಿ

ತಾಜಾ ಸುದ್ದಿ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?