ಬೆಂಗಳೂರಿಗೆ ಪ್ರಜ್ವಲ್ ಬಂದಿಳಿದ ಕೂಡಲೇ ಬಂಧನ: ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸ್​ ಸಜ್ಜು

ಅತ್ಯಾಚಾರ ಆರೋಪಿ ಪ್ರಜ್ವಲ್‌ ಕೊನೆಗೂ ಬೆಂಗಳೂರಿನ ವಿಮಾನ ಏರಿದ್ದಾರೆ. ಇಂದು ಸಂಜೆಯೇ ಪ್ರಯಾಣ ಆರಂಭಿಸಿರುವ ಸಂಸದ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಇತ್ತ ಎಸ್‌ಐಟಿ ಏರ್‌ಪೋರ್ಟ್‌ನಲ್ಲಿ ಠಿಕಾಣಿ ಹೂಡಿದೆ. ಪ್ರಜ್ವಲ್​ ಕೆಐಎಬಿಗೆ ಬಂದಿಳಿದ ಕೂಡಲೇ ಬಂಧನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈಗಾಗಲೇ ಜನಪ್ರತಿನಿಧಿಗಳ ಕೋರ್ಟ್‌ ಅರೆಸ್ಟ್‌ ವಾರಂಟ್ ಜಾರಿ ಮಾಡಿದ್ದು, ಈ ಹಿನ್ನೆಲೆ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗುವುದು.

ಬೆಂಗಳೂರಿಗೆ ಪ್ರಜ್ವಲ್ ಬಂದಿಳಿದ ಕೂಡಲೇ ಬಂಧನ: ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸ್​ ಸಜ್ಜು
ಬೆಂಗಳೂರಿಗೆ ಪ್ರಜ್ವಲ್ ಬಂದಿಳಿದ ಕೂಡಲೇ ಬಂಧನ: ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸ್​ ಸಜ್ಜು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:May 30, 2024 | 7:42 PM

ಬೆಂಗಳೂರು, ಮೇ 30: 34 ದಿನಗಳ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ. ಇವತ್ತು ಬರ್ತೀನಿ, ನಾಳೆ ಬರ್ತೀನಿ ಎಂದು ಕಣ್ಣಾಮುಚ್ಚಾಲೆ ಆಟ ಬಂದ್ ಆಗಿದೆ. ಅತ್ಯಾಚಾರ ಆರೋಪಿ ಪ್ರಜ್ವಲ್‌ (Prajwal Revanna) ಕೊನೆಗೂ ಬೆಂಗಳೂರಿನ ವಿಮಾನ ಏರಿದ್ದಾರೆ. ಇಂದು ಸಂಜೆಯೇ ಪ್ರಯಾಣ ಆರಂಭಿಸಿರುವ ಸಂಸದ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಇತ್ತ ಎಸ್‌ಐಟಿ (SIT) ಏರ್‌ಪೋರ್ಟ್‌ನಲ್ಲಿ ಠಿಕಾಣಿ ಹೂಡಿದೆ. ಪ್ರಜ್ವಲ್​ ಕೆಐಎಬಿಗೆ ಬಂದಿಳಿದ ಕೂಡಲೇ ಬಂಧನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈಗಾಗಲೇ ಜನಪ್ರತಿನಿಧಿಗಳ ಕೋರ್ಟ್‌ ಅರೆಸ್ಟ್‌ ವಾರಂಟ್ ಜಾರಿ ಮಾಡಿದ್ದು, ಈ ಹಿನ್ನೆಲೆ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗುವುದು.

ಕೆಐಎಬಿಗೆ ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳಿಂದ ರಾಜತಾಂತ್ರಿಕ ಪಾಸ್‌ಪೋರ್ಟ್‌ ಸೇರಿ ಕೆಲ ದಾಖಲಾತಿಗಳ ಪರಿಶೀಲನೆ ಮಾಡಲಾಗುವುದು. ಬಳಿಕ ಏರ್‌ಪೋರ್ಟ್‌ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಬಳಿಕ SITಗೆ ಮಾಹಿತಿ ನೀಡಲಿದ್ದಾರೆ.

ಇದನ್ನೂ ಓದಿ: Prajwal Revanna: ಅಶ್ಲೀಲ ವಿಡಿಯೋ ಪ್ರಕರಣ: ಮ್ಯೂನಿಕ್​​ನಿಂದ ಬೆಂಗಳೂರಿನತ್ತ ಹೊರಟ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಈಗಾಗಲೇ ಲುಕ್‌ಔಟ್‌, ಬ್ಲೂಕಾರ್ನರ್‌ ನೋಟಿಸ್ ಹೊರಡಿಸಲಾಗಿತ್ತು. ಬಂಧನ ಪ್ರಕ್ರಿಯೆ ಕೈಗೊಳ್ಳುತ್ತಿದ್ದಂತೆ ಕುಟುಂಬದವರಿಗೆ SIT ಮಾಹಿತಿ ನೀಡಲಿದೆ. ಬಳಿಕ ಏರ್‌ಪೋರ್ಟ್‌ನಿಂದ ಅಧಿಕಾರಿಗಳು ಎಸ್‌ಐಟಿ ಕಚೇರಿಗೆ ಕರೆತರಲಿದ್ದಾರೆ.

ಪ್ರಜ್ವಲ್​ ಕರೆತರಲು ಸುಗಮ ಸಂಚಾರಕ್ಕೆ ಅನುವು

ಇಂದು ಮಧ್ಯರಾತ್ರಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಪ್ರಜ್ವಲ್‌ ಆಗಮಿಸಲಿದ್ದು, ಕೆಐಎಬಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ. SIT ಅಧಿಕಾರಿಗಳಿಂದ ಸೂಚನೆ ಹಿನ್ನೆಲೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಇಂದು ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ; ಏ.21ರಿಂದ ಈವರೆಗೆ ಏನೇನಾಯ್ತು? ಕೇಸ್​ನ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ

ಇನ್ನು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗಿದೆ. ಟರ್ಮಿನಲ್ 2ರಲ್ಲಿ ವಾಹನಗಳನ್ನ ನಿಲ್ಲಿಸಲು ಪೊಲೀಸರು ಪರಿಶೀಲಿಸಿದ್ದಾರೆ.

ಇನ್ನು ಏರ್‌ಪೋರ್ಟ್‌ನ ಟರ್ಮಿನಲ್‌ ಒಳಗೆ ತೆರಳಲು ಎಸ್‌ಐಟಿ ಸಿದ್ದತೆ ನಡೆಸಿದೆ. 8 ರಿಂದ 10 ಅಧಿಕಾರಿಗಳಿಗೆ ಪಾಸ್‌ ನೀಡುವಂತೆ ಪತ್ರ ಬರೆದಿದೆ. ರಾತ್ರಿ 10 ಗಂಟೆ ಸುಮಾರಿದೆ ಎಸ್‌ಐಟಿ ಅಧಿಕಾರಿಗಳು ಆಗಮಿಸಲಿದ್ದಾರೆ. ಇನ್ನು ಪ್ರಜ್ವಲ್‌ನನ್ನ ಏರ್‌ಪೋರ್ಟ್‌ನಿಂದ ಕರೆತರೋ ವೇಳೆ ಭದ್ರತಾ ಸಮಸ್ಯೆ ಆಗದಂತೆ ಅಲರ್ಟ್ ಆಗಿರೋ ಪೊಲೀಸರು ಇವತ್ತು ಸಭೆ ನಡೆಸಿದ್ರು. ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್‌, ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ ದಯಾನಂದ್‌ ಜತೆ ಚರ್ಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:38 pm, Thu, 30 May 24