ಹಾರುತ ದೂರಾ ದೂರ! 3 ವರ್ಷ ವಿರಾಮದ ಬಳಿಕ ಹಾರುಹಕ್ಕಿಗಳು ಕರ್ನಾಟಕದ ಕಡೆಗೆ ವಲಸೆ ಬರುತಿವೆ, ಕಾರಣವೇನು ಗೊತ್ತಾ?

migratory birds: ಪರಿಸರ ಸ್ನೇಹಿ ಕರ್ನಾಟಕ ರಾಜ್ಯದ ದಕ್ಷಿಣ ಮತ್ತು ಕರಾವಳಿ ಪ್ರದೇಶದಲ್ಲಿ ವಲಸೆ ಹಕ್ಕಿಗಳು ಮತ್ತೆ ಅಟೆಂಡೆನ್ಸ್​ ಹಾಕುತ್ತಿವೆ. ಆದರೆ ರಾಜ್ಯದ ಉತ್ತರ ಭಾಗಗಳಲ್ಲಿ ಅಷ್ಟಾಗಿ ಹಾರು ಹಕ್ಕಿಗಳು ದೂರದೂರಿಂದ ಬರುತ್ತಿಲ್ಲ ಎಂಬುದನ್ನು ಪಕ್ಷಿ ವೀಕ್ಷಕರು ಮತ್ತು ಪಕ್ಷಿ ತಜ್ಞರು ಗಮನಿಸಿದ್ದಾರೆ

ಹಾರುತ ದೂರಾ ದೂರ! 3 ವರ್ಷ ವಿರಾಮದ ಬಳಿಕ ಹಾರುಹಕ್ಕಿಗಳು ಕರ್ನಾಟಕದ ಕಡೆಗೆ ವಲಸೆ ಬರುತಿವೆ, ಕಾರಣವೇನು ಗೊತ್ತಾ?
3 ವರ್ಷ ವಿರಾಮದ ಬಳಿಕ ಹಾರುಹಕ್ಕಿಗಳು ಪ್ರವಾಸಕ್ಕೆ ಕರ್ನಾಟಕದ ಕಡೆಗೆ ವಲಸೆ
Follow us
ಸಾಧು ಶ್ರೀನಾಥ್​
|

Updated on: Nov 13, 2023 | 8:58 AM

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಳೆಯ ಅತಿವೃಷ್ಟಿಯಿಂದ ಪ್ರತಿ ವರ್ಷ ಪಕ್ಷಿಗಳ ವಲಸೆ ಕಾರ್ಯಕ್ರಮ ವ್ಯತ್ಯಯಗೊಂಡಿತ್ತು. ಆದರೆ ಈ ವರ್ಷ ಅದು ಚುರುಕುಗೊಂಡಿದೆ. ವಲಸೆ ಸೀಸನ್‌ ಆರಂಭವಾಗುತ್ತಿದ್ದಂತೆ ಚಳಿಗಾಲದ ಹಲವಾರು ಆಶ್ರಯ ತಾಣಗಳು ಪಕ್ಷಿಗಳಿಗೆ ಹಿತವಾಗಿ ಪರಿಣಮಿಸಿದೆ ಎಂದು ಪಕ್ಷಿ ವೀಕ್ಷಕರು ಹೇಳುತ್ತಿದ್ದಾರೆ. ಮೀನುಗಳು, ಕೀಟಗಳು ಮತ್ತು ಇತರ ಬೇಟೆಯ ತುತ್ತುಗಳು ಸುಲಭವಾಗಿ ಲಭ್ಯವಾಗುವುದರಿಂದ ಪಕ್ಷಿಗಳಿಗೆ ಆಹಾರದ ಬಟ್ಟಲಿನಂತೆ ಕಾರ್ಯನಿರ್ವಹಿಸುತ್ತಿದ್ದ ಕೆರೆ ಕುಂಟೆಗಳು ಕಳೆದ ಮೂರು ವರ್ಷಗಳಿಂದ ಅಧಿಕ ಮಳೆಯಿಂದಾಗಿ ಪ್ರವಾಹದಿಂದ ತುಂಬಿಹರಿಯತೊಡಗಿತ್ತು. ಅದರಿಂದ ಮೀನುಗಳೂ ಹೊರಬೀಳುತ್ತಿದ್ದವು. ಹಾಗಾಗಿ ಪಕ್ಷಿಗಳಿಗೆ ಆಹಾರದ ತುತ್ತು ಇಲ್ಲದಾಗಿತ್ತು.

ಪರಿಸರ ಸ್ನೇಹಿ ಕರ್ನಾಟಕ ರಾಜ್ಯದ ದಕ್ಷಿಣ ಮತ್ತು ಕರಾವಳಿ ಪ್ರದೇಶದಲ್ಲಿ (southern and coastal Karnataka) ವಲಸೆ ಹಕ್ಕಿಗಳು (migratory birds) ಮತ್ತೆ ಅಟೆಂಡೆನ್ಸ್​ ಹಾಕುತ್ತಿವೆ. ಆದರೆ ರಾಜ್ಯದ ಉತ್ತರ ಭಾಗಗಳಲ್ಲಿ ಅಷ್ಟಾಗಿ ಹಾರು ಹಕ್ಕಿಗಳು ದೂರದೂರಿಂದ ಬರುತ್ತಿಲ್ಲ ಎಂಬುದನ್ನು ಪಕ್ಷಿ ವೀಕ್ಷಕರು ಮತ್ತು ಪಕ್ಷಿ ತಜ್ಞರು ಗಮನಿಸಿದ್ದಾರೆ (Bird watchers).

ಯುರೋಪ್, ಹಿಮಾಲಯ ಪ್ರದೇಶ ಮತ್ತು ಆರ್ಕ್ಟಿಕ್‌ ಪ್ರದೇಸಗಳಿಂದ ರಾಪ್ಟರ್‌ಗಳು, ಷವೆಲೆರ್​​​ಗಳು, ಬಾತುಕೋಳಿಗಳು, ಟರ್ನ್‌ಗಳು, ಸ್ಯಾಂಡ್‌ಪೈಪರ್‌ಗಳು, ಪ್ಲೋವರ್‌ಗಳು ಮತ್ತಿತರ ಸುಕೋಮಲ ಪಕ್ಷಿಗಳು ಒಳನಾಡಿನ ಜಲಮೂಲಗಳು, ಹಿನ್ನೀರು ಪ್ರದೇಶಗಳು, ಕರಾವಳಿ, ಪಶ್ಚಿಮ ಘಟ್ಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿವೆ. ಕರ್ನಾಟಕದ ಈ ಭಾಗಗಳು ಮಧ್ಯ ಏಷ್ಯಾದ ಮಧ್ಯೆ ಹಾದುಹೋಗುವ ಫ್ಲೈವೇ ( ಪಕ್ಷಿಗಳ ಹಾರು ಮಾರ್ಗ) ಆಗಿದೆ. ತೀವ್ರ ಚಳಿಯಿಂದ ಪಾರಾಗಲು ಆ ಸುಕೋಮಲ ಪಕ್ಷಿಗಳು ಕಂಡುಕೊಂಡ ಹಿತವಾದ ಪ್ರದೇಶಗಳು ಇವಾಗಿವೆ.

ಬೆಂಗಳೂರು ಮೂಲದ ಹಿರಿಯ ಪಕ್ಷಿ ವೀಕ್ಷಕ ಸುಬ್ರಹ್ಮಣಯ್ಯ ಹೇಳುವಂತೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿ ಸಂಕುಲಕ್ಕೆ ಪ್ರಶಸ್ತವಾದ ಹುಲ್ಲುಗಾವಲು ಮತ್ತು ಜಲಮೂಲಗಳಿಗೆ ಈಗಾಗಲೇ ಹಲವಾರು ಜಾತಿಯ ವಲಸೆ ಹಕ್ಕಿಗಳು ಬರಲಾರಂಭಿಸಿವೆ. “ಕಪ್ಪು-ರೆಕ್ಕೆಯ ಸ್ಟಿಲ್ಟ್, ಯುರೇಷಿಯನ್ ಸ್ಪೂನ್‌ಬಿಲ್, ಗಾಡ್ವಿಟ್ಸ್ ಮತ್ತಿತರ ಪಕ್ಷಿಗಳು ಸಾಮಾನ್ಯವಾಗಿ ನವೆಂಬರ್ ಮೊದಲ ವಾರದ ವೇಳೆಗೆ ತಮ್ಮ ರೂಸ್ಟ್ ಸೈಟ್‌ಗಳಲ್ಲಿ ಇಳಿಯಲು ಪ್ರಾರಂಭಿಸಿವೆ. ಆದಾಗ್ಯೂ, ಈ ವರ್ಷ ಅಕ್ಟೋಬರ್ ಕೊನೆಯ ವಾರದ ವೇಳೆಗೆ ಹಲವಾರು ತಾಣಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ವಲಸೆ ಹಕ್ಕಿಗಳು ಕಂಡುಬಂದಿವೆ ಎಂದು deccanherald ವರದಿ ಮಾಡಿದೆ.

ಇದನ್ನೂ ಓದಿ:  ದಿನಪೂರ್ತಿ ರಾಜಕೀಯದಲ್ಲೇ ಉಸಿರಾಡುವ ಜನನಾಯಕನ ಪ್ರಕೃತಿ ಹಾಗೂ ಪ್ರಾಣಿ ಪ್ರೇಮ

ಈ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಪಕ್ಷಿಗಳು ಬೇಗನೆ ಬರಲು ಸಹಾಯ ಮಾಡಿರಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ. ಕರ್ನಾಟಕಕ್ಕೆ ಬಂದಿರುವ ಒಟ್ಟು ಜಾತಿಗಳು ಮತ್ತು ಪಕ್ಷಿಗಳ ಸಂಖ್ಯೆಯ ಎಷ್ಟು ಎಂಬುದರ ಬಗ್ಗೆ ಜನವರಿ ವೇಳೆಗೆ ಒಂದು ಸ್ಪಷ್ಟ ಚಿತ್ರಣವನ್ನು ಸಿಗಲಿದೆ ಎಂದು ಅವರು ಹೇಳಿದರು.

ಕರಾವಳಿಯಲ್ಲೂ ಪಕ್ಷಿ ವೀಕ್ಷಕರು ವಲಸೆ ಹಕ್ಕಿಗಳನ್ನು ಕಂಡು ಸಂತಸ ಪಟ್ಟಿದ್ದಾರೆ. ಟಿಬೆಟಿಯನ್ ಸ್ಯಾಂಡ್‌ಪ್ಲೋವರ್‌ಗಳು, ಗ್ರೇಟರ್ ಸ್ಯಾಂಡ್‌ಪ್ಲೋವರ್‌ಗಳು, ಕೆಂಟಿಶ್ ಪ್ಲೋವರ್‌ಗಳು, ಯುರೇಷಿಯನ್ ವಿಂಬ್ರೆಲ್ಸ್, ಕರ್ಲ್ವ್ ಸ್ಯಾಂಡ್‌ಪೈಪರ್‌ಗಳು, ಬ್ರಾಡ್-ಬಿಲ್ಡ್ ಸ್ಯಾಂಡ್‌ಪೈಪರ್‌ಗಳು ಮತ್ತು ಡನ್ಲಿನ್‌ಗಳು ಮಂಗಳೂರು ಮತ್ತು ಉಡುಪಿ ಕರಾವಳಿಯಲ್ಲಿ ಉತ್ತಮ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಇದನ್ನೂ ಓದಿ: Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಕಡೆ, ನವೆಂಬರ್ 15 ರಿಂದ 5 ದಿನಗಳ ಕಾಲ ಮಳೆ

ಕರಾವಳಿ ಕರ್ನಾಟಕ ಬರ್ಡ್‌ ವಾಚರ್ಸ್ ನೆಟ್‌ವರ್ಕ್ ಸಂಸ್ಥಾಪಕ ಶಿವ ಶಂಕರ್ ಹೇಳುವಂತೆ ದಶಕದ ಹಿಂದೆ ಇದ್ದಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೂ ನಿತ್ಯ ವಲಸೆ ಹಕ್ಕಿಗಳು ತೀರಕ್ಕೆ ಬರಲಾರಂಭಿಸಿವೆ. ಕಳೆದ ಎರಡು ವರ್ಷಗಳಲ್ಲಿ ತೀರದಲ್ಲಿ ಪಕ್ಷಿವೀಕ್ಷಕರಿಗೆ ತುಲನಾತ್ಮಕವಾಗಿ ನಿರಾಸೆಯಾಗಿತ್ತು, ಏಕೆಂದರೆ ಕೆಲವೇ ಕೆಲವು ಪಕ್ಷಿಗಳು ತಮ್ಮ ವಾರ್ಷಿಕ ಪ್ರಯಾಣವನ್ನು ಮಾಡಿದವು. ಆದರೆ, ಈ ವರ್ಷ ಇನ್ನಷ್ಟು ತಳಿಗಳನ್ನು ಕಾಣುವ ಭರವಸೆ ಇದೆಯಂತೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ  ಕ್ಲಿಕ್ ಮಾಡಿ