ಬರದಿಂದ ಕಂಗೆಟ್ಟ ರೈತರಿಗೆ ಗೋವಿನ ಜೋಳ ಬೆಳೆ ಟಾನಿಕ್: ಬೆಲೆ ಹೆಚ್ಚಾದರೂ ಖುಷಿ ಪಡದ ರೈತರು, ಇಲ್ಲಿದೆ ಅಸಲಿ ಕಾರಣ
Bagalakote News: ಹಿಂಗಾರು ಮಳೆ ಕೂಡ ನಿರಾಸೆ ಮೂಡಿಸಿದೆ. ಇದರಿಂದ ಕೃಷಿ ಉತ್ಪನ್ನದಲ್ಲಿ ಭಾರಿ ಇಳಿಮುಖವಾಗಿ ಧಾನ್ಯಗಳ ಬೆಲೆ ಏರುತ್ತಿದೆ. ಇದೀಗ ಗೋವಿನಜೋಳ ರೇಟ್ ಕೂಡ ಚೆನ್ನಾಗಿದೆ. ಒಂದು ಕ್ವಿಂಟಲ್ಗೆ 2300 ರೂ. ಇದ್ದು ಇದು ಗೋವಿನ ಜೋಳದ ಮಟ್ಟಿಗೆ ಒಂದೊಳ್ಳೆ ಬೆಲೆಯಾಗಿದೆ. ಆದರೆ ಇಷ್ಟು ಒಳ್ಳೆಯ ಬೆಲೆ ಇದ್ದರೂ ಬಾಗಲಕೋಟೆ ರೈತರು ಮಾತ್ರ ಸಂಭ್ರಮ ಪಡದಂತಾಗಿದೆ.
ಬಾಗಲಕೋಟೆ, ನವೆಂಬರ್ 07: ಮುಂಗಾರು ಮಳೆ ಕೈಕೊಟ್ಟು ರೈತರು (farmers) ಕಂಗಾಲಾಗಿದ್ದಾರೆ. ಸಾಲು ಸೋಲ ಮಾಡಿ ಬಿತ್ತಿದ ಬೆಳೆಯ ಕಣ್ಣೆದುರೆ ಹಾಳಾಗೋದನ್ನು ಕಂಡು ಮುಮ್ಮಲ ಮರಗಿದ್ದಾರೆ. ಇನ್ನು ಹಿಂಗಾರು ಮಳೆ ಕೂಡ ಕೈ ಕೊಟ್ಟಿದ್ದು, ರೈತರ ಬದುಕು ಭರವಸೆಯಿಲ್ಲದ ದೋಣಿಯಂತಾಗಿದೆ. ಈ ಮಧ್ಯೆ ಇದೀಗ ಗೋವಿನ ಜೋಳ ಬೆಳೆ ಫಸಲು ಬಂದಿದೆ. ಉತ್ತಮ ಬೆಲೆ ಕೂಡ ಸಿಕ್ಕಿದೆ. ಆದರೆ ರೈತರು ಮಾತ್ರ ಬೆಲೆ ಏರಿದೆ ಅಂತ ಖುಷಿಪಡುವ ಹಾಗಿಲ್ಲ.
ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಎಲ್ಲ ಬೆಳೆಗಳು ಮಳೆಯಿಲ್ಲದೆ ಹಾಳಾಗಿವೆ. ಹಿಂಗಾರು ಮಳೆ ಕೂಡ ನಿರಾಸೆ ಮೂಡಿಸಿದೆ. ಇದರಿಂದ ಕೃಷಿ ಉತ್ಪನ್ನದಲ್ಲಿ ಭಾರಿ ಇಳಿಮುಖವಾಗಿ ಧಾನ್ಯಗಳ ಬೆಲೆ ಏರುತ್ತಿದೆ. ಇದೀಗ ಗೋವಿನಜೋಳ ರೇಟ್ ಕೂಡ ಚೆನ್ನಾಗಿದೆ. ಒಂದು ಕ್ವಿಂಟಲ್ಗೆ 2300 ರೂ. ಇದ್ದು ಇದು ಗೋವಿನ ಜೋಳದ ಮಟ್ಟಿಗೆ ಒಂದೊಳ್ಳೆ ಬೆಲೆಯಾಗಿದೆ. ಆದರೆ ಇಷ್ಟು ಒಳ್ಳೆಯ ಬೆಲೆ ಇದ್ದರೂ ರೈತರು ಸಂಭ್ರಮ ಪಡದಂತಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಗಗನಕ್ಕೇರಿದ ಈರುಳ್ಳಿ ದರ: ಗ್ರಾಹಕರ ಕಣ್ಣಲ್ಲಿ ನೀರು, ಖುಷಿಪಡದ ರೈತಾಪಿ ವರ್ಗ
ಇದಕ್ಕೆ ಕಾರಣ ಹೊಲದಲ್ಲಿ ಬಾರಿ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗಿರೋದು. ಒಣಬೇಸಾಯ ಗೋವಿನ ಜೋಳವಂತೂ ಎಲ್ಲವೂ ಲಾಸ್ ಆಗಿದೆ. ನೀರಾವರಿ ಗೋವಿನಜೋಳ ಮಾರುಕಟ್ಟೆಗೆ ಬಂದಿದೆ. ಆದರೆ ಅದರಲ್ಲೂ ಇಳುವರಿ ಕಡಿಮೆ ಆಗಿದೆ. ಬಾಗಲಕೋಟೆ ತಾಲ್ಲೂಕಿನ ಸುಳಿಕೇರಿ ಗ್ರಾಮದ ರೈತ ಸುರೇಶ್ ಕಳೆದ ವರ್ಷ ಮೂರು ಎಕರೆಯಲ್ಲಿ 200 ಕ್ವಿಂಟಲ್ ಬೆಳೆದಿದ್ದರು. ಆದರೆ ಈ ವರ್ಷ ಆರು ಎಕರೆಯಲ್ಲಿ ನೂರು ಕ್ವಿಂಟಲ್ ಮಾತ್ರ ಬೆಳೆದಿದ್ದಾರೆ. ಇದರಿಂದ ದರ ಹೆಚ್ಚಿದರೂ ಖುಷಿ ಪಡುವಂತ ಸ್ಥಿತಿಯಲ್ಲಿ ರೈತರಿಲ್ಲ.
ಹೊಲದಲ್ಲಿ ತೆನೆ ಹಿಡಿಯದ ಕಾರಣ ಒಂದುವರೆ ತಿಂಗಳ ಹಿಂದೆ ಇವರು ಗೋವಿನ ಜೋಳವನ್ನು ಕಡಿದು ದನಕರುಗಳಿಗೆ ಹಾಕಲಾಗುತ್ತಿದೆ. ಇದು ಮಳೆ ಇಲ್ಲದ ಪರಿಣಾಮ ಇಳುವರಿ ಕಡಿಮೆ ಹೊಡೆತಕ್ಕೆ ಸಾಕ್ಷಿಯಾಗಿದೆ. ಇಳುವರಿ ಇಲ್ಲದ ಕಾರಣಕ್ಕೆ ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟೆಗೂ ಗೋವಿನ ಜೋಳ ಬರುವ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಇದನ್ನೂ ಓದಿ: ನಮಗೆ ಸರ್ಕಾರದ ಗ್ಯಾರಂಟಿಗಳು ಬೇಕಾಗಿಲ್ಲ, ಇರುಳ್ಳಿ ಬೆಲೆ ಕಡಿಮೆ ಮಾಡಿ ಎಂದ ಗೃಹಿಣಿ
ಸಾವಿರಾರು ಕ್ಷಿಂಟಲ್, ಟನ್ ಗಟ್ಟಲೇ ಗೋವಿನಜೋಳದಿಂದ ತುಂಬಿ ತುಳುಕುತ್ತಿದ್ದ ಎಪಿಎಮ್ಸಿ ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಇರದೆ ಸೊರಗಿದಂತಾಗಿದೆ. ಬಾಗಲಕೋಟೆ ಎಪಿಎಮ್ಸಿಯಲ್ಲಿ ಕಳೆದ ವರ್ಷ ಗೋವಿನಜೋಳ ಸೀಜನ್ ನಲ್ಲಿ 1,6,0103 ಕ್ವಿಂಟಲ್ ಬಂದಿತ್ತು. ಈ ಅವಧಿಯಲ್ಲಿ 7 ಸಾವಿರ ಕ್ಷಿಂಟಲ್ ಬಂದಿತ್ತು. ಆದರೆ ಈ ವರ್ಷ ಮುಂಗಾರು ಮಳೆಯಿಲ್ಲ ಬರದ ಪರಿಸ್ಥಿತಿಯಿಂದ ಇಳುವರಿ ಕಡಿಮೆಯಾಗಿ ಈಗ ಕೇವಲ 5 ಸಾವಿರ ಕ್ವಿಂಟಲ್ ಬಂದಿದೆ.
ಗೋವಿನಜೋಳ ಇಳುವರಿ ಕಡಿಮೆಯಿದ್ದ ಕಾರಣ ಎಪಿಎಮ್ ಸಿ ವರ್ತಕರಿಗೂ ಸಂತಸವಿಲ್ಲ. ಇಷ್ಟೊತ್ತಿಗೆ ಸಾವಿರಾರು ಕ್ವಿಂಟಲ್ ಗೋವಿನಜೋಳ ಖರೀದಿ ಮಾಡುತ್ತಿದ್ದ ವರ್ತಕರು ಈ ನಾರಾಟು ಕ್ವಿಂಟಲ್ ಲೆಕ್ಕದಲ್ಲಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೂ ಗೋವಿನಜೋಳ ಇಳುವರಿ ಎಫೆಕ್ಟ್ ನೀಡಿದೆ.
ಗೋವಿನ ಜೋಳಕ್ಕೆ ಒಳ್ಳೆಯ ಬೆಲೆ ಸಿಕ್ಕಿದೆ. ಆದರೆ ಹೊಲದಲ್ಲಿ ಬೆಳೆಯೇ ಇಲ್ಲದ ರೈತರು ನೆಮ್ಮದಿ ಪಡುವಂತಿಲ್ಲ. ಕೆಲವೇ ಕೆಲ ನೀರಾವರಿ ರೈತರಿಗೆ ಗೋವಿನಜೋಳ ಲಾಭ ತರುತ್ತಿದ್ದು, ಬಹುತೇಕ ರೈತರು ಉತ್ತಮ ಬೆಲೆ ಇದೆ ಇದೆ ಮಾಲು ಇಲ್ವಲ್ಲಾ ಎಂದು ಕೈ ಹಿಸುಕಿಕೊಳ್ಳುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:30 pm, Tue, 7 November 23