ವಕೀಲೆ ಮೇಲೆ ಹಲ್ಲೆ ಪ್ರಕರಣ; ವಕೀಲೆ ಸಂಗೀತಾ ಶಿಕ್ಕೇರಿ, ರಮೇಶ್ ಬದ್ನೂರ ವಿರುದ್ಧ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ವಕೀಲೆ ಸಂಗೀತಾ ಶಿಕ್ಕೇರಿ, ವಕೀಲರಾದ ರಮೇಶ್ ಬದ್ನೂರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಬಾಗಲಕೋಟೆ: ಜಿಲ್ಲೆಯಲ್ಲಿ ವಕೀಲೆ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ವಕೀಲೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಎಚ್ಚರಿಕೆ ಕೊಟ್ಟಿದ್ದಾರೆ. ವಕೀಲೆ ಸಂಗೀತಾ ಶಿಕ್ಕೇರಿ, ವಕೀಲರಾದ ರಮೇಶ್ ಬದ್ನೂರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಹಲ್ಲೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಹಲ್ಲೆ ನಡೆದ ದಿನ ನಾನು ಊರಲ್ಲೇ ಇರಲಿಲ್ಲ. ಅದಾಗ್ಯೂ ಪ್ರಕರಣದಲ್ಲಿ ನನ್ನ ಹೆಸರು ಎಳೆದು ತಂದಿದ್ದಾರೆ. ನನ್ನ ತೇಜೋವಧೆ ಮಾಡಲಾಗ್ತಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗ್ತಿದೆ. ಸಂಗೀತಾ ಮೇಲೆ ಹಲ್ಲೆ ಆಗಬಾರದಿತ್ತು. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಒಂದು ಕೋಟಿ ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ದಲಿತ ಮುಖಂಡನ ಮೇಲೆ ಶೋಷಣೆ ಹಾಗೂ ಚಾರಿತ್ರ್ಯವಧೆ ಸಹ ಸಹಜವಾಗಿ ಜಾತಿನಿಂದನೆ ಕೇಸ್ ಆಗುತ್ತದೆ. ಇನ್ನು ಆಸ್ತಿ ವಿವಾದವನ್ನು ನಾನು ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳುತ್ತೇನೆ. ಆದರೆ, ಹಲ್ಲೆ ಪ್ರಕರಣದಲ್ಲಿ ನನ್ನ ತೇಜೋವಧೆ ಮಾಡಿದ್ದಕ್ಕೆ 1 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಮುಖಂಡ ರಾಜು ನಾಯ್ಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಬಿಸಿ ಕೋಟಾಕ್ಕೆ ಸುಪ್ರೀಂ ಒಪ್ಪಿಗೆ; ಕಾಂಗ್ರೆಸ್ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಟೀಕಾ ಪ್ರಹಾರ
ಹಲ್ಲೆಗೊಳಗಾದ ಬಾಗಲಕೋಟೆ ವಕೀಲೆ ಪರ ವಕೀಲರ ಬೃಹತ್ ಪ್ರತಿಭಟನೆ ಬಾಗಲಕೋಟೆಯಲ್ಲಿ ಮೇ 14ರಂದು ಗಿಫ್ಟ್ ಸೆಂಟರ್ ಮಾಲೀಕ ಮಹಾಂತೇಶ್ ಚೊಳಚಗುಡ್ಡ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಮಾಡಿದ್ದು, ರಾಜ್ಯ, ದೇಶಾದ್ಯಂತ ಗಮನ ಸೆಳೆದಿದೆ. ಪೊಲೀಸರಿಗೆ ತನ್ನ ಪಕ್ಕದ ಮನೆ ತೋರಿಸಿದ ಅಂತ ಶುರುವಾದ ಜಗಳ ವಕೀಲೆ ಹಾಗೂ ಮಹಾಂತೇಶ್ ಮಧ್ಯೆ ಮಾರಾಮಾರಿಗೆ ಕಾರಣವಾಗಿತ್ತು. ಕೆರೂಡಿ ಆಸ್ಪತ್ರೆ ಬಡಾವಣೆಯಲ್ಲಿ ಮಹಾಂತೇಶ್ ಚೊಳಚಗುಡ್ಡ ಗಿಫ್ಟ್ ಸೆಂಟರ್ ಮುಂದೆ ವಕೀಲೆ ಸಂಗೀತಾ ಶಿಕ್ಕೇರಿಯನ್ನು ಒದ್ದು ಅಟ್ಟಾಡಿಸಿ ಹಲ್ಲೆ ಮಾಡಿದ್ದ. ಇದು ಎಂಟು ಸೆಕೆಂಡ್ ವಿಡಿಯೋದಲ್ಲಿ ಸೆರೆಯಾಗಿತ್ತು.
ಬಾಗಲಕೋಟೆ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ