ಒಂದು ತಿಂಗಳ ನಂತರ ಸ್ವ ಕ್ಷೇತ್ರಕ್ಕೆ ಸಿದ್ದರಾಮಯ್ಯ ಭೇಟಿ
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ. ತಾನು ಕಾಲಿಟ್ಟ ಕಡೆ ಒಂದು ಖದರ್ ಇರುತ್ತೆ ಅಂತಾ ಗುಟುರು ಹಾಕುವ ಕಾಂಗ್ರೆಸ್‌ನ ಟಗರು. ಹೀಗೆ ಎದುರಾಳಿಗೆೆ ಟಕ್ಕರ್ ಕೊಡ್ತಾ ಅಬ್ಬರಿಸುತ್ತಿದ್ದ ಸಿದ್ದು ಉಪಸಮರದ ನಂತರ ಫುಲ್ ಸೈಲೆಂಟ್ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ರಾಜ್ಯದಲ್ಲಿ ಸಿದ್ದರಾಮಯ್ಯ ಇದ್ದಾರಾ ಇಲ್ವಾ ಅನ್ನೋ ಅನುಮಾನ ಶುರವಾಗಿದೆ. ಆದ್ರೆ ಈಗ ಮತ್ತೆ ಟಗರಿಗೆ ಓಟ ಶುರುವಾಗಿದೆ.. ಒಂದು ತಿಂಗಳ ನಂತ್ರ ತನ್ನ ಕ್ಷೇತ್ರದತ್ತ ಸಿದ್ದು ಪ್ರಯಾಣ! ಯೆಸ್, ಒಂದು ತಿಂಗಳ ನಂತರ ತಮಗೆ ರಾಜಕೀಯ […]
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ. ತಾನು ಕಾಲಿಟ್ಟ ಕಡೆ ಒಂದು ಖದರ್ ಇರುತ್ತೆ ಅಂತಾ ಗುಟುರು ಹಾಕುವ ಕಾಂಗ್ರೆಸ್‌ನ ಟಗರು. ಹೀಗೆ ಎದುರಾಳಿಗೆೆ ಟಕ್ಕರ್ ಕೊಡ್ತಾ ಅಬ್ಬರಿಸುತ್ತಿದ್ದ ಸಿದ್ದು ಉಪಸಮರದ ನಂತರ ಫುಲ್ ಸೈಲೆಂಟ್ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ರಾಜ್ಯದಲ್ಲಿ ಸಿದ್ದರಾಮಯ್ಯ ಇದ್ದಾರಾ ಇಲ್ವಾ ಅನ್ನೋ ಅನುಮಾನ ಶುರವಾಗಿದೆ. ಆದ್ರೆ ಈಗ ಮತ್ತೆ ಟಗರಿಗೆ ಓಟ ಶುರುವಾಗಿದೆ..
ಒಂದು ತಿಂಗಳ ನಂತ್ರ ತನ್ನ ಕ್ಷೇತ್ರದತ್ತ ಸಿದ್ದು ಪ್ರಯಾಣ! ಯೆಸ್, ಒಂದು ತಿಂಗಳ ನಂತರ ತಮಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರಕ್ಕೆ ಸಿದ್ದರಾಮಯ್ಯ ಲಗ್ಗೆಯಿಡುತ್ತಿದ್ದಾರೆ. ಇಂದು ಮತ್ತು ನಾಳೆ ಬಾದಾಮಿ ಕ್ಷೇತ್ರದಲ್ಲಿ ಸಿದ್ದು ಬೀಡು ಬಿಡಲಿದ್ದಾರೆ.
ಬಾದಾಮಿಯಲ್ಲಿ ಸಿದ್ದು ರೌಂಡ್ಸ್: ಇಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ತೆರಳಲಿರುವ ಸಿದ್ದು, ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮಕ್ಕೆ 2.30 ರ ಸುಮಾರಿಗೆ ತಲುಪಲಿದ್ದು, ರಸ್ತೆ ಕಾಮಗಾರಿಗೆ ಅಡಿಗಲ್ಲು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಂತರ ಸಂಜೆ 7 ಗಂಟೆಗೆ ಕಾಳಿದಾಸ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡ ಕಾಳಿದಾಸ ಉತ್ಸವದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ನಾಳೆಯ ಕಾರ್ಯಕ್ರಮಗಳೇನು? ಇನ್ನು ಇಂದು ರಾತ್ರಿ ಬಾದಾಮಿ ಪಟ್ಟಣದಲ್ಲೇ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ತಮ್ಮ ಕಚೇರಿ ಆವಣರದಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಜಮ್ಮನಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಬಳಿಕ ಲಾಯದಗುಂದಿ ಗ್ರಾಮದಲ್ಲಿ 12 ಗಂಟೆಗೆ ಗ್ರಾಪಂ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ಸಂಜೆ ಐದು ಗಂಟೆಗೆ ಸುಪ್ರಸಿದ್ದ ಬನಶಂಕರಿ ದೇವಿ ಜಾತ್ರೆ ಮಹೋತ್ಸವದಲ್ಲಿ ಪಾಲ್ಗೊಂಡು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಹುಬ್ಬಳ್ಳಿಗೆ ತೆರಳಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 11 ರಂದು ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.