ಬಳ್ಳಾರಿಯಲ್ಲಿ ಟೆಕ್ಸ್ ಟೈಲ್ ಮಳಿಗೆಗೆ ಬೆಂಕಿ ತಗುಲಿ 50 ಲಕ್ಷ ಮೌಲ್ಯದ ಬಟ್ಟೆ, ಪೀಠೋಪಕರಣ ಸುಟ್ಟು ಭಸ್ಮ
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬಳ್ಳಾರಿ: ನಗರದಲ್ಲಿರುವ ಟೆಕ್ಸ್ ಟೈಲ್ ಮಳಿಗೆಗೆ ಬೆಂಕಿ ತಗುಲಿ ಸುಮಾರು 50 ಲಕ್ಷ ಮೌಲ್ಯದ ಬಟ್ಟೆ ಮತ್ತು ಪೀಠೋಪಕರಣ ಸುಟ್ಟು ಕರಕಲಾಗಿವೆ. ಬೆಂಗಳೂರು ರಸ್ತೆಯ ಹೂವಿನ ಬಜಾರ್ ಬಳಿ ಈ ಘಟನೆ ನಡೆದಿದೆ. ಆನಂದ್ ಎನ್ನುವವರಿಗೆ ಟೆಕ್ಸ್ ಟೈಲ್ ಮಳಿಗೆ ಸೇರಿದ್ದು, ನಿನ್ನೆ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ತೆಪ್ಪ ಮಗುಚಿ ರೈತ ನೀರು ಪಾಲು ಶಿವಮೊಗ್ಗ: ತೆಪ್ಪ ಮಗುಚಿ ರೈತ ನೀರು ಪಾಲಾಗಿರುವ ಘಟನೆ ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಗ್ರಾಮದಲ್ಲಿ ಸಂಭವಿಸಿದೆ. ತೆಪ್ಪದಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಇನ್ನೋರ್ವ ರೈತ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಶರಾವತಿ ಹಿನ್ನೀರಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆಪ್ಪದಲ್ಲಿ ಅಡಕೆ ಸಾಗಿಸುತ್ತಿದ್ದರು. ಈ ವೇಳೆ ತೆಪ್ಪ ಮಗುಚಿದೆ. ಸ್ವಾಮಿ ಮಾವಿನಗುಡ್ಡೆ (50) ನೀರು ಪಾಲಾಗಿದ್ದಾರೆ. ನಾರಾಯಣ ಚಂಗೋಳ್ಳಿ ಬಚಾವ್ ಆಗಿದ್ದಾರೆ. ರೈತನ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಯಂತ್ರ ಸ್ಫೋಟಗೊಂಡು ವ್ಯಕ್ತಿ ದುರ್ಮರಣ ಗಾಳಿ ತುಂಬುವ ಯಂತ್ರ ಸ್ಫೋಟಗೊಂಡು ವ್ಯಕ್ತಿ ದುರ್ಮರಣ ಹೊಂದಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಯಾ ಗೇಟ್ ಬಳಿಯ ವರ್ಕ್ಶಾಪ್ನಲ್ಲಿ ಘಟನೆ ನಡೆದಿದ್ದು, ರವಿ ಎಂಬುವವರು ಸಾವನ್ನಪ್ಪಿದ್ದಾರೆ. ಸ್ಫೋಟದ ರಭಸಕ್ಕೆ ವರ್ಕ್ಶಪ್ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಕಳೆದ ಮೂರು ದಿನಗಳಿಂದ ವರ್ಕ್ ಶಾಪ್ ಬಾಗಿಲು ತೆಗೆದಿರಲಿಲ್ಲ. ಇಂದು ವರ್ಕ್ ಶಾಪ್ ಬಾಗಿಲು ತೆರದು ಗಾಳಿ ತುಂಬುವ ಯಂತ್ರ ಆನ್ ಮಾಡಿದ ತಕ್ಷಣ ಸ್ಟೋಟಗೊಂಡಿದೆ.
ಇದನ್ನೂ ಓದಿ
ಅಯೋಧ್ಯಾ ರಾಮ ಜನ್ಮಭೂಮಿಯನ್ನೂ ಮೆಕ್ಕಾ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಎಚ್ಪಿ ಮುಖ್ಯಸ್ಥ
Published On - 11:09 am, Mon, 13 December 21