ಚಿಕ್ಕೋಡಿ: ಮೊಬೈಲ್​​ನಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಫೋಟೋ, ಶಿಕ್ಷಕ ಮೊಹಮ್ಮದ್​ ಸಾದಿಕ್ ಅರೆಸ್ಟ್

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸರ್ಕಾರಿ ಶಾಲೆ ಶಿಕ್ಷಕ ಮೊಹ್ಮದ್​ ಸಾದಿಕ್ ಮಿಯಾ ಬೇಗ್ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಶಿಕ್ಷಕ ಮೊಹಮ್ಮದ್​ ಸಾದಿಕ್ ಮಿಯಾ ಬೇಗ್ ವಿರುದ್ಧ ಚಿಕ್ಕೋಡಿ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಚಿಕ್ಕೋಡಿ: ಮೊಬೈಲ್​​ನಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಫೋಟೋ, ಶಿಕ್ಷಕ ಮೊಹಮ್ಮದ್​ ಸಾದಿಕ್ ಅರೆಸ್ಟ್
ಶಿಕ್ಷಕ ಮೊಹಮ್ಮದ್​ ಸಾದಿಕ್ ಮಿಯಾ ಬೇಗ್
Follow us
Sahadev Mane
| Updated By: ವಿವೇಕ ಬಿರಾದಾರ

Updated on:Sep 15, 2024 | 1:33 PM

ಬೆಳಗಾವಿ, ಸೆಪ್ಟೆಂಬರ್​​ 15: ವಿದ್ಯಾರ್ಥಿನಿಯರ (Students) ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿದ್ದ ಚಿಕ್ಕೋಡಿಯ ಸರ್ಕಾರಿ ಶಾಲೆಯ ಶಿಕ್ಷಕನನ್ನು (Chikkodi Government School Teacher) ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕ ಮೊಹಮ್ಮದ್​ ಸಾದಿಕ್ ಮಿಯಾ ಬೇಗ್ ಬಂಧಿತ ಆರೋಪಿ. ಮೊಹಮ್ಮದ್​ ಸಾದಿಕ್ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ವಿಕೃತಿ ಮೆರದಿದ್ದಾನೆ. ಅಲ್ಲದೇ, ಶೌಚಕ್ಕೆ ಹೋಗುತ್ತಿದ್ದಾಗ ಖಾಸಗಿ ಅಂಗಾಂಗದ ಫೋಟೋ ತೆಗೆದುಕೊಂಡು ಬರುವಂತೆ ವಿದ್ಯಾರ್ಥಿನಿಯರಿಗೆ ಶಿಕ್ಷಕ ಮೊಹಮ್ಮದ್​ ಸಾದಿಕ್ ಹೇಳುತ್ತಿದ್ದನು. ಈ ಫೋಟೋಗಳನ್ನು ತನ್ನ ಮೊಬೈಲ್​ನಲ್ಲಿ ಸೇವ್​​ ಮಾಡಿಕೊಂಡಿದ್ದನು.

ಶಿಕ್ಷಕ ಮೊಹಮ್ಮದ್​ ಸಾದಿಕ್ ಪಾಠ ಮಾಡುವುದನ್ನ ಬಿಟ್ಟು ಕಾಮುಕನಾಗಿ ವಿಕೃತವಾಗಿ ವರ್ತಿಸುತ್ತಿದ್ದನು. ಶಿಕ್ಷಕ ಮೊಹಮ್ಮದ್​ ಸಾದಿಕ್ ಕಳೆದ ಒಂದು ವರ್ಷದಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥನಿಯರ ಮೇಲೆ ದೌರ್ಜನ್ಯವೆಸಗಿದ್ದಾನೆ. ಓರ್ವ ವಿದ್ಯಾರ್ಥಿನಿ ತಾಯಿಯ ಮುಂದೆ ದೌರ್ಜನ್ಯದ ಬಗ್ಗೆ ಹೇಳಿದಾಗ, ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮೊಹಮ್ಮದ್​ ಸಾದಿಕ್ ​ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಳ ಫೋಟೋಗಳು ಪತ್ತೆ

ಬಂಧಿತ ಶಿಕ್ಷಕ ಮೊಹಮ್ಮದ್​ ಸಾದಿಕ್ ಮೊಬೈಲ್​ನಲ್ಲಿ 300ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಾಗೇ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಳ ಫೋಟೋಗಳು ಕೂಡ ಪತ್ತೆಯಾಗಿವೆ. ಶಿಕ್ಷಕ ಮೊಹಮ್ಮದ್​ ಸಾದಿಕ್ ಮೊಬೈಲ್​ನಲ್ಲಿ 100ಕ್ಕೂ ಹೆಚ್ಚು ಫೋಟೋಗಳು ಪತ್ತೆಯಾಗಿವೆ.

ಇದನ್ನೂ ಓದಿ: ಹದಿಹರೆಯದ ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ

ಪ್ರಕರಣ ಸಂಬಂಧ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಮಾತನಾಡಿ, ಶಿಕ್ಷಕ ಮೊಹಮ್ಮದ್​ ಸಾದಿಕ್ ​ವಿದ್ಯಾರ್ಥಿನಿಯರ ಅಂಗಾಂಗಗಳನ್ನ ಮುಟ್ಟುತ್ತಿದ್ದನು. ವಿದ್ಯಾರ್ಥಿನಿಯರು ಶೌಚಕ್ಕೆ ಹೋದಾಗ ಖಾಸಗಿ ಅಂಗಾಂಗಳ ಫೋಟೊ ತೆಗೆದುಕೊಂಡು ಬಾ ಅಂತ ಹೇಳುತ್ತಿದ್ದನು ಎಂದು ವಿದ್ಯಾರ್ಥಿನಿಯರ ಹೇಳಿಕೆಯಿಂದ ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದರು.

ಶಿಕ್ಷಕ ಮೊಹಮ್ಮದ್​ ಸಾದಿಕ್ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿಯವನಾಗಿದ್ದು, ಕಳೆದ ಐದು ವರ್ಷದಿಂದ ಚಿಕ್ಕೋಡಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಆರೋಪಿಯ ಮೊಬೈಲ್ ಕೂಡ ಸೀಜ್ ಮಾಡಿದ್ದೇವೆ. ಮೊಬೈಲ್​ನಲ್ಲಿನ ಕೆಲ ಫೋಟೊಗಳು ಡಿಲಿಟ್ ಆಗಿದ್ದು ಎಫ್‌ಎಸ್‌ಎಲ್​ಗೆ ಕಳುಹಿಸುತ್ತೇವೆ. ಸುಮಾರು ವಿದ್ಯಾರ್ಥಿನಿಯರು ಆತನ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಪೋಕ್ಸೊ ಕಾಯ್ದೆಯಡಿ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಬಂಧಿತ ಶಿಕ್ಷಕ ಮೊಹಮ್ಮದ್​ ಸಾದಿಕ್ ಮಿಯಾ ಬೇಗ್ ಸೇವೆಯಿಂದ ಅಮಾನತ್ತು ಮಾಡಿ ಚಿಕ್ಕೋಡಿ ಡಿಡಿಪಿಐ ಬಿ.ಎ ಮೇಕನಮರಡಿ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:25 pm, Sun, 15 September 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ