ಬೆಳಗಾವಿ: ಕಣ್ಣು ಕುಕ್ಕೋ ಓಟ.. ತಾಕತ್ತಿನ ಆಟ.. ದಾರಿಯುದ್ದಕ್ಕೂ ಧೂಳೆಬ್ಬಿಸ್ತಿರೋ ಆರ್ಭಟ. ಓಡು ಓಡು ಓಡಲೇ ಅಂತಾ ಪ್ರೇಕ್ಷಕರ ಕಿರುಚಾಟ. ಅಬ್ಬಬ್ಬಬ್ಬಾ.. ನೋಡ್ತಿದ್ರೇನೆ ಮೈ ಜುಮ್ಮೆನ್ನುತ್ತೆ. ಎಲ್ಲಿಲ್ಲದ ರೋಮಾಂಚನವಾಗುತ್ತೆ. ಅಶ್ವಗಳ ಹಾಗೂ ಎತ್ತುಗಳ ಓಟಕ್ಕೆ ಶಹಬ್ಬಾಷ್ ಅನ್ಬೇಕು ಅನ್ಸುತ್ತೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿಂದು ಹಬ್ಬದ ಕಳೆಗಟ್ಟಿತ್ತು. ಬೀರದೇವ & ಮರುಗಬಾಯಿ ಜಾತ್ರೆ ಸಲುವಾಗಿ ಕುದುರೆ ಬಂಡಿ & ಎತ್ತಿನ ಬಂಡಿ ಓಟದ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಸೇರಿದಂತೆ ಗೋಕಾಕ್, ನಿಪ್ಪಾಣಿ, ಅಥಣಿ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಸ್ಪರ್ಧಾಳುಗಳು ಭಾಗವಹಿಸಿದ್ರು.
ಕುದುರೆ ಬಂಡಿ & ಎತ್ತಿನ ಬಂಡಿ ಓಟ: ಇನ್ನು ಕುದುರೆ ಬಂಡಿ & ಎತ್ತಿನ ಬಂಡಿ ಓಟ ನೋಡೋಕೆ ಜನಸಾಗರವೇ ಕಿಕ್ಕಿರಿದಿತ್ತು. ಅಯ್ಯೋ ನಾವೇನ್ ಕಮ್ಮಿನಾ ಅಂತಾ ಹೆಂಗಸರೆಲ್ಲಾ ಮನೆ ಮಾಳಿಗೆ ಏರಿ ಸ್ಪರ್ಧೆ ನೋಡಿದ್ರು. ಇನ್ನು 6 ಕಿ.ಮೀ ಕುದುರೆ ಬಂಡಿ ಓಟದ ಸ್ಪರ್ಧೆಯಲ್ಲಿ ಲಗಮನ್ನಾ ಅನ್ನೋರು ಫಸ್ಟ್ ಪ್ರೈಜ್ ಪಡೆದ್ರು. ಅವ್ರಿಗೆ 10 ಸಾವಿರದ ಒಂದು ರೂಪಾಯಿ ನಗದು ಹಣ ನೀಡಲಾಯ್ತು. ಇತ್ತ ಎತ್ತಿನ ಬಂಡಿ ಓಟದಲ್ಲಿ ರಮೇಶ್ ಅನ್ನೋರು ಗೆದ್ದು ಬೀಗಿದ್ರು.
ಇನ್ನು ಸ್ಪರ್ಧೆ ಬಗ್ಗೆ ಮಾತ್ನಾಡಿದ ಆಯೋಜಕರು, ಇತ್ತೀಚಿಗೆ ಯುವಕರು ಬರೀ ಮೊಬೈಲ್ನಲ್ಲಿ ಬ್ಯುಸಿ ಇರ್ತಾರೆ. ಹೀಗಾಗಿ ಯುವಕರಿಗೆ ಹುರುಪು ತುಂಬಲು & ಗ್ರಾಮೀಣ ಕ್ರೀಡೆಗಳನ್ನ ಬೆಳೆಸೋ ಸಲುವಾಗಿ ಪ್ರತಿವರ್ಷ ಸ್ಪರ್ಧೆ ಆಯೋಜನೆ ಮಾಡ್ತೀವಿ ಅಂದ್ರು. ಒಟ್ನಲ್ಲಿ ಕುದುರೆ ಬಂಡಿ & ಎತ್ತಿನ ಬಂಡಿ ರೇಸ್ ಜಾತ್ರೆಯ ಖುಷಿಯನ್ನ ಮತ್ತಷ್ಟು ಹೆಚ್ಚಿಸಿತ್ತು. ಜಾತ್ರೆಗೆ ಬಂದಿದ್ದ ನೆಂಟರು ಹಾಗೂ ಅಕ್ಕಪಕ್ಕದ ಊರಿನವರೆಲ್ಲ ಸ್ಪರ್ಧೆ ನೋಡಿ ಫುಲ್ ಎಂಜಾಯ್ ಮಾಡಿದ್ರು.