‘ನಮ್ಮ ಕೆಲಸ ಆಗಬೇಕಾದ್ರೆ ರಮೇಶ್ ಜಾರಕಿಹೊಳಿಗೆ ಮಂತ್ರಿಗಿರಿ ಸಿಗಬೇಕು; ನನಗೂ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ’
ನಾನೊಬ್ಬ ಶಾಸಕನಾಗಿ 50-200 ಕೋಟಿ ಅನುದಾನ ತರಬಹುದು. ಸಾವಿರಾರು ಕೋಟಿ ಅನುದಾನ, ನಮ್ಮ ಕೆಲಸ ಆಗುವ ಸಲುವಾಗಿ ಬೇಕಾಗಿದೆ. ಅದಕ್ಕಾಗಿ ರಮೇಶ್ ಜಾರಕಿಹೊಳಿಗೆ ಸಚಿವಸ್ಥಾನ ಸಿಗಲಿ ಎಂದು ಪ್ರಾರ್ಥಿಸುವೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಬೆಳಗಾವಿ: ನಮ್ಮ ಕೆಲಸ ಆಗಬೇಕಾದ್ರೆ ರಮೇಶ್ ಜಾರಕಿಹೊಳಿಗೆ ಮಂತ್ರಿಗಿರಿ ಸಿಗಬೇಕಿದೆ. ರಮೇಶ್ಗೆ ಸಚಿವಸ್ಥಾನ ನೀಡುವುದರ ಹಿಂದೆ ನಮ್ಮ ಸ್ವಾರ್ಥವಿದೆ. ನಮ್ಮ ಭಾಗದವರು ಸಚಿವರಾದರೆ ನಮಗೂ ಅನುಕೂಲವಾಗುತ್ತೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬುಧವಾರ (ಫೆಬ್ರವರಿ 9) ಹೇಳಿಕೆ ನೀಡಿದ್ದಾರೆ.
ಕ್ಷೇತ್ರದ ನೀರಾವರಿ ಯೋಜನೆಗೆ 2,400 ಕೋಟಿ ಬೇಕಾಗಿದೆ. ಸವಳ- ಜವಳ ಯೋಜನೆಗೆ 600 ಕೋಟಿ ಹಣ ಬೇಕಾಗುತ್ತೆ. ನಮ್ಮ ಭಾಗದವರೇ ಸಚಿವರಾಗುವುದರಿಂದ ದೊಡ್ಡ ಕೆಲಸವಾಗುತ್ತೆ. ನಾನೊಬ್ಬ ಶಾಸಕನಾಗಿ 50-200 ಕೋಟಿ ಅನುದಾನ ತರಬಹುದು. ಸಾವಿರಾರು ಕೋಟಿ ಅನುದಾನ, ನಮ್ಮ ಕೆಲಸ ಆಗುವ ಸಲುವಾಗಿ ಬೇಕಾಗಿದೆ. ಅದಕ್ಕಾಗಿ ರಮೇಶ್ ಜಾರಕಿಹೊಳಿಗೆ ಸಚಿವಸ್ಥಾನ ಸಿಗಲಿ ಎಂದು ಪ್ರಾರ್ಥಿಸುವೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ನನಗೆ ಸಚಿವಸ್ಥಾನ ನೀಡುವ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ. ನನಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನಂದೇಶ್ವರ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಜೊತೆ ರಮೇಶ್ ಜಾರಕಿಹೊಳಿ ಚರ್ಚೆ; ಸಚಿವ ಸ್ಥಾನಕ್ಕೆ ಆಗ್ರಹ
ಇದನ್ನೂ ಓದಿ: ಸಿಡಿ ಪ್ರಕರಣ; ತನಿಖಾ ವರದಿ ಸಲ್ಲಿಸಲು ಎಸ್ಐಟಿಗೆ ಹೈಕೋರ್ಟ್ ಅನುಮತಿ, ರಮೇಶ್ ಜಾರಕಿಹೊಳಿಗೆ ಪೀಕಲಾಟ ಶುರು
Published On - 8:45 pm, Wed, 9 February 22