ಬೆಂಗಳೂರು ಗ್ರಾಮಾಂತರ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನಾಲ್ವರ ಬಂಧನ; ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ವಶ
ಅವರೆಲ್ಲ ಹೊಟ್ಟೆ ಪಾಡಿಗಾಗಿ ಸಿಲಿಕಾನ್ ಸಿಟಿಗೆ ಬಂದಿದ್ದು, ಹಲವು ವರ್ಷಗಳಿಂದ ನಯವಾಗಿ ಕೆಲಸ ಮಾಡಿಕೊಂಡು ಮಾಲೀಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ರು. ಆದ್ರೆ, ಅದೆ ವಿಶ್ವಾಸವನ್ನೆ ಬಂಡವಾಳ ಮಾಡಿಕೊಂಡು, ತಿಂದ ಮನೆಗೆ ಕನ್ನ ಹಾಕಿ ಹೋಗಿದ್ದರು. ಇದೀಗ ಉಂಡ ಮನೆಗೆ ದ್ರೂಹ ಬಗೆದಿದ್ದ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಆವಲಹಳ್ಳಿ ಪೊಲೀಸ್(Avalahalli Police) ಠಾಣಾ ವ್ಯಾಪ್ತಿಯ ಪುಷ್ಕರ್ ವಿಲ್ಲಾ(Pushkar Villa) ಮತ್ತು ಮಾರಗೊಂಡನಹಳ್ಳಿಯ ಪ್ರತಿಷ್ಠಿತ ಬಡಾವಣೆಯ ಮನೆಗೆ ಕನ್ನ ಹಾಕಿದ್ದರು. ಹೌದು ಶೇರ್ ಬಹುದ್ದೂರ್, ಕಮಲ ಕಡ್ಕಾ, ಜುನ್ನಾ ಕಡ್ಕಾ ಮತ್ತು ಶಕುಂತಲಮ್ಮ ಆರೋಪಿಗಳು. ಇನ್ನು ಮುನಿಯಪ್ಪ ಎಂಬುವವರು ಕುಟುಂಬಸ್ಥರ ಸಮೇತ ಊರಿಗೆ ಹೋಗಿದ್ದು, ಮನೆಯನ್ನ ನಂಬಿಕೆಯಿಂದಿದ್ದ ನೇಪಾಳಿ ಸೆಕ್ಯೂರಿಟಿ ಗಾರ್ಡ್ ಶೆರ್ ಬಹೂದ್ದೂರ್ ಎಂಬುವವನಿಗೆ ಹೇಳಿ ಹೋಗಿದ್ದಾರೆ. ಆದ್ರೆ, ಈ ವೇಳೆ ಮನೆಯನ್ನ ನಂಬಿಕೆಯಿಂದ ನೋಡಿಕೊಳ್ಳಬೇಕಿದ್ದ ಸೆಕ್ಯೂರಿಟಿ ಗಾರ್ಡ್ ತನ್ನ ಮಗ ಮತ್ತು ಸೊಸೆ ಜೊತೆ ಸೇರಿಕೊಂಡು ಮನೆಯ ಕಿಟಕಿ ಸರಳುಗಳನ್ನ ಕಿತ್ತು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ. ಜೊತೆಗೆ ಚಿನ್ನಾಭರಣವನ್ನ ಕುಟುಂಬಸ್ಥರ ಕೈಗೆ ನೀಡಿ ಪೊಲೀಸರ ಕೈಗೆ ಸಿಗದಂತೆ ಬೆಂಗಳೂರಿನಿಂದ ದೆಹಲಿಗೆ ಪ್ಲೈಟ್ನಲ್ಲಿ ಹೋಗಿ, ನಂತರ ಅಲ್ಲಿಂದ ನೇಪಾಳಕ್ಕೆ ಹೋಗುವ ಪ್ಲಾನ್ ಮಾಡಿದ್ದ. ಆದ್ರೆ, ಅಷ್ಟರಲ್ಲೆ ಅವನ ಜಾಡು ಹಿಡಿದು ಹೋಗಿದ್ದ ಆವಲಹಳ್ಳಿ ಪೊಲೀಸರು ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಎಸ್ಕಪ್ ಆಗ್ತಿದ್ದವನ ಎಡೆಮುರಿಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
783 ಗ್ರಾಂ ತೂಕದ ಚಿನ್ನಾಭರಣ ಕದ್ದು, ಪರಾರಿಯಾಗಿದ್ದ ಮನೆ ಕೆಲಸದಾಕೆ
ಇನ್ನು ಕುಟುಂಬ ಸಮೇತ ಸೆಕ್ಯೂರಿಟಿ ಗಾರ್ಡ್ ಸ್ಕೇಚ್ ಹಾಕಿದ್ರೆ, ಮತ್ತೊಂದೆಡೆ ವಿಲ್ಲಾದಲ್ಲಿ ಕೆಲಸ ಮಾಡುತ್ತಾ ಮಾಲೀಕರ ವಿಶ್ವಾಸಗಳಿಸಿದ್ದ ಖತರ್ನಾಕ್ ಕೆಲಸದಾಕೆ ಅರ್ಧ ಕೆಜಿಗೂ ಅಧಿಕ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದಳು. ಹೌದು ಚಿತ್ರದುರ್ಗ ಮೂಲದ ಶಕುಂತಲಾ ಎನ್ನುವ ಮಹಿಳೆ ಕಳೆದ ಹಲವು ವರ್ಷಗಳಿಂದ ಇದೇ ವಿಲ್ಲಾಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಮನೆ ಮಾಲೀಕರಿಗೆ ಗೊತ್ತಿಲ್ಲದಂತೆ ಮನೆಯಲ್ಲಿದ್ದ ಒಂದೊಂದೆ ಆಭರಣಗಳನ್ನ ಖದ್ದು ಊರಿಗೆ ಸಾಗಿಸಿ ನಂತರ ಕೆಲಸ ಬಿಟ್ಟಿದ್ದಳಂತೆ. ಬಳಿಕ ಕೆಲಸ ಬಿಟ್ಟ ನಂತರ ಊರಿಗೆ ಹೋಗಿ ಸೆಟ್ಲ್ ಆಗಿದ್ದು, ಮನೆ ಮಾಲೀಕರು ಮನೆಯಲ್ಲಿ ಚಿನ್ನಾಭರಣ ಹುಡುಕಾಡಿದಾಗ ಕಳ್ಳತನವಾಗಿರುವುದು ಗೊತ್ತಾಗಿ ದೂರು ದಾಖಲಿಸಿದ್ದರು. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸಿದ ಪೊಲೀಸರು ಇದೀಗ ಮನೆಯಲ್ಲಿ ಕೆಲಸ ಮಾಡುತ್ತಾ ಚಿನ್ನಾಭರಣ ದೋಚಿಕೊಂಡು ಎಸ್ಕೇಪ್ ಆಗಿದ್ದ ಕೆಲಸದಾಕೆ ಶಂಕುತಲಾಳನ್ನ ಬಂದಿಸಿದ್ದಾರೆ. ಜೊತೆಗೆ ಬಂಧಿತಳಿಂದ 783 ಗ್ರಾಂ ತೂಕದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ ಗೂಳಿಸವಾರಿ; ಪೊಲೀಸರೆದುರು ತಪ್ಪೊಪ್ಪಿಕೊಂಡ ಯುವಕ
ಒಟ್ಟಾರೆ ನಯವಾಗಿ ಮನೆ ಮಾಲೀಕರ ವಿಶ್ವಾಸವನ್ನಗಳಿಸಿಕೊಂಡು ತಿಂದ ಮನೆಗೆ ಕನ್ನಹಾಕಿ ಹೋಗಿದ್ದ ಖದೀಮರನ್ನ ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇಂತಹ ನಯವಂಚಕರನ್ನ ಕೆಲಸಕ್ಕಿಟ್ಟುಕೊಳ್ಳುವ ಮುನ್ನ ಸಾರ್ವಜನಿಕರು ಸ್ವಲ್ಪ ಎಚ್ಚರದಿಂದಿರುವುದು ಒಳ್ಳೆಯದು.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Wed, 10 May 23