AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಪೊರೇಟ್ ಕೆಲಸ ತೊರೆದು ಕ್ಲೌಡ್ ಕಿಚನ್ ಶುರು ಮಾಡಿದ ಯುವ ಉದ್ಯಮಿ!

ಬೆಂಗಳೂರಿನ 23 ವರ್ಷದ ಯುವ ಉದ್ಯಮಿಯೊಬ್ಬರು ಕಾರ್ಪೊರೇಟ್ ಕೆಲಸ ಬಿಟ್ಟು ತಮ್ಮ ಫ್ಲಾಟ್‌ನಿಂದಲೇ ಕ್ಲೌಡ್ ಕಿಚನ್ ಆರಂಭಿಸಿದ್ದಾರೆ. ಕೇವಲ ಊಟದ ಪ್ಯಾಕೇಜಿಂಗ್ ಮತ್ತು ಜೊಮಾಟೋ ನೋಂದಣಿಗೆ ಹಣ ಹೂಡಿ, ಅಡುಗೆಯಿಂದ ವಿತರಣೆಯವರೆಗೆ ಎಲ್ಲವನ್ನೂ ತಾವೇ ನಿರ್ವಹಿಸುತ್ತಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ಅನುಭವ ಹಂಚಿಕೊಳ್ಳುವುದಾಗಿ ರೆಡಿಟ್‌ನಲ್ಲಿ ತಿಳಿಸಿದ್ದಾರೆ. ಇದು ನೆಟ್ಟಿಗರ ಗಮನ ಸೆಳೆದಿದೆ.

ಕಾರ್ಪೊರೇಟ್ ಕೆಲಸ ತೊರೆದು ಕ್ಲೌಡ್ ಕಿಚನ್ ಶುರು ಮಾಡಿದ ಯುವ ಉದ್ಯಮಿ!
ಕಾರ್ಪೊರೇಟ್ ಕೆಲಸ ತೊರೆದು ಕ್ಲೌಡ್ ಕಿಚನ್ ಶುರು ಮಾಡಿದ ಯುವ ಉದ್ಯಮಿ! Image Credit source: oracle.com
ಭಾವನಾ ಹೆಗಡೆ
|

Updated on: Apr 08, 2026 | 12:01 PM

Share

ಬೆಂಗಳೂರು, ಏಪ್ರಿಲ್ 08: ಓದು ಮುಗಿಸಿ, ಕೆಲಸ ಹಿಡಿದು, ಆರಾಮದಾಯಕ ಜೀವನ ಕಟ್ಟಿಕೊಂಡರೆ ಸಾಕು ಎನ್ನುವ ಮನೋಭಾವ ಹಲವು ಯುವಕರಿಗಿದೆ. ಆದರೆ ಕೆಲವೇ ಕೆಲವರು ಮಾತ್ರ ರಿಸ್ಕ್ ತೆಗೆದುಕೊಂಡು ತಾವೇ ಒಂದು ಸ್ಟಾರ್ಟ್​ಅಪ್ (Startup) ಮಾಡಲು ಮುಂದಾಗುತ್ತಾರೆ. ಅಂತೆಯೇ ನಗರದಲ್ಲಿ ಯುವ ಉದ್ಯಮಿಯೊಬ್ಬರು ತಮ್ಮ ಕಾರ್ಪೊರೇಟ್ ವೃತ್ತಿಯನ್ನು ತೊರೆದು ಹೊಸ ಪ್ರಯೋಗಕ್ಕೆ ಕೈಹಾಕಿರುವ ಘಟನೆ ಗಮನಸೆಳೆದಿದೆ. ನಗರದ ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಪ್ರದೇಶದ 23 ವರ್ಷದ ವ್ಯಕ್ತಿಯೊಬ್ಬರು ತಮ್ಮದೇ ಫ್ಲಾಟ್‌ನಿಂದ ಕ್ಲೌಡ್ ಕಿಚನ್ ಆರಂಭಿಸಿ ಸ್ವಯಂ ಉದ್ಯಮದ ದಾರಿಗೆ ಹೆಜ್ಜೆಯಿಟ್ಟಿದ್ದಾರೆ.

ವ್ಯಕ್ತಿಯ ಪೋಸ್ಟ್​ನಲ್ಲೇನಿದೆ?

ಸ್ವಂತವಾಗಿ ಎಲ್ಲ ಕಾರ್ಯಗಳನ್ನು ನಿರ್ವಹಿಸುವ ಈ ವ್ಯಕ್ತಿ, ಅಡುಗೆ ಮಾಡುವುದರಿಂದ ಹಿಡಿದು ಸ್ವಚ್ಛತೆ, ಪ್ಯಾಕಿಂಗ್ ಮತ್ತು ವಿತರಣೆಯವರೆಗೆ ಎಲ್ಲಾ ಜವಾಬ್ದಾರಿಗಳನ್ನು ತಾನೇ ಹೊರುವುದಾಗಿ ಹೇಳಿದ್ದಾರೆ. ಕಡಿಮೆ ಬಂಡವಾಳದಲ್ಲೇ ಈ ಪ್ರಯತ್ನ ಆರಂಭಿಸಿದ್ದು, ಮುಖ್ಯವಾಗಿ ಆಹಾರ ಪ್ಯಾಕೇಜಿಂಗ್ ಹಾಗೂ ಆನ್‌ಲೈನ್ ಆಹಾರ ವಿತರಣೆ ವೇದಿಕೆ ಜೊಮಾಟೋದಲ್ಲಿ ನೋಂದಣಿ ಮಾಡಲು ಮಾತ್ರ ಹಣ ಬಳಸಿರುವುದಾಗಿ ತಿಳಿಸಿದ್ದಾರೆ.

ತನ್ನ ಈ ನಿರ್ಧಾರವನ್ನು ಅವರು ತಮ್ಮ ರೆಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು, 23ನೇ ವಯಸ್ಸಿನಲ್ಲಿ ಕೆಲಸ ಬಿಟ್ಟು ನಾನು ಇಂದು ಧೈರ್ಯದಿಂದ ಒಂದು ಹೆಜ್ಜೆ ಮುಂದಿಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನನ್ನ ಬಳಿ ದೊಡ್ಡ ಯೋಜನೆ ಅಥವಾ ಹೆಚ್ಚಿನ ಹಣವಿಲ್ಲ. ಆದರೆ ಸ್ವಂತವಾಗಿ ಏನಾದರೂ ಮಾಡಲು ಮನಸ್ಸಾಯಿತು ಎಂದು ತನ್ನ ನಿರ್ಧಾರವನ್ನು ವಿವರಿಸಿದ್ದಾರೆ.

ಇದೇ ವೇಳೆ, ಈ ಪ್ರಯತ್ನ ಯಶಸ್ವಿಯಾಗುತ್ತದೆಯೋ ಅಥವಾ ವಿಫಲವಾಗುತ್ತದೆಯೋ ಎಂಬುದು ತಿಳಿದಿಲ್ಲ ಎಂದು ಬರೆದುಕೊಂಡಿರುವ ಬಳಕೆದಾರ, ಯಾವುದೇ ಫಲಿತಾಂಶ ಬಂದರೂ ತನ್ನ ಅನುಭವಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ಘಟನೆ ಇಂದಿನ ಯುವಜನರಲ್ಲಿ ಹೆಚ್ಚುತ್ತಿರುವ ಸ್ಟಾರ್ಟ್‌ಅಪ್ ಮನೋಭಾವ ಮತ್ತು ಅಪಾಯ ಸ್ವೀಕರಿಸುವ ಧೈರ್ಯವನ್ನು ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕ ಉದ್ಯೋಗಗಳನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸುವ ಪ್ರವೃತ್ತಿ ನಗರಗಳಲ್ಲಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

ನೆಟ್ಟಿಗರ ರಿಯಾಕ್ಷನ್ ಏನು?

ವ್ಯಕ್ತಿಯ ಹೊಸ ನಿರ್ಧಾರಕ್ಕೆ ಪ್ರೋತ್ಸಾಹಿಸಿರುವ ನೆಟ್ಟಿಗರು ತರಹೇವಾರಿ ಕಾಮೆಂಟ್ ಹಾಕಿದ್ದಾರೆ. ಒಬ್ಬ ಯೂಸರ್, ನಿಮ್ಮ ಕ್ಲೌಡ್ ಕಿಚನ್ ಹೆಸರು ತಿಳಿಸಿ; ನಾವು ಪ್ರಚಾರ ಮಾಡುತ್ತೇವೆ ಎಂದರೆ, ಇನ್ನೊಬ್ಬ ಯೂಸರ್, ನೀವು ತಯಾರಿಸುವ ಆಹಾರದ ಸುಂದರವಾದ ಫೋಟೋಗಳನ್ನು ಹಾಕಿಕೊಳ್ಳಿ ಮತ್ತು ಆ ತಿನಿಸಿನ ಕುರಿತ ಮಾಹಿತಿ ಹಂಚಿಕೊಳ್ಳಿ ಎಂದಿದ್ದಾರೆ.

ಇನ್ನೂರ್ವ ಕಾಮೆಂಟ್ ಮಾಡಿ, ಇದೇ ರೀತಿಯ ಪ್ರಯತ್ನ ಮಾಡುತ್ತಿದ್ದ ದಂಪತಿಗೆ ತಾನೂ ಏರ್ ಫ್ರೈಯರ್ ಮಾರಾಟ ಮಾಡುದ್ದು, ಇಂದಿನ ಆರ್ಥಿಕತೆಗೆ ನಮ್ಮ ಸ್ವಂತ ವ್ಯವಹಾರ ಇರುವುದು ಒಳಿತು. ಸಂಬಳವನ್ನೇ ನಂಬಿ ಕೂರುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ