AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವದೇಶದಲ್ಲಿ ಸಿಂಹ, ವಿದೇಶದಲ್ಲಿ ಬೆಕ್ಕು: ಮಾಜಿ ಕ್ರಿಕೆಟಿಗನ ಎಚ್ಚರಿಕೆ!

ಸ್ವದೇಶದ ಫ್ಲಾಟ್ ಪಿಚ್‌ಗಳಲ್ಲಿ ರನ್ ಮಳೆ ಹರಿಸುವ ಭಾರತದ ಯುವ ಬ್ಯಾಟರ್‌ಗಳು ವಿದೇಶಿ ಮೈದಾನಗಳ ಸ್ವಿಂಗ್ ಮತ್ತು ಬೌನ್ಸ್ ಎದುರಿಸಲು ತಡಕಾಡುತ್ತಿರುವುದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಇದೇ ಪ್ರದರ್ಶನದ ಏರಿಳಿತವನ್ನು ಉಲ್ಲೇಖಿಸಿರುವ ಮಾಜಿ ದಿಗ್ಗಜ ಸಂದೀಪ್ ಪಾಟೀಲ್, ನಮ್ಮ ಯುವ ಆಟಗಾರರು ಕೇವಲ ಮನೆಯಲ್ಲಿ ಸಿಂಹದಂತೆ ಇರದೆ ವಿದೇಶದಲ್ಲೂ ಗರ್ಜಿಸಬೇಕಾದ ಕಟು ವಾಸ್ತವವನ್ನು ನೆನಪಿಸಿದ್ದಾರೆ.

ಸ್ವದೇಶದಲ್ಲಿ ಸಿಂಹ, ವಿದೇಶದಲ್ಲಿ ಬೆಕ್ಕು: ಮಾಜಿ ಕ್ರಿಕೆಟಿಗನ ಎಚ್ಚರಿಕೆ!
ವೈಭವ್ - ಅಭಿಷೇಕ್Image Credit source: BCCI
ಝಾಹಿರ್ ಯೂಸುಫ್
|

Updated on: Sep 21, 2026 | 9:40 AM

Share

ಪ್ರಸ್ತುತ ಟಿ20 ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಸ್ವದೇಶದಲ್ಲಿ ಸಿಂಹದಂತೆ ಅಬ್ಬರಿಸಿದರೂ ವಿದೇಶಿ ಪಿಚ್‌ಗಳಲ್ಲಿ ಬೆಕ್ಕಿನಂತಾಗುತ್ತಾರೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಕಟುವಾಗಿ ವ್ಯಂಗ್ಯವಾಡಿದ್ದಾರೆ. ತವರಿನ ಮೈದಾನಗಳಲ್ಲಿ ಅಬ್ಬರಿಸುವ ಈ ಯುವ ಆಟಗಾರರು, ವಿದೇಶಿ ಪಿಚ್‌ಗಳ ಸ್ವಿಂಗ್ ಮತ್ತು ಸವಾಲುಗಳನ್ನು ಎದುರಿಸಲು ತಮ್ಮ ಬ್ಯಾಟಿಂಗ್ ತಂತ್ರವನ್ನು ಬದಲಾಯಿಸಿಕೊಳ್ಳದಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಕಾಲ ಉಳಿಯುವುದು ಕಷ್ಟ ಎಂದು ಅವರು ನೇರವಾಗಿಯೇ ಎಚ್ಚರಿಸಿದ್ದಾರೆ.

ಭಾರತದ ಪಿಚ್‌ಗಳಲ್ಲಿ ರನ್ ಮಳೆ ಹರಿಸುವ ಯುವ ಆಟಗಾರರು, ವಿದೇಶದ ಬೌನ್ಸಿ ಹಾಗೂ ಸ್ವಿಂಗ್ ಪಿಚ್‌ಗಳಿಗೆ ಹೋದಾಗ ರನ್ ಗಳಿಸಲು ಪರದಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಎದ್ದು ಕಾಣುತ್ತಿದೆ. ಇದನ್ನೇ ಉಲ್ಲೇಖಿಸಿರುವ ಸಂದೀಪ್ ಪಾಟೀಲ್, “ಸ್ವದೇಶದಲ್ಲಿ ಸಿಂಹದಂತೆ ಗರ್ಜಿಸುವ ಆಟಗಾರರು ವಿದೇಶಿ ಪ್ರವಾಸ ಕೈಗೊಂಡಾಗ ಬೆಕ್ಕಿನಂತಾಗಬಾರದು. ಭಾರತದ ಹೊರಗಿನ ಪರಿಸ್ಥಿತಿಗಳಿಗೆ ತಕ್ಕಂತೆ ಬ್ಯಾಟಿಂಗ್ ಶೈಲಿಯನ್ನು ಸುಧಾರಿಸಿಕೊಳ್ಳುವುದು ಅತ್ಯಗತ್ಯ” ಎಂದು ತಿಳಿಸಿದ್ದಾರೆ.

ಅಭಿಷೇಕ್ ಮತ್ತು ವೈಭವ್‌ಗೆ ಕಿವಿಮಾತು:

ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಆಟ ಆಕರ್ಷಕವಾಗಿದ್ದರೂ, ವಿದೇಶಿ ಪರಿಸ್ಥಿತಿಯಲ್ಲಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲುವ ತಾಳ್ಮೆ ಪ್ರದರ್ಶಿಸಬೇಕಿದೆ. ಇನ್ನು ಕಿರಿಯ ವಯಸ್ಸಿನಲ್ಲೇ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ ಕೂಡ ಕೇವಲ ಫ್ಲಾಟ್ ಟ್ರ್ಯಾಕ್‌ ನಂಬಿ ಕೂರದೆ, ಚಲಿಸುವ ಚೆಂಡನ್ನು ಎದುರಿಸುವ ಕೌಶಲವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಪಾಟೀಲ್ ಎಚ್ಚರಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲ ಮುಂದುವರಿಯಬೇಕಾದರೆ ಎಲ್ಲಾ ರೀತಿಯ ಪಿಚ್‌ಗಳಲ್ಲೂ ರನ್ ಗಳಿಸುವ ಸಾಮರ್ಥ್ಯ ಹೊಂದಿರಬೇಕು ಎಂಬುದನ್ನು ಈ ಯುವ ಆಟಗಾರರು ನೆನಪಿನಲ್ಲಿಡಬೇಕಾಗಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.

ಅಂಕಿ ಅಂಶಗಳು ಹೇಳುವುದೇನು?

ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರ ಒಟ್ಟಾರೆ ಟಿ20 ಕ್ರಿಕೆಟ್‌ನ ಸ್ವದೇಶಿ  ಮತ್ತು ವಿದೇಶಿ ಪ್ರದರ್ಶನದ ಅಂಕಿ-ಅಂಶಗಳ ಪಟ್ಟಿ ಇಲ್ಲಿದೆ.

ಅಭಿಷೇಕ್ ಶರ್ಮಾ:
ಮೈದಾನ ಪಂದ್ಯಗಳು ರನ್ ಬ್ಯಾಟಿಂಗ್ ಸರಾಸರಿ ಸ್ಟ್ರೈಕ್ ರೇಟ್ 100/50
ಸ್ವದೇಶಿ ಮೈದಾನಗಳಲ್ಲಿ 27 969 37.26 214.85 2 / 6
ವಿದೇಶಿ ಮೈದಾನಗಳಲ್ಲಿ 25 605 26.30 168.52 1 / 3

ಅಭಿಷೇಕ್ ಶರ್ಮಾ ಸ್ವದೇಶಿ ಪಿಟ್​ನಲ್ಲಿ 37.26ರ ಸರಾಸರಿಯಲ್ಲಿ ರನ್​ ಗಳಿಸಿದರೆ, ವಿದೇಶಿ ಪಿಚ್​ನಲ್ಲಿ 26.30 ರ ಸರಾಸರಿಯಲ್ಲಿ ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅಂದರೆ ವಿದೇಶದಲ್ಲಿ ಅವರು 30 ಕ್ಕಿಂತ ಕಡಿಮೆ ರನ್ ಸರಾಸರಿ ಹೊಂದಿದ್ದಾರೆ.

ಇದನ್ನೂ ಓದಿ: ಭಾರತ vs ಜಪಾನ್ ಪಂದ್ಯ ಯಾವಾಗ? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ವೈಭವ್ ಸೂರ್ಯವಂಶಿ:

ಪರಿಸ್ಥಿತಿ ಪಂದ್ಯಗಳು ರನ್  ಬ್ಯಾಟಿಂಗ್ ಸರಾಸರಿ ಸ್ಟ್ರೈಕ್ ರೇಟ್  100/50
ಸ್ವದೇಶಿ ಮೈದಾನಗಳಲ್ಲಿ 23 1028 44.70 228.95  2 / 6
ವಿದೇಶಿ ಮೈದಾನಗಳಲ್ಲಿ 6 193 32.17 189.22  2 / 0

ವೈಭವ್ ಸೂರ್ಯವಂಶಿ ಸ್ವದೇಶಿ ಪಿಚ್​ನಲ್ಲಿ 44.70 ರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ. ಇನ್ನು ವಿದೇಶದಲ್ಲಿ ಕೇವಲ 6 ಪಂದ್ಯಗಳನ್ನಾಡಿರುವ ಅವರು 32.17ರ ಸರಾಸರಿಯಲ್ಲಿ ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಅಂಕಿ-ಅಂಶಗಳನ್ನು ಗಮನಿಸಿದರೆ ವಿದೇಶಿ ಪಿಚ್‌ಗಳಲ್ಲಿ ಇಬ್ಬರ ಪ್ರದರ್ಶನ ಕೊಂಚ ಕುಂಠಿತವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇದೇ ಕಾರಣದಿಂದಾಗಿ ಮಾಜಿ ಆಟಗಾರ ಸಂದೀಪ್ ಪಾಟೀಲ್ ಅವರು, ಈ ಯುವ ದಾಂಡಿಗರು ಕೇವಲ ಸ್ವದೇಶದಲ್ಲಿ ಮಾತ್ರ ಸಿಂಹದಂತೆ ಅಬ್ಬರಿಸದೆ ವಿದೇಶದಲ್ಲೂ ಗರ್ಜಿಸಬೇಕೆಂದು ಕಟು ವಾಸ್ತವವನ್ನು ನೆನಪಿಸಿದ್ದಾರೆ.

Follow Us
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ