AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ರಾಗಿಮುದ್ದೆ-ನಾಟಿಕೋಳಿ ಸಾರಿನ ಮಹಾಯುದ್ಧ: 14 ಮುದ್ದೆ ನುಂಗಿ ಟಗರು ಬಾಚಿಕೊಂಡ ಶಂಭುಗೌಡ

ಕನ್ನಡ ರಾಜ್ಯೋತ್ಸವದಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ 'ರಾಗಿಮುದ್ದೆ ಮತ್ತು ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆ' ಆಯೋಜಿಸಲಾಗಿತ್ತು. ಗ್ರಾಮೀಣ ಸೊಗಡನ್ನು ಪರಿಚಯಿಸುವ ಈ 'ಮುದ್ದೆ ಮಹಾಯುದ್ಧ'ದಲ್ಲಿ 175ಕ್ಕೂ ಹೆಚ್ಚು ಜನರು ಭಾಗವಹಿಸಿ ದೇಸಿ ಆಹಾರ ಸಂಸ್ಕೃತಿಯನ್ನು ಆಚರಿಸಿದರು. 14 ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದ ಶಂಭುಗೌಡ ಅವರಿಗೆ ಟಗರು ಬಹುಮಾನ ನೀಡಲಾಯಿತು. ಇದು ನಗರದಲ್ಲಿ ದೇಸಿ ಖಾದ್ಯಗಳ ಜನಪ್ರಿಯತೆ ತೋರಿಸಿದೆ.

ಬೆಂಗಳೂರಲ್ಲಿ ರಾಗಿಮುದ್ದೆ-ನಾಟಿಕೋಳಿ ಸಾರಿನ ಮಹಾಯುದ್ಧ: 14 ಮುದ್ದೆ ನುಂಗಿ ಟಗರು ಬಾಚಿಕೊಂಡ ಶಂಭುಗೌಡ
ಮುದ್ದೆ ಮಹಾಯುದ್ಧ
ವಿನಯ್​ ಕಾಶಪ್ಪನವರ್​
| Edited By: |

Updated on: Nov 01, 2026 | 3:18 PM

Share

ಬೆಂಗಳೂರು, ನ.1: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಗ್ರಾಮೀಣ ಸೊಗಡು ಹಾಗೂ ದೇಸಿ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ರೋಚಕ ಆಯೋಜನೆಯೊಂದು ಜರುಗಿದೆ. ಎಚ್‌ಎಸ್‌ಆರ್ ಲೇಔಟ್‌ (HSR Layout) ನಲ್ಲಿ ವಕೀಲರ ಸಂಘದ ವತಿಯಿಂದ ವಾರಾಂತ್ಯದ ಈ ಸಂಭ್ರಮಕ್ಕೆ ವಿಶೇಷ ಸ್ಪರ್ಶ ನೀಡಲು ‘ರಾಗಿಮುದ್ದೆ ಮತ್ತು ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆ’ (ಮುದ್ದೆ ಮಹಾಯುದ್ಧ) ಯನ್ನು ಆಯೋಜಿಸಲಾಗಿತ್ತು. ಊಟದಲ್ಲಿ ಶಕ್ತಿ ಪ್ರದರ್ಶನ ಮಾಡಲು ಸೂಕ್ತ ಅವಕಾಶ ಕಲ್ಪಿಸಿದ್ದ ಈ ಮುದ್ದೆ ಸವಾಲಿನಲ್ಲಿ ಭಾಗವಹಿಸಲು ಸಿಟಿ ಮಂದಿ ಮುಗಿಬಿದ್ದು ಭಾಗವಹಿಸಿದ್ದು ವಿಶೇಷವಾಗಿತ್ತು.

ಸ್ಪರ್ಧೆಯಲ್ಲಿ ನಿಗದಿಪಡಿಸಿದ 45 ನಿಮಿಷಗಳಲ್ಲಿ ಯಾರು ಅತಿ ಹೆಚ್ಚು ರಾಗಿಮುದ್ದೆಯನ್ನು ನಾಟಿಕೋಳಿ ಸಾರಿನೊಂದಿಗೆ ಖಾಲಿ ಮಾಡುತ್ತಾರೋ ಅವರನ್ನೇ ವಿಜೇತರೆಂದು ಘೋಷಿಸುವ ಚಾಲೆಂಜ್ ನೀಡಲಾಗಿತ್ತು. ಈ ಭರ್ಜರಿ ಮುದ್ದೆ ಫೈಟ್‌ನಲ್ಲಿ ಒಟ್ಟು 175ಕ್ಕೂ ಹೆಚ್ಚು ಜನರು ಆಸಕ್ತಿಯಿಂದ ಪಾಲ್ಗೊಂಡಿದ್ದರು. 150 ಪುರುಷರ ಜೊತೆಗೆ 25 ಮಂದಿ ಮಹಿಳೆಯರೂ ಕೂಡ ಸ್ಪರ್ಧಾತ್ಮಕವಾಗಿ ಮುದ್ದೆ ತಿನ್ನಲು ಅಖಾಡಕ್ಕಿಳಿದಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು.

ಟಗರು, ಹೋತ, ಫ್ರಿಡ್ಜ್, ವಾಷಿಂಗ್ ಮಷಿನ್ ಬಹುಮಾನ:

ಸ್ಪರ್ಧೆಯಲ್ಲಿ ಅತಿ ಹೆಚ್ಚು ರಾಗಿಮುದ್ದೆ ತಿಂದ ಮೂವರು ಪುರುಷರು ಹಾಗೂ ಮೂವರು ಮಹಿಳೆಯರಿಗೆ ಆಕರ್ಷಕ ಉಡುಗೊರೆಗಳನ್ನು ನೀಡಲಾಯಿತು. ಜವಾರಿ ಶೈಲಿಯ ಟಗರು, ಹೋತ ಹಾಗೂ ನಾಟಿಕೋಳಿಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಗೃಹೋಪಯೋಗಿ ವಸ್ತುಗಳಾದ ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಅನೇಕ ಉಪಯುಕ್ತ ಗಿಫ್ಟ್‌ಗಳನ್ನು ನೀಡಲಾಯಿತು.

ಇದನ್ನೂ ಓದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್: ಇಲ್ಲಿದೆ ಟಿಕೆಟ್ ದರ, ವೇಳಾಪಟ್ಟಿ ಮಾಹಿತಿ

14 ಮುದ್ದೆ ಖಾಲಿ ಮಾಡಿ ‘ಟಗರು’ ಗೆದ್ದ ಶಂಭುಗೌಡ

ಈ ಮಹಾಯುದ್ಧದಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ನಿವಾಸಿ ಶಂಭುಗೌಡ ಅವರು ಬರೋಬ್ಬರಿ 14 ರಾಗಿಮುದ್ದೆಗಳನ್ನು ನುಂಗುವ ಮೂಲಕ ಪ್ರಥಮ ಸ್ಥಾನ ಪಡೆದು ಟಗರು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. “ಈ ಹಿಂದೆ ನಡೆದಿದ್ದ ಸ್ಪರ್ಧೆಯಲ್ಲೂ ನಾನು 14 ಮುದ್ದೆ ತಿಂದಿದ್ದೆ. ಕಳೆದ ಬಾರಿ ಹೋತ ಗೆದ್ದುಕೊಂಡಿದ್ದೆ, ಈ ಬಾರಿ ಟಗರು ಗೆದ್ದಿರೋದು ಬಹಳ ಖುಷಿಯಾಗಿದೆ. ಸ್ಪರ್ಧೆಗೆಂದೇ ನಾನು ಪ್ರತ್ಯೇಕವಾಗಿ ಯಾವುದೇ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ದಿನನಿತ್ಯ ಮನೆಯಲ್ಲೂ ಮೂರ್ನಾಲ್ಕು ಮುದ್ದೆ ತಿನ್ನುತ್ತೇನೆ,” ಎಂದು ಅವರು ಪ್ರತಿಕ್ರಿಯಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ