AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ: ಮೆಟ್ರೋನಲ್ಲಿ ತಾಂತ್ರಿಕ ದೋಷಕ್ಕೆ ಸ್ಫೋಟಕ ಕಾರಣ ಬಯಲು

ನಮ್ಮ ಮೆಟ್ರೋ ಬೆಂಗಳೂರಿಗರ ಜೀವನಾಡಿಯಾಗಿದೆ. ಯಾವುದೇ ಟ್ರಾಫಿಕ್ ಕಿರಿಕಿರಿ ಬೇಡವೇ ಬೇಡವೆಂದು ಜನರು ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಆದ್ರೆ, ಇತ್ತೀಚೆಗೆ ಅದ್ಯಾಕೋ ನಮ್ಮ ಮೆಟ್ರೋಗಳಲ್ಲಿ ಮೇಲಿಂದ ಮೇಲೆ ತಾಂತ್ರಿಕ ದೋಷಗಳು ಕಂಡುಬರುತ್ತಿದೆ. ಅದರಲ್ಲೂ ಕಬ್ಬನ್ ಪಾರ್ಕ್​ ಮೆಟ್ರೋ ನಿಲ್ದಾಣದಲ್ಲಿ ಪದೇ ಪದೇ ದೋಷ ಕಂಡು ಬರುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಬಿಎಂಆರ್​​ಸಿಎಲ್ ಟೆಕ್ನಿಕಲ್ ಟೀಮ್ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಿದಾಗ ಮಹತ್ವದ ಕಾರಣ ಪತ್ತೆಯಾಗಿದೆ. ಹಾಗಾದ್ರೆ, ಮೆಟ್ರೋನಲ್ಲಿ ದೋಷಕಂಡುಬರುತ್ತಿರುವುದ್ಯಾಕೆ? ಟೆಕ್ನಿಕಲ್ ತಂಡ ನೀಡಿದ ವರದಿಯಲ್ಲೇನಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ: ಮೆಟ್ರೋನಲ್ಲಿ ತಾಂತ್ರಿಕ ದೋಷಕ್ಕೆ ಸ್ಫೋಟಕ ಕಾರಣ ಬಯಲು
Namma Metro
ಕಿರಣ್​ ಸೂರ್ಯ
| Edited By: |

Updated on:Jun 26, 2026 | 5:57 PM

Share

ಮುಖ್ಯಾಂಶಗಳು

  • ಪದೇ ಪದೇ ನಮ್ಮ ಮೆಟ್ರೋ ಸಮಸ್ಯೆಗೆ ಕಾರಣ ಕಂಡುಹಿಡಿದ ಬಿಎಂಆರ್​​ಸಿಎಲ್
  • ಕಬ್ಬನ್ ಪಾರ್ಕ್​ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ ಪತ್ತೆ ಮಾಡಿದ ಟೆಕ್ನಿಕಲ್ ತಂಡ
  • ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದ ವರದಿ

ಬೆಂಗಳೂರು, ಜೂನ್ 26):  ‘ನಮ್ಮ ಮೆಟ್ರೋ’  (Namma Metro) ಸೇವೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೊಬ್ಬರಿ 21 ಬಾರಿ ತಾಂತ್ರಿಕ ದೋಷ ಕಂಡುಬಂದಿದ್ದು, ಪ್ರಯಾಣಿಕರಲ್ಲಿ ಭಾರಿ ಆತಂಕ ಮೂಡಿಸಿದೆ. ಪೀಕ್ ಅವರ್ಸ್ ನಲ್ಲೇ ನಮ್ಮ ಮೆಟ್ರೋಗಳು ಕೈ ಕೊಡುತ್ತಿವೆ. ಮುಖ್ಯವಾಗಿ ಕಳೆದ 3 ವರ್ಷಗಳಲ್ಲಿ 11 ಬಾರಿ ನೇರಳೆ ಮಾರ್ಗದಲ್ಲಿ ಮೆಟ್ರೋನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅದರಲ್ಲೂ ಮುಖ್ಯವಾಗಿ ಮೊನ್ನೇ ಕಬ್ಬನ್ ಪಾರ್ಕ್​ ಮೆಟ್ರೋ ನಿಲ್ದಾಣದಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿರುವುದರಿಂದ ತಲೆ ಗಂಭೀರವಾಗಿ ಪರಿಗಣಿಸಿದ್ದ ಬಿಎಂಆರ್​​ಸಿಎಲ್ ಕೊನೆಗೆ ಕಾರಣವನ್ನು ಪತ್ತೆ ಮಾಡಿದೆ. ಅದೇಕೆ ಮೇಲಿಂದ ಮೇಲೆ ಸಮಸ್ಯೆಗಳು ಆಗುತ್ತಿವೆ ಎಂದು ಟೆಕ್ನಿಕಲ್ ಟೀಮ್ ನಡೆಸಿದ ಪರಿಶೀಲನೆಯಲ್ಲಿ ಮಹತ್ವದ ಕಾರಣ ಪತ್ತೆಯಾಗಿದೆ. ತಾಂತ್ರಿಕ ದೋಷ ಕಂಡುಬರುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ಕೊನೆಗೂ ಟೆಕ್ನಿಕಲ್ ತಂಡ ಪತ್ತೆ ಮಾಡಿ ಬಿಎಂಆರ್​​​ಸಿಎಲ್ ವರದಿ ನೀಡಿದ್ದು, ಈ ಹಿಂದೆ ನಮ್ಮ ಮೆಟ್ರೋದಲ್ಲಿ ಇಂತಹ ಘಟನೆ ನಡೆದಿರಲಿಲ್ವಂತೆ‌. ಇನ್ನು ಒಂದು ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎನ್ನುವುದು ವರದಿ ತಿಳಿಸಿದೆ.

ತಾಂತ್ರಿಕ ದೋಷಕ್ಕೆ ಕಾರಣವೇನು? ವರದಿಯಲ್ಲೇನಿದೆ?

ಮೊನ್ನೇ ಕಬ್ಬನ್ ಪಾರ್ಕ್​ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ಸಮಸ್ಯೆ ಸಂಬಂಧ ಬಿಎಂಆರ್​​ಸಿಎಲ್, ಪ್ರಾಥಮಿಕ ತನಿಖೆಯ ವರದಿ ಬಿಡುಗಡೆ ಮಾಡಿದ್ದು,  ಅಂದು ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತವಾಗ್ತಿತಂತೆ. ಎಂಜಿ ರೋಡ್ ನಿಂದ ಕಬ್ಬನ್ ಪಾರ್ಕ್ ಮಧ್ಯದ ಟನಲ್ ನಲ್ಲೇ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಅನಿಲ್ ಕುಂಬ್ಳೆ ಸರ್ಕಲ್ ನಿಂದ ಕಬ್ಬನ್ ಪಾರ್ಕ್‌ ನಿಲ್ದಾಣದ ವರೆಗೆ ರೈಲು ವಿದ್ಯುತ್ ಸಂಪರ್ಕವಿಲ್ಲದೇ ಸಂಚಾರ ಮಾಡಿದೆ. ಅನಿಲ್ ಕುಂಬ್ಳೆ ಸರ್ಕಲ್ ಬಳಿಕ ಸುರಂಗ ಮಾರ್ಗ ಆರಂಭವಾಗುತ್ತದೆ. ಈ ಮಾರ್ಗದಲ್ಲಿ ತಿರುವು ಸಿಗುತ್ತದೆ. ಇಲ್ಲಿ ಹಳಿಯ ಪಕ್ಕದಲ್ಲಿ ಥರ್ಡ್ ರೈಲ್ ಸಂಪರ್ಕ ಇದೆ. ಆದರೆ,ಇಲ್ಲಿದ್ದ ಫೈಬರ್ ಕವರ್ ಮುಂದಕ್ಕೆ ಪಾಸ್ ಆಗಿದ್ಯಂತೆ. ಹೀಗಾಗಿ ರೈಲು ಹಳಿ ಮತ್ತು ವಿದ್ಯುತ್ ಹಳಿಯ ನಡುವೆ ಅಂತರ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ

ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ

ವೈರ್ ಶಾರ್ಟ್ ಸಕ್ಯೂರ್ಟ್ ಆಗಿ ಈ ಸಮಸ್ಯೆಯಿಂದಾಗಿ ರೈಲಿಗೆ ಪವರ್ ಸಪ್ಲೈ ಆಗಿಲ್ಲವಂತೆ. ಇದರಿಂದಾಗಿ ಥರ್ಡ್ ರೈಲ್ ಮತ್ತು ಸಿಸಿಡಿಗೂ ಹಾನಿ ಉಂಟಾಗಿತ್ತು. ಇಷ್ಟಾದರೂ ತಕ್ಷಣಕ್ಕೆ ರೈಲು ಸ್ಟಾಪ್ ಆಗಿಲ್ಲ. ಮುಂದಿನ ಸ್ಟೇಷನ್ ಕಬ್ಬನ್ ಪಾರ್ಕ್‌ ವರೆಗೂ ರೈಲು ಬಂದಿದೆ. ರೈಲು ಏನಾದರೂ ಟನಲ್ ಒಳಗೆ ಸ್ಟಾಪ್ ಆಗಿದ್ರೆ ದೊಡ್ಡಮಟ್ಟದಲ್ಲಿ ಅನಾಹುತವಾಗ್ತಿತ್ತು ಎಂದು ಬಿಎಂಆರ್​​ಸಿಎಲ್ ಬಿಡುಗಡೆ ಮಾಡಿದ ಪ್ರಾಥಮಿಕ ವರದಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Fri, 26 June 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!