AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಅತಿ ಉದ್ದದ ಎಲಿವೇಟೆಡ್ ಮೆಟ್ರೊ ಮಾರ್ಗ ರೆಡಿ: ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ

ಪಿಂಕ್ ಲೈನಲ್ಲಿ ಬರುವ ಕಾಳೇನ ಅಗ್ರಹಾರ ಟು ತಾವರೆಕೆರೆವರೆಗಿನ ಆರು ಮೆಟ್ರೋ ಸ್ಟೇಷನ್ ಗಳು ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಮೆಟ್ರೋ ರೈಲ್ವೆ ಸೇಫ್ಟಿ ಕಮೀಷನರ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು,ಈ ಹಿನ್ನೆಲೆ ಸಿಎಂ ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಾರ್ಪಣೆಗೆ ಆಗಮಿಸುವಂತೆ ಪತ್ರವನ್ನು ಬರೆದಿದ್ದು, ಮೋದಿ ಆಗಮನಕ್ಕಾಗಿ ಬೆಂಗಳೂರಿಗರು ಕಾತುರದಿಂದ ಕಾಯುತ್ತಿದ್ದಾರೆ.

ಬೆಂಗಳೂರಿನ ಅತಿ ಉದ್ದದ ಎಲಿವೇಟೆಡ್ ಮೆಟ್ರೊ ಮಾರ್ಗ ರೆಡಿ:  ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ
Dk Shivakumar And Modi
ಕಿರಣ್​ ಸೂರ್ಯ
| Edited By: |

Updated on:Oct 17, 2026 | 8:39 AM

Share

ಬೆಂಗಳೂರು,  (ಅಕ್ಟೋಬರ್ 16): ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 7.5 ಕಿಮೀ ಎಲಿವೇಟೆಡ್ ಪಿಂಕ್ ಲೈನ್ ನಮ್ಮ ಮೆಟ್ರೋ ಮಾರ್ಗ ಆರಂಭಕ್ಕೆ ಸಿದ್ಧವಾಗಿದೆ. ರೈಲ್ವೆ ಸೇಫ್ಟಿ ಕಮೀಷನರ್ ಕೂಡ ತಪಾಸಣೆ ಮುಗಿಸಿ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಡಿಕೆ ಶಿವಕುಮಾರ್ ಅವರು ಮೆಟ್ರೋ ಉದ್ಘಾಟನೆಗೆ ಡೇಟ್ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ನವೆಂಬರ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಪಿಂಕ್ ಲೈನ್ ಉದ್ಘಾಟನೆಯಾಗಬಹುದು. ಈ ಮಾರ್ಗ ಆರಂಭವಾದರೆ ಬೆಂಗಳೂರು ಮೆಟ್ರೋ 103.6 ಕಿ.ಮೀ. ವಿಸ್ತರಣೆಯೊಂದಿಗೆ ದೇಶದಲ್ಲೇ 2ನೇ ಅತಿ ಉದ್ದದ ಜಾಲವಾಗಲಿದೆ.

ಇನ್ನು ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆ ಯವರೆಗೆ ಸಂಪರ್ಕ ಕಲ್ಪಿಸುವ ಈ 7.5 ಕಿ.ಮೀ. ಮಾರ್ಗವು ಕಾರ್ಯಾರಂಭ ಮಾಡಿದರೆ, ಬೆಂಗಳೂರಿನ ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿ.ಮೀ.ಗೆ ತಲುಪಲಿದ್ದು, ಇದು ದೇಶದಲ್ಲೇ ಎರಡನೇ ಅತಿ ಉದ್ದದ ಮೆಟ್ರೋ ಜಾಲವಾಗಲಿದೆ. ಈ ಮಾರ್ಗದಲ್ಲಿ ಜಯದೇವ ಆಸ್ಪತ್ರೆ ನಿಲ್ದಾಣವೂ ಸೇರಿದಂತೆ ಒಟ್ಟು ಆರು ನಿಲ್ದಾಣಗಳಿದ್ದು, ಇದು ನಗರದ ಮೂರನೇ ಪ್ರಮುಖ ಇಂಟರ್ ಚೇಂಜ್ ನಿಲ್ದಾಣವಾಗಲಿದೆ.

ಇದನ್ನೂ ಓದಿ: ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ವಿಸ್ತರಣೆ: ಡಿಪಿಆರ್​​ಗೆ ರಾಜ್ಯ ಸರ್ಕಾರ ಸೂಚನೆ

ಕಾಳೇನ ಅಗ್ರಹಾರ,ಹುಳಿಮಾವು,ಐಐಎಂಬಿ,ಜೆ.ಪಿ. ನಗರ 4ನೇ ಹಂತ ಜಯದೇವ ಆಸ್ಪತ್ರೆ (ಹಳದಿ ಮಾರ್ಗದೊಂದಿಗೆ ಇಂಟರ್‌ಚೇಂಜ್)ತಾವರೆಕೆರೆ ಮೆಟ್ರೋ ಸ್ಟೇಷನ್ ಗಳು ಓಪನ್ ಆಗಲಿದೆ. ಬನ್ನೇರುಘಟ್ಟ ರೋಡ್ ನಲ್ಲಿ ಸಾಕಷ್ಟು ಐಟಿ ಕಂಪನಿಗಳು ಮತ್ತು ಸ್ಕೂಲ್ ಕಾಲೇಜುಗಳಿವೆ. ಪಿಂಕ್ ಓಪನ್ ಆದ್ರೆ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದೆ ಇಲ್ಲಿನ ನಿವಾಸಿಗಳು ಬಹಳ ಸಹಾಯ ಆಗಲಿದೆ ಅಂತಾರೇ.

ಒಟ್ನಲ್ಲಿ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಮಾಡಲು ಆಗಮಿಸುವಂತೆ ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಲೋಕಾರ್ಪಣೆಗೆ ಮೋದಿ ಆಗಮಿಸುತ್ತಾರಾ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Fri, 16 October 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು