AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಫೈರಿಂಗ್: ಡ್ರೈವರ್​​​ ಮೇಲೆ ಗುಂಡಿನ ದಾಳಿ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ

ಬೆಂಗಳೂರಿನಲ್ಲಿ ಗುಂಡಿದ ಸದ್ದು ಕೇಳಿಬಂದಿದೆ. ನಗರದ ಪಿಳ್ಳಗಾನಹಳ್ಳಿ ನೈಸ್ ರೋಡ್ ಬ್ರಿಡ್ಜ್ ಬಳಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ ಓರ್ವ ವ್ಯಕ್ತಿ ಕಾಲಿಗೆ ಮೂರು ಸುತ್ತು ಫೈರಿಂಗ್‌ ಮಾಡಲಾಗಿದೆ. ಹಳೇ ದ್ವೇಷ ಹಿನ್ನೆಲೆ ಫೈರಿಂಗ್‌ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಫೈರಿಂಗ್: ಡ್ರೈವರ್​​​ ಮೇಲೆ ಗುಂಡಿನ ದಾಳಿ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ
ಸಂಪಂಗಿ, ಶ್ರೀನಿವಾಸ್ Image Credit source: tv9 kannada
ಪ್ರದೀಪ್​ ಚಿಕ್ಕಾಟಿ
| Edited By: |

Updated on: Oct 14, 2026 | 10:45 PM

Share

ಬೆಂಗಳೂರು, ಅಕ್ಟೋಬರ್​​ 14: ಹಳೇ ದ್ವೇಷ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮೂರು ಸುತ್ತು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಪಿಳ್ಳಗಾನಹಳ್ಳಿ ನೈಸ್ ರಸ್ತೆ ಸೇತುವೆ ಬಳಿ ನಡೆದಿದೆ. ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನನ ಕಾಲಿಗೆ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ ಎಂಬಾತನಿಂದ ಫೈರಿಂಗ್​ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ​ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಗಾಯಾಳು ಶ್ರೀನಿವಾಸ್, ಸಂಪಂಗಿ ಬಳಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದ. ವೇಳೆ ವೈಯಕ್ತಿಕ ವಿಚಾರವಾಗಿ ಸೀನ ಮತ್ತು ಸಂಪಂಗಿ ನಡುವೆ ಗಲಾಟೆ ನಡೆದಿದೆ. ಹೀಗಾಗಿ ಸುಮಾರು ಒಂದು ವರ್ಷದ ಹಿಂದೆ ಡ್ರೈವಿಂಗ್ ಕೆಲಸದಿಂದ ಸೀನನನ್ನ ತೆಗೆದುಹಾಕಲಾಗಿತ್ತು. ಇಬ್ಬರ ಮಧ್ಯೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಶ್ರೀನಿವಾಸ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಂಪಂಗಿ ಕಳೆದೊಂದು ತಿಂಗಳ ಹಿಂದೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಧ್ಯರಾತ್ರಿ ಪೊಲೀಸರಿಂದ ಫೈರಿಂಗ್: ಹಲ್ಲೆಗೆ ಯತ್ನಿಸಿದ ಜಿಶಾನ್ ಕಾಲಿಗೆ ಗುಂಡು!

ಇನ್ನು ಇಂದು ಸಂಜೆ ಸಂಪಂಗಿ ಮೂವರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಬೈಕ್‌ನಲ್ಲಿ ಬರುತ್ತಿದ್ದ ಶ್ರೀನಿವಾಸ್‌ನನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಸಂಪಂಗಿ ಲೈಸೆನ್ಸ್ ಹೊಂದಿರುವ ಬಂದೂಕಿನಿಂದ ಶ್ರೀನಿವಾಸ್ ಕಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಸದ್ಯ ಗಾಯಾಳು ಶ್ರೀನಿವಾಸ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

LIVE TV

ಜಮೀನು ಮಾರಾಟ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಹಾಸನ ತಾಲೂಕಿನ ರಾಮದೇವರಪುರ ಗ್ರಾಮದಲ್ಲಿ ಜಮೀನು ಮಾರಾಟದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಪೃಥ್ವಿ (29) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಪೃಥ್ವಿ ಜಮೀನು ಮಾರಾಟ ಮಾಡುವ ಸಂಬಂಧ ಸಂತೋಷ್ ಎಂಬಾತನಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದ. ಆದರೆ, ಸಂತೋಷ್ ಆ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡುವುದಾಗಿ ಹೇಳಿ ಅಡ್ವಾನ್ಸ್ ಹಣ ಪಡೆದಿದ್ದ. ಬಳಿಕ ಪೃಥ್ವಿ ಜಮೀನು ಮಾರಾಟ ಮಾಡಲು ನಿರಾಕರಿಸಿದ್ದು, ತಾನೇ ಜಮೀನನ್ನು ಮರಳಿ ಖರೀದಿಸುವುದಾಗಿ ಹೇಳಿ ಬೆಲೆ ಎಷ್ಟು ಎಂದು ಕೇಳಿದ್ದ. ಆದರೆ, ಅಗ್ರಿಮೆಂಟ್ ಪ್ರಕಾರ ಜಮೀನು ಮಾರಾಟ ಮಾಡಲೇಬೇಕೆಂದು ಸಂತೋಷ್ ಪಟ್ಟು ಹಿಡಿದಿದ್ದರಿಂದ ಇಬ್ಬರ ನಡುವೆ ಜಗಳವಾಗಿದೆ.

ಇದನ್ನೂ ಓದಿ: 600 ರೂಪಾಯಿ‌ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ: ಆರೋಪಿ ಅರೆಸ್ಟ್​​

ಈ ವಿಚಾರವಾಗಿ ನಡೆದ ಗಲಾಟೆಯೇ ಕೊಲೆಗೆ ಕಾರಣ. ರಾತ್ರಿ ಜಮೀನಿನ ಬಳಿ ತೆರಳಿದ್ದ ವೇಳೆ ಪೃಥ್ವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಆರೋಪಿಗಳು ಪೃಥ್ವಿಯ ಮೊಬೈಲ್ ಹಾಗೂ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಸಂತೋಷ್ ಮತ್ತು ಆತನ ತಂದೆ ಪುಟ್ಟಸ್ವಾಮಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More