AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

600 ರೂಪಾಯಿ‌ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ: ಆರೋಪಿ ಅರೆಸ್ಟ್​​

ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಬಳಿ 600 ರೂಪಾಯಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬನ ಕೊಲೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೊಲೆಯಾದ ವ್ಯಕ್ತಿಯ ಬಳಿ ಮೊಬೈಲ್​​ ಅಡ ಇಟ್ಟು ಮದ್ಯ ಕುಡಿಯಲು ಹಣ ಪಡೆದಿದ್ದ. ಅದನ್ನು ಹಿಂತಿರುಗಿಸುವ ವಿಚಾರವಾಗಿ ನಡೆದ ಗಲಾಟೆ ವೇಳೆ ದೊಣ್ಣೆಯಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ ಪರಿಣಾಮ, ಗಂಭೀರ ಗಾಯಗೊಂಡ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

600 ರೂಪಾಯಿ‌ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ: ಆರೋಪಿ ಅರೆಸ್ಟ್​​
ಮಂಜು ಅಲಿಯಾಸ್ ಕೋಳಿ ಮಂಜು Image Credit source: Tv9 Kannada
ಶಿವಪ್ರಸಾದ್​ ಬಿ.
| Edited By: |

Updated on: Oct 11, 2026 | 10:40 AM

Share

ಬೆಂಗಳೂರು, ಅಕ್ಟೋಬರ್​​ 11: 600 ರೂಪಾಯಿ‌ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಬಳಿ ನಡೆದಿದೆ. ಮಂಜು ಅಲಿಯಾಸ್ ಕೋಳಿ ಮಂಜು ಮೃತ ವ್ಯಕ್ತಿಯಾಗಿದ್ದು, ಆರೋಪಿ ಪಳನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಜು ಮತ್ತು ಪಳನಿ ನಡುವೆ ನಿನ್ನೆ ರಾತ್ರಿ ಬಾರ್​​ ಬಳಿ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಸಿ‌.ಕೆ.ಅಚ್ಚಕಟ್ಟು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮಂಜು ಬಳಿ ಮೊಬೈಲ್​​ ಅಡ ಇಟ್ಟಿದ್ದ ಪಳನಿ

ಇನ್ನು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದ ಮಂಜು ಬಳಿ ಆರೋಪಿ ಪಳನಿ, ತನ್ನ ಮೊಬೈಲನ್ನ ಅಡಮಾನ ಇಟ್ಟಿದ್ದ. ಮದ್ಯಸೇವಿಸಲು ಹಣ ಬೇಕಿದ್ದ ಕಾರಣಕ್ಕೆ ಮೊಬೈಲ್​​ ಅಡವಿಟ್ಟು ದುಡ್ಡು ಪಡೆದಿದ್ದ. ನಿನ್ನೆ ತಡರಾತ್ರಿ ಮೊಬೈಲ್ ವಾಪಾಸ್ಸು ನೀಡುವಂತೆ ಮಂಜುಗೆ ಪಳನಿ ಧಮ್ಕಿ ಹಾಕಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಮಂಜನ ಮೇಲೆ ಅಟ್ಯಾಕ್ ಮಾಡಿದ್ದ. ದೊಣ್ಣೆಯಿಂದ ತಲೆಯ ಭಾಗಕ್ಕೆ ಪಳನಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಂಜು ಪ್ರಾಣಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಟ್ರಾಲಿಗಳ ಕೆಳಗೆ 1.2 ಕೆಜಿ ಚಿನ್ನ ಅಡಗಿಸಿ ಸಾಗಾಟ ಯತ್ನ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಇಬ್ಬರ ಬಂಧನ

ಪೊಲೀಸರ ಮೇಲೆ ಹಲ್ಲೆ: 12 ಜನರ ವಿರುದ್ಧ ದೂರು

ಜಗಳ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ, ನಿಂದನೆ ಆರೋಪ ಸಂಬಂಧ PSI ಕೆ.ಎಸ್​.ಶೋಭಾರಾಣಿ ನ್ಯಾಮತಿ ಠಾಣೆ ಸಿಪಿಐಗೆ ದೂರು ನೀಡಿದ್ದು, ಅದರನ್ವಯ 12 ಜನರ ವಿರುದ್ಧ ಪೊಲೀಸರು ಕಂಪ್ಲೇಟ್​​ ದಾಖಲಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ಸೋಗಿಲು ಗ್ರಾಮದಲ್ಲಿ ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಕಳೆದ ಶುಕ್ರವಾರ ಗಲಾಟೆ ನಡೆದಿತ್ತು. ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ನಡೆಸಿ ನಿಂದಿಸಿದ್ದರು ಎಂದು ದೂರಲಾಗಿತ್ತು. ಹೀಗಾಗಿ ಅಣ್ಣಪ್ಪ, ಸಂಜು, ಮಂಜಪ್ಪ, ಬಸವರಾಜ್, ಹನುಮಂತಪ್ಪ, ಶಿವು, ಸುನೀಲ್, ಪ್ರದೀಪ್, ಮಹಾಲಕ್ಷ್ಮೀ, ಹಾಲೇಶ್ ಮಲ್ಲಮ್ಮ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಮತ್ತು ನಿಂದನೆ ಆರೋಪದಡಿ ನ್ಯಾಮತಿ ಪೊಲೀಸ್​​​​ ಠಾಣೆಯಲ್ಲೀಗ ದೂರು ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ