ಕರ್ನಾಟಕ ರಾಜ್ಯೋತ್ಸವದಂದೇ ಮೆಟ್ರೋ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಯೆಲ್ಲೋ ಲೈನ್​ಗೆ ಮತ್ತೊಂದು ರೈಲು

ನವೆಂಬರ್ 1ರಿಂದ ಹಳದಿ ಮಾರ್ಗದಲ್ಲಿ 5ನೇ ಮೆಟ್ರೋ ರೈಲು ಸೇವೆ ಆರಂಭಿಸಲಿದೆ ಎಂದು ಬಿಎಂಆರ್​​ಸಿಎಲ್​ ತಿಳಿಸಿದೆ. ಆ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಯೆಲ್ಲೋ ಲೈನ್​​ನಲ್ಲಿ ಪ್ರತಿದಿನ 5 ಮೆಟ್ರೋ ಸಂಚರಿಸಲಿವೆ.

ಕರ್ನಾಟಕ ರಾಜ್ಯೋತ್ಸವದಂದೇ ಮೆಟ್ರೋ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಯೆಲ್ಲೋ ಲೈನ್​ಗೆ ಮತ್ತೊಂದು ರೈಲು
ಯೆಲ್ಲೋ ಲೈನ್ ಮೆಟ್ರೋ
Updated By: ಗಂಗಾಧರ​ ಬ. ಸಾಬೋಜಿ

Updated on: Oct 31, 2025 | 3:13 PM

ಬೆಂಗಳೂರು, ಅಕ್ಟೋಬರ್​ 31: ನವೆಂಬರ್ 1ರಿಂದ ಹಳದಿ ಮಾರ್ಗದಲ್ಲಿ ನಾಳೆ ಬೆಳಿಗ್ಗೆ 5 ಗಂಟೆಗೆ 5ನೇ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ. ಆ ಮೂಲಕ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ನಾಳೆಯಿಂದ ಯೆಲ್ಲೋ ಲೈನ್​ನಲ್ಲಿ ಪ್ರತಿದಿನ 5 ಮೆಟ್ರೋ ಸಂಚರಿಸಲಿವೆ. ಈ ಕುರಿತಾಗಿ ಬಿಎಂಆರ್​​ಸಿಎಲ್​ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬಿಎಂಆರ್​​ಸಿಎಲ್​ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಕರ್ನಾಟಕ ರಾಜ್ಯೋತ್ಸವದ 70ನೇ ವರ್ಷದ ಆಚರಣೆಯ ಸಂದರ್ಭದಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು, ನವೆಂಬರ್​ 1ರಿಂದ ಹಳದಿ ಮಾರ್ಗದಲ್ಲಿ ಐದನೇ ಮೆಟ್ರೋ ರೈಲನ್ನು ವಾಣಿಜ್ಯ ಸೇವೆಗೆ ಒಳಪಡಿಸುತ್ತಿದೆ.

ಇದನ್ನೂ ಓದಿ
ಹೃದಯ-ಶ್ವಾಸಕೋಶ ಸಾಗಾಟ: ಜೀವ ರಕ್ಷಣೆಗೆ ಮೆಟ್ರೋದಿಂದ ಮತ್ತೊಂದು ಮಾನವೀಯ ಸೇವೆ
ನಮ್ಮ ಮೆಟ್ರೋ ಚಲ್ಲಘಟ್ಟ - ವೈಟ್‌ಫೀಲ್ಡ್ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಕಿತ್ತಳೆ ಮಾರ್ಗಕ್ಕಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾದ BMRCL:ಆಕ್ರೋಶ
ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BMRCL?

ನಮ್ಮ ಮೆಟ್ರೋ ಟ್ವೀಟ್​​

ಈ ಹೊಸ ರೈಲಿನ ಚಾಲನೆಯಿಂದ, ಹಳದಿ ಮಾರ್ಗದಲ್ಲಿ ಪೀಕ್ ಅವಧಿಯಲ್ಲಿ ರೈಲುಗಳ ಆವರ್ತನವು ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುತ್ತವೆ. (ಪ್ರಸಕ್ತ 19 ನಿಮಿಷಗಳ ಅಂತರದ ಬದಲಾಗಿ). ಇದರಿಂದ ಪ್ರಯಾಣಿಕರಿಗೆ ಕಡಿಮೆ ಅವಧಿಯಲ್ಲಿ ಸುಗಮ ಮತ್ತು ನಿರಂತರ ಸೇವೆ ನೀಡಲು ಸಹಾಯಕವಾಗಲಿದೆ. ಈ ಬದಲಾವಣೆ ಎಲ್ಲಾ ದಿನಗಳಿಗೆ ಅನ್ವಯವಾಗುತ್ತದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಮತ್ತೊಂದು ಹೊಸ ರೈಲು: ವೇಳಾಪಟ್ಟಿಯಲ್ಲಿ ಬದಲಾವಣೆ

ಆ‌ರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್​ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮಾರ್ಗದಲ್ಲಿ ಕೊನೆಯ ರೈಲು ರಾತ್ರಿ 11 ಗಂಟೆಗೆ ಸಂಚಾರ ಮಾಡಲಿದೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ. ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಬಿಎಂಆರ್​​ಸಿಎಲ್​​ವಿನಂತಿಸಿದೆ.

ಇದನ್ನೂ ಓದಿ: Yellow Line Metro: ಮುಂದಿನ ವಾರದಿಂದ ಟ್ರ್ಯಾಕಿಗಿಳಿಯಲಿದೆ ನಮ್ಮ ಮೆಟ್ರೋ ಯೆಲ್ಲೋ ಲೈನ್ ನಾಲ್ಕನೇ ರೈಲು

ಇನ್ನು ಆಗಸ್ಟ್ 10 ರಂದು ಈ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡಿದ್ದರು. ಆರ್.ವಿ ರೋಡ್ ಟು ಬೊಮ್ಮಸಂದ್ರ 16 ಮೆಟ್ರೋ ಸ್ಟೇಷನ್​​ಗಳಿದ್ದು, 19.5 ಕಿಮೀ ವಿಸ್ತೀರ್ಣ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:11 pm, Fri, 31 October 25