AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಬಿ.ಟೆಕ್​​ ಪದವೀಧರನಾಗಿರುವ ಹೈಟೆಕ್​​ ಕಳ್ಳ: ಆರೋಪಿಯ ಇತಿಹಾಸ ಕೇಳಿದ್ರೆ ನೀವು ಶಾಕ್​​ ಆಗ್ತೀರ!

ವಿಮಾನದಲ್ಲಿ ಸಂಚರಿಸಿ ಮನೆಗಳ ಕಳ್ಳತನ ನಡೆಸುತ್ತಿದ್ದ ಬಿ.ಟೆಕ್ ಪದವೀಧರ, ಅಂತರರಾಜ್ಯ ಕಳ್ಳನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಆರೋಪಿಯ ವಿಚಾರಣೆ ವೇಳೆ ಹಲವು ರೋಚಕ ವಿಚಾರಗಳು ಬಯಲಾಗಿವೆ.ಈತ ಮೂಲತಃ ಆಂಧ್ರಪ್ರದೇಶದ ಹೈದರಾಬಾದ್​​ನವನು. ಬಿ. ಟೆಕ್ ಓದುವಾಗಲೇ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್​​ ಆಗಿದ್ದ ಎಂಬುದು ಗೊತ್ತಾಗಿದೆ.

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಬಿ.ಟೆಕ್​​ ಪದವೀಧರನಾಗಿರುವ ಹೈಟೆಕ್​​ ಕಳ್ಳ: ಆರೋಪಿಯ ಇತಿಹಾಸ ಕೇಳಿದ್ರೆ ನೀವು ಶಾಕ್​​ ಆಗ್ತೀರ!
ಆರೋಪಿ ವಿನೋದ್​​ ಕುಮಾರ್​Image Credit source: Tv9 Kannada
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 24, 2026 | 10:24 AM

Share

ಬೆಂಗಳೂರು, ಸೆಪ್ಟೆಂಬರ್​​ 24: ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಬಿ.ಟೆಕ್​​ ಪದವೀಧರನಾಗಿರುವ ಹೈಟೆಕ್​​ ಕಳ್ಳನೋರ್ವನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ವಿನೋದ್ ಕುಮಾರ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದು, ಈತ ಅಂತರಾಜ್ಯ ಕಳ್ಳ ಎಂಬುದೂ ಬಯಲಾಗಿದೆ. ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಸೇರಿದಂತೆ ಒಟ್ಟು 30ಕ್ಕೂ ಅಧಿಕ ಮನೆಗಳಲ್ಲಿ ಈತ ಕಳ್ಳತನ ನಡೆಸಿದ್ದ. ಈ ಹಣದಲ್ಲಿ ಶೋಕಿ ಜೀವನ ಮಾಡುತ್ತಿದ್ದ ಎನ್ನಲಾಗಿದೆ.

ವಿಚಾರಣೆ ವೇಳೆ ಹಲವು ರೋಚಕ ವಿಚಾರಗಳು ಬಯಲು

ಇನ್ನು ಆರೋಪಿಯ ವಿಚಾರಣೆ ವೇಳೆ ಹಲವು ರೋಚಕ ವಿಚಾರಗಳು ಬಯಲಾಗಿವೆ. ವಿನೋದ್ ಕುಮಾರ್ ಮೂಲತಃ ಆಂಧ್ರಪ್ರದೇಶದ ಹೈದರಾಬಾದ್​​ನವನು. ಬಿ. ಟೆಕ್ ಓದುವಾಗಲೇ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್​​ ಆಗಿದ್ದ ಈತ, ಒಂದು ವರ್ಷ ಜೈಲಲ್ಲೂ ಇದ್ದ. ಜೈಲಿನಿಂದ ಬಿಡುಗಡೆಯಾಗಿ ಸಲೂನ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿ, ಆ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಬಾಂಗ್ಲಾ ದೇಶದ ಯುವತಿಯನ್ನು ಪ್ರೀತಿ ಮಾಡಿ ಮದುವೆಯಾಗಿದ್ದ. ಬಳಿಕ ಆಕೆಯ ಜೊತೆಗೆ ಬಾಂಗ್ಲಾಕ್ಕೆ ತೆರಳಿದ್ದ. ಸುಮಾರು 9 ವರ್ಷಗಳ ಕಾಲ ಬಾಂಗ್ಲಾ ದೇಶದಲ್ಲಿ ವಾಸವಾಗಿ ಅಲ್ಲಿನ ಪೌರತ್ವ ಪಡೆದಿದ್ದ ಈತ, ನಂತರ ನಕಲಿ ಪಾಸ್​​ಪೋರ್ಟ್ ಪಡೆದು ಇಟಲಿ ಹಾಗೂ ಜರ್ಮನಿಗೂ ತೆರಳಿದ್ದ. ಅಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನಾದರೂ ಆತನಿಗೆ ಅದು ಸಮಾಧಾನ ತಂದಿರಲ್ಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

ಈ ನಡುವೆ ಕಳೆದ ವರ್ಷ ನೇಪಾಳದ ಮೂಲಕ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ವಾಪಸ್​​ ಬಂದಿದ್ದ ವಿನೋದ್​, ತನ್ನ ಕಳ್ಳತನದ ವೃತ್ತಿಯನ್ನು ಪುನರಾರಂಬಿಸಿದ್ದ. ಇದಕ್ಕಾಗಿ ವಿಮಾನದಲ್ಲಿ ಬಂದು ವಿಮಾನದಲ್ಲೇ ಹೋಗುತ್ತಿದ್ದ ಆರೋಪಿ ಬೆಂಗಳೂರಿನಲ್ಲಿ ಕೈಚಳಕ ತೋರಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನಲ್ಲಿ ಕಳ್ಳತನ ಮಾಡಿ ದೆಹಲಿಯಲ್ಲಿದ್ದ ಹೆಂಡತಿಗೆ ಹಣ ಕೊಟ್ಟು ಬರುತ್ತಿದ್ದ ವೇಳೆ ವಿನೋದ್​​ನ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More