AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೈರಸಂದ್ರದಲ್ಲಿ ಗಂಗ-ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ‘ಹುಲಿಬೇಟೆ ವೀರಗಲ್ಲು’ ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರದಲ್ಲಿ ಗಂಗ-ರಾಷ್ಟ್ರಕೂಟರ ಕಾಲದ, ಸುಮಾರು ಕ್ರಿ.ಶ. 850ರ ಅವಧಿಯ ಅಪರೂಪದ 8 ಅಡಿ ಉದ್ದದ 'ಹುಲಿಬೇಟೆ ವೀರಗಲ್ಲು' ಹಳೆಗನ್ನಡ ಶಾಸನದೊಂದಿಗೆ ಪತ್ತೆಯಾಗಿದೆ. ಪತ್ತೆಯಾದ ಈ ವೀರಗಲ್ಲನ್ನು ಸಮೀಪದ ದೇವಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಮುಂದಿನ ಸಂರಕ್ಷಣಾ ಕ್ರಮಗಳಿಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಭೈರಸಂದ್ರದಲ್ಲಿ ಗಂಗ-ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ 'ಹುಲಿಬೇಟೆ ವೀರಗಲ್ಲು' ಪತ್ತೆ
ಪತ್ತೆಯಾಗಿರುವ 'ಹುಲಿಬೇಟೆ ವೀರಗಲ್ಲು Image Credit source: The New Indian Express
ಪ್ರಸನ್ನ ಹೆಗಡೆ
|

Updated on:Jul 26, 2026 | 9:28 AM

Share

ಮುಖ್ಯಾಂಶಗಳು

  • ನೆಲಮಂಗಲ ಸಮೀಪದ ಭೈರಸಂದ್ರದಲ್ಲಿ ವೀರಗಲ್ಲು ಪತ್ತೆ
  • ಕ್ರಿ.ಶ. 850ರ ಅವಧಿಗೆ ಸೇರಿರುವ ಹುಲಿಬೇಟೆ ವೀರಗಲ್ಲು
  • 8 ಅಡಿ ಉದ್ದ ಮತ್ತು 2.5 ಅಡಿ ಅಗಲ ಹೊಂದಿರುವ ಕಲ್ಲು

ಬೆಂಗಳೂರು, ಜುಲೈ 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರದಲ್ಲಿ ಗಂಗ ಹಾಗೂ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಅಪರೂಪದ ‘ಹುಲಿಬೇಟೆ ವೀರಗಲ್ಲು’ ಪತ್ತೆಯಾಗಿದೆ. ಸುಮಾರು ಕ್ರಿ.ಶ. 850ರ ಅವಧಿಗೆ ಸೇರಿದ ಈ ವೀರಗಲ್ಲು ಕನ್ನಡದ ಇತಿಹಾಸದಲ್ಲಿ ಮಹತ್ವದ ಆವಿಷ್ಕಾರವೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 8 ಅಡಿ ಉದ್ದ ಮತ್ತು 2.5 ಅಡಿ ಅಗಲ ಹೊಂದಿರುವ ಈ ವೀರಗಲ್ಲು, ರೈತ ರಂಗಸ್ವಾಮಯ್ಯ ತಮ್ಮ ಜಮೀನಿನಲ್ಲಿದ್ದ ಯೂಕಲಿಪ್ಟಸ್ ಮರಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ವೇಳೆ ಪತ್ತೆಯಾಗಿದೆ.

ಕಾಲಾವಧಿಯ ಸ್ಪಷ್ಟ ಉಲ್ಲೇಖ ಇಲ್ಲ

ಈ ವೀರಗಲ್ಲಿನ ಮೇಲಿರುವ ಶಾಸನವು ಹಳೆಗನ್ನಡ ಲಿಪಿಯಲ್ಲಿದ್ದು, ಅದರಲ್ಲಿ ಕಾಲಾವಧಿಯ ಸ್ಪಷ್ಟ ಉಲ್ಲೇಖ ಇಲ್ಲ. ಆದರೆ ಲಿಪಿಯ ಶೈಲಿಯನ್ನು ಆಧರಿಸಿ ಇದು ಸುಮಾರು ಕ್ರಿ.ಶ. 850ರ ಗಂಗ-ರಾಷ್ಟ್ರಕೂಟರ ಕಾಲಕ್ಕೆ ಸೇರಿದೆ ಎಂದು ತಜ್ಞರು ನಿರ್ಧರಿಸಿದ್ದಾರೆ. ಶಿಲ್ಪದಲ್ಲಿ ವೀರನು ಹುಲಿಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಯುದ್ಧದಲ್ಲಿ ವೀರಮರಣ ಹೊಂದಿದ ಬಳಿಕ ಅಪ್ಸರೆಯರು ಆತನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣವೂ ಇದೆ. ವೀರನು ಬಲಗೈಯಲ್ಲಿ ಕತ್ತಿ ಹಿಡಿದು, ಎಡಗೈಯಿಂದ ಹುಲಿಯ ಮುಂಗಾಲನ್ನು ಹಿಡಿದು ಹೋರಾಡುತ್ತಿರುವುದನ್ನು ಶಿಲ್ಪದಲ್ಲಿ ಕಾಣಬಹುದು.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತಷ್ಟು ಉಲ್ಬಣಿಸಿದ ಟ್ರಾಫಿಕ್​​ ಸಮಸ್ಯೆ; 1.47 ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ

ಶಾಸನದ ಪ್ರಕಾರ, ಈ ವೀರನ ಹೆಸರು ಶಿವಮಾರೆನಾಡಿ. ಆತ ತಣ್ಣಿಯರಟ್ಟಮ್ಮರೊಡೆಯ ಅವರ ಪುತ್ರನಾಗಿದ್ದು, ಮಾರಮ್ಮ ಎಂಬ ಮನ್ನೆನಾಡಿನ ನಾಡಗೌಡನ ಸೇವಕನಾಗಿದ್ದನು. ಕೃಷಿ ಮತ್ತು ಪಶುಸಂಗೋಪನೆ ಪ್ರಮುಖ ಜೀವನೋಪಾಯವಾಗಿದ್ದ ಆ ಕಾಲದಲ್ಲಿ ಬೆಳೆ ಮತ್ತು ಜಾನುವಾರುಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ಸಂದರ್ಭದಲ್ಲಿ ಈ ವೀರನು ಪ್ರಾಣತ್ಯಾಗ ಮಾಡಿದ್ದಾನೆ ಎಂದು ಶಾಸನ ತಿಳಿಸುತ್ತದೆ.ಇತಿಹಾಸಕಾರರ ಪ್ರಕಾರ, ಇಂದಿನ ನೆಲಮಂಗಲ, ಮಾಗಡಿ, ದೊಡ್ಡಬಳ್ಳಾಪುರ ತಾಲ್ಲೂಕುಗಳು ಹಾಗೂ ಹೆಸರಘಟ್ಟ ಹೋಬಳಿಯ ಕೆಲವು ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಮನ್ನೆ ನಾಡು ಎಂದು ಕರೆಯಲಾಗುತ್ತಿತ್ತು. ಗಂಗರ ಆಡಳಿತದ ರಾಜಧಾನಿಯೂ ಮನ್ನೆ ಆಗಿತ್ತು.

ಪತ್ತೆಯಾದ ಈ ವೀರಗಲ್ಲನ್ನು ಸಮೀಪದ ದೇವಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಮುಂದಿನ ಸಂರಕ್ಷಣಾ ಕ್ರಮಗಳಿಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ಜಿ. ರಾವ್ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:03 am, Sun, 26 July 26

Follow Us
ಬಿಗ್ ಬಾಸ್ ಆಟ ಆರಂಭ ಆಗೋದಕ್ಕೂ ಮೊದಲೇ ಶುರುವಾಯ್ತು ಜಗಳ
ಬಿಗ್ ಬಾಸ್ ಆಟ ಆರಂಭ ಆಗೋದಕ್ಕೂ ಮೊದಲೇ ಶುರುವಾಯ್ತು ಜಗಳ
ಆನ್​​ಲೈನ್ ಔಷಧ ಮಾರಾಟದ ಅಕ್ರಮಕ್ಕೆ ತಡೆ, ಹೊಸ ನಿಯಮ ಜಾರಿಗೆ ಚಿಂತನೆ
ಆನ್​​ಲೈನ್ ಔಷಧ ಮಾರಾಟದ ಅಕ್ರಮಕ್ಕೆ ತಡೆ, ಹೊಸ ನಿಯಮ ಜಾರಿಗೆ ಚಿಂತನೆ
ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ
108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ
ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ
ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ
ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್​​ ಒತ್ತಡ?
ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್​​ ಒತ್ತಡ?
ಯುವತಿಗೆ ಮಗು ಕರುಣಿಸಿ ವಂಚಿಸಿದ್ದ ಯುವಕನಿಗೆ ಪೊಲೀಸರಿಂದಲೇ ಮದುವೆ
ಯುವತಿಗೆ ಮಗು ಕರುಣಿಸಿ ವಂಚಿಸಿದ್ದ ಯುವಕನಿಗೆ ಪೊಲೀಸರಿಂದಲೇ ಮದುವೆ
ಕೆಪಿಎಸ್​ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್‌ ನೋಡಿ!
ಕೆಪಿಎಸ್​ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್‌ ನೋಡಿ!
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಶಾಸಕ ಶರಣಗೌಡ ಪ್ರತಿಭಟನೆ!
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಶಾಸಕ ಶರಣಗೌಡ ಪ್ರತಿಭಟನೆ!
ಪ್ರಜಾ ಸೇವಾ ಆಂದೋಲನದಲ್ಲಿ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ದರ್ಪ!
ಪ್ರಜಾ ಸೇವಾ ಆಂದೋಲನದಲ್ಲಿ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ದರ್ಪ!