AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಂತ ಗಳಿಕೆ ಇದ್ದು, ಸ್ವಾವಲಂಬಿಯಾಗಿರೋ ಹೆಂಡತಿಗೆ ಜೀವನಾಂಶ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಉತ್ತಮ ಶಿಕ್ಷಣ ಪಡೆದು, ಸ್ವಂತ ದುಡಿಮೆಯಿಂದ ಜೀವನ ನಿರ್ವಹಣೆ ಮಾಡುವ ಸಾಮರ್ಥ್ಯವಿರುವ ಹಾಗೂ ಸ್ವಾವಲಂಬಿ ಹೆಂಡತಿಗೆ ಗಂಡನಿಂದ ಜೀವನಾಂಶ ಪಡೆಯುವ ಅರ್ಹತೆಯಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದಿರುವುದು ಜೀವನಾಂಶ ಕೋರಲು ಪ್ರಮುಖ ಷರತ್ತು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆರ್ಥಿಕ ಸ್ವಾವಲಂಬನೆ ಜೀವನಾಂಶ ಅರ್ಜಿ ವಜಾಗೊಳಿಸಲು ಸೂಕ್ತ ಆಧಾರವಾಗಿದೆ.

ಸ್ವಂತ ಗಳಿಕೆ ಇದ್ದು, ಸ್ವಾವಲಂಬಿಯಾಗಿರೋ ಹೆಂಡತಿಗೆ ಜೀವನಾಂಶ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕರ್ನಾಟಕ ಹೈಕೋರ್ಟ್ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on:Nov 04, 2026 | 9:58 AM

Share

ಬೆಂಗಳೂರು, ನ.4; ಉತ್ತಮ ಶಿಕ್ಷಣ ಪಡೆದು, ಸ್ವಂತ ದುಡಿಮೆಯಿಂದ ಜೀವನ ನಿರ್ವಹಣೆ ಮಾಡಲು ಸಾಮರ್ಥ್ಯವಿರುವ ಹಾಗೂ ಸ್ವಾವಲಂಬಿಯಾಗಿರುವ ಹೆಂಡತಿಗೆ ಗಂಡನಿಂದ ಜೀವನಾಂಶ (Maintenance) ಪಡೆಯುವ ಅರ್ಹತೆಯಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಕಾನೂನಿನ ಪ್ರಕಾರ ಪತಿಯು ತನ್ನ ಪತ್ನಿಯನ್ನು ಎಲ್ಲಾ ಸಂದರ್ಭಗಳಲ್ಲೂ ಕಡ್ಡಾಯವಾಗಿ ಪೋಷಿಸಲೇಬೇಕು ಎಂದು ಎಲ್ಲೂ ಹೇಳಿಲ್ಲ. ಪತ್ನಿಯು ತನ್ನನ್ನು ತಾನು ನಿರ್ವಹಿಸಿಕೊಳ್ಳಲು ಸಾಧ್ಯವಾಗದಿರುವುದು ಜೀವನಾಂಶ ಕೋರಲು ಇರುವ ಪ್ರಮುಖ ಪೂರ್ವಾಪೇಕ್ಷಿತ ಶರತ್ತಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಪತಿಯು ನೀಡಬೇಕಾಗಿದ್ದ ಮಾಸಿಕ 20,000 ರೂಪಾಯಿ ಜೀವನಾಂಶದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲಕೂರು ಸುಮಾಲತಾ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.

“ಪತಿಯ ಆದಾಯವು ಪತ್ನಿಗಿಂತ ಎಷ್ಟೇ ಹೆಚ್ಚಿದ್ದರೂ, ಪತ್ನಿಯು ಉತ್ತಮ ಶಿಕ್ಷಣ ಪಡೆದು, ತಿಂಗಳಿಗೆ 54,700 ರೂಪಾಯಿಗಳಷ್ಟು ಗಳಿಕೆ ಮಾಡುತ್ತಿದ್ದರೆ ಹಾಗೂ ತನ್ನ ಜೀವನವನ್ನು ತಾನೇ ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರೆ, ಆಕೆಯನ್ನು ಗಂಡನ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಂತ ಗಳಿಕೆ ಇರುವುದು ಜೀವನಾಂಶದ ಅರ್ಜಿಯನ್ನು ವಜಾಗೊಳಿಸಲು ಸೂಕ್ತ ಆಧಾರವಾಗಿದೆ,” ಎಂದು ನ್ಯಾಯಪೀಠ ಹೇಳಿದೆ.

ಪೋಷಕರನ್ನು ಸಾಕುವಾಗ ಗಂಡನ ಹಣ ಬೇಕಿಲ್ಲ:

ಪತಿಯು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು ವರ್ಷಕ್ಕೆ 40 ಲಕ್ಷ ರೂ. ಗಳಿಸುತ್ತಾನೆ ಎಂದು ಪತ್ನಿ ವಾದಿಸಿದ್ದರು. ಪತ್ನಿಯೂ ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದು ವರ್ಷಕ್ಕೆ 10 ಲಕ್ಷ ರೂ. ಗಳಿಸುತ್ತಿದ್ದರು. ವಿಚಾರಣೆ ವೇಳೆ, “ನನ್ನ ಸ್ವಂತ ಗಳಿಕೆಯಿಂದ ತಿಂಗಳಿಗೆ 35,000 ರೂ. ವ್ಯಯಿಸಿ ಪೋಷಕರನ್ನು ನಾನೇ ಸಾಕುತ್ತಿದ್ದೇನೆ” ಎಂದು ಪತ್ನಿ ಹೇಳಿಕೊಟ್ಟಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿದ ಹೈಕೋರ್ಟ್, “ತನ್ನ ಆದಾಯದಲ್ಲಿ ಪೋಷಕರನ್ನೇ ಪೋಷಿಸುವ ಸಾಮರ್ಥ್ಯವಿರುವ ಮಹಿಳೆ, ತನಗೆ ಬದುಕಲು ಗಂಡನ ನೆರವು ಬೇಕು ಎನ್ನುವುದು ಒಪ್ಪಲು ಸಾಧ್ಯವಿಲ್ಲ,” ಎಂದು ಹೇಳಿದೆ.

ಇದನ್ನೂ ಓದಿ: ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಇಲ್ಲ ಕರೆಂಟ್, ನೆಟ್‌ವರ್ಕ್: ಬೆಳಗಾವಿಯ ಗವಳಿವಾಡ ಗ್ರಾಮಸ್ಥರ ನರಕಯಾತನೆ

ದಂಪತಿಗಳ ನಡುವಿನ ಸಂಬಂಧ ಮತ್ತೆ ಹಾಳಾಗಬಾರದು ಹಾಗೂ ಭವಿಷ್ಯದಲ್ಲಿ ರಾಜಿ ಸಂಧಾನಕ್ಕೆ ಅವಕಾಶ ಇರಲಿ ಎಂಬ ಉದ್ದೇಶದಿಂದ, ಪತಿಯು ಇದುವರೆಗೆ ಪತ್ನಿಗೆ ಪಾವತಿಸಿರುವ ಜೀವನಾಂಶದ ಹಣವನ್ನು ಹಿಂತಿರುಗಿಸುವಂತೆ ಯಾವುದೇ ಕಾನೂನು ಪ್ರಕ್ರಿಯೆ ನಡೆಸಬಾರದು ಎಂದು ಹೈಕೋರ್ಟ್ ಸೂಚಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 am, Wed, 4 November 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ