AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಬಿಗ್​​ ಶಾಕ್​​: ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಮಾಡಿದ್ರೆ ಕೇಸ್​​ ದಾಖಲಿಸಲು ಸರ್ಕಾರ ಚಿಂತನೆ

ಚಿಕಿತ್ಸಾ ವೆಚ್ಚದ ಬಿಲ್ ಪಾವತಿಸದ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಮೃತದೇಹಗಳನ್ನು ನೀಡದೆ ಸತಾಯಿಸುತ್ತಿರುವ ಘಟನೆಗಳಿಗೆ ಕಡಿವಾಣ ಹಾಕಲು, ಅಂತಹ ಆಸ್ಪತ್ರೆಗಳ ವಿರುದ್ಧ ನೇರವಾಗಿ ಮೊಕದ್ದಮೆ ದಾಖಲಿಸಲು ಆರೋಗ್ಯ ಇಲಾಖೆ ಹೊಸ ಕಾನೂನು ರೂಪಿಸಲು ಮುಂದಾಗಿದೆ. ಆಸ್ಪತ್ರೆಯ ಸಂಘಗಳು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಿ ಹೊಸ ಕಾನೂನು ರೂಪಿಸಲು ಯೋಚನೆ ಮಾಡುತ್ತಿದ್ದೇನೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್​​ ಮಾಹಿತಿ ನೀಡಿದ್ದಾರೆ.

ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಬಿಗ್​​ ಶಾಕ್​​: ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಮಾಡಿದ್ರೆ ಕೇಸ್​​ ದಾಖಲಿಸಲು ಸರ್ಕಾರ ಚಿಂತನೆ
ಆರೋಗ್ಯ ಸಚಿವ ಯು.ಟಿ. ಖಾದರ್​​ Image Credit source: Tv9 Kannada
ವಿನಯ್​ ಕಾಶಪ್ಪನವರ್​
| Edited By: |

Updated on:Oct 11, 2026 | 10:45 AM

Share

ಬೆಂಗಳೂರು, ಅಕ್ಟೋಬರ್​​ 11: ಆರೋಗ್ಯ ಇಲಾಖೆ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಬಿಗ್​​ ಶಾಕ್​​ ಕೊಡಲು ಮುಂದಾಗಿದ್ದು, ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಸಂಬಂಧ ಹೊಸ ರೂಲ್ಸ್ಗೆ ಸಿದ್ಧತೆ ನಡೆಸಿದೆ. ಅದರನ್ವಯ ಬಿಲ್ ಕಟ್ಟಿದ್ರೆ ಮಾತ್ರ ಮೃತದೇಹ ನೀಡುತ್ತೇವೆ ಎಂಬ ಆಸ್ಪತ್ರೆಗಳ ಮೇಲೆ ಕೇಸ್​​ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರುಗಳು ಕೇಳಿಬುರುತ್ತಿರುವ ಹಿನ್ನಲೆ, ಹೊಸ ನಿಯಮಗಳ ಮೂಲಕ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲು ತಯಾರಿ ನಡೆದಿದೆ.

‘ಎಲ್ಲರ ಜೊತೆ ಚರ್ಚಿಸಿ ಹೊಸ ಕಾನೂನು’

ಈ ವಿಚಾರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್​​ ಪ್ರತಿಕ್ರಿಯಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದ್ರೂ ಮೃತಪಟ್ಟರೆ ದುಡ್ಡು ಕಟ್ಟಿ ಮೃತದೇಹ ಪಡೆಯಬೇಕು. ದುಡ್ಡು ಇಲ್ಲ ಎಂದು ಪರದಾಡುವ ಕುಟುಂಬಕ್ಕಿದು ಆರ್ಥಿಕ ಹೊರೆಯಾಗಲಿದೆ. ದುಡ್ಡಿಗಾಗಿ ಮೃತದೇಹ ಇಟ್ಟಕೊಂಡು ಸತಾಯಿಸುವ ಕೆಲಸ ಆಗಬಾರದು. ಈ ಬಗ್ಗೆ 2007-18 ಎರಡೂ ಸಲ ಕಾನೂನು ಬಂದಿದ್ರು ಸಮರ್ಪಕ ಅನುಷ್ಠಾನವಾಗಿಲ್ಲ. ಆದರೆ ನಾನು ಇದನ್ನ ಶೇ.100ರಷ್ಟು ಅನುಷ್ಠಾನ ಮಾಡುತ್ತೇನೆ. 2018ರಲ್ಲಿ ಶ್ಯೂರಿಟಿ ಪಡೆದು ಬಾಡಿ ನೀಡುವ ಕಾನೂನು ಮಾಡಲಾಗಿತ್ತು. ಆಸ್ಪತ್ರೆಗಳ ಬಿಲ್ ನೀಡಿಲ್ಲ ಅಂದರೆ ಕೇಸ್ ಹಾಕಬಹುದು ಅಂತಲೂ ಇತ್ತು. ಹೀಗಾಗಿ ಕೇಸ್ ಯಾಕೆ ಅಂತ ಸಾಲ ಮಾಡಿ ಜನರು ದುಡ್ಡು ಕಟ್ಟುತ್ತಿದ್ದಾರೆ. ಹೀಗಾಗಿ ಈ ಕಾನೂನಿನ ಬದಲಾವಣೆ ಮಾಡಬೇಕಿದೆ. ಆಸ್ಪತ್ರೆಯ ಸಂಘಗಳು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಿ ಹೊಸ ಕಾನೂನು ರೂಪಿಸಲು ಯೋಚನೆ ಮಾಡುತ್ತಿದ್ದೇನೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ:  ಕ್ಯಾನ್ಸರ್ ರೋಗಿಗಳಿಗೆ ಸದ್ಯದಲ್ಲೇ ದೊಡ್ಡ ರಿಲೀಫ್; ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಶೇ. 70ರಷ್ಟು ಇಳಿಕೆ ಸಾಧ್ಯತೆ

ಆರೋಗ್ಯ ಇಲಾಖೆಯ ಈ ಹೊಸ ಚಿಂತನೆಯಿಂದ ನಮಗೆ ಸಮಸ್ಯೆಯಾಗುತ್ತೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷೆ ಡಾ.ಶೋಭಾ ಪ್ರಕಾಶ್ ತಿಳಿಸಿದ್ದಾರೆ. ICUನಲ್ಲಿ ಚಿಕಿತ್ಸೆ, ಮೆಡಿಸಿನ್ ನೀಡುರುತ್ತೇವೆ. ಈಗ ಮೃತಪಟ್ಟ ಮೇಲೆ ಬಿಲ್ ಇಲ್ಲದೆ ಮೃತದೇಹ ನೀಡಿ ಅಂದ್ರೆ ಕಷ್ಟ. ಸಚಿವರ ನಿರ್ಧಾರ ಸರಿ ಇದೆ, ಆದ್ರೆ ಇದಕ್ಕೆ ಪರ್ಯಾಯ ಕ್ರಮವಹಿಸಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಜೊತೆ ಚರ್ಚೆ ಮಾಡಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:08 am, Sun, 11 October 26

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ