AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IAS ಅಧಿಕಾರಿ ಜ್ಞಾನೇಂದ್ರಕುಮಾರ್ ಲಖನೌ ನಿವಾಸದ ಮೇಲೂ ಇಡಿ ದಾಳಿ: ಅಲ್ಲಿಂದಲೂ ಅಧಿಕಾರಿ ನಾಪತ್ತೆ!

ಕೆಪಿಎಸ್‍ಸಿ ಪಶುವೈದ್ಯರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಲಖನೌ ನಿವಾಸದ ಮೇಲೆಯೂ ಇಡಿ ದಾಳಿ ನಡೆಸಿದ್ದು, ಅಧಿಕಾರಿ ಅಲ್ಲಿಂದಲೂ ನಾಪತ್ತೆಯಾಗಿದ್ದಾರೆ. ಇಡಿ‌ ದಾಳಿ ಸುಳಿವಿನ ಮೇಲೆ ಪರಾರಿಯಾದ್ರಾ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಹೀಗಾಗಿಯೇ ತರಾತುರಿಯಲ್ಲಿ ಕಳೆದ ವಾರ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ.

IAS ಅಧಿಕಾರಿ ಜ್ಞಾನೇಂದ್ರಕುಮಾರ್ ಲಖನೌ ನಿವಾಸದ ಮೇಲೂ ಇಡಿ ದಾಳಿ: ಅಲ್ಲಿಂದಲೂ ಅಧಿಕಾರಿ ನಾಪತ್ತೆ!
ಜ್ಞಾನೇಂದ್ರಕುಮಾರ್ ಮನೆ ಮೇಲೂ ಇಡಿ ದಾಳಿ Image Credit source: Tv9 Kannada
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Aug 24, 2026 | 1:48 PM

Share

ಮುಖ್ಯಾಂಶಗಳು

  • ಕೆಪಿಎಸ್​ಸಿ ಪಶು ವೈದ್ಯರ ನೇಮಕಾತಿಯಲ್ಲಿ ಹಗರಣ ಕೇಸ್​
  • ಜ್ಞಾನೇಂದ್ರಕುಮಾರ್ ಲಖನೌ ಮನೆ ಮೇಲೂ ಇಡಿ ದಾಳಿ
  • KPSC ಎಕ್ಸಾಂ ಕಂಟ್ರೋಲರ್​ ಆಗಿದ್ದ ಐಎಎಸ್​​ ಅಧಿಕಾರಿ

ಲಖನೌ/ಬೆಂಗಳೂರು, ಆಗಸ್ಟ್​​ 24: ಕೆಪಿಎಸ್​ಸಿ ಪಶು ವೈದ್ಯರ ನೇಮಕಾತಿಯಲ್ಲಿ ಹಗರಣ ಹಿನ್ನೆಲೆ ಎಕ್ಸಾಂ ಕಂಟ್ರೋಲರ್​ ಆಗಿದ್ದ, IAS ಅಧಿಕಾರಿ ಜ್ಞಾನೇಂದ್ರಕುಮಾರ್ ಅವರ ಉತ್ತರ ಪ್ರದೇಶದ ಲಖನೌ ಬಳಿ ಹಳ್ಳಿಯಲ್ಲಿರುವ ಮನೆ ಮೇಲೆಯೂ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಅಲ್ಲಿಂದಲೂ ಜ್ಞಾನೇಂದ್ರಕುಮಾರ್ ಪರಾರಿಯಾಗಿದ್ದು, ವೃದ್ಧ ತಂದೆ ಮತ್ತು ಕೇರ್​ಟೇಕರ್ ಹೊರತುಪಡಿಸಿ ಬೇರೆ ಯಾರೂ ಮನೆಯಲ್ಲಿರಲಿಲ್ಲ. ಜ್ಞಾನೇಂದ್ರ ಕುಮಾರ್ ಕುಟುಂಬ ಸದಸ್ಯರು ಕೂಡ ಸಂಪರ್ಕಕ್ಕೆ ಸಿಗ್ತಿಲ್ಲ ಎನ್ನಲಾಗಿದೆ. ಈ ನಡುವೆ ಪಶು ವೈದ್ಯರ ನೇಮಕಾತಿ ಹಗರಣದ ತನಿಖೆಯನ್ನು ಇಡಿ ಮುಂದುವರಿಸಿದೆ.

ಬೆಂಗಳೂರಿನ ಮನೆ ಮೇಲೂ ನಡೆದಿದ್ದ ದಾಳಿ

IAS ಅಧಿಕಾರಿ ಜ್ಞಾನೇಂದ್ರಕುಮಾರ್ ಅವರ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನಿವಾಸದ ಮೇಲೆಯೂ ಇಡಿ ದಾಳಿ ನಡೆಸಿತ್ತು. ಆದ್ರೆ, ಮನೆಗೆ ಬೀಗ ಹಾಕಿರುವುದರಿಂದ ಕೀ ಮೇಕರ್​​​​ನನ್ನು ಕರೆಯಿಸಿ ಬಾಗಿಲು ಓಪನ್ ಮಾಡಿಸಿ ಪರಿಶೀಲನೆ ನಡೆಸಿದ್ದರು. 2016ನೇ ಬ್ಯಾಚ್​​ನ IAS ಅಧಿಕಾರಿ ಜ್ಞಾನೇಂದ್ರ ಕುಮಾರ್, 10 ವರ್ಷಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಮಾರ್ಚ್​​ವರೆಗೂ KPSCಯಲ್ಲಿ ಎಕ್ಸಾಂ ಕಂಟ್ರೋಲರ್​ ಆಗಿದ್ದರು. ಅಲ್ಲದೇ ಪಶುವೈದ್ಯಾಧಿಕಾರಿ ಮತ್ತು KAS ಪರೀಕ್ಷಾ ಮೇಲ್ವಿಚಾರಕರಾಗಿದ್ದರು.

ಇದನ್ನೂ ಓದಿ: KPSC ಎಕ್ಸಾಂ ಕಂಟ್ರೋಲರ್ ಮನೆ ಮೇಲೆ ಇಡಿ ದಾಳಿ, ಇಡಿಗೆ ಹೆದರಿ ಬೆಂಗಳೂರು ತೊರೆದ್ರಾ IAS ಅಧಿಕಾರಿ?

ಜ್ಞಾನೇಂದ್ರ ಕುಮಾರ್ ಪರಾರಿಯಾಗಿದ್ದೇಕೆ?

KPSCಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕೆಲಸ ಮಾಡಿದ್ದ ಜ್ಞಾನೇಂದ್ರ ಕುಮಾರ್​​ ಇಡಿ‌ ದಾಳಿ ಸುಳಿವಿನ ಮೇಲೆ ಪರಾರಿಯಾದ್ರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಪರೀಕ್ಷಾ ಅಕ್ರಮ ಸಂಬಂಧ ಶಿವಶಂಕರಪ್ಪ ನಿವಾಸ ಸೇರಿ 21 ಕಡೆ ಇಡಿ ದಾಳಿ ನಡೆಸಿತ್ತು. ಈ ಹಿನ್ನೆಲೆ ತನ್ನ ಮೇಲೂ ದಾಳಿ ಆಗಬಹುದು ಎಂದು ಜ್ಞಾನೇಂದ್ರ ಕುಮಾರ್ ಲೆಕ್ಕಹಾಕಿದ್ದರು. ಹೀಗಾಗಿಯೇ ತರಾತುರಿಯಲ್ಲಿ ಕಳೆದ ವಾರ ದೆಹಲಿಗೆ ತೆರಳಿದ್ದರು. ನಂತರ ರಜೆ ಮೇಲೆ ಹೋಗಿರುವುದಾಗಿ ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:48 pm, Mon, 24 August 26

Follow Us