Bengaluru Tech Summit: ವರ್ಚುವಲ್ ಮೂಲಕ ಬೆಂಗಳೂರು ಟೆಕ್ ಸಮ್ಮಿಟ್ಗೆ ಪ್ರಧಾನಿ ಮೋದಿ ಚಾಲನೆ
ವರ್ಚುವಲ್ ಮೂಲಕ ಬೆಂಗಳೂರು ಟೆಕ್ ಸಮ್ಮಿಟ್ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಟೆಕ್ ಸಮ್ಮಿಟ್ನಲ್ಲಿ 31 ದೇಶಗಳ ಸಚಿವರು ಭಾಗಿಯಾಗಿದ್ದಾರೆ.
ಬೆಂಗಳೂರು: ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಟೆಕ್ ಸಮ್ಮಿಟ್ಗೆ ಚಾಲನೆ ಸಿಕ್ಕಿದೆ. ವರ್ಚುವಲ್ ಮೂಲಕ ಬೆಂಗಳೂರು ಟೆಕ್ ಸಮ್ಮಿಟ್ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಏಷ್ಯಾ ಖಂಡದಲ್ಲೇ ಮಹತ್ವದ ಕಾರ್ಯಕ್ರಮವೆಂದು ಹೆಸರಾಗಿರುವ ಈ ತಂತ್ರಜ್ಞಾನ ಸಮಾವೇಶದಲ್ಲಿ 575ಕ್ಕೂ ಅಧಿಕ ಪ್ರದರ್ಶಕರು, 16 ವಿವಿಧ ದೇಶಗಳ ತಂತ್ರಜ್ಞಾನಗಳ ಸಮಾಗಮವಿತ್ತು. ಹಾಘೂ 9 ಒಡಂಬಡಿಕೆ 20 ಉತ್ಪನ್ನಗಳ ಬಿಡುಗಡೆಗೆ ಸಮಾವೇಶ ಸಾಕ್ಷಿಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಇಲಾಖೆ ಸಚಿವ ಅಶ್ವಥ್ ನಾರಾಯಣ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಿಎಸ್ ವಂದಿತಾ ಶರ್ಮ ಮತ್ತು ವಿವಿಧ ಉದ್ಯಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು ಟೆಕ್ ಸಮ್ಮಿಟ್ ಚಾಲನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ತಂತ್ರಜ್ಞಾನದ ತವರು. ಭಾರತದ ಆವಿಷ್ಕಾರ ವಲಯದಲ್ಲಿ ಬೆಂಗಳೂರು ನಂಬರ್ ಒನ್ ಆಗಿದೆ. ಜಾಗತಿಕ ಆವಿಷ್ಕಾರ ಇಂಡೆಕ್ಸ್ನಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳ ಆರ್ ಅಂಡ್ ಡಿ ಸೆಂಟರ್ ಗಳು ಭಾರತದಲ್ಲಿವೆ. ಭಾರತ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್ ಅಪ್ ಕೇಂದ್ರ. ಆಯುಷ್ಮಾನ್ ಭಾರತ್ ಯೋಜನೆ ವಿಶ್ವದ ದೊಡ್ಡ ಆರೋಗ್ಯ ವಿಮೆ. ಸ್ವಾಮಿತ್ವ ಯೋಜನೆಯಡಿ ಡ್ರೋನ್ ಮೂಲಕ ಭೂಮಿ ಸರ್ವೆ ಮಾಡಲಾಗುತ್ತಿದೆ. ದೇಶದ ಜನರಿಗೆ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ. ಕೋವಿಡ್ ಸಮಯದಲ್ಲಿ ಸರ್ಕಾರದ ಯೋಜನೆಗಳನ್ನು ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂದು ಟೆಕ್ ಸಮ್ಮಿಟ್ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು.
Bengaluru Tech Summit 2022 | Day 1 https://t.co/z6hG6qWez2
— Basavaraj S Bommai (@BSBommai) November 16, 2022
ಇದನ್ನೂ ಓದಿ: Bengaluru Tech Summit 2022: ವಿಶ್ವ ಮಟ್ಟದಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ ಆಯೋಜನೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅದ್ರಲ್ಲೂ ಸಮ್ಮಿಟ್ನಲ್ಲಿ ಡ್ರೋನ್ ಹೆಚ್ಚು ಅಟ್ರ್ಯಾಕ್ಟ್ ಮಾಡಿತ್ತು. ಕೃಷಿ ಸೇರಿದಂತೆ ಟ್ರಾಫಿಕ್ ಮಾನಟರಿಂಗ್, ಹೆಚ್ಚು ಜನ ಸಂದಣಿ ಹಾಗೂ ಇತರೆ ಸೂಕ್ಷ್ಮ ಹಾಗೂ ಕಠಿಣ ಕೆಲಸಗಳ ಬಳಕೆಗೆ ಕೇಬಲ್ ಆಧಾರಿತ ಈ ಡ್ರೋನ್ ಬಳಸಬಹುದು. ಇನ್ನು ರೈತರಿಗೆ ಜಮೀನಿನಲ್ಲಿ ಉಪಯೋಗವಾಗುವ, ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳಿಗೆ ನೀರು ಸಂಗ್ರಹಿಸಿಕೊಳ್ಳುವ ಹೊಸ ಸೆನ್ಸಾರ್ ಹಬ್ ಸಾಕಷ್ಟು ಅಚ್ಚರಿ ಮೂಡಿಸಿತು.. ಚಳಿ, ಮಳೆ, ಬೇಸಿಗೆಗಾಲಗಳಲ್ಲಿ ಯಾವ ಬೆಳೆಗೆ ಎಷ್ಟೆಷ್ಟು ನೀರು ಸಿಂಪಡಣೆ ಮಾಡಬೇಕು ಅನ್ನೋದನ್ನ ಈ ಯಂತ್ರ ಪರಿಗಣನೆ ಮಾಡಿ, ತಾನೇ ಮಾನಿಟರ್ ಮಾಡುವ ವ್ಯವಸ್ಥೆಯನ್ನ ಹೊಂದಿದೆ.. ಇದು ರೈತ ಸ್ನೇಹಿಯಾದ್ರೆ, ಆರೋಗ್ಯ ಕ್ಷೇತ್ರದಲ್ಲೂ ವಿಭಿನ್ನವಾದ ಫಿಸಿಯೋ ಥೆರಿಪಿ ಹೊಸದಾಗಿ ಕಾಣಿಸಿತ್ತು. ನೋಡೋಕೆ ವೀಲ್ ಚೇರ್ ರೀತಿ ಕಂಡ್ರೂ, ಕಾಲು, ಬೆನ್ನಿಗೆ ಕೂತ ಜಾಗದಲ್ಲೇ ಥೆರಿಪಿ ಆಗುವ ತಂತ್ರಜ್ಞಾನ ಬಳಸಿ ನೇರವಾಗಿ ವೈದ್ಯರಿಗೆ ಸಂದೇಶ ರವಾನೆಯಾಗುತ್ತೆ. ವೈದ್ಯರ ಸಲಹೆ ಮೇರೆಗೆ ರೋಗಿ ಮನೆಯಿಂದಲೇ ಥೆರಿಪಿ ಮಾಡಿಕೊಳ್ಳುವ ವ್ಯವಸ್ಥೆ ಇದರ ವಿಶೇಷತೆಯಾಗಿದೆ.
Published On - 11:21 am, Wed, 16 November 22