AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಣಂ ಸ್ಪೆಷಲ್​​​​: ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್​​ ರೈಲಿನ ಬೋಗಿಗಳ ಹೆಚ್ಚಳಕ್ಕೆ ನಿರ್ಧಾರ

Vande Bharat Express: ಓಣಂ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳನ್ನು 8 ರಿಂದ 16ಕ್ಕೆ ಹೆಚ್ಚಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಇದರಿಂದ ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ. 630 ಕಿಲೋಮೀಟರ್ ದೂರದ ಬೆಂಗಳೂರು–ಎರ್ನಾಕುಲಂ ಮಾರ್ಗವನ್ನು ಈ ವಂದೇ ಭಾರತ್ ರೈಲು 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತಿದ್ದು, ಹಬ್ಬದ ದಿನಗಳು ಹಾಗೂ ದೀರ್ಘ ವಾರಾಂತ್ಯಗಳಲ್ಲಿ ಈ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆ ಕಂಡಿದೆ ಎನ್ನಲಾಗಿದೆ.

ಓಣಂ ಸ್ಪೆಷಲ್​​​​: ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್​​ ರೈಲಿನ ಬೋಗಿಗಳ ಹೆಚ್ಚಳಕ್ಕೆ ನಿರ್ಧಾರ
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Jun 28, 2026 | 9:38 AM

Share

ಮುಖ್ಯಾಂಶಗಳು

  • ಓಣಂ ವೇಳೆ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಮುಂದಾದ ಸೌತರ್ನ್​​ ರೈಲ್ವೆ
  • ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಮರ್ಥ್ಯ ದ್ವಿಗುಣ
  • ರೈಲಿನ ಸಾಮರ್ಥ್ಯವನ್ನು 8 ಬೋಗಿಗಳಿಂದ 16ಕ್ಕೆ ಹೆಚ್ಚಿಸಲು ತೀರ್ಮಾನ

ಬೆಂಗಳೂರು, ಜೂನ್​​ 28: ಓಣಂ ಹಬ್ಬಕ್ಕೆ ಊರಿಗೆ ತೆರಳುವು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ಸಿಕ್ಕಿದ್ದು, ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಸೌತರ್ನ್​​ ರೈಲ್ವೆ ನಿರ್ಧರಿಸಿದೆ. ಆ ಮೂಲಕ ಪ್ರಸ್ತುತ 8 ಬೋಗಿಗಳಿರುವ ರೈಲನ್ನು 16 ಬೋಗಿಗಳಿಗೆ ಹೆಚ್ಚಿಸಲಾಗುತ್ತಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ. ರೈಲಿಗೆ ಹೊಸ 16 ಬೋಗಿಗಳ ರೇಕ್ ಅನ್ನು ಜುಲೈ ಮೊದಲ ವಾರದಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ಈ ರೈಲು ಸೇವೆ ಆರಂಭವಾದ ಸುಮಾರು ಏಳು ತಿಂಗಳ ಬಳಿಕ ಈ ಬದಲಾವಣೆ ಜಾರಿಗೆ ಬರುತ್ತಿದೆ.

ಆಸನ ಸಾಮರ್ಥ್ಯ 1,128ಕ್ಕೆ ಏರಿಕೆ

ಓಣಂ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 21 ಮತ್ತು 22ರ ಪ್ರಯಾಣದ ಟಿಕೆಟ್‌ಗಳು ಬುಕ್ಕಿಂಗ್ ಆರಂಭವಾದ ತಕ್ಷಣವೇ ವೇಟಿಂಗ್ ಲಿಸ್ಟ್​​ಗೆ ತಲುಪಿದ್ದವು. ಹಬ್ಬದ ದಿನಗಳು ಹಾಗೂ ದೀರ್ಘ ವಾರಾಂತ್ಯಗಳಲ್ಲಿ ಈ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ತೀವ್ರವಾಗಿ ಹೆಚ್ಚಿದೆ ಎನ್ನಲಾಗಿದೆ. ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ಪ್ರಯಾಣಿಕರಿಂದ ಈ ರೈಲಿಗೆ ನಿರಂತರವಾಗಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೆಚ್ಚುವರಿ ಬೋಗಿಗಳ ಸೇರ್ಪಡೆಯಿಂದ ಹಬ್ಬದ ಸಮಯದ ಪ್ರಯಾಣಿಕರ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ಈ ಬದಲಾವಣೆಯೊಂದಿಗೆ ರೈಲಿನ ಆಸನ ಸಾಮರ್ಥ್ಯ 530ರಿಂದ 1,128ಕ್ಕೆ ಏರಿಕೆಯಾಗಲಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಪ್ರಯಾಣಿಕರು ಸಂಚರಿಸಲು ಅವಕಾಶ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರು ಟು ಚೆನ್ನೈ ಜಸ್ಟ್ 73 ನಿಮಿಷ, ಹೈದರಾಬಾದ್‌ಗೆ 2 ಗಂಟೆ; ದೇಶದ 7 ಹೊಸ ಬುಲೆಟ್ ಟ್ರೈನ್ ಮಾರ್ಗಗಳ ಕಂಪ್ಲೀಟ್ ಟ್ರಾವೆಲ್ ಟೈಮ್ ಇಲ್ಲಿದೆ

ವಾರದಲ್ಲಿ ಆರು ದಿನ ಈ ರೈಲು ಸಂಚರಿಸುವುದರಿಂದ, ಒಂದು ದಿಕ್ಕಿನಲ್ಲಿ ವಾರಕ್ಕೆ 6,768 ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 630 ಕಿಲೋಮೀಟರ್ ದೂರದ ಬೆಂಗಳೂರು–ಎರ್ನಾಕುಲಂ ಮಾರ್ಗವನ್ನು ಈ ವಂದೇ ಭಾರತ್ ರೈಲು 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತಿದ್ದು, ಮಾರ್ಗ ಮಧ್ಯೆ ಕೇವಲ ಒಂಬತ್ತು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರಲಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!
ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!
ಜುಲೈ 20 ರಿಂದ 26ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿ ತಿಳಿಯಿರಿ
ಜುಲೈ 20 ರಿಂದ 26ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿ ತಿಳಿಯಿರಿ
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು
ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು
ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ
ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ
ಚೆನ್ನಮ್ಮನ ಆಸಿಡ್‌ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ
ಚೆನ್ನಮ್ಮನ ಆಸಿಡ್‌ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ
‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು
‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು
ಹೆಚ್​.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಯಾವಾಗ-ಎಲ್ಲಿ?
ಹೆಚ್​.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಯಾವಾಗ-ಎಲ್ಲಿ?
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?