AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RTO ಕಾರ್ಯಾಚರಣೆ: ಬೆಂಗಳೂರಲ್ಲಿ ಬೆಂಗಳೂರಲ್ಲಿ ಬೈಕ್​​ ಟ್ಯಾಕ್ಸಿಗಳು ಸೀಜ್​​​​; ಚಾಲಕರಿಂದ ತೀವ್ರ ಆಕ್ರೋಶ

ಅನಧಿಕೃತ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ವಿರುದ್ಧ ಹಾಗೂ 'ಒನ್ ಸಿಟಿ ಒನ್ ರೇಟ್'ಜಾರಿಗೆ ಆಗ್ರಹಿಸಿ ಆಟೋ ಮತ್ತು ಕ್ಯಾಬ್ ಚಾಲಕರ ಆಕ್ರೋಶದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ( ಕಾರ್ಯಾಚರಣೆ ನಡೆಸಿ ಸುಮಾರು 20 ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಸೀಜ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಚಾಲಕರು, ಆ್ಯಪ್‌ಗಳ ಮೂಲಕ ಸೇವೆ ನೀಡುತ್ತಿರುವಾಗ ಇದು ಕಾನೂನುಬಾಹಿರ ಹೇಗೆ ಎಂದು ಪ್ರಶ್ನಿಸಿದ್ದಾರೆ.

RTO ಕಾರ್ಯಾಚರಣೆ: ಬೆಂಗಳೂರಲ್ಲಿ ಬೆಂಗಳೂರಲ್ಲಿ ಬೈಕ್​​ ಟ್ಯಾಕ್ಸಿಗಳು ಸೀಜ್​​​​; ಚಾಲಕರಿಂದ ತೀವ್ರ ಆಕ್ರೋಶ
ಬೈಕ್ ಟ್ಯಾಕ್ಸಿಗಳು ಸೀಜ್​​Image Credit source: Tv9 Kannada
ಕಿರಣ್​ ಸೂರ್ಯ
| Edited By: |

Updated on:Aug 05, 2026 | 12:54 PM

Share

ಬೆಂಗಳೂರು, ಆಗಸ್ಟ್​​ 05: ಅನಧಿಕೃತ ಬೈಕ್ ಟ್ಯಾಕ್ಸಿ ಮತ್ತು ಒನ್ ಸಿಟಿ ಒನ್ ರೇಟ್ ಜಾರಿಗೆ ತರವಂತೆ ಆಗ್ರಹಿಸಿ ಇಂದು ಬೆಳಿಗ್ಗೆ ಸಾರಿಗೆ ಇಲಾಖೆ ಮುಖ್ಯ ಕಚೇರಿಗೆ ಆಟೋ, ಕ್ಯಾಬ್ ಚಾಲಕರ ನಿರ್ಧಾರದ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಬೈಕ್ ಟ್ಯಾಕ್ಸಿ ವಿರುದ್ಧ ಆರ್ಟಿಒ ಅಧಿಕಾರಿಗಳು ಬೆಂಗಳೂರಿನಲ್ಲಿ (Bengaluru) ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಆಟೋ ಚಾಲಕರೇ ಪ್ರಯಾಣಿಕರ ರೀತಿ ರೈಡ್​​ ಬುಕ್ಕಿಂಗ್​ ಮಾಡಿಕೊಂಡು ಸುಮಾರು 20 ಬೈಕ್​​ ಟ್ಯಾಕ್ಸಿಗಳನ್ನು ಸೀಜ್​​ ಮಾಡಿದ್ದಾರೆ.

ಬೈಕ್​​ಗಳಿಗೆ 10-15 ಸಾವಿರ ರೂ. ದಂಡ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ರಾಜಾಜಿನಗರ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿ, ಶಿವಪ್ರಸಾದ್ ಮಲ್ಲಯ್ಯ, ಬೆಳಿಗ್ಗೆಯಿಂದಲೇ ಬೈಕ್ ಟ್ಯಾಕ್ಸಿ ವಿರುದ್ಧ ಕಾರ್ಯಾಚರಣೆ ಮಾಡ್ತಿದ್ದೇವೆ. ಸುಮಾರು ಇಪ್ಪತ್ತು ಬೈಕ್ ಟ್ಯಾಕ್ಸಿ ಗಳನ್ನು ಸೀಜ್ ಮಾಡಿದ್ದೇವೆ. ಕಾನೂನು ಪ್ರಕಾರ ಆರ್ಸಿ ಸಸ್ಪೆಂಡ್ ಮಾಡ್ತೀವಿ, ವೈಟ್ ಬೋರ್ಡ್ ವಾಹನವನ್ನು ಟ್ಯಾಕ್ಸಿಯಾಗಿ ಕನ್ವರ್ಟ್ ಮಾಡಿಕೊಂಡು ಬಳಕೆ ಮಾಡಲು ಬರೋದಿಲ್ಲ. ಹೀಗಾಗಿ ಸೆಕ್ಷನ್ 200ರ ಪ್ರಕಾರ ಈ ಬೈಕ್​​ಗಳ ಮೇಲೆ 10ರಿಂದ 15 ಸಾವಿರ ರೂಪಾಯಿ ದಂಡ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!

ಬೈಕ್​​ ಟ್ಯಾಕ್ಸಿ ಚಾಲಕರ ಆಕ್ರೋಶ

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡುತ್ತಿರುವ ಆರ್‌ಟಿಒ ಕ್ರಮದ ವಿರುದ್ಧ ಬೈಕ್ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಸೀಜ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಚಾಲಕರು, ಆ್ಯಪ್‌ಗಳ ಮೂಲಕ ಸೇವೆ ನೀಡುತ್ತಿರುವಾಗ ಇದು ಕಾನೂನುಬಾಹಿರ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:52 pm, Wed, 5 August 26

Follow Us
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು