AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ಬಿಡದಿ ಟೌನ್​​​ಶಿಪ್: ಜೆಡಿಎಸ್ ಪಾದಯಾತ್ರೆ ಮುಕ್ತಾಯ, ಆ. 18ರಂದು ವಿಧಾನಸೌಧಕ್ಕೆ ಮುತ್ತಿಗೆ ಎಂದ ನಿಖಿಲ್

Karnataka News Today Live Updates: ಅನಿಲ್ ಅಂಬಾನಿ ಸಂಸ್ಥೆಗಳ ವಿರುದ್ಧ ಇಡಿ ಚಾರ್ಜ್‌ಶೀಟ್ ಶಾಕ್. ಬೆಂಗಳೂರಿನಲ್ಲಿ 15 ಅಕ್ರಮ ಬಾಂಗ್ಲಾದೇಶಿಗರ ಬಂಧನ, ಯುಬಿ ಸಿಟಿ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಭಾರಿ ದಾಳಿ ಹಾಗೂ ಇಂದಿನ ಮುಂಗಾರು ಮಳೆ ಮುನ್ಸೂಚನೆಯ ಲೈವ್ ಅಪ್ಡೇಟ್ಸ್ ಇಲ್ಲಿದೆ.

TV9 Kannada News Live: ಬಿಡದಿ ಟೌನ್​​​ಶಿಪ್: ಜೆಡಿಎಸ್ ಪಾದಯಾತ್ರೆ ಮುಕ್ತಾಯ, ಆ. 18ರಂದು ವಿಧಾನಸೌಧಕ್ಕೆ ಮುತ್ತಿಗೆ ಎಂದ ನಿಖಿಲ್
ನಿಖಿಲ್ ಕುಮಾರಸ್ವಾಮಿ
ಭಾವನಾ ಹೆಗಡೆ
| Edited By: |

Updated on:Aug 10, 2026 | 10:09 PM

Share

Breaking News Today Live Updates in Kannada: ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದಲ್ಲಿ 295 ಪೊಲೀಸರ 23 ವಿಶೇಷ ತಂಡಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ, ಸೂಕ್ತ ದಾಖಲೆಗಳಿಲ್ಲದ 15 ಬಾಂಗ್ಲಾದೇಶಿ ಪ್ರಜೆಗಳನ್ನು ಬೇಗೂರು ಹಾಗೂ ಪರಪ್ಪನ ಅಗ್ರಹಾರದಲ್ಲಿ ಬಂಧಿಸಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಯುಬಿ ಸಿಟಿಯ 5 ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು, ಸ್ಕೈ ಹೋಟೆಲ್‌ನಲ್ಲಿ 51 ಕೆಜಿ ಕೊಳೆತ ಮಾಂಸ ಪತ್ತೆಯಾದ ಹಿನ್ನೆಲೆ ಅಡುಗೆಮನೆ ಸೀಲ್ ಮಾಡಿದ್ದಾರೆ. ರಾಯಲ್ ಚೈನ್‌ನಲ್ಲೂ 55 ಕೆಜಿ ಮಾಂಸ ಜಪ್ತಿ ಮಾಡಲಾಗಿದೆ. 40,000 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅನಿಲ್ ಅಂಬಾನಿ ಒಡೆತನದ ಆರ್‌ಕಾಮ್ ಹಾಗೂ ರಿಲಯನ್ಸ್ ಇನ್‌ಫ್ರಾ ವಿರುದ್ಧ ಇಡಿ ದೆಹಲಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದೆ. ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE NEWS & UPDATES

The liveblog has ended.
  • 10 Aug 2026 07:57 PM (IST)

    ಅಕ್ರಮವಾಗಿ ಸಾಗಿಸ್ತಿದ್ದ 13,540 ಕೆಜಿ ಪಡಿತರ ಅಕ್ಕಿ ಜಪ್ತಿ

    ಅಕ್ರಮವಾಗಿ ಸಾಗಿಸ್ತಿದ್ದ 13,540 ಕೆಜಿ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಆಹಾರ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬಳಿ ಲಾರಿಯನ್ನು ಹಿಡಿದಿದ್ದು, 3,04,650 ರೂಪಾಯಿ ಮೌಲ್ಯದ ಅಕ್ಕಿ 244 ಚೀಲ ಅಕ್ಕಿ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸಾವಳಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 10 Aug 2026 06:50 PM (IST)

    ಬುಧವಾರ ಕರೆಯಲಾಗಿದ್ದ ಸಂಪುಟ ಸಭೆ ಮುಂದೂಡಿಕೆ

    ಬುಧವಾರ ಕರೆಯಲಾಗಿದ್ದ ಸಚಿವ ಸಂಪುಟ ಸಭೆಯನ್ನು ಗುರುವಾರಕ್ಕೆ ಮುಂದೂಡಿಕೆಯಾಗಿದೆ. ಸಚಿವರ ಪ್ರಮಾಣವಚನ ದಿನದಂದು ಸಾಂಕೇತಿಕ ಸಭೆ ನಡೆಸಿದ್ದ ಸಿಎಂ ಡಿಕೆ ಶಿವಕುಮಾರ್, ಗುರುವಾರ ಮಧ್ಯಾಹ್ನ 3ಕ್ಕೆ ಸಚಿವ ಸಂಪುಟ ನಡೆಸಲಿದ್ದಾರೆ.

  • 10 Aug 2026 05:45 PM (IST)

    ಜೆಡಿಎಸ್ ಪಾದಯಾತ್ರೆ ಮುಕ್ತಾಯ, ಆ. 18ರಂದು ವಿಧಾನಸೌಧಕ್ಕೆ ಮುತ್ತಿಗೆ ಎಂದ ನಿಖಿಲ್

    ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಕೈಗೊಂಡಿದ್ದ ಪಾದಯಾತ್ರೆ ಮುಕ್ತಾಯವಾಗಿದೆ. ಬೆಂಗಳೂರು ಪ್ರವೇಶಿಸುತ್ತಿದ್ದಮತೆಯೇ ಪೊಲೀಸರು ಜೆಡಿಎಸ್​​ ಪಾದಯಾತ್ರೆ ತಡೆ ಹಿಡಿದಿದ್ದಾರೆ. ಹೀಗಾಗಿ ಒಂದು ದಿನ ಮೊದಲೇ ಜೆಡಿಎಸ್ ಪಾದಯಾತ್ರೆ ಮುಕ್ತಾಯವಾಗಿದ್ದು, ಆಗಸ್ಟ್‌ 18ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

  • 10 Aug 2026 05:32 PM (IST)

    ಪಾದಯಾತ್ರೆ ತಡೆ ಹಿಡಿದಿದ್ದಕ್ಕೆ ದೇವೇಗೌಡ ಆಕ್ರೋಶ

    ಬಿಡದಿ ಟೌನ್​ಶಿಪ್​ ವಿರೋಧಿಸಿ ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಯನ್ನು ಬೆಂಗಳೂರು ಪೊಲೀಸರು ತಡೆ ಹಿಡಿದಿದ್ದಾರೆ. ಕಣಮಿಣಿಕೆ ಕಾಲೋನಿಯ ಬಳಿ ಪಾದಯಾತ್ರೆಗೆ ಬ್ರೇಕ್ ಹಾಕಿದ್ದು, ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು ಪೊಲಿಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಸರ್ಕಾರ ಅತ್ಯಂತ ಹೇಯ ಕೃತ್ಯ ಮಾಡಲು ಮುಂದಾಗಿದೆ. ಪೊಲೀಸ್ ಅಧಿಕಾರಿಗಳ ಬಗ್ಗೆ ನಾನು ಮಾತನಾಡಲ್ಲ. ನಿನ್ನೆ ಸಿಎಂ ಯಾರಿಗು ಬಲವಂತ ಇಲ್ಲಾ ಎಂದಿದಾರೆ . ಹಾಗಿದ್ದರೆ ಇಂದು ಪಾದಯಾತ್ರೆ ಯಾಕೆ ತಡೆದರು . ಇದು ನಿಗೂಢ ಪ್ರಶ್ನೆ ಎಂದಿದ್ದಾರೆ.

  • 10 Aug 2026 04:53 PM (IST)

    ಜೆಡಿಎಸ್ ಪಾದಯಾತ್ರೆ ತಡೆಯಲು ಯತ್ನ ವೇಳೆ ಎಸ್ಪಿ ಕೈಗೆ ಗಾಯ

    ಬಿಡದಿ ಟೌನ್​ಶಿಪ್​ ವಿರೋಧಿಸಿ ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆ ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಕಣಮಿಣಿಕೆ ಕಾಲೋನಿಯ ಬಳಿ ಪಾದಯಾತ್ರೆಗೆ ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ತಳ್ಳಾಟ ನೂಕಾಟ ವೇಳೆ SP ಶ್ರೀನಿವಾಸ್ ಗೌಡಗೆ ಗಾಯವಾಗಿದೆ. ಕೂಡಲೇ ಎಸ್​ಪಿ ಶ್ರೀನಿವಾಸ್​ ಗೌಡ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

  • 10 Aug 2026 04:35 PM (IST)

    ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ

    ಹಂಗಾಮಿ ಸಭಾಪತಿಯಾಗಿ ಪುಟ್ಟಣವರನ್ನು ನೇಮಕ ಮಾಡಲಾಗಿದೆ. ಆಗಸ್ಟ್ 7ರಿಂದಲೇ ಜಾರಿಗೆ ಬರುವಂತೆ ಆದೇಶಿಸಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.   ವಿಧಾನ ಪರಿಷತ್​​ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಬೆನ್ನಲ್ಲೇ ಮೇಲ್ಮನೆಯ ಪ್ರಮುಖ ಸ್ಥಾನಗಳೆಲ್ಲವೂ ಖಾಲಿಯಾಗಿವೆ. ಸಭಾಪತಿ, ಉಪಸಭಾಪತಿಯಿಂದ ಹಿಡಿದು ಸಭಾ ನಾಯಕರವರೆಗೂ ಯಾರೂ ಇರಲಿಲ್ಲ. ನೂತನ ಸಭಾಪತಿಯಾಗಿ ಸಲೀಂ ಅಹ್ಮದ್​​ ಮತ್ತು ಉಪ ಸಭಾಪತಿಯಾಗಿ ಉಮಾಶ್ರೀ ಅವರ ಹೆಸರನ್ನು ಅದಾಗಲೇ ಎಐಸಿಸಿ ಶಿಫಾರಸ್ಸು ಮಾಡಿದ್ದರೂ ಸಭಾನಾಯಕ ಯಾರಾಗಾಲಿದ್ದಾರೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದಿತ್ತು. ಆದ್ರೀಗ ಹಂಗಾಮಿ ಸಭಾನಾಯಕರನ್ನಾಗಿ ಪುಟ್ಟಣ್ಣನವರನ್ನು ನೇಮಕ ಮಾಡಲಾಗಿದೆ.ಇನ್ನು ಆಗಸ್ಟ್ 13 ರಿಂದ ಮಳೆಗಾಲದ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಪರಿಷತ್ ನಲ್ಲಿ ಆಡಳಿತ ಪಕ್ಷವನ್ನು ಪುಟ್ಟಣ ಮುನ್ನಡೆಸಲಿದ್ದಾರೆ.

  • 10 Aug 2026 04:09 PM (IST)

    ಜೆಡಿಎಸ್ ಪಾದಯಾತ್ರೆ ತಡೆಯಲು ಪೊಲೀಸರು ಸಿದ್ಧತೆ

    ಬಿಡದಿ ಟೌನ್​ಶಿಪ್​ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ ಬೆಂಗಳೂರಿಗೆ ಬರುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದು, ಪಾದಯಾತ್ರೆ ತಡೆಯಲು ಬೆಂಗಳೂರು ಪೊಲೀಸರ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿಯೇ ಕಣಮಿಣಿಕೆ ಕಾಲೋನಿಯ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರು ಬಲವಂತಾಗಿ ನುಗ್ಗಿದರೆ ವಶಕ್ಕೆ ಪಡೆದು ಕೊಂಡೊಯ್ಯಲು ಮುಂಜಾಗ್ರತಾವಾಗಿ BMTC ಬಸ್ ಗಳ ಕರೆಸಿಕೊಂಡಿದ್ದಾರೆ.

  • 10 Aug 2026 04:02 PM (IST)

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಮಳೆ ಆರಂಭ

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಕೆಲವೆಡೆ ಮಳೆ ಆರಂಭವಾಗಿದೆ. ಮಲ್ಲೇಶ್ವರಂ, ಪ್ಯಾಲೇಸ್ ಗುಟ್ಟಹಳ್ಳಿ, ಮೆಜಸ್ಟಿಕ್, ರಾಜಾಜಿನಗರ, ವಿಜಯನಗರ, ನಾಗರಬಾವಿ, ಸ್ಯಾಟಲೈಟ್, ಯಶವಂತಪುರ, ಕೆ ಆರ್ ಮಾರ್ಕೆಟ್, ಶಿವಾಜಿನಗರ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದ್ದು, ಸಾರ್ವಜನಿಕರು ಅಂಡರ್ ಪಾಸ್, ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಮಳೆ ಪರಿಣಾಮ ನಗರದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದೆ.

  • 10 Aug 2026 03:16 PM (IST)

    ಕಾಡಾನೆ ದಾಳಿಯಿಂದ ಕಾರ್ಮಿಕ ಸಾವು

    ಕಾಡಾನೆ ದಾಳಿಯಿಂದ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.  ಅಣ್ಣಪ್ಪ(40) ಕಾಡಾನೆಗೆ ಬಲಿಯಾದ ಕಾರ್ಮಿಕ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಮ್ಮತ್ತಿ, ಒಂಟಿಯಂಗಡಿ ಗ್ರಾಮಗಳನ್ನ ಬಂದ್ ಮಾಡಿ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • 10 Aug 2026 02:57 PM (IST)

    ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

    ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರಿಂಕೋರ್ಟ್ ಸಮ್ಮಿತಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದು, ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ಮನವಿ ಮಾಡಿದೆ. ಈ ಸಂಬಂಧ ಆಗಸ್ಟ್ 13ರಂದು ಅರ್ಜಿ ವಿಚಾರಣೆ ನಡೆಸಲು ಸಿಜೆಐ ಪೀಠ ತೀರ್ಮಾನಿಸಿದೆ.

  • 10 Aug 2026 02:56 PM (IST)

    ಮಳೆಯಲ್ಲೇ ಹೆಜ್ಜೆ ಹಾಕಿದ ನಿಖಿಲ್ ಕುಮಾರಸ್ವಾಮಿ

    ಬಿಡದಿ ಟೌನ್​ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಾದಯಾತ್ರೆಗೆ ಮಳೆರಾಯ ಅಡ್ಡಿಪಡಿಸಿದೆ. ಶೇಷಗಿರಿಹಳ್ಳಿ ಬಳಿ ಜೆಡಿಎಸ್ ಪಾದಯಾತ್ರೆ ವೇಳೆ ಧಾರಾಕಾರ ಮಳೆ ಸುರಿಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಮಳೆಯಲ್ಲೇ ಹೆಜ್ಜೆ ಹಾಕಿದ್ದಾರೆ.

  • 10 Aug 2026 02:38 PM (IST)

    ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ

    ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ಆರೋಪಿಗಳಾದ ಅಜಯ್ ಅಲಿಯಾಸ್ ಅನ್ಮೋಲ್ ರಸ್ತೋಗಿ ಹಾಗೂ ಜಿಯಾವುಲ್ ವಜೂಲ್ ಶೇಖ್‌ನನ್ನು ಉಡುಪಿ ನ್ಯಾಯಾಲಯ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

  • 10 Aug 2026 02:37 PM (IST)

    ಕಾವೇರಿ ನೀರು ಬಿಡುಗಡೆ ಕೋರಿ ತಮಿಳುನಾಡು ಅರ್ಜಿ: ಆ.13ಕ್ಕೆ ಸುಪ್ರೀಂ ವಿಚಾರಣೆ

    ಸಿಡಬ್ಲ್ಯುಎಂಎ (CWMA) ಆದೇಶದಂತೆ ಕರ್ನಾಟಕ 3,500 ಕ್ಯೂಸೆಕ್ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಆಗಸ್ಟ್ 13ರಂದು ಸಿಜೆಐ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲು ತೀರ್ಮಾನಿಸಿದೆ.

  • 10 Aug 2026 02:35 PM (IST)

    TV9 ವರದಿ ಬಿಗ್ ಇಂಪ್ಯಾಕ್ಟ್: 3 ಕೆಮಿಕಲ್ ಕಾರ್ಖಾನೆ ಮುಚ್ಚಲು ಖಂಡ್ರೆ ಸೂಚನೆ

    ಗುರುಗಂಗಾ ಹಳ್ಳಕ್ಕೆ ಕೆಮಿಕಲ್ ನೀರು ಹರಿಸುತ್ತಿದ್ದ ಬಗ್ಗೆ TV9 ವರದಿ ಪ್ರಸಾರ ಮಾಡಿದ 24 ಗಂಟೆಯೊಳಗೆ ಸಚಿವ ಈಶ್ವರ ಖಂಡ್ರೆ ಭಾರಿ ಕ್ರಮ ಕೈಗೊಂಡಿದ್ದಾರೆ. ಹುಮ್ನಾಬಾದ್‌ನ 3 ಕೆಮಿಕಲ್ ಕಾರ್ಖಾನೆಗಳನ್ನು ತಕ್ಷಣ ಮುಚ್ಚಿಸಿ ವರದಿ ನೀಡುವಂತೆ ಬೀದರ್ ಜಿಲ್ಲಾಧಿಕಾರಿಗೆ ಖಡಕ್ ಸೂಚನೆ ನೀಡಿದ್ದಾರೆ.

  • 10 Aug 2026 02:34 PM (IST)

    ಮೇಕೆದಾಟು ಯೋಜನೆಗೆ ಆಗ್ರಹ: ಅತ್ತಿಬೆಲೆಯಲ್ಲಿ ವಾಟಾಳ್ ನಾಗರಾಜ್ ವಶಕ್ಕೆ

    ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಅತ್ತಿಬೆಲೆ ಗಡಿಯಲ್ಲಿ ತಮಿಳುನಾಡಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ತಡೆದು ಸ್ಥಳದಿಂದ ತೆರವುಗೊಳಿಸಿದರು.

  • 10 Aug 2026 02:33 PM (IST)

    ಆಗಸ್ಟ್ 13ರ ಕರ್ನಾಟಕ ಬಂದ್‌ಗೆ ಮಂಡ್ಯದಲ್ಲಿ ಬೆಂಬಲ

    ಮೇಕೆದಾಟು ಯೋಜನೆ ಜಾರಿ ಹಾಗೂ ಕಾವೇರಿ ವಿಚಾರದಲ್ಲಿ ರೈತರಿಗಾಗುವ ಅನ್ಯಾಯ ಖಂಡಿಸಿ ಆ.13ರ ಕರ್ನಾಟಕ ಬಂದ್‌ಗೆ ಮಂಡ್ಯದ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಅಂದು ಮಂಡ್ಯ ಸಂಪೂರ್ಣ ಬಂದ್ ಮಾಡುವುದಾಗಿ ತಿಳಿಸಿದ್ದು, ಮತ್ತೊಂದೆಡೆ ಕಾವೇರಿ ಹಿತರಕ್ಷಣಾ ಸಮಿತಿ ಸಭೆ ಬಳಿಕ ತನ್ನ ನಿರ್ಧಾರ ಪ್ರಕಟಿಸಲಿದೆ.

  • 10 Aug 2026 12:41 PM (IST)

    ರೇಣುಕಾಸ್ವಾಮಿ ಕೊಲೆ ಕೇಸ್: ಮಧ್ಯಾಹ್ನ 3ಕ್ಕೆ ಕೋರ್ಟ್ ಆದೇಶ

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಪ್ರದೋಷ್ ಮಾಫಿ ಸಾಕ್ಷಿಯಾಗುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದರ್ಶನ್ ಪರ ವಕೀಲರು ಕಾಲಾವಕಾಶ ಕೋರಿದ್ದಾರೆ. ಆದರೆ, ಸಹ ಆರೋಪಿಗೆ ಆಕ್ಷೇಪಿಸುವ ಹಕ್ಕಿಲ್ಲ ಎಂದು ಎಸ್‌ಪಿಪಿ ವಾದಿಸಿದ್ದು, ಈ ಕುರಿತು ಕೋರ್ಟ್ ಮಧ್ಯಾಹ್ನ 3 ಗಂಟೆಗೆ ಆದೇಶ ನೀಡಲಿದೆ. ಪ್ರಸ್ತುತ 14ನೇ ಸಾಕ್ಷಿಯ ಪಾಟೀಸವಾಲು ಮುಂದುವರಿದಿದೆ.

  • 10 Aug 2026 12:39 PM (IST)

    ಮಂತ್ರಿ ಸ್ಥಾನ ಸಿಗದಿದ್ದರೆ ನಿಗಮಕ್ಕೆ ರಾಜೀನಾಮೆ: ಬ್ಯಾಡಗಿ ಶಾಸಕ ಶಿವಣ್ಣನವರ್

    ಮಂತ್ರಿ ಸ್ಥಾನ ನೀಡದಿದ್ದರೆ ನಿಗಮ ಮಂಡಳಿಗೆ ಖಂಡಿತವಾಗಿ ರಾಜೀನಾಮೆ ನೀಡುವುದಾಗಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಹೇಳಿದ್ದಾರೆ. ಬೇರೆ ಯಾವುದೇ ನಿಗಮದ ಅಗತ್ಯವಿಲ್ಲ, ಸಚಿವ ಸ್ಥಾನ ಕೊಟ್ಟರೆ ಇರುತ್ತೇನೆ ಇಲ್ಲವೇ ಶಾಸಕನಾಗಿ ಮುಂದುವರಿಯುತ್ತೇನೆ ಎಂದ ಅವರು, ತಮ್ಮ ಪರವಾಗಿ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಪಟ್ಟು ಹಿಡಿದಿದ್ದರು ಎಂದು ತಿಳಿಸಿದರು.

  • 10 Aug 2026 12:30 PM (IST)

    ಹಂಪಿ ಜೈನ ದೇಗುಲದ ಬಳಿ ಉತ್ಖನನ: ನಾಗಿಣಿ, ಗರುಡ ಶಿಲ್ಪಗಳು ಪತ್ತೆ

    ಹಂಪಿಯ ಜೈನ ದೇಗುಲದ ಆವರಣದಲ್ಲಿ ಎಎಸ್‌ಐ (ASI) ನಡೆಸಿದ ಉತ್ಖನನದ ವೇಳೆ ಅತ್ಯಂತ ಅಪರೂಪದ ನಾಗಿಣಿ ಹಾಗೂ ಗರುಡನ ಕಲ್ಲಿನ ಶಿಲ್ಪಗಳು ಪತ್ತೆಯಾಗಿವೆ. ಈ ಅಪರೂಪದ ಶೋಧನೆಯು ವಿಜಯನಗರ ಸಾಮ್ರಾಜ್ಯದ ಧಾರ್ಮಿಕ ಸಹಿಷ್ಣುತೆ, ಸಾಂಸ್ಕೃತಿಕ ಸೌಹಾರ್ದತೆ ಮತ್ತು ಭವ್ಯ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿದೆ. ಮತ್ತಷ್ಟು ಓದಿ

  • 10 Aug 2026 12:27 PM (IST)

    ಬಾಗಲಕೋಟೆಯಲ್ಲಿ ಬೀದಿ ನಾಯಿಗಳ ಹಾವಳಿ: ಹಲವರಿಗೆ ಗಾಯ

    ಬಾಗಲಕೋಟೆಯ ವಿದ್ಯಾಗಿರಿ 17ನೇ ಕ್ರಾಸ್‌ನಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದು, 86 ವರ್ಷದ ಅರವಿಂದ ವೆಂಕಪ್ಪ ಕಕರೆಡ್ಡಿ (ಎಡಗೈ, ಎಡಗಾಲಿಗೆ ಗಾಯ) ಹಾಗೂ ಮಹೇಶ್ ಕಕರೆಡ್ಡಿ ಸೇರಿದಂತೆ ಐದಾರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೊಯ್ಯಲಾಗಿದೆ.

  • 10 Aug 2026 12:24 PM (IST)

    ಭಾಗವತ್ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ಷೇಪ: ಆರೆಸ್ಸೆಸ್-ಪಾಕ್ ಲಿಂಕ್ ತನಿಖೆಗೆ ಆಗ್ರಹ

    “ಪಾಕಿಸ್ತಾನಿಯರೆಲ್ಲ ಶತ್ರುಗಳಲ್ಲ” ಎಂಬ ಮೋಹನ್ ಭಾಗವತ್ ಹೇಳಿಕೆಗೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್ ಹಾಗೂ ಪಾಕಿಸ್ತಾನದ ಲಿಂಕ್ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ ಅವರು, ಚುನಾವಣೆ ವೇಳೆ ಬಿಜೆಪಿ-ಸಂಘಪರಿವಾರದ ‘ಪಾಕ್’ ಪ್ರೇಮ ಮತ್ತು ದ್ವಂದ್ವ ನೀತಿ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.

  • 10 Aug 2026 12:20 PM (IST)

    ಶಿವಮೊಗ್ಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

    ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ 2000ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಮೆರವಣಿಗೆ ನಡೆಸಿದರು. ‘ಗೌರವಧನ’ ರದ್ದುಗೊಳಿಸಿ ಕಾರ್ಯಕರ್ತೆಯರಿಗೆ 26,000 ರೂ. ಹಾಗೂ ಸಹಾಯಕಿಯರಿಗೆ 20,000 ರೂ. ವೇತನ ನಿಗದಿಪಡಿಸಲು ಮತ್ತು ಹೆಚ್ಚುವರಿ ಇಲಾಖಾ ಕೆಲಸಗಳನ್ನು ನೀಡದಂತೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

  • 10 Aug 2026 12:17 PM (IST)

    ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

    ದರ್ಶನ್ ಹಾಗೂ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎ14 ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯವು ಮಧ್ಯಾಹ್ನ 12 ಗಂಟೆಗೆ ಮುಂದೂಡಿದೆ.

  • 10 Aug 2026 10:55 AM (IST)

    ಬಸ್ ಸೌಲಭ್ಯಕ್ಕೆ ಆಗ್ರಹ: ವಿದ್ಯಾರ್ಥಿಗಳಿಂದ ಹೆದ್ದಾರಿ ತಡೆ

    ಸಮರ್ಪಕ ಬಸ್ ವ್ಯವಸ್ಥೆಯಿಲ್ಲದ್ದಕ್ಕೆ ಆಕ್ರೋಶಗೊಂಡ ಯಡಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ತಡೆದು ಪ್ರತಿಭಟಿಸಿದರು. ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆ ಈ ರಸ್ತೆ ತಡೆ ನಡೆಸಲಾಗಿದ್ದು, ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು.

  • 10 Aug 2026 10:39 AM (IST)

    ಜಾರ್ಖಂಡ್: ನೇಮಕಾತಿ ಪರೀಕ್ಷೆ ಅಕ್ರಮ ವಿರೋಧಿಸಿ ವಿಧಾನಸಭೆಗೆ ಮುತ್ತಿಗೆ ಯತ್ನ; ಪೊಲೀಸರಿಂದ ತಡೆ!

    ಜಾರ್ಖಂಡ್‌ನ JPSC-JSSC ನೇಮಕಾತಿ ಪರೀಕ್ಷೆಗಳ ಅಕ್ರಮ ಖಂಡಿಸಿ ಕಳೆದ 17 ದಿನಗಳಿಂದ ಹೋರಾಡುತ್ತಿರುವ ವಿದ್ಯಾರ್ಥಿಗಳು ಇಂದು ವಿಧಾನಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾಕಾರರನ್ನು ತಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

  • 10 Aug 2026 10:38 AM (IST)

    ಕೋಲಾರದಲ್ಲಿ ಡಿಕೆಶಿ ಶಕ್ತಿ ಪ್ರದರ್ಶನ: 3200 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ!

    ಕೋಲಾರದ ಮಾಲೂರಿನಲ್ಲಿ ಇಂದು ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ‘ಸಾಧನೆಯ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ದೆಹಲಿಯಿಂದ ನೇರವಾಗಿ ಆಗಮಿಸಲಿರುವ ಡಿಕೆಶಿ, 3200 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಧಾನಸೌಧ ಮಾದರಿಯ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, 60 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ.

  • 10 Aug 2026 10:37 AM (IST)

    ದೇವಿಕೆರೆ ಗ್ರಾಮದಲ್ಲಿ ಬೃಹತ್ ಕಳ್ಳತನ; 52 ಲಕ್ಷದ ಒಡವೆ, 4 ಲಕ್ಷ ನಗದು ಕಳವು!

    ದಾವಣಗೆರೆಯ ದೇವಿಕೆರೆ ಗ್ರಾಮದ ಕವಿತಾ ಎಂಬುವರು ಮಗನ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿದ್ದಾಗ, ಕಳ್ಳರು ಮನೆ ಬೀಗ ಮುರಿದು 410 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ ಹಾಗೂ 4 ಲಕ್ಷ ರೂ. ದೋಚಿದ್ದಾರೆ. ಬಿಳಿಚೋಡ ಪೊಲೀಸರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿದ್ದು, ಪತ್ತೆಗಾಗಿ ಎಸ್ಪಿ ಶೇಖರ್ ವಿಶೇಷ ತಂಡ ರಚಿಸಿದ್ದಾರೆ.

  • 10 Aug 2026 10:29 AM (IST)

    ಬೆಳ್ಳಂಬೆಳಗ್ಗೆ ಮುನಿರಾಜು ಮನೆ ಮೇಲೆ ಪಲ್ಟಿಯಾದ ಎಂ-ಸ್ಯಾಂಡ್ ಲಾರಿ!

    ಯಲಹಂಕದ ಮಾದಪ್ಪನಹಳ್ಳಿಯಲ್ಲಿ ನಿಯಂತ್ರಣ ತಪ್ಪಿದ ಎಂ-ಸ್ಯಾಂಡ್ ಲಾರಿಯೊಂದು ಮುಂಜಾನೆ 3:30ಕ್ಕೆ ಮುನಿರಾಜು ಎಂಬುವವರ ಮನೆ ಮೇಲೆ ಪಲ್ಟಿಯಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಮಾಲೀಕನ ತಲೆಗೆ ಇಟ್ಟಿಗೆ ಬಿದ್ದಿದೆ. ಯಲಹಂಕ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಾರಿ ತೆರವುಗೊಳಿಸುತ್ತಿದ್ದಾರೆ.

  • 10 Aug 2026 09:40 AM (IST)

    ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಬೃಹತ್ ಪಾದಯಾತ್ರೆ

    ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಎರಡನೇ ದಿನದ 16 ಕಿ.ಮೀ. ಪಾದಯಾತ್ರೆ ನಡೆಸಲಿದೆ. ಬಿಡದಿಯಿಂದ ನೈಸ್ ಜಂಕ್ಷನ್ ವರೆಗೆ ನಡೆಯಲಿರುವ ಈ ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಚಾಲನೆ ನೀಡಲಿದ್ದು, ರೈತರ ಪರವಾಗಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಮತ್ತಷ್ಟು ಓದಿ

Published On - Aug 10,2026 9:39 AM

Follow Us
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ