AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಏಷ್ಯಾ ಸಂಘರ್ಷದ ಎಫೆಕ್ಟ್: ಡ್ರೈಫ್ರೂಟ್ಸ್​​ಗಳ ದರದಲ್ಲಿ ಗಣನೀಯ ಏರಿಕೆ

ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಸೌದಿ ಅರೇಬಿಯಾದಲ್ಲಿನ ಉದ್ವಿಗ್ನತೆಯಿಂದಾಗಿ ಆಮದು ವೆಚ್ಚ ಹೆಚ್ಚಾಗಿರುವ ಪರಿಣಾಮ ಖರ್ಜೂರ, ಬಾದಾಮಿ, ಅಂಜೂರ ಹಾಗೂ ಜಮ್‌ಜಮ್ ನೀರಿನ ದರದಲ್ಲಿ ಗಣನೀಯ ಏರಿಕೆಯಾಗಿದೆ. ಸಮುದ್ರ ಮಾರ್ಗಗಳಲ್ಲಿನ ಭದ್ರತಾ ಅಪಾಯ ಹೆಚ್ಚಾದರೆ ಸರಕು ಸಾಗಣೆ ದರ ಮತ್ತು ವಿಮಾ ಪ್ರೀಮಿಯಂ ಏರಿಕೆಯಾಗಬಹುದು. ಹಡಗುಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸುವುದರಿಂದ ಸರಕುಗಳ ತಲುಪುವಿಕೆಯ ಅವಧಿಯೂ ವಿಸ್ತರಿಸಬಹುದು ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದ ಎಫೆಕ್ಟ್: ಡ್ರೈಫ್ರೂಟ್ಸ್​​ಗಳ ದರದಲ್ಲಿ ಗಣನೀಯ ಏರಿಕೆ
ಸಾಂದರ್ಭಿಕ ಚಿತ್ರImage Credit source: PTI
ಪ್ರಸನ್ನ ಹೆಗಡೆ
|

Updated on: Oct 25, 2026 | 6:37 AM

Share

ಬೆಂಗಳೂರು, ಅಕ್ಟೋಬರ್​​ 25: ಸೌದಿ ಅರೇಬಿಯಾದ ಮೇಲಿನ ದಾಳಿಗಳು ಮತ್ತು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬೆಂಗಳೂರಿನ ವ್ಯಾಪಾರದ ಮೇಲೆ ಅನಿಶ್ಚಿತತೆ ಹೆಚ್ಚಿಸಿವೆ. ಆಮದು ಮತ್ತು ರಫ್ತು ವೆಚ್ಚ ಏರಿಕೆ, ಸರಕುಗಳ ತಲುಪುವಿಕೆಯಲ್ಲಿ ವಿಳಂಬ ಹಾಗೂ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಕಂಡುಬಂದಿದೆ. ಸೌದಿ ಅರೇಬಿಯಾದಿಂದ ಆಮದಾಗುವ ಖರ್ಜೂರ ಮತ್ತು ಝಮ್ ಝಮ್ ನೀರಿನ (ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಆಶೀರ್ವದಿಸಲ್ಪಟ್ಟ ನೀರು ಎಂದು ಪರಿಗಣಿಸಿರುವ ಮೆಕ್ಕಾದ ನೀರು) ಬೆಲೆ ಈಗಾಗಲೇ ಏರಿಕೆಯಾಗಲು ಆರಂಭಿಸಿದೆ ಎಂದು ನಗರದ ವ್ಯಾಪಾರಿಗಳು ತಿಳಿಸಿದ್ದಾರೆ.

ಹಲವು ವಸ್ತುಗಳ ದರ ಏರಿಕೆ

ಸಂಘರ್ಷದ ನೇರ ಪರಿಣಾಮ ಸರಕು ಸಾಗಣೆ ವೆಚ್ಚದ ಮೇಲೆ ಕಾಣಿಸುತ್ತಿದೆ. ಭಾರತದಲ್ಲಿ ಬೇಡಿಕೆಯಿರುವ ಕಿಮಿಯಾ, ಕಲ್ಮಿ ಮತ್ತು ಅಜ್ವಾ ಸೇರಿದಂತೆ ಸೌದಿ ಅರೇಬಿಯಾದ ಕೆಲವು ವಿಶೇಷ ತಳಿಯ ಖರ್ಜೂರಗಳ ಬೆಲೆ ಕೆಜಿಗೆ ಸುಮಾರು 100 ರೂಪಾಯಿ ಹೆಚ್ಚಾಗಿದೆ. ಪ್ರಸ್ತುತ ಅಜ್ವಾ ಖರ್ಜೂರ ಕೆಜಿಗೆ ಸುಮಾರು 900 ರೂಪಾಯಿ ಹಾಗೂ ಕಲ್ಮಿ ಖರ್ಜೂರ ಕೆಜಿಗೆ 650 ರೂಪಾಯಿಯಂತೆ ಮಾರಾಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಖರ್ಜೂರದ ಜೊತೆಗೆ, ಧಾರ್ಮಿಕ ಉದ್ದೇಶಗಳಿಗಾಗಿ ನಿಯಂತ್ರಿತ ಮಾರ್ಗಗಳ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳುವ ಜಮ್‌ಜಮ್ ನೀರಿನ ಮೇಲೂ ಸಾಗಣೆ ಸಂಬಂಧಿತ ಸಮಸ್ಯೆಗಳು ಪರಿಣಾಮ ಬೀರಿವೆ. ಈ ಹಿಂದೆ 1,500 ರೂಪಾಯಿಗೆ ಮಾರಾಟವಾಗುತ್ತಿದ್ದ ಐದು ಲೀಟರ್ ಜಮ್‌ಜಮ್ ನೀರಿನ ಕ್ಯಾನ್ ಈಗ 2,200 ರೂಪಾಯಿಗೆ ಮಾರಾಟವಾಗುತ್ತಿದೆ.

LIVE TV

ಇದನ್ನೂ ಓದಿ: ಮಂಗಳೂರು–ಸೌದಿ ವಿಮಾನ ಸೇವೆ ವ್ಯತ್ಯಯ: ಕರಾವಳಿ ಕರ್ನಾಟಕದ ನೂರಾರು ಪ್ರಯಾಣಿಕರಿಗೆ ಸಮಸ್ಯೆ

ಸಮುದ್ರ ಮಾರ್ಗಗಳಲ್ಲಿನ ಭದ್ರತಾ ಅಪಾಯ ಹೆಚ್ಚಾದರೆ ಸರಕು ಸಾಗಣೆ ದರ ಮತ್ತು ವಿಮಾ ಪ್ರೀಮಿಯಂ ಏರಿಕೆಯಾಗಬಹುದು. ಹಡಗುಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸುವುದರಿಂದ ಸರಕುಗಳ ತಲುಪುವಿಕೆಯ ಅವಧಿಯೂ ವಿಸ್ತರಿಸಬಹುದು ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ. ಒಂದು ಸರಕು ಕಂಟೇನರ್‌ನ ಸಾಗಣೆ ವೆಚ್ಚ 1,500 ರೂಪಾಯಿಯಿಂದ 4,000 ರೂಪಾಯಿಗೆ ಏರಿಕೆಯಾಗಿದೆ. ಈ ಹೆಚ್ಚುವರಿ ವೆಚ್ಚ ಸರಕುಗಳ ಬೆಲೆಯಲ್ಲೂ ಪ್ರತಿಫಲಿಸಲಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಆಮದಾಗುವ ಕೆಲವು ಉತ್ಪನ್ನಗಳ ಬೆಲೆಯೂ ಏರಿಕೆಯಾಗುತ್ತಿದೆ. ಒಂದು ಕೆಜಿ ಮಾಮ್ರಾ ಬಾದಾಮಿಯ ಬೆಲೆ 2,500 ರೂಪಾಯಿಯಿಂದ 4,000 ರೂಪಾಯಿಗೆ ಹೆಚ್ಚಾಗಿದೆ. ಅದೇ ರೀತಿ, ಒಂದು ಕೆಜಿ ಅಂಜೂರದ ಬೆಲೆ ಈ ಹಿಂದೆ 1,200ರಿಂದ 1,400 ರೂಪಾಯಿಗಳಷ್ಟಿದ್ದದ್ದು ಈಗ 1,800 ರೂಪಾಯಿಗೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!